ಡಿಸೆಂಬರ್ 01; ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ

ಬೆಂಗಳೂರು, ಡಿಸೆಂಬರ್ 01; ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಮಂಗಳವಾರ ರಾತ್ರಿ ಮತ್ತು ಬುಧವಾರ ಬೆಳಗ್ಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ.

ಕರಾವಳಿ ಮತ್ತು ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುತ್ತಿದೆ. ಬೆಂಗಳೂರು ನಗರದಲ್ಲಿ ಶೀತಗಾಳಿ ಬೀಸುತ್ತಿದ್ದು, ಮೋಡ ಕವಿದ ವಾತಾವರಣ ಮುಂದುವರೆದಿದೆ. ನಗರದಲ್ಲಿ ತುಂತುರು ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.

ಚಂಡಮಾರುತ ಡಿಸೆಂಬರ್ 4ರಂದು ಆಂಧ್ರ ಪ್ರದೇಶ ಮತ್ತು ಓಡಿಶಾ ಕರಾವಳಿಗೆ ಚಂಡಮಾರುತ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಫಾಲ್ಘಾರ್, ಥಾಣೆ, ಮುಂಬೈನಲ್ಲಿ ಹೆಚ್ಚು ಮಳೆಯಾಗಲಿದೆ ಎಂದು ಮುನ್ಸೂಚನೆ ಕೊಡಲಾಗಿದೆ.

ಕರ್ನಾಟಕದ ಜಲಾಶಯಗಳು ಜುಲೈ, ಆಗಸ್ಟ್ ತಿಂಗಳಿನಲ್ಲಿಯೇ ಭರ್ತಿಯಾಗಿವೆ. ಚಂಡಮಾರುತ ಪ್ರಭಾವದಿಂದ ಮಳೆಯಾಗುತ್ತಿರುವುದರಿಂದ ವಿವಿಧ ಜಲಾಶಯಗಳಿಗೆ ನೀರಿನ ಒಳಹರಿವು ಹೆಚ್ಚಿದೆ. ರಾಜ್ಯದಲ್ಲಿ ಮಳೆ ಕಡಿಮೆಯಾಗಿದ್ದರಿಂದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ.

ಲಿಂಗನಮಕ್ಕಿ, ಹಾರಂಗಿ, ಹೇಮಾವತಿ

ಲಿಂಗನಮಕ್ಕಿ, ಹಾರಂಗಿ, ಹೇಮಾವತಿ

ಲಿಂಗನಮಕ್ಕಿ ಜಲಾಶಯದ ಬುಧವಾರದ ನೀರಿನ ಮಟ್ಟ 552.39 ಮೀಟರ್. ಡ್ಯಾಂನ ಪೂರ್ಣ ಮಟ್ಟ 554.44 ಮೀಟರ್. ಜಲಾಶಯಕ್ಕೆ ಒಳಹರಿವು 1651 ಕ್ಯುಸೆಕ್. ಡ್ಯಾಂನಿಂದ ಹೊರ ಹರಿವು 5025 ಕ್ಯುಸೆಕ್ ದಾಖಲಾಗಿದೆ.

ಹಾರಂಗಿ ಜಲಾಶಯದ ಪೂರ್ಣ ಮಟ್ಟ 871.38 ಮೀಟರ್. ಬುಧವಾರ ಜಲಾಶಯದಲ್ಲಿ 870.82 ಮೀಟರ್ ನೀರಿನ ಸಂಗ್ರಹವಿದೆ. 208 ಕ್ಯುಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ಹೊರ ಹರಿವು 961 ಕ್ಯುಸೆಕ್ ಆಗಿದೆ.

ಹೇಮಾವತಿ ಜಲಾಶಯದ ಬುಧವಾರದ ನೀರಿನ ಮಟ್ಟ 888.12 ಮೀಟರ್ ಆಗಿದೆ. ಜಲಾಶಯದ ಪೂರ್ಣ ಮಟ್ಟ 890.58 ಮೀಟರ್. 1869 ಕ್ಯುಸೆಕ್ ನೀರು ಡ್ಯಾಂಗೆ ಹರಿದು ಬರುತ್ತಿದೆ. ಹೊರ ಹರಿವು 1125 ಕ್ಯುಸೆಕ್ ಆಗಿದೆ.

ಕೆಆರ್‌ಎಸ್, ಕಬಿನಿ, ಭದ್ರಾ ಡ್ಯಾಂ

ಕೆಆರ್‌ಎಸ್, ಕಬಿನಿ, ಭದ್ರಾ ಡ್ಯಾಂ

ಕಬಿನಿ ಜಲಾಶಯದಲ್ಲಿ ಬುಧವಾರ 696.01 ಮೀಟರ್ ನೀರಿನ ಸಂಗ್ರಹವಿದೆ. ಡ್ಯಾಂ ಪೂರ್ಣ ಮಟ್ಟ 696.13 ಮೀಟರ್. ಜಲಾಶಯಕ್ಕೆ ಕ್ಯುಸೆಕ್ 657 ಒಳಹರಿವು ಇದೆ, ಹೊರ ಹರಿವು 1400 ಕ್ಯುಸೆಕ್ ಆಗಿದೆ.

ಮಂಡ್ಯದಲ್ಲಿರುವ ಕೆಆರ್‌ಎಸ್ ಈಗಾಗಲೇ ಭರ್ತಿಯಾಗಿದೆ. ಬುಧವಾರ ಡ್ಯಾಂನಲ್ಲಿ 38.01 ಮೀಟರ್ ನೀರಿನ ಸಂಗ್ರಹವಿದೆ. ಜಲಾಶಯದ ಪೂರ್ಣ ಮಟ್ಟ 38.04 ಮೀಟರ್ ಆಗಿದೆ. ಒಳಹರಿವು 5407 ಕ್ಯುಸೆಕ್ ಮತ್ತು ಹೊರ ಹರಿವು 6828 ಕ್ಯುಸೆಕ್.

ಭದ್ರಾ ಜಲಾಶಯದಲ್ಲಿ ಬುಧವಾರ 657.71 ಮೀಟರ್ ನೀರಿನ ಸಂಗ್ರಹವಿದೆ. ಡ್ಯಾಂ ಪೂರ್ಣಮಟ್ಟ 657.73 ಮೀಟರ್. ಜಲಾಶಯಕ್ಕೆ ಒಳಹರಿವು 1825 ಕ್ಯುಸೆಕ್ ಆಗಿದೆ. ಹೊರ ಹರಿವು 1212 ಕ್ಯುಸೆಕ್ ಆಗಿದೆ.

ತುಂಗಭದ್ರಾ, ಆಲಮಟ್ಟಿ, ನಾರಾಯಣಪುರ

ತುಂಗಭದ್ರಾ, ಆಲಮಟ್ಟಿ, ನಾರಾಯಣಪುರ

ಹೊಸಪೇಟೆಯಲ್ಲಿರುವ ತುಂಗಭದ್ರಾ ಜಲಾಶಯ ಭರ್ತಿಯಾಗಿದೆ. ಬುಧವಾರ ಡ್ಯಾಂನಲ್ಲಿ 497.71 ಮೀಟರ್ ನೀರಿನ ಸಂಗ್ರಹವಿದೆ. ಡ್ಯಾಂನ ಪೂರ್ಣಮಟ್ಟ 497.71 ಮೀಟರ್. ಜಲಾಶಯಕ್ಕೆ 8658 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಅಷ್ಟೇ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿದೆ.

ಆಲಮಟ್ಟಿ ಜಲಾಶಯದ ಪೂರ್ಣ ಮಟ್ಟ 519.60 ಮೀಟರ್. ಬುಧವಾರ ಜಲಾಶಯದ ನೀರಿನ ಮಟ್ಟ 518.53 ಮೀಟರ್ ಆಗಿದೆ. ಒಳ ಹರಿವು 4063 ಕ್ಯುಸೆಕ್, ಹೊರ ಹರಿವು 580 ಕ್ಯುಸೆಕ್ ಆಗಿದೆ.

ನಾರಾಯಣಪುರ ಜಲಾಶಯದ ಬುಧವಾರದ ನೀರಿನ ಮಟ್ಟ 492.10 ಮೀಟರ್. ಡ್ಯಾಂ ಪೂರ್ಣ ಮಟ್ಟ 492.25 ಮೀಟರ್. ಒಳಹರಿವು 1333 ಕ್ಯುಸೆಕ್ ಆಗಿದೆ. ಹೊರ ಹರಿವು 250 ಕ್ಯುಸೆಕ್ ದಾಖಲಾಗಿದೆ.

ಸೂಪ, ಘಟಪ್ರಭಾ, ಮಲಪ್ರಭಾ

ಸೂಪ, ಘಟಪ್ರಭಾ, ಮಲಪ್ರಭಾ

ಸೂಪಾ ಜಲಾಶಯದಲ್ಲಿ ಬುಧವಾರ 554.86 ಮೀಟರ್ ನೀರಿನ ಸಂಗ್ರಹವಿದೆ. ಡ್ಯಾಂ ಪೂರ್ಣ ಮಟ್ಟ 564.00 ಮೀಟರ್ ಆಗಿದೆ. ಜಲಾಶಯದ ಹೊರ ಹರಿವು 591 ಕ್ಯುಸೆಕ್ ಆಗಿದೆ.

ಘಟಪ್ರಭಾ ಜಲಾಯಶದ ಪೂರ್ಣ ಮಟ್ಟ 662.91 ಮೀಟರ್. ಬುಧವಾರ ಜಲಾಶಯದಲ್ಲಿ 660.10 ಮೀಟರ್ ನೀರಿದೆ. ಜಲಾಶಯದ ಹೊರ ಹರಿವು 173 ಕ್ಯುಸೆಕ್ ಆಗಿದೆ.

ಮಲಪ್ರಭಾ ಜಲಾಶಯದಲ್ಲಿ ಬುಧವಾರ 633.08 ಮೀಟರ್ ನೀರಿನ ಸಂಗ್ರಹವಿದೆ. ಪೂರ್ಣ ಮಟ್ಟ 633.80 ಮೀಟರ್. ಒಳಹರಿವು 569 ಕ್ಯುಸೆಕ್, ಅಷ್ಟೇ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+