Infographics: ಆ. 26ರಂದು ಚಿನ್ನ, ಬೆಳ್ಳಿ ಬೆಲೆ ಇಳಿಕೆ

ನವದೆಹಲಿ, ಆಗಸ್ಟ್ 26: ದೇಶದ ಹಲವೆಡೆ ಹಲವೆಡೆ ಕೋವಿಡ್ 19 ನಿರ್ಬಂಧ ಸಡಿಲಗೊಳಿಸಲಾಗುತ್ತಿದ್ದು, ವಹಿವಾಟು ಹೆಚ್ಚಾಗುವ ನಿರೀಕ್ಷೆ ಹೊಂದಲಾಗಿದೆ. ಆದರೆ, ಕೆಲವೆಡೆ ನಿರ್ಬಂಧ ಮುಂದುವರೆದಿದೆ. ಆಗಸ್ಟ್ 26ರಂದು ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನ10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಏರಿಳಿತವಾಗಿದ್ದು, ದೇಶದ ಪ್ರಮುಖ ನಗರದಲ್ಲಿ ಬೆಲೆ ಎಷ್ಟಿದೆ ಎಂಬುದರ ಸಚಿತ್ರ ವರದಿ ಇಲ್ಲಿದೆ.

ಎಂಸಿಎಕ್ಸ್‌ನಲ್ಲಿ ಚಿನ್ನದ ದರ ಪ್ರತಿ 10 ಗ್ರಾಂಗೆ ಇಳಿಕೆಯಾಗಿ 47,096 ರು ಆಗಿದೆ. ಬೆಳ್ಳಿ ದರ ಪ್ರತಿ 1 ಕೆ.ಜಿಗೆ ಬೇಡಿಕೆ ಕುಗ್ಗಿ
62,835ರು ನಷ್ಟಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಸತತವಾಗಿ ಚಿನ್ನ ಹಾಗೂ ಬೆಳ್ಳಿ ದರ ಏರಿಳಿತ ಕಂಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.11ರಷ್ಟು ಏರಿಕೆಯಾಗಿ 1,789.64 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.87ರಷ್ಟು ಇಳಿಕೆಯಾಗಿ 23.65 ಯುಎಸ್ ಡಾಲರ್ ಆಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 150 ರು ಇಳಿಕೆಯಾಗಿ 44,200ರು ಬೆಲೆ ಹಾಗೂ ಅಪರಂಜಿ 10 ಗ್ರಾಂಗೆ 160 ರು ಏರಿಕೆಯಾಗಿ 48,220 ರು ನಷ್ಟಿದೆ. ಭಾರತದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ ಏರಿಕೆಯಾಗಿ 1. ಕೆ.ಜಿಗೆ: ಚೆನ್ನೈ, ಹೈದರಾಬಾದ್‌ನಲ್ಲಿ 68,000ರು, ಮುಂಬೈ, ದೆಹಲಿ, ಬೆಂಗಳೂರು ಪ್ರತಿ 1 ಕೆ.ಜಿಗೆ 63,200ರು ನಷ್ಟಿದೆ. ಉಳಿದ ನಗರಗಳ ಧಾರಣೆ ವಿವರ ಮುಂದಿದೆ.

Gold And Silver Rate slashed In Indias Major Cities On August 26, 2021

ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?: ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ಚೆನ್ನೈ, ದೆಹಲಿ, ಮುಂಬೈ, ಕೋಲ್ಕತಾ, ಹೈದರಾಬಾದ್, ಪುಣೆ, ಬರೋಡಾ, ಅಹಮದಾಬಾದ್, ಜೈಪುರ, ಲಕ್ನೋ, ಕೊಯಮತ್ತೂರು, ಮಧುರೈ, ವಿಜಯವಾಡ, ಪಾಟ್ನಾ, ನಾಗಪುರ, ಚಂಡೀಗಢ,ನಾಸಿಕ್, ಭುವನೇಶ್ವರ ಮುಂತಾದ ನಗರಗಳಲ್ಲಿ ಆಗಸ್ಟ್ 26ರಂದು 22 ಹಾಗೂ 24 ಕ್ಯಾರೆಟ್ ಚಿನ್ನದ ದರ ಹೀಗಿದೆ. ಚಿತ್ರ ವಿನ್ಯಾಸ: ಭರತ್ ಎಚ್.ಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+