ಮೇ 18ರಂದು ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?

ಮೇ 18ರಂದು ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಎಂಬುದರ ಸಚಿತ್ರ ವರದಿ ಇಲ್ಲಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಸತತವಾಗಿ ಚಿನ್ನ ಹಾಗೂ ಬೆಳ್ಳಿ ದರ ಏರಿಳಿತ ಕಂಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.16ರಷ್ಟು ಕುಸಿತವಾಗಿ 1,866.04 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.33ರಷ್ಟು ಕುಸಿತವಾಗಿ 28.18 ಯುಎಸ್ ಡಾಲರ್ ಆಗಿದೆ.

ಮೊದಲ ತ್ರೈಮಾಸಿಕದ ಒಟ್ಟು ಜಾಗತಿಕ ಚಿನ್ನದ ಬೇಡಿಕೆ 815.7 ಟನ್‌ಗಳಷ್ಟಿತ್ತು. ನಂತರ ಚಿನ್ನದ ಬೆಂಬಲಿತ ಇಟಿಎಫ್‌ಗಳು 177.9 ಟನ್‌ ಹೊರಹರಿವಿನ ಕಾರಣದಿಂದ ವರ್ಷದಿಂದ ವರ್ಷಕ್ಕೆ ಗಮನಾರ್ಹ ಕುಸಿತ (23%) ಕಂಡಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 300 ರು ಏರಿಕೆಯಾಗಿ 45,450ರು ಬೆಲೆ ಹಾಗೂ ಅಪರಂಜಿ 10 ಗ್ರಾಂಗೆ 330ರು ಏರಿಕೆಯಾಗಿ 49, 590 ರು ನಷ್ಟಿದೆ. ಭಾರತದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ 1. ಕೆ.ಜಿಗೆ: ಚೆನ್ನೈ, ಹೈದರಾಬಾದ್ ನಲ್ಲಿ78,500ರು, ಮುಂಬೈ, ದೆಹಲಿ, ಬೆಂಗಳೂರು ಪ್ರತಿ 1 ಕೆ.ಜಿಗೆ 74,000 ರು ನಷ್ಟಿದೆ. ಉಳಿದ ನಗರಗಳ ಧಾರಣೆ ವಿವರ ಮುಂದಿದೆ.

ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?: ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ಬೆಂಗಳೂರು, ಚೆನ್ನೈ, ದೆಹಲಿ, ಮುಂಬೈ, ಕೋಲ್ಕತಾ, ಹೈದರಾಬಾದ್ ಮುಂತಾದ ನಗರಗಳಲ್ಲಿ ಮೇ 18ರಂದು 22 ಹಾಗೂ 24 ಕ್ಯಾರೆಟ್ ಚಿನ್ನದ ದರ ಹೀಗಿದೆ.. ಚಿತ್ರ ವಿನ್ಯಾಸ: ಭರತ್ ಎಚ್. ಸಿ.

Infographics: Gold Rates on Major Cities Today May 18
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+