ಮುಂದುವರೆದ ಮಳೆ; ಜಲಾಶಯಗಳ ನೀರಿನ ಮಟ್ಟ
ಬೆಂಗಳೂರು, ಜುಲೈ 20; ಕರ್ನಾಟಕದ ಕರಾವಳಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸೋಮವಾರ ಮಳೆ ಕೊಂಚ ಬಿಡುವು ನೀಡಿತ್ತು. ಆದರೆ ನದಿಗಳ ನೀರಿನ ಮಟ್ಟದಲ್ಲಿ ಇಳಿಕೆಯಾಗಿಲ್ಲ, ಜಲಾಶಯಗಳಿಗೆ ಒಳಹರಿವು ಹೆಚ್ಚುತ್ತಲೇ ಇದೆ.
ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಬೆಳಗಾವಿ, ಬೀದರ್, ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಮಳೆಯಾಗಿದೆ. ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಯಲ್ಲಿಯೂ ಮಳೆ ಸುರಿದಿದೆ. ನದಿಗಳ ನೀರಿನ ಮಟ್ಟ ಇಳಿಕೆಯಾಗಿಲ್ಲ.
ಕಾವೇರಿ ಕಣಿವೆಯ ಹಾರಂಗಿ 9393. ಹೇಮಾವತಿ 8582. ಕೆಆರ್‌ಎಸ್ 13,892. ಕಬಿನಿ ಜಲಾಶಯಕ್ಕೆ 9262 ಕ್ಯುಸೆಕ್ ಒಳಹರಿವು ದಾಖಲಾಗಿದೆ. ಬೆಂಗಳೂರು ನಗರದಲ್ಲಿ ಸೋಮವಾರ ಮಳೆ ಬಿಡುವು ಕೊಟ್ಟಿದ್ದು, ಆಗಾಗ ಮಳೆಯಾಗಿದೆ.
ಕಾವೇರಿ ಕೊಳ್ಳದ ಪ್ರಮುಖ ಜಲಾಶಯ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಕೆಆರ್‌ಎಸ್. ಜಲಾಶಯದ ನೀರಿನ ಮಟ್ಟ 99 ಅಡಿಗೆ ತಲುಪಿದೆ. ಜಲಾಶಯದ ಪೂರ್ಣ ಮಟ್ಟ 124.80 ಅಡಿಗಳು. ಯಾವ ಜಲಾಶಯದಲ್ಲಿ ಎಷ್ಟು ನೀರಿದೆ? ಇಲ್ಲಿದೆ ಮಾಹಿತಿ..

ಹೇಮಾವತಿ ಜಲಾಶಯದ ನೀರಿನ ಮಟ್ಟ
ಹಾಸನ ಜಿಲ್ಲೆಯಲ್ಲಿರುವ ಹೇಮಾವತಿ ಜಲಾಶಯಕ್ಕೆ 8582 ಕ್ಯುಸೆಕ್ ಒಳಹರಿವು ಇದೆ. ಜಲಾಶಯದ ಪೂರ್ಣ ಮಟ್ಟ 890.58 ಮೀಟರ್. ಇಂದಿನ ನೀರಿನ ಮಟ್ಟ 885.74 ಮೀಟರ್. ಹಾರಂಗಿ ಮತ್ತು ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟವೂ ಚಿತ್ರದಲ್ಲಿದೆ.

ಭದ್ರಾ ಜಲಾಶಯದ ನೀರಿನ ಮಟ್ಟ
ಭದ್ರಾ ಜಲಾಶಯಕ್ಕೆ 12,355 ಕ್ಯುಸೆಕ್ ಒಳಹರಿವು ಇದೆ. ಜಲಾಶಯದ ಪೂರ್ಣ ಮಟ್ಟ 657.73 ಮೀಟರ್. ಇಂದಿನ ನೀರಿನ ಮಟ್ಟ 651.50 ಮೀಟರ್. ಕಬಿನಿ ಮತ್ತು ಕೆಆರ್‌ಎಸ್ ಜಲಾಶಯಗಳ ನೀರಿನ ಮಟ್ಟವೂ ಇಲ್ಲಿದೆ.

ಆಲಮಟ್ಟಿಯ ನೀರಿನ ಮಟ್ಟ
ಆಲಮಟ್ಟಿ ಜಲಾಶಯಕ್ಕೆ 39,395 ಕ್ಯುಸೆಕ್ ಒಳಹರಿವು ಇದೆ. ಜಲಾಶಯದ ಪೂರ್ಣಮಟ್ಟ 519.60 ಮೀಟರ್. ಇಂದಿನ ನೀರಿನ ಮಟ್ಟ 517.67 ಮೀಟರ್ ಆಗಿದೆ. ತುಂಗಭದ್ರಾ ಮತ್ತು ನಾರಾಯಣಪುರ ಜಲಾಶಯದ ನೀರಿನ ಮಟ್ಟವೂ ಚಿತ್ರದಲ್ಲಿದೆ.

ಘಟಪ್ರಭಾ ಜಲಾಶಯದಲ್ಲಿ ಎಷ್ಟು ನೀರಿದೆ?
10046 ಕ್ಯುಸೆಕ್ ನೀರು ಘಟಪ್ರಭಾ ಜಲಾಶಯಕ್ಕೆ ಹರಿದುಬರುತ್ತಿದೆ. ಜಲಾಶಯದ ಪೂರ್ಣ ಮಟ್ಟ 662.91 ಮೀಟರ್. ಇಂದಿನ ನೀರಿನ ಮಟ್ಟ 654.55 ಮೀಟರ್ ಆಗಿದೆ. ಮಲಪ್ರಭಾ ಮತ್ತು ಸೂಪಾ ಜಲಾಶಯಗಳ ನೀರಿನ ಮಟ್ಟವೂ ಚಿತ್ರದಲ್ಲಿದೆ.












Click it and Unblock the Notifications