ಆಶ್ಲೇಷ ಮಳೆ ಅಬ್ಬರ; ಜಲಾಶಯಗಳ ನೀರಿನ ಮಟ್ಟ
ಬೆಂಗಳೂರು, ಆಗಸ್ಟ್ 06; ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮತ್ತೆ ಮಳೆ ಆರಂಭವಾಗಿದೆ. ನದಿಗಳು ತುಂಬಿ ಹರಿಯುತ್ತಿದ್ದು, ಆಶ್ಲೇಷಾ ಮಳೆಯ ಅಬ್ಬರಿಂದಾಗಿಯೂ ಪ್ರವಾಹ ಭೀತಿ ಉಂಟಾಗಿದೆ. ಜಲಾಶಯಗಳಿಗೆ ಒಳಹರಿವು ಸಹ ಹೆಚ್ಚಾಗುತ್ತಿದೆ.
ಶಿವಮೊಗ್ಗದಲ್ಲಿರುವ ಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಗರಿಷ್ಠ ಮಟ್ಟ ತಲುಪಿರುವ ಹಿನ್ನಲೆಯಲ್ಲಿ ನಾಲ್ಕು ಗೇಟ್‌ಗಳ ಮೂಲಕ ನದಿಗೆ ನೀರು ಹರಿಸಲಾಯಿತು. ಜಲಾಶಯದ ಗರಿಷ್ಠ ಮಟ್ಟ 186 ಅಡಿ. ಸದ್ಯ ನೀರಿನ ಮಟ್ಟ 184.5 ಅಡಿಯಷ್ಟಿದೆ.
ಪ್ರಸ್ತುತ ಜಲಾಶಯಕ್ಕೆ 13,217 ಕ್ಯೂಸೆಕ್ ಒಳ ಹರಿವು ಇದೆ. ಹಾಗಾಗಿ ಕ್ರಸ್ಟ್ ಗೇಟ್‌ಗಳ ಮೂಲಕ 6008 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಒಳ ಹರಿವು ಹೆಚ್ಚಳವಾದರೆ ಹೊರಹರಿವಿನ ಪ್ರಮಾಣವೂ ಏರಿಕೆಯಾಗಲಿದೆ.
ಕಳೆದ ಎರಡು ದಿನದಿಂದ ಮಲೆನಾಡು ಭಾಗದಲ್ಲಿ ಮಳೆಯಾಗುತ್ತಿದೆ. ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಕಡಿಮೆಯಾಗಿದೆ. ಪ್ರಸ್ತುತ ಸುಮಾರು ಒಂದು ಲಕ್ಷಕ್ಕೂ ಅಧಿಕ ಕ್ಯುಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ.

ಲಿಂಗನಮಕ್ಕಿ, ಹಾರಂಗಿ, ಹೇಮಾವತಿ
ಲಿಂಗನಮಕ್ಕಿ ಜಲಾಶಯದ ಪೂರ್ಣ ಮಟ್ಟ 554.44 ಮೀಟರ್, ಜಲಾಶಯದ ಇಂದಿನ ಮಟ್ಟ 551.74 ಮೀಟರ್ ಆಗಿದೆ. ಒಳಹರಿವು 24,319 ಕ್ಯುಸೆಕ್. 4251 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಹಾರಂಗಿ ಜಲಾಶಯದ ಪೂರ್ಣ ಮಟ್ಟ 871.38 ಮೀಟರ್. ಇಂದಿನ ನೀರಿನ ಮಟ್ಟ 870.20 ಮೀಟರ್ ಆಗಿದೆ. ಜಲಾಶಯಕ್ಕೆ ಒಳಹರಿವು 7487 ಕ್ಯುಸೆಕ್ ಆಗಿದೆ. ಹೊರ ಹರಿವು 9683 ಕ್ಯುಸೆಕ್.
ಹೇಮಾವತಿ ಜಲಾಶಯದ ಪೂರ್ಣ ಮಟ್ಟ 890.58 ಮೀಟರ್. ಇಂದಿನ ನೀರಿನ ಮಟ್ಟ 889.93 ಮೀಟರ್. ಒಳಹರಿವು 11,709 ಕ್ಯುಸೆಕ್, ಜಲಾಶಯದಿಂದ ಹೊರ ಹರಿವು 10580 ಕ್ಯುಸೆಕ್ ಆಗಿದೆ.

ಕಬಿನಿ, ಕೆಆರ್‌ಎಸ್, ಭದ್ರಾ ಜಲಾಶಯಗಳು
ಕಬಿನಿ ಜಲಾಶಯದ ಪೂರ್ಣ ಮಟ್ಟ 696.13 ಮೀಟರ್. ಇಂದಿನ ನೀರಿನ ಮಟ್ಟ 695. 37 ಮೀಟರ್ ಆಗಿದೆ. ಜಲಾಶಯಕ್ಕೆ ಒಳಹರಿವು 6879 ಕ್ಯುಸೆಕ್, ಹೊರಹರಿವು 3354 ಕ್ಯುಸೆಕ್ ದಾಖಲಾಗಿದೆ.
ಕೆಆರ್‌ಎಸ್ ಜಲಾಶಯದ ಪೂರ್ಣ ಮಟ್ಟ 38.04 ಮೀಟರ್. ಇಂದಿನ ನೀರಿನ ಮಟ್ಟ 35.47 ಮೀಟರ್ ಆಗಿದೆ. ಜಲಾಶಯಕ್ಕೆ 14916 ಕ್ಯುಸೆಕ್ ಒಳಹರಿವು ಇದೆ. ಜಲಾಶಯದಿಂದ 5308 ಕ್ಯುಸೆಕ್ ನೀರನ್ನು ಬಿಡಲಾಗುತ್ತಿದೆ.
ಭದ್ರಾ ಜಲಾಶಯದ ಪೂರ್ಣಮಟ್ಟ 657.73 ಮೀಟರ್ ಆಗಿದೆ. ಇಂದಿನ ನೀರಿನ ಮಟ್ಟ 657.29 ಮೀಟರ್ ಆಗಿದೆ. ಜಲಾಶಯಕ್ಕೆ 13217 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಡ್ಯಾಂನಿಂದ 6608 ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.

ತುಂಗಭದ್ರಾ, ಆಲಮಟ್ಟಿ ಜಲಾಶಯ
ತುಂಗಭದ್ರಾ ಜಲಾಶಯದ ಪೂರ್ಣಮಟ್ಟ 497.71 ಮೀಟರ್ ಆಗಿದೆ. ಇಂದಿನ ನೀರಿನ ಮಟ್ಟ 497.43 ಮೀಟರ್. ಜಲಾಶಯಕ್ಕೆ 40913 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಹೊರ ಹರಿವು 37796 ಕ್ಯುಸೆಕ್ ಆಗಿದೆ.
ಆಲಮಟ್ಟಿ ಜಲಾಶಯದ ಪೂರ್ಣ ಮಟ್ಟ 519.60 ಮೀಟರ್. ಇಂದಿನ ನೀರಿನ ಮಟ್ಟ 518.74 ಮೀಟರ್ ಆಗಿದೆ. ಜಲಾಶಯಕ್ಕೆ 101201 ಕ್ಯುಸೆಕ್ ಒಳಹರಿವು ಇದೆ. ಹೊರ ಹರಿವು 86721 ಕ್ಯುಸೆಕ್.
ನಾರಾಯಣಪುರ ಜಲಾಶಯದ ಪೂರ್ಣ ಮಟ್ಟ 492.25 ಮೀಟರ್. ಇಂದಿನ ನೀರಿನ ಮಟ್ಟ 491.58 ಮೀಟರ್ ಆಗಿದೆ. 116524 ಕ್ಯುಸೆಕ್ ಒಳಹರಿವು ಜಲಾಶಯಕ್ಕೆ ಇದೆ. ಹೊರ ಹರಿವು 113477 ಕ್ಯುಸೆಕ್.

ಸೂಪಾ, ಘಟಪ್ರಭಾ, ಮಲಪ್ರಭಾ ಡ್ಯಾಂಗಳು
ಸೂಪಾ ಜಲಾಶಯದ ಪೂರ್ಣ ಮಟ್ಟ 564.00 ಮೀಟರ್. ಇಂದಿನ ನೀರಿನ ಮಟ್ಟ 553.65 ಮೀಟರ್ ಆಗಿದೆ. ಜಲಾಶಯಕ್ಕೆ 19396 ಕ್ಯುಸೆಕ್ ಒಳಹರಿವು ಇದೆ. ಹೊರ ಹರಿವು 4712 ಕ್ಯುಸೆಕ್
ಘಟಪ್ರಭಾ ಜಲಾಯಶದ ಪೂರ್ಣ ಮಟ್ಟ 662.91 ಮೀಟರ್. ಇಂದಿನ ನೀರಿನ ಮಟ್ಟ 662.18 ಮೀಟರ್. ಒಳಹರಿವು 15154 ಕ್ಯುಸೆಕ್, ಹೊರ ಹರಿವು 24487 ಕ್ಯುಸೆಕ್ ಆಗಿದೆ.
ಮಲಪ್ರಭಾ ಜಲಾಶಯದ ಪೂರ್ಣ ಮಟ್ಟ 633.80 ಮೀಟರ್ ಆಗಿದೆ. ಇಂದಿನ ನೀರಿನ ಮಟ್ಟ 632.75 ಮೀಟರ್ ಆಗಿದೆ. ಒಳಹರಿವು 3788 ಕ್ಯುಸೆಕ್, ಹೊರಹರಿವು 1519 ಕ್ಯುಸೆಕ್ ಆಗಿದೆ.












Click it and Unblock the Notifications