'ಕಾಲಾ' ಚಿತ್ರದ ಬಗ್ಗೆ ಸಂಪೂರ್ಣ ಮಾಹಿತಿ ಇನ್ಫೋಗ್ರಾಫಿಕ್ಸ್‌ನಲ್ಲಿ
ಸೂಪರ್‌ಸ್ಟಾರ್ ರಜನೀಕಾಂತ್ ಅಭಿನಯದ 'ಕಾಲಾ' ಚಿತ್ರ ಜೂನ್ 7 ಕ್ಕೆ ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದೆ. ಆದರೆ ಕರ್ನಾಟಕದಲ್ಲಿ ಈ ಚಿತ್ರ ವಿವಾದಕ್ಕೆ ಈಡಾಗಿದೆ.
ರಜನೀಕಾಂತ್ ಅವರು ಕಾವೇರಿ ಬಗ್ಗೆ ನೀಡಿದ್ದ ಹೇಳಿಕೆ ಕನ್ನಡಿಗರನ್ನು ಬೇಸರಕ್ಕೆ ತಳ್ಳಿದೆ ಹಾಗಾಗಿ ಕೆಲವು ಕನ್ನಡ ಪರ ಸಂಘಟನೆಗಳು ಸೇರಿದಂತೆ ಇನ್ನೂ ಕೆಲವು ಸಂಘಟನೆಗಳು 'ಕಾಲಾ' ಚಿತ್ರದ ವಿರುದ್ಧ ತೊಡೆತಟ್ಟಿವೆ. ಏನೇ ಆಗಲಿ 'ಕಾಲಾ'ವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಬಿಡೆವು ಎಂದಿದ್ದಾರೆ.
ಇದರಿಂದ ಚಿಂತಿತಗೊಂಡ ನಿರ್ಮಾಪಕರಾದ ರಜನೀಕಾಂತ್ ಮಗಳು ಸೌಂದರ್ಯ ಹಾಗೂ ಅಳಿಯ ಧನುಷ್ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ 'ಕಾಲಾ' ಚಿತ್ರಕ್ಕೆ ಸೂಕ್ತ ಭದ್ರತೆ ಒದಗಿಸುವಂತೆ ಸರ್ಕಾರಕ್ಕೆ ಸೂಚಿಸಿದೆ. ಆದರೆ ಚಿತ್ರವನ್ನು ಪ್ರದರ್ಶನ ಮಾಡುವಂತೆ ಚಿತ್ರಮಂದಿರಗಳಿಗೆ ಸೂಚಿಸಲು ಮಾತ್ರ ಒಲ್ಲೆ ಎಂದಿದೆ.
ಪ್ರತಿಭಟನೆಗೆ ಹೆದರಿ ಚಿತ್ರಮಂದಿರಗಳು ಚಿತ್ರವನ್ನು ಬಿಡುಗಡೆಗೆ ಮನಸ್ಸು ಮಾಡುತ್ತಿಲ್ಲ. ಕರ್ನಾಟಕದಲ್ಲಿ ಭಾರಿ ಅಭಿಮಾನಿಗಳನ್ನು ಹೊಂದಿರುವ ತಲೈವಾಗೆ ಇಲ್ಲಿ ಚಿತ್ರ ಬಿಡುಗಡೆ ಆಗಲಿಲ್ಲವೆಂದರೆ ಆಗುವ ನಷ್ಟದ ಅಂದಾಜು ಇದೆ ಹಾಗಾಗಿ ಅವರು ಈಗಾಗಲೇ ಚಿತ್ರವನ್ನು ಪ್ರದರ್ಶಿಸಲು ಅನುವು ಮಾಡಿಕೊಡುವಂತೆ ಮನವಿ ಮಾಡಿದ್ದಾರೆ.
140 ಕೋಟಿ ವೆಚ್ಚದ ಈ ಚಿತ್ರವನ್ನು ರಂಜಿತ್ ನಿರ್ದೇಶಿಸಿದ್ದಾರೆ. ಹುಮಾ ಖುರೇಶಿ ನಾಯಕ ನಟಿಯಾಗಿ ನಟಿಸಿದ್ದಾರೆ. 'ಕಾಲಾ' ಚಿತ್ರದ ಬಗ್ಗೆ ಸಂಪೂರ್ಣ ಮಾಹಿತಿ ಇನ್ಫೋಗ್ರಾಫಿಕ್ಸ್‌ನಲ್ಲಿ ನೀಡಲಾಗಿದೆ.















Click it and Unblock the Notifications