ವಿಜಯಪುರ: ಬ. ಬಾಗೇವಾಡಿಯಲ್ಲಿ ಕನಿಷ್ಠ, ನಾಗಠಾಣದಲ್ಲಿ ಗರಿಷ್ಠ ಮತದಾರರು
ವಿಜಯಪುರ, ಮೇ 3: ಚುನಾವಣಾ ಆಯೋಗ ಕರ್ನಾಟಕ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಿದೆ. ಆಯೋಗದ ಮಾಹಿತಿಗಳ ಪ್ರಕಾರ ವಿಜಯಪುರ ಜಿಲ್ಲೆಯಲ್ಲಿ 17,91,084 ಮತದಾರರಿದ್ದಾರೆ. ಇವರಲ್ಲಿ 9,19,875 ಪುರುಷ ಮತದಾರರು, 8,70,976 ಮಹಿಳಾ ಮತದಾರರು ಮತ್ತು 233 ತೃತೀಯ ಲಿಂಗಿ ಮತದಾರರಿದ್ದಾರೆ.
ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರದಲ್ಲಿ ಅತೀ ಕಡಿಮೆ 2,01,089 ಮತದಾರರಿದ್ದರೆ, ನಾಗಠಾಣದಲ್ಲಿ 2,60,382 ಜನರು ಮತ ಚಲಾವಣೆಯ ಹಕ್ಕು ಹೊಂದಿದ್ದಾರೆ. ವಿಜಯಪುರ ನಗರದಲ್ಲಿ ಅತೀ ಹೆಚ್ಚಿನ 68 ತೃತೀಯ ಲಿಂಗಿ ಮತದಾರರಿದ್ದಾರೆ.
ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಸ್ಪರ್ಧೆಯಿಂದ ರಾಜ್ಯದಾದ್ಯಂತ ಕುತೂಹಲ ಹುಟ್ಟಿಸಿರುವ ಬಬಲೇಶ್ವರದಲ್ಲಿ 2,11,555 ಜನರು ಈ ಬಾರಿ ತಮ್ಮ ಮತ ಚಲಾಯಿಸಲು ಅರ್ಹತೆ ಪಡೆದುಕೊಂಡಿದ್ದಾರೆ.













Click it and Unblock the Notifications