Infographics: ಕರ್ನಾಟಕದ ಪ್ರಥಮ ಪ್ರಜೆಗಳ ಪಟ್ಟಿ 1956-2021
ಬೆಂಗಳೂರು, ಜುಲೈ 11: ಕರ್ನಾಟಕದ 19ನೇ ರಾಜ್ಯಪಾಲರಾಗಿ ಥಾವರ್ ಚಂದ್ ಗೆಹ್ಲೋಟ್ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜಭವನದ ಗಾಜಿನ ಮನೆಯಲ್ಲಿ ಜುಲೈ 11 ರಂದು ಬೆಳಗ್ಗೆ 10.30ಕ್ಕೆ ನೂತನ ರಾಜ್ಯಪಾಲರ ಪ್ರಮಾಣವಚನ ಕಾರ್ಯಕ್ರಮ ನಡೆಸಲಾಯಿತು. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಅವರು ನೂತನ ರಾಜ್ಯಪಾಲರಿಗೆ ಅಧಿಕಾರ ಹಾಗೂ ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು. ಕರ್ನಾಟಕದ ರಾಜ್ಯಪಾಲರ ಹೆಸರು ಹಾಗೂ ಅವರ ಅಧಿಕಾರಾವಧಿಯ ವಿವರ ಇಲ್ಲಿದೆ. ಈ ಪಟ್ಟಿಯಲ್ಲಿ ಹಂಗಾಮಿ ರಾಜ್ಯಪಾಲರ ಹೆಸರು ಸೇರಿದೆ.
ರಾಜ್ಯಸಭೆಯ ಸದಸ್ಯರಾಗಿದ್ದ ಥಾವರ್ ಚಂದ್ ಗೆಹ್ಲೋಟ್ ಅವರು ಕೇಂದ್ರ ಎನ್‌ಡಿಎ ಸರ್ಕಾರದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಂಪುಟ ಸಚಿವರಾಗಿದ್ದರು. ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ನಗ್ಡಾದಲ್ಲಿ 1948ರ ಮೇ 18ರಂದು ಪರಿಶಿಷ್ಟ ಕುಟುಂಬದಲ್ಲಿ ಜನಿಸಿರುವ 73 ವರ್ಷದ ಗೆಹ್ಲೋಟ್ ಅವರು, ಉಜ್ಜಯಿನಿಯ ವಿಕ್ರಮ್ ವಿಶ್ವವಿದ್ಯಾಲಯದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದಾರೆ. ಅವರಿಗೆ ಡಾ. ಬಿ.ಆರ್. ಅಂಬೇಡ್ಕರ್ ಸಾಮಾಜಿಕ ವಿಜ್ಞಾನಗಳ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದ ಮರುಕ್ಷಣವೇ ನಿರ್ಗಮಿತ ರಾಜ್ಯಪಾಲರಾದ ವಜುಭಾಯಿ ಅವರು ಹೂಗುಚ್ಛ ನೀಡಿ ಅಭಿನಂದಿಸಿದರು. ಈ ಮುನ್ನ ರಾಜ್ಯದ ಮುಖ್ಯಕಾರ್ಯದರ್ಶಿಗಳು ರಾಷ್ಟ್ರಪತಿಯವರು ಹೊರಡಿಸಿರುವ ನೇಮಕಾತಿ ಆದೇಶವನ್ನು ವಾಚಿಸಿದರು.
19 ಮಂದಿ ರಾಜ್ಯಪಾಲರು: ಜಯಚಾಮರಾಜೇಂದ್ರ ಒಡೆಯರ್, ಎಸ್ಎಂ ಶ್ರೀನಾಗೇಶ್, ವಿ.ವಿ ಗಿರಿ, ಗೋಪಾಲ್ ಸ್ವರೂಪ್ ಪಾಠಕ್, ಧರ್ಮ ವೀರ, ಮೋಹಲ್ ಲಾಲ್ ಸುಖಾಡಿಯಾ, ಉಮಾಶಂಕರ್ ದೀಕ್ಷಿತ್, ಗೋವಿಂದ್ ನಾರಾಯಣ್, ಅಶೋಕ್ ನಾಥ್ ಬ್ಯಾನರ್ಜಿ, ಪಿ ವೆಂಕಟಸುಬ್ಬಯ್ಯ, ಭಾನು ಪ್ರತಾಪ್ ಸಿಂಗ್, ಖುರ್ಷದ್ ಅಲಂ ಖಾನ್, ವಿ.ಎಸ್ ರಮಾದೇವಿ, ಟಿ.ಎನ್ ಚತುರ್ವೇದಿ, ರಾಮೇಶ್ವರ್ ಠಾಕೂರ್, ಹನ್ಸ್ ರಾಜ್ ಭಾರದ್ವಾಜ್, ಕೊನಿಜೆಟಿ ರೋಸಯ್ಯ, ವಜುಭಾಯಿ ರುಡಾಭಾಯಿ ವಾಲ ಹಾಗೂ ಥಾವರ್ ಚಂದ್ ಗೆಹ್ಲೋಟ್
ಕರ್ನಾಟಕ ರಾಜ್ಯಪಾಲರು ಹಾಗೂ ಅಧಿಕಾರ ಅವಧಿಯ ಸಚಿತ್ರ ವಿವರ ಇಲ್ಲಿದೆ.. ಚಿತ್ರ ವಿನ್ಯಾಸ: ಭರತ್ ಎಚ್. ಸಿ















Click it and Unblock the Notifications