ನವೆಂಬರ್ 13: ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟ
ಬೆಂಗಳೂರು, ನವೆಂಬರ್ 13: ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತದಿಂದಾಗಿ ತಮಿಳುನಾಡಿನ ಚೆನ್ನೈ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಪ್ರದೇಶಗಳಲ್ಲೂ ಮಳೆ ಬೀಳುತ್ತಿದೆ. ರಾಜ್ಯದ ದಕ್ಷಿಣ ಒಳನಾಡು, ಕರಾವಳಿ ಭಾಗದಲ್ಲಿ ಮಳೆ ಭಾನುವಾರದವರೆಗೂ ಮುಂದುವರೆಯುವ ಸಾಧ್ಯತೆಯಿದೆ.
ರಾಜ್ಯದಲ್ಲಿ ಮಳೆಯ ನಡುವೆಯೇ ವಿವಿಧ ಜಿಲ್ಲೆಗಳಲ್ಲಿನ ತಾಪಮಾನ ಕುಸಿದಿದೆ. ಶನಿವಾರ ಬೆಳಗ್ಗೆ ಹೊತ್ತಿಗೆ ಮಂಜು ಮುಸುಕಿದ ವಾತಾವರಣ ನಿರ್ಮಾಣವಾಗಿದ್ದು, ಶೀತ ವಾತಾವಣದಿಂದ ಚಳಿಯ ಪ್ರಮಾಣ ಹೆಚ್ಚಾಗಿದೆ. ಬೆಂಗಳೂರು ನಗರದಲ್ಲಿ ನವೆಂಬರ್ 15ರವರೆಗೂ ಶೀತ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರ್ನಾಟಕದ ವಿವಿಧ ಜಲಾಶಯಗಳು ಕಳೆದ ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಭರ್ತಿಯಾಗಿವೆ. ಕಾವೇರಿಕೊಳ್ಳದ ಪ್ರಮುಖ ಜಲಾಶಯವಾದ ಮಂಡ್ಯದ ಕೆಆರ್‌ಎಸ್ ಅಕ್ಟೋಬರ್‌ನಲ್ಲಿ ಭರ್ತಿಯಾಗಿದೆ. ಕಳೆದ 11 ವರ್ಷಗಳಲ್ಲೇ ಮೊದಲ ಬಾರಿಗೆ ಅಕ್ಟೋಬರ್ ತಿಂಗಳಿನಲ್ಲೇ ಕೆಆರ್ಎಸ್ ಭರ್ತಿ ಆಗಿರುವುದು ಹೊಸ ದಾಖಲೆಯಾಗಿದೆ.
ತಮಿಳುನಾಡಿನಲ್ಲಿ ಸುರಿದ ಧಾರಾಕಾರ ಮಳೆಯಿಂದ ಮೆಟ್ಟೂರು ಡ್ಯಾಂ ಈಗಾಗಲೇ ಭರ್ತಿಯಾಗಿದೆ. ಈ ಹಿನ್ನೆಲೆ ಕಾವೇರಿ ನದಿ ನೀರಿನ ವಿವಾದ ತಣ್ಣಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಜಲಾಶಯಗಳಿಗೆ ಒಳಹರಿವು ಏರಿಕೆಯಾಗುತ್ತಿದೆ. ಶನಿವಾರ ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ ಎಂಬುದನ್ನು ಮುಂದೆ ತಿಳಿಯೋಣ.

ಲಿಂಗನಮಕ್ಕಿ, ಹಾರಂಗಿ, ಹೇಮಾವತಿ ಜಲಾಶಯ
ಲಿಂಗನಮಕ್ಕಿ ಜಲಾಶಯದ ಶನಿವಾರದ ನೀರಿನ ಮಟ್ಟ 552.74 ಮೀಟರ್ ಆಗಿದೆ. ಡ್ಯಾಂನ ಪೂರ್ಣ ಮಟ್ಟ 554.44 ಮೀಟರ್. ಜಲಾಶಯಕ್ಕೆ ಒಳಹರಿವು 531 ಕ್ಯುಸೆಕ್ ಆಗಿದೆ. ಡ್ಯಾಂನಿಂದ ಹೊರ ಹರಿವು 6208 ಕ್ಯುಸೆಕ್ ದಾಖಲಾಗಿದೆ.
ಹಾರಂಗಿ ಜಲಾಶಯದ ಪೂರ್ಣ ಮಟ್ಟ 871.38 ಮೀಟರ್ ಆಗಿದ್ದು, ಶನಿವಾರ ಜಲಾಶಯದಲ್ಲಿ 870.91 ಮೀಟರ್ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ 515 ಕ್ಯುಸೆಕ್ ನೀರು ಹರಿದು ಬರುತ್ತಿದ್ದರೆ, 950 ಕ್ಯುಸೆಕ್ ನೀರನ್ನು ಹೊರ ಬೀಡಲಾಗುತ್ತಿದೆ.
ಹೇಮಾವತಿ ಜಲಾಶಯದ ಶನಿವಾರದ ನೀರಿನ ಮಟ್ಟ 886.48 ಮೀಟರ್ ಆಗಿದ್ದು, ಜಲಾಶಯದ ಪೂರ್ಣ ಮಟ್ಟ 890.58 ಮೀಟರ್ ಆಗಿದೆ. 1889 ಕ್ಯುಸೆಕ್ ನೀರು ಡ್ಯಾಂಗೆ ಹರಿದು ಬರುತ್ತಿದ್ದು, ಹೊರ ಹರಿವು 3500 ಕ್ಯುಸೆಕ್ ಆಗಿದೆ.

ಕೆಆರ್ಎಸ್, ಕಬಿನಿ, ಭದ್ರಾ ಡ್ಯಾಂ
ಕಬಿನಿ ಜಲಾಶಯದಲ್ಲಿ ಶನಿವಾರ 696.09 ಮೀಟರ್ ನೀರಿನ ಸಂಗ್ರಹವಿದೆ. ಡ್ಯಾಂ ಪೂರ್ಣ ಮಟ್ಟ 696.13 ಮೀಟರ್. ಜಲಾಶಯಕ್ಕೆ 2026 ಕ್ಯುಸೆಕ್ ಒಳಹರಿವು ಇದೆ, ಹೊರ ಹರಿವು 1525 ಕ್ಯುಸೆಕ್ ಆಗಿದೆ.
ಮಂಡ್ಯದಲ್ಲಿರುವ ಕೆಆರ್‌ಎಸ್ ಭರ್ತಿಯಾಗಿದೆ. ಶುಕ್ರವಾರ ಡ್ಯಾಂನಲ್ಲಿ 38.04 ಮೀಟರ್ ನೀರಿನ ಸಂಗ್ರಹವಿದೆ. ಜಲಾಶಯದ ಪೂರ್ಣ ಮಟ್ಟ 38.04 ಮೀಟರ್ ಆಗಿದೆ. ಒಳಹರಿವು 6544 ಕ್ಯುಸೆಕ್ ಮತ್ತು ಹೊರ ಹರಿವು 6333 ಕ್ಯುಸೆಕ್.
ಭದ್ರಾ ಜಲಾಶಯದಲ್ಲಿ ಶನಿವಾರ 657.52 ಮೀಟರ್ ನೀರಿನ ಸಂಗ್ರಹವಿದೆ. ಈ ಡ್ಯಾಂ ಪೂರ್ಣಮಟ್ಟವು 657.73 ಮೀಟರ್ ಆಗಿದ್ದು, ಜಲಾಶಯಕ್ಕೆ ಒಳಹರಿವು 3173 ಕ್ಯುಸೆಕ್ ಆಗಿದೆ. ಹೊರ ಹರಿವು 2861ರಷ್ಟಿದೆ.

ಆಲಮಟ್ಟಿ, ತುಂಗಭದ್ರ, ನಾರಾಯಣಪುರ ಡ್ಯಾಂ
ತುಂಗಭದ್ರಾ ಜಲಾಶಯ ಭರ್ತಿಯಾಗಿದೆ. ಶನಿವಾರ ಡ್ಯಾಂನಲ್ಲಿ 497.51 ಮೀಟರ್ ನೀರಿನ ಸಂಗ್ರಹವಿದೆ. ಡ್ಯಾಂನ ಪೂರ್ಣಮಟ್ಟ 497.71 ಮೀಟರ್. ಜಲಾಶಯಕ್ಕೆ 5443 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಹೊರ ಹರಿವು 9450 ಕ್ಯುಸೆಕ್ ಆಗಿದೆ.
ಆಲಮಟ್ಟಿ ಜಲಾಶಯದ ಪೂರ್ಣ ಮಟ್ಟ 519.60 ಮೀಟರ್. ಶನಿವಾರದ ನೀರಿನ ಮಟ್ಟ 518.68 ಮೀಟರ್ ಆಗಿದೆ. ಆಲಮಟ್ಟಿ ಜಲಾಶಯದ ಒಳಹರಿವಿನ ಪ್ರಮಾಣ ಶೂನ್ಯವಾಗಿದ್ದು, ಹೊರ ಹರಿವು 5428 ಕ್ಯುಸೆಕ್ ಆಗಿದೆ.
ನಾರಾಯಣಪುರ ಜಲಾಶಯದ ಶನಿವಾರದ ನೀರಿನ ಮಟ್ಟ 491.18 ಮೀಟರ್. ಡ್ಯಾಂ ಪೂರ್ಣ ಮಟ್ಟ 492.25 ಮೀಟರ್. ಒಳಹರಿವು 3475 ಕ್ಯುಸೆಕ್ ಆಗಿದೆ. ಹೊರ ಹರಿವು 1110 ಕ್ಯುಸೆಕ್ ದಾಖಲಾಗಿದೆ.

ಘಟಪ್ರಭಾ, ಸೂಪಾ, ಮಲಪ್ರಭಾ ಡ್ಯಾಂ
ಸೂಪಾ ಜಲಾಶಯದಲ್ಲಿ ಶನಿವಾರ 555.53 ಮೀಟರ್ ನೀರಿನ ಸಂಗ್ರಹವಿದೆ. ಡ್ಯಾಂ ಪೂರ್ಣ ಮಟ್ಟ 564.00 ಮೀಟರ್ ಆಗಿದೆ. ಜಲಾಶಯದ ಒಳಹರಿವು 419 ಕ್ಯುಸೆಕ್ ಆಗಿದ್ದು, ಹೊರ ಹರಿವು 3474 ಕ್ಯುಸೆಕ್ ಆಗಿದೆ.
ಘಟಪ್ರಭಾ ಜಲಾಯಶದ ಪೂರ್ಣ ಮಟ್ಟ 662.91 ಮೀಟರ್. ಶನಿವಾರ ಜಲಾಶಯದಲ್ಲಿ 660.77 ಮೀಟರ್ ನೀರಿದೆ. ಜಲಾಶಯದ ಒಳಹರಿವು ಶೂನ್ಯವಾಗಿದ್ದು, ಹೊರ ಹರಿವು 2567 ಕ್ಯುಸೆಕ್ ಆಗಿದೆ.
ಮಲಪ್ರಭಾ ಜಲಾಶಯದಲ್ಲಿ ಶನಿವಾರ 632.93 ಮೀಟರ್ ನೀರಿನ ಸಂಗ್ರಹವಿದೆ. ಪೂರ್ಣ ಮಟ್ಟ 633.80 ಮೀಟರ್ ಆಗಿದೆ. ಜಲಾಶಯದ ಒಳಹರಿವು ಶೂನ್ಯವಾಗಿದ್ದು, ಹೊರ ಹರಿವಿನ ಪ್ರಮಾಣ 2444 ಕ್ಯುಸೆಕ್ ರಷ್ಟಿದೆ.












Click it and Unblock the Notifications