ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Infographics: ಜುಲೈ 11ರಂದು ಚಿನ್ನ-ಬೆಳ್ಳಿ ದರದಲ್ಲಿ ಏರಿಳಿಕೆ ಆಗಿದ್ದೆಷ್ಟು?

|
Google Oneindia Kannada News

ನವದೆಹಲಿ, ಜುಲೈ 11: ಭಾರತದಲ್ಲಿ ಚಿನ್ನ-ಬೆಳ್ಳಿ ಬೆಲೆಯಲ್ಲಿ ಏರಿಳಿತ ಮುಂದುವರಿದಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 46,980 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು 51,250 ರೂಪಾಯಿ ಆಗಿದೆ. ಬೆಳ್ಳಿ ದರ ಸ್ಥಿರವಾಗಿದ್ದು, ಒಂದು ಕೆಜಿ ಬೆಳ್ಳಿಗೆ 63,000 ರೂಪಾಯಿ ಇದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,980 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 51,250 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,980 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,250 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,980 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,250 ರೂ. ಇದೆ. ಚೆನ್ನೈನಲ್ಲಿ 46,800 ರೂ. ಹಾಗೂ ಅಪರಂಜಿ 10 ಗ್ರಾಂ ಚಿನ್ನದ ಬೆಲೆಯು 51,050 ರೂಪಾಯಿ ಆಗಿದೆ.

ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,980 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 51,250 ರೂ ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ 49 ಸಾವಿರಕ್ಕಿಂತ ಹೆಚ್ಚಾಗಿದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 51 ಸಾವಿರಕ್ಕಿಂತ ಹೆಚ್ಚಾಗಿದೆ.

ಸೂಪರ್ ಸುದ್ದಿ: ಭಾರತದಲ್ಲಿ 10 ಗ್ರಾಂ ಚಿನ್ನದ ಬೆಲೆಯಲ್ಲಿ 960 ರೂ ಇಳಿಕೆ!ಸೂಪರ್ ಸುದ್ದಿ: ಭಾರತದಲ್ಲಿ 10 ಗ್ರಾಂ ಚಿನ್ನದ ಬೆಲೆಯಲ್ಲಿ 960 ರೂ ಇಳಿಕೆ!

ಚಿನ್ನ ಬೆಳ್ಳಿ ದರ

ಚಿನ್ನ ಬೆಳ್ಳಿ ದರ

ಬೆಳಗ್ಗೆ ವೇಳೆಗೆ ದೇಶದ ಕೆಲವು ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಏರಿಕೆ ಕಂಡು ಬಂದರೆ ಬೆಳ್ಳಿ ಬೆಲೆಯಲ್ಲಿಯೂ ಕೆಲವು ಕಡೆಗಳಲ್ಲಿ ಏರಿಕೆ ಕಂಡು ಬಂದು ಉಳಿದೆಡೆ ಏಕರೂಪವಿದೆ. ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನು ಆಧರಿಸಿ ಆಯಾ ದಿನದ ಚಿನ್ನ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ. ನಿಮ್ಮ ನಗರಗಳಲ್ಲಿ ಇಂದಿನ ದಿನ ಚಿನ್ನ ಮತ್ತು ಬೆಳಿಗೆ ಎಷ್ಟು ದರ ಇವೆ ಅನ್ನೋದನ್ನು ಇಲ್ಲಿ ನೀವು ಪ್ರತಿ ದಿನ ತಿಳಿದುಕೊಳ್ಳಬಹುದು.

ಚಿನ್ನದ ಏರಿಳಿತಕ್ಕೆ ಕಾರಣ

ಚಿನ್ನದ ಏರಿಳಿತಕ್ಕೆ ಕಾರಣ

"ರಷ್ಯಾ-ಉಕ್ರೇನ್ ಯುದ್ಧದಲ್ಲಿ ಹೆಚ್ಚುತ್ತಿರುವ ಹಣದುಬ್ಬರ ಮತ್ತು ಅನಿಶ್ಚಿತತೆಯ ನಡುವೆ ಚಿನ್ನವು ಹೆಚ್ಚು ಮಾರಾಟವಾಗುತ್ತಿದೆ. ಮಾರುಕಟ್ಟೆಗಳಲ್ಲಿ ಪ್ರಾಬಲ್ಯ ಸಾಧಿಸುವವರೆಗೆ, ಚಿನ್ನದ ಬೆಲೆಯಲ್ಲಿ ಮತ್ತಷ್ಟು ಏರಿಕೆಯ ಸಾಧ್ಯತೆ ಇದೆ. ನಾವು ಹೂಡಿಕೆ ಮಾಡಲು ಇದು ಉತ್ತಮ ಅವಕಾಶ," ಎಂದು ಶೇರ್ ಇಂಡಿಯಾದ ಉಪಾಧ್ಯಕ್ಷ ಮತ್ತು ಸಂಶೋಧನಾ ಮುಖ್ಯಸ್ಥ ರವಿ ಸಿಂಗ್ ಹೇಳಿದ್ದಾರೆ."ರಷ್ಯಾ-ಉಕ್ರೇನ್ ಯುದ್ಧದಲ್ಲಿ ಹೆಚ್ಚುತ್ತಿರುವ ಹಣದುಬ್ಬರ ಮತ್ತು ಅನಿಶ್ಚಿತತೆಯ ನಡುವೆ ಚಿನ್ನವು ಹೆಚ್ಚು ಮಾರಾಟವಾಗುತ್ತಿದೆ. ಮಾರುಕಟ್ಟೆಗಳಲ್ಲಿ ಪ್ರಾಬಲ್ಯ ಸಾಧಿಸುವವರೆಗೆ, ಚಿನ್ನದ ಬೆಲೆಯಲ್ಲಿ ಮತ್ತಷ್ಟು ಏರಿಕೆಯ ಸಾಧ್ಯತೆ ಇದೆ. ನಾವು ಹೂಡಿಕೆ ಮಾಡಲು ಇದು ಉತ್ತಮ ಅವಕಾಶ," ಎಂದು ಶೇರ್ ಇಂಡಿಯಾದ ಉಪಾಧ್ಯಕ್ಷ ಮತ್ತು ಸಂಶೋಧನಾ ಮುಖ್ಯಸ್ಥ ರವಿ ಸಿಂಗ್ ಹೇಳಿದ್ದಾರೆ.

"ಡಾಲರ್ ಬಲಗೊಂಡ ಬಳಿಕ ಗುರುವಾರ ಚಿನ್ನ ಕಡಿಮೆಯಾಯಿತು. ಹೂಡಿಕೆದಾರರು ಯುಎಸ್‌ ಬಡ್ಡಿದರ ಹೆಚ್ಚಳಕ್ಕೆ ಸಜ್ಜಾಗುತ್ತಿದ್ದಂತೆ ಚಿನ್ನ ಹೆಚ್ಚಳವಾಗಿದೆ," ಎಂದು ಮೆಹ್ತಾ ಈಕ್ವಿಟೀಸ್‌ನ ರಾಹುಲ್ ಕಲಂತ್ರಿ ತಿಳಿಸಿದ್ದಾರೆ.

ರಷ್ಯಾವು ಉಕ್ರೇನ್‌ ಮೇಲೆ ದಾಳಿ ನಡೆಸಿದ್ದು, ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ.ನ ಈ ನಡುವೆ ಎಂಸಿಎಕ್ಸ್‌ನಲ್ಲಿ ಜುಲೈ 11ರ ವಹಿವಾಟು ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು, 50740 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 1. 52ರಷ್ಟು ಇಳಿಕೆಯಾಗಿದ್ದು, 1,738.04 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.11ರಷ್ಟು ಏರಿಕೆಯಾಗಿದ್ದು, 19.19 ಯುಎಸ್ ಡಾಲರ್ ಆಗಿದೆ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜುಲೈ 11: 46,980 ರೂ, 51,250 ರೂ

ಜುಲೈ 10: 46,980 ರೂ, 51,250 ರೂ

ಜುಲೈ 09: 46,980 ರೂ, 51,250 ರೂ

ಜುಲೈ 08: 47,680 ರೂ, 52,010 ರೂ

ಜುಲೈ 07: 47,680 ರೂ, 52,010 ರೂ

ಜುಲೈ 06: 47,630 ರೂ, 51,960 ರೂ

ಜುಲೈ 05: 48,130 ರೂ, 52,500 ರೂ

ಚಿನ್ನದ ಬೆಲೆ ನಿರ್ಧಾರ

ಚಿನ್ನದ ಬೆಲೆ ನಿರ್ಧಾರ

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಚಿನ್ನದ ಬೆಲೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ಬದಲಾಗುತ್ತದೆ. ಮುಖ್ಯವಾದ ವಿಷಯವೆಂದರೆ ಸಾಮಾನ್ಯ ಚಿನ್ನದ ದರ ಮತ್ತು ಹಾಲ್‌ಮಾರ್ಕ್ ಚಿನ್ನದ ದರಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ನಿಮಗೆ ಹಾಲ್‌ಮಾರ್ಕ್ ಮಾಡಿದ ಚಿನ್ನದ ದರವನ್ನು ನೀಡಲು ಯಾರೂ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ. ಸಾಮಾನ್ಯ ಚಿನ್ನವನ್ನು ಮಾರಾಟ ಮಾಡುವ ದರವೇ ಇದು. ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು. (ಒನ್‌ಇಂಡಿಯಾ ಸುದ್ದಿ)

English summary
Gold, silver rate increased in India's major cities including Bengaluru, Chennai, Mumbai, Delhi on July 11st, 2022
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X