ಕರ್ನಾಟಕ; ನವೆಂಬರ್ 26ರಂದು ಜಲಾಶಯಗಳ ನೀರಿನ ಮಟ್ಟ
ಬೆಂಗಳೂರು, ನವೆಂಬರ್ 26; ವಾಯುಭಾರ ಕುಸಿತದ ಪರಿಣಾಮ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸುರಿದ ಮಳೆ ಅವಾಂತರ ಸೃಷ್ಟಿ ಮಾಡಿದೆ. ಇದರ ಜೊತೆಗೆ ರೈತರ ಸಂತಸಕ್ಕೂ ಕಾರಣವಾಗಿದೆ. ವರ್ಷಗಳ ಕಾಲ ಭರ್ತಿಯಾಗದಿದ್ದ ಕೆರೆ ಕಟ್ಟೆಗಳು ಅಕಾಲಿಕ ಮಳೆಯ ಆರ್ಭಟದಿಂದ ತುಂಬಿವೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಜೀವನಾಡಿ ಕಣ್ವ ಜಲಾಶಯ ಭರ್ತಿಗೆ ಕ್ಷಣಗಣನೆ ಆರಂಭವಾಗಿದೆ. ಜಲಾಶಯ ಭರ್ತಿಗೆ ಇನ್ನು ಒಂದೂವರೆ ಅಡಿ ಮಾತ್ರ ಬಾಕಿ ಉಳಿದಿದೆ. ಎರಡು ದಶಕಗಳ ಬಳಿಕ ಜಲಾಶಯ ಭರ್ತಿಯಾಗುತ್ತಿದೆ.
32 ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಕಣ್ವ ಜಲಾಶಯದಲ್ಲಿ ಸದ್ಯ 30.5 ಅಡಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ 250 ಕ್ಯುಸೆಕ್ ನೀರು ಹರಿದುಬರುತ್ತಿದೆ. ಜಲಾಶಯ ಭರ್ತಿಯಾದರೆ ಕ್ರಸ್ಟ್ ಗೇಟ್ ಮೂಲಕ ನದಿಗೆ ನೀರು ಹರಿಸಲು ನೀರಾವರಿ ಇಲಾಖೆ ಸಿದ್ಧತೆ ನಡೆಸಿದೆ. ಈ ಕುರಿತು ನದಿ ಪಾತ್ರದ ಜನರಿಗೆ ಸಹ ಎಚ್ಚರಿಕೆ ರವಾನೆ ಮಾಡಲಾಗಿದೆ.
ನವೆಂಬರ್ 26ರಿಂದ ಮತ್ತೊಂದು ವಾಯುಭಾರ ಕುಸಿತದ ಪರಿಣಾಮ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿತ್ತು. ಆದರೆ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ಮಳೆಯಾಗಿಲ್ಲ. ಕರ್ನಾಟಕದ ವಿವಿಧ ಜಲಾಶಯಗಳ ನೀರಿನ ಮಟ್ಟದ ಮಾಹಿತಿ ಇಲ್ಲಿದೆ.

ಲಿಂಗನಮಕ್ಕಿ, ಹಾರಂಗಿ, ಹೇಮಾವತಿ
ಲಿಂಗನಮಕ್ಕಿ ಜಲಾಶಯದ ಶುಕ್ರವಾರ ನೀರಿನ ಮಟ್ಟ 552.56 ಮೀಟರ್. ಡ್ಯಾಂನ ಪೂರ್ಣ ಮಟ್ಟ 554.44 ಮೀಟರ್. ಜಲಾಶಯಕ್ಕೆ ಒಳಹರಿವು 2154 ಕ್ಯುಸೆಕ್. ಡ್ಯಾಂನಿಂದ ಹೊರ ಹರಿವು 5489 ಕ್ಯುಸೆಕ್ ದಾಖಲಾಗಿದೆ.
ಹಾರಂಗಿ ಜಲಾಶಯದ ಪೂರ್ಣ ಮಟ್ಟ 871.38 ಮೀಟರ್. ಶುಕ್ರವಾರ ಜಲಾಶಯದಲ್ಲಿ 870.91 ಮೀಟರ್ ನೀರಿನ ಸಂಗ್ರಹವಿದೆ. 603 ಕ್ಯುಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ಹೊರ ಹರಿವು 766 ಕ್ಯುಸೆಕ್ ಆಗಿದೆ.
ಹೇಮಾವತಿ ಜಲಾಶಯದ ಶುಕ್ರವಾರದ ನೀರಿನ ಮಟ್ಟ 887.94 ಮೀಟರ್ ಆಗಿದೆ. ಜಲಾಶಯದ ಪೂರ್ಣ ಮಟ್ಟ 890.58 ಮೀಟರ್. 3307 ಕ್ಯುಸೆಕ್ ನೀರು ಡ್ಯಾಂಗೆ ಹರಿದು ಬರುತ್ತಿದೆ. ಹೊರ ಹರಿವು 630 ಕ್ಯುಸೆಕ್ ಆಗಿದೆ.

ಕೆಆರ್‌ಎಸ್, ಕಬಿನಿ, ಭದ್ರಾ ಡ್ಯಾಂ
ಕಬಿನಿ ಜಲಾಶಯದಲ್ಲಿ ಶುಕ್ರವಾರ 696.11 ಮೀಟರ್ ನೀರಿನ ಸಂಗ್ರಹವಿದೆ. ಡ್ಯಾಂ ಪೂರ್ಣ ಮಟ್ಟ 696.13 ಮೀಟರ್. ಜಲಾಶಯಕ್ಕೆ 1861 ಕ್ಯುಸೆಕ್ ಒಳಹರಿವು ಇದೆ, ಹೊರ ಹರಿವು 630 ಕ್ಯುಸೆಕ್ ಆಗಿದೆ.
ಮಂಡ್ಯದಲ್ಲಿರುವ ಕೆಆರ್‌ಎಸ್ ಈಗಾಗಲೇ ಭರ್ತಿಯಾಗಿದೆ. ಶುಕ್ರವಾರ ಡ್ಯಾಂನಲ್ಲಿ 38.04 ಮೀಟರ್ ನೀರಿನ ಸಂಗ್ರಹವಿದೆ. ಜಲಾಶಯದ ಪೂರ್ಣ ಮಟ್ಟ 38.04 ಮೀಟರ್ ಆಗಿದೆ. ಒಳಹರಿವು 11062 ಕ್ಯುಸೆಕ್ ಮತ್ತು ಹೊರ ಹರಿವು 10853 ಕ್ಯುಸೆಕ್.
ಭದ್ರಾ ಜಲಾಶಯದಲ್ಲಿ ಶುಕ್ರವಾರ 657.73 ಮೀಟರ್ ನೀರಿನ ಸಂಗ್ರಹವಿದೆ. ಡ್ಯಾಂ ಪೂರ್ಣಮಟ್ಟ 657.73 ಮೀಟರ್. ಜಲಾಶಯಕ್ಕೆ ಒಳಹರಿವು 5161 ಕ್ಯುಸೆಕ್ ಆಗಿದೆ. ಹೊರ ಹರಿವು 3946 ಕ್ಯುಸೆಕ್ ಆಗಿದೆ.

ತುಂಗಭದ್ರಾ, ಆಲಮಟ್ಟಿ, ನಾರಾಯಣಪುರ
ಹೊಸಪೇಟೆಯಲ್ಲಿರುವ ತುಂಗಭದ್ರಾ ಜಲಾಶಯ ಭರ್ತಿಯಾಗಿದೆ. ಶುಕ್ರವಾರ ಡ್ಯಾಂನಲ್ಲಿ 497.71 ಮೀಟರ್ ನೀರಿನ ಸಂಗ್ರಹವಿದೆ. ಡ್ಯಾಂನ ಪೂರ್ಣಮಟ್ಟ 497.71 ಮೀಟರ್. ಜಲಾಶಯಕ್ಕೆ 20957 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಹೊರ ಹರಿವು 20957 ಕ್ಯುಸೆಕ್ ಆಗಿದೆ.
ಆಲಮಟ್ಟಿ ಜಲಾಶಯದ ಪೂರ್ಣ ಮಟ್ಟ 519.60 ಮೀಟರ್. ಶುಕ್ರವಾರ ಜಲಾಶಯದ ನೀರಿನ ಮಟ್ಟ 518.45 ಮೀಟರ್ ಆಗಿದೆ. ಒಳ ಹರಿವು 7797 ಕ್ಯುಸೆಕ್, ಹೊರ ಹರಿವು 830 ಕ್ಯುಸೆಕ್ ಆಗಿದೆ.
ನಾರಾಯಣಪುರ ಜಲಾಶಯದ ಶುಕ್ರವಾರದ ನೀರಿನ ಮಟ್ಟ 492 ಮೀಟರ್. ಡ್ಯಾಂ ಪೂರ್ಣ ಮಟ್ಟ 492.25 ಮೀಟರ್. ಒಳಹರಿವು 1113 ಕ್ಯುಸೆಕ್ ಆಗಿದೆ. ಹೊರ ಹರಿವು 578 ಕ್ಯುಸೆಕ್ ದಾಖಲಾಗಿದೆ.
Recommended Video

ಸೂಪ, ಘಟಪ್ರಭಾ, ಮಲಪ್ರಭಾ
ಸೂಪಾ ಜಲಾಶಯದಲ್ಲಿ ಶುಕ್ರವಾರ 555.06 ಮೀಟರ್ ನೀರಿನ ಸಂಗ್ರಹವಿದೆ. ಡ್ಯಾಂ ಪೂರ್ಣ ಮಟ್ಟ 564.00 ಮೀಟರ್ ಆಗಿದೆ. ಜಲಾಶಯದ ಒಳ ಹರಿವು 534 ಕ್ಯುಸೆಕ್ ಮತ್ತು ಹೊರ ಹರಿವು 1396 ಕ್ಯುಸೆಕ್ ಆಗಿದೆ.
ಘಟಪ್ರಭಾ ಜಲಾಯಶದ ಪೂರ್ಣ ಮಟ್ಟ 662.91 ಮೀಟರ್. ಶುಕ್ರವಾರ ಜಲಾಶಯದಲ್ಲಿ 660.08 ಮೀಟರ್ ನೀರಿದೆ. ಜಲಾಶಯದ ಒಳ ಹರಿವು 1052 ಮತ್ತು ಹೊರ ಹರಿವು 179 ಕ್ಯುಸೆಕ್ ಆಗಿದೆ.
ಮಲಪ್ರಭಾ ಜಲಾಶಯದಲ್ಲಿ ಶುಕ್ರವಾರ 633.04 ಮೀಟರ್ ನೀರಿನ ಸಂಗ್ರಹವಿದೆ. ಪೂರ್ಣ ಮಟ್ಟ 633.80 ಮೀಟರ್. ಒಳಹರಿವು 769 ಕ್ಯುಸೆಕ್, ಅಷ್ಟೇ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ.












Click it and Unblock the Notifications