ಕಡಿಮೆಯಾದ ಮಳೆ ಅಬ್ಬರ; ನವೆಂಬರ್ 30ರಂದು ಡ್ಯಾಂಗಳ ನೀರಿನ ಮಟ್ಟ

ಬೆಂಗಳೂರು, ನವೆಂಬರ್ 30; ಕರ್ನಾಟಕ ವಿವಿಧ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದೆ. ಮೋಡ ಕವಿದ ವಾತಾವರಣ, ಶೀತಗಾಳಿ ಮುಂದುವರೆದಿದೆ. ಮಳೆ ಕಡಿಮೆಯಾಗಿದ್ದರಿಂದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ.

ನವೆಂಬರ್ 26ರ ಬಳಿಕ ಕರ್ನಾಟಕದಲ್ಲಿ ಮಳೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಆದರೆ ಮೋದ ಕವಿದ ವಾತಾವರಣ ಮಾತ್ರ ಇದ್ದು, ಆಗಾಗ ಸಾಧಾರಣ ಮಳೆಯಾಗಿದೆ.

ಮುಂದಿನ ಐದು ದಿನಗಳ ಕಾಲ ಇದೇ ಮಾದರಿ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ.

ಕಾವೇರಿ ನದಿ ಪಾತ್ರದಲ್ಲಿ ಸುರಿದ ಮಳೆಯಿಂದಾಗಿ ಕೆಆರ್‌ಎಸ್ ಜಲಾಶಯಕ್ಕೆ ಒಳಹರಿವು ಉತ್ತಮವಾಗಿದೆ. 6918 ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಈ ಬಾರಿ ಕರ್ನಾಟಕ ವಾಡಿಕೆಗಿಂತ 53.4 ಟಿಎಂಸಿ ಅಡಿ ಅಧಿಕ ನೀರನ್ನು ತಮಿಳುನಾಡಿಗೆ ಬಿಟ್ಟಿದೆ. ಇದರಿಂದಾಗಿ ಕಾವೇರಿ ವಿವಾದ ತಣ್ಣಗಾಗಿದೆ.

ಲಿಂಗನಮಕ್ಕಿ, ಹಾರಂಗಿ, ಹೇಮಾವತಿ

ಲಿಂಗನಮಕ್ಕಿ, ಹಾರಂಗಿ, ಹೇಮಾವತಿ

ಲಿಂಗನಮಕ್ಕಿ ಜಲಾಶಯದ ಮಂಗಳವಾರದ ನೀರಿನ ಮಟ್ಟ 552.42 ಮೀಟರ್. ಡ್ಯಾಂನ ಪೂರ್ಣ ಮಟ್ಟ 554.44 ಮೀಟರ್. ಜಲಾಶಯಕ್ಕೆ ಒಳಹರಿವು 2750 ಕ್ಯುಸೆಕ್. ಡ್ಯಾಂನಿಂದ ಹೊರ ಹರಿವು 6087 ಕ್ಯುಸೆಕ್ ದಾಖಲಾಗಿದೆ.

ಹಾರಂಗಿ ಜಲಾಶಯದ ಪೂರ್ಣ ಮಟ್ಟ 871.38 ಮೀಟರ್. ಮಂಗಳವಾರ ಜಲಾಶಯದಲ್ಲಿ 870.88 ಮೀಟರ್ ನೀರಿನ ಸಂಗ್ರಹವಿದೆ. 513 ಕ್ಯುಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ಹೊರ ಹರಿವು 600 ಕ್ಯುಸೆಕ್ ಆಗಿದೆ.

ಹೇಮಾವತಿ ಜಲಾಶಯದ ಮಂಗಳವಾರದ ನೀರಿನ ಮಟ್ಟ 887.10 ಮೀಟರ್ ಆಗಿದೆ. ಜಲಾಶಯದ ಪೂರ್ಣ ಮಟ್ಟ 890.58 ಮೀಟರ್. 1838 ಕ್ಯುಸೆಕ್ ನೀರು ಡ್ಯಾಂಗೆ ಹರಿದು ಬರುತ್ತಿದೆ. ಹೊರ ಹರಿವು 1000 ಕ್ಯುಸೆಕ್.

ಕೆಆರ್‌ಎಸ್, ಕಬಿನಿ, ಭದ್ರಾ ಡ್ಯಾಂ

ಕೆಆರ್‌ಎಸ್, ಕಬಿನಿ, ಭದ್ರಾ ಡ್ಯಾಂ

ಕಬಿನಿ ಜಲಾಶಯದಲ್ಲಿ ಬುಧವಾರ 696.04 ಮೀಟರ್ ನೀರಿನ ಸಂಗ್ರಹವಿದೆ. ಡ್ಯಾಂ ಪೂರ್ಣ ಮಟ್ಟ 696.13 ಮೀಟರ್. ಜಲಾಶಯಕ್ಕೆ 907 ಕ್ಯುಸೆಕ್ ಒಳಹರಿವು ಇದೆ, ಹೊರ ಹರಿವು 1500 ಕ್ಯುಸೆಕ್ ಆಗಿದೆ.

ಮಂಡ್ಯದಲ್ಲಿರುವ ಕೆಆರ್‌ಎಸ್ ಈಗಾಗಲೇ ಭರ್ತಿಯಾಗಿದೆ. ಮಂಗಳವಾರ ಡ್ಯಾಂನಲ್ಲಿ 38.04 ಮೀಟರ್ ನೀರಿನ ಸಂಗ್ರಹವಿದೆ. ಜಲಾಶಯದ ಪೂರ್ಣ ಮಟ್ಟ 38.04 ಮೀಟರ್ ಆಗಿದೆ. ಒಳಹರಿವು 7127 ಕ್ಯುಸೆಕ್ ಮತ್ತು ಹೊರ ಹರಿವು 6918 ಕ್ಯುಸೆಕ್.

ಭದ್ರಾ ಜಲಾಶಯದಲ್ಲಿ ಮಂಗಳವಾರ 657.70 ಮೀಟರ್ ನೀರಿನ ಸಂಗ್ರಹವಿದೆ. ಡ್ಯಾಂ ಪೂರ್ಣಮಟ್ಟ 657.73 ಮೀಟರ್. ಜಲಾಶಯಕ್ಕೆ ಒಳಹರಿವು 1212 ಕ್ಯುಸೆಕ್ ಆಗಿದೆ. ಅಷ್ಟೇ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿದೆ.

ತುಂಗಭದ್ರಾ, ಆಲಮಟ್ಟಿ, ನಾರಾಯಣಪುರ

ತುಂಗಭದ್ರಾ, ಆಲಮಟ್ಟಿ, ನಾರಾಯಣಪುರ

ಹೊಸಪೇಟೆಯಲ್ಲಿರುವ ತುಂಗಭದ್ರಾ ಜಲಾಶಯ ಭರ್ತಿಯಾಗಿದೆ. ಮಂಗಳವಾರ ಡ್ಯಾಂನಲ್ಲಿ 497.71 ಮೀಟರ್ ನೀರಿನ ಸಂಗ್ರಹವಿದೆ. ಡ್ಯಾಂನ ಪೂರ್ಣಮಟ್ಟ 497.71 ಮೀಟರ್. ಜಲಾಶಯಕ್ಕೆ 17912 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಅಷ್ಟೇ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ.

ಆಲಮಟ್ಟಿ ಜಲಾಶಯದ ಪೂರ್ಣ ಮಟ್ಟ 519.60 ಮೀಟರ್. ಮಂಗಳವಾರ ಜಲಾಶಯದ ನೀರಿನ ಮಟ್ಟ 518.51 ಮೀಟರ್ ಆಗಿದೆ. ಒಳ ಹರಿವು 5800 ಕ್ಯುಸೆಕ್, ಹೊರ ಹರಿವು 580 ಕ್ಯುಸೆಕ್ ಆಗಿದೆ.

ನಾರಾಯಣಪುರ ಜಲಾಶಯದ ಮಂಗಳವಾರದ ನೀರಿನ ಮಟ್ಟ 492.08 ಮೀಟರ್. ಡ್ಯಾಂ ಪೂರ್ಣ ಮಟ್ಟ 492.25 ಮೀಟರ್. ಒಳಹರಿವು 1885 ಕ್ಯುಸೆಕ್ ಆಗಿದೆ. ಹೊರ ಹರಿವು 264 ಕ್ಯುಸೆಕ್ ದಾಖಲಾಗಿದೆ.

Recommended Video

    13 ರಾಷ್ಟ್ರಗಳಿಗೆ ಒಮಿಕ್ರಾನ್ ಲಗ್ಗೆ ! | Oneindia Kannada
    ಸೂಪ, ಘಟಪ್ರಭಾ, ಮಲಪ್ರಭಾ

    ಸೂಪ, ಘಟಪ್ರಭಾ, ಮಲಪ್ರಭಾ

    ಸೂಪಾ ಜಲಾಶಯದಲ್ಲಿ ಮಂಗಳವಾರ 554.89 ಮೀಟರ್ ನೀರಿನ ಸಂಗ್ರಹವಿದೆ. ಡ್ಯಾಂ ಪೂರ್ಣ ಮಟ್ಟ 564.00 ಮೀಟರ್ ಆಗಿದೆ. ಜಲಾಶಯದ ಒಳ ಹರಿವು 164 ಕ್ಯುಸೆಕ್ ಮತ್ತು ಹೊರ ಹರಿವು 1027 ಕ್ಯುಸೆಕ್ ಆಗಿದೆ.

    ಘಟಪ್ರಭಾ ಜಲಾಯಶದ ಪೂರ್ಣ ಮಟ್ಟ 662.91 ಮೀಟರ್. ಮಂಗಳವಾರ ಜಲಾಶಯದಲ್ಲಿ 660.10 ಮೀಟರ್ ನೀರಿದೆ. ಜಲಾಶಯದ ಹೊರ ಹರಿವು 179 ಕ್ಯುಸೆಕ್ ಆಗಿದೆ.

    ಮಲಪ್ರಭಾ ಜಲಾಶಯದಲ್ಲಿ ಮಂಗಳವಾರ 633.08 ಮೀಟರ್ ನೀರಿನ ಸಂಗ್ರಹವಿದೆ. ಪೂರ್ಣ ಮಟ್ಟ 633.80 ಮೀಟರ್. ಒಳಹರಿವು 1344 ಕ್ಯುಸೆಕ್, ಹೊರ ಹರಿವು 569 ಕ್ಯುಸೆಕ್ ಆಗಿದೆ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+