Infographics: ಆಗಸ್ಟ್ 14ರಂದು ಚಿನ್ನ, ಬೆಳ್ಳಿ ದರ ಎಷ್ಟಿದೆ?
ನವದೆಹಲಿ, ಆಗಸ್ಟ್ 14: ಹಬ್ಬದ ಸಂದರ್ಭದಲ್ಲಿ ಗ್ರಾಹಕರು ಚಿನ್ನದ ಬೆಲೆ ಏರಿಳಿತದ ಬಗ್ಗೆ ಒಂದಿಷ್ಟು ಮಾಹಿತಿ ತಿಳಿದುಕೊಳ್ಳುವುದು ಒಳ್ಳೆಯದು. ದೇಶದ ಹಲವೆಡೆ ಅನ್ ಲಾಕ್ ಜಾರಿಯಲ್ಲಿದ್ದು, ಹಲವೆಡೆ ಕೋವಿಡ್ 19 ನಿರ್ಬಂಧ ಸಡಿಲಗೊಳಿಸಲಾಗುತ್ತಿದ್ದು, ವಹಿವಾಟು ಹೆಚ್ಚಾಗುವ ನಿರೀಕ್ಷೆ ಹೊಂದಲಾಗಿದೆ. ಆಗಸ್ಟ್ 14ರಂದು ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನ10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಇಳಿಕೆಯಾಗಿದ್ದು, ದೇಶದ ಪ್ರಮುಖ ನಗರದಲ್ಲಿ ಬೆಲೆ ಎಷ್ಟಿದೆ ಎಂಬುದರ ಸಚಿತ್ರ ವರದಿ ಇಲ್ಲಿದೆ.
ಎಂಸಿಎಕ್ಸ್‌ನಲ್ಲಿ ಚಿನ್ನದ ದರ ಪ್ರತಿ 10 ಗ್ರಾಂಗೆ ಏರಿಕೆಯಾಗಿ 46,930 ರು ಆಗಿದೆ. ಬೆಳ್ಳಿ ದರ ಪ್ರತಿ 1 ಕೆ.ಜಿಗೆ ಬೇಡಿಕೆ ಹಿಗ್ಗಿ 63,203 ರು ನಷ್ಟಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಸತತವಾಗಿ ಚಿನ್ನ ಹಾಗೂ ಬೆಳ್ಳಿ ದರ ಏರಿಳಿತ ಕಂಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 1.46ರಷ್ಟು ಏರಿಕೆಯಾಗಿ 1,779.34ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 2.77ರಷ್ಟು ಇಳಿಕೆಯಾಗಿ 23.74 ಯುಎಸ್ ಡಾಲರ್ ಆಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 300 ರು ಏರಿಕೆಯಾಗಿ 44,000ರು ಬೆಲೆ ಹಾಗೂ ಅಪರಂಜಿ 10 ಗ್ರಾಂಗೆ 320 ರು ಏರಿಕೆಯಾಗಿ 48,000ರು ನಷ್ಟಿದೆ. ಭಾರತದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ ಏರಿಕೆಯಾಗಿ 1. ಕೆ.ಜಿಗೆ: ಚೆನ್ನೈ, ಹೈದರಾಬಾದ್‌ನಲ್ಲಿ 68,200ರು, ಮುಂಬೈ, ದೆಹಲಿ, ಬೆಂಗಳೂರು ಪ್ರತಿ 1 ಕೆ.ಜಿಗೆ 63,200ರು ನಷ್ಟಿದೆ. ಉಳಿದ ನಗರಗಳ ಧಾರಣೆ ವಿವರ ಮುಂದಿದೆ.

ಕಳೆದ ತ್ರೈಮಾಸಿಕದ ಬೇಡಿಕೆ ವಿವರ: ಏಪ್ರಿಲ್ ಮತ್ತು ಜೂನ್ ನಡುವೆ, ಗ್ರಾಹಕರ ಚಿನ್ನದ ಖರೀದಿ ನಿಟ್ಟಿನಲ್ಲಿ ಸಾಂಪ್ರದಾಯಿಕ ಸಂಕೇತಗಳು ಸಕಾರಾತ್ಮಕವಾಗಿವೆ. ಚಿಲ್ಲರೆ ಹೂಡಿಕೆದಾರರು ಅತಿಯಾಗಿ ಖರೀದಿಸಿದ ಭೌತಿಕ ಚಿನ್ನದ ಉತ್ಪನ್ನಗಳಲ್ಲಿ ಚಿನ್ನದ ಬಾರ್‌ಗಳು ಮತ್ತು ನಾಣ್ಯಗಳು ಪ್ರಮುಖವಾದವು. ಮೂರು ತಿಂಗಳ ಅವಧಿಯಲ್ಲಿ 243.8 ಟನ್ ಚಿನ್ನ ಖರೀದಿಸಲಾಗಿದ್ದು, ಇದು ವರ್ಷದಿಂದ ವರ್ಷಕ್ಕೆ ಸತತ ನಾಲ್ಕನೇ ತ್ರೈಮಾಸಿಕ ಲಾಭ ಕಂಡಿದೆ. ಈ ನಡುವೆ ಗ್ರಾಹಕರು ಒಟ್ಟು 390.7ಟನ್ ತೂಕದ ಚಿನ್ನದ ಆಭರಣಗಳನ್ನು 390 ಖರೀದಿಸಿದ್ದಾರೆ . ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.60ರಷ್ಟು ಹೆಚ್ಚಾಗಿದೆ.
ಗ್ರಾಹಕರು ಮತ್ತು ಚಿಲ್ಲರೆ ಹೂಡಿಕೆದಾರರು ಮರು ಖರೀದಿ ಮಾಡುತ್ತಿದ್ದರೆ, ಸಾಂಸ್ಥಿಕ ಹೂಡಿಕೆದಾರರು ಕಡಿಮೆ ಸ್ಥಿರತೆ ಪ್ರದರ್ಶಿಸಿದರು. ಎರಡನೇ ತ್ರೈಮಾಸಿಕದಲ್ಲಿ ಚಿನ್ನದ ವಿನಿಮಯ ವ್ಯಾಪಾರ ವಹಿವಾಟು ನಿಧಿಗಳು (ಇಟಿಎಫ್‌ಗಳು) ವಲಯದಲ್ಲಿ ಕೇವಲ 40.7 ಟನ್‌ನ ಸಾಧಾರಣ ನಿವ್ವಳ ಒಳಹರಿವು ಇತ್ತು . ಭೌತಿಕ ಚಿನ್ನದ ಬೆಂಬಲದ ಹಣಕಾಸು ವ್ಯವಹಾರಗಳತ್ತ ಸಾಮಾನ್ಯವಾಗಿ ಸಾಂಸ್ಥಿಕ ಖರೀದಿದಾರರು ಆಕರ್ಷಿತರಾಗುತ್ತಾರೆ. 2014 ರ ನಂತರ ಮೊದಲ ಬಾರಿಗೆ 2021ರ ಮೊದಲ ಆರು ತಿಂಗಳಲ್ಲಿ ಅತಿ ಹೆಚ್ಚಿನ ನಿವ್ವಳ ಹೊರಹರಿವು ದಾಖಲಾಗಿದೆ. ಆರ್‌ಬಿಐಗಳು ತ್ರೈಮಾಸಿಕದಲ್ಲಿ ನಿರಂತರವಾಗಿ ಚಿನ್ನ ಖರೀದಿ ನಡೆಸಿದ್ದವು. ಜಾಗತಿಕ ಚಿನ್ನದ ಮೀಸಲು ಎರಡನೇ ತ್ರೈಮಾಸಿಕದಲ್ಲಿ 199.9 ಟನ್‌ಗೆ ಏರಿಕೆಯಾಯಿತು.
ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?: ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.
ಬೆಂಗಳೂರು, ಚೆನ್ನೈ, ದೆಹಲಿ, ಮುಂಬೈ, ಕೋಲ್ಕತಾ, ಹೈದರಾಬಾದ್ ಮುಂತಾದ ನಗರಗಳಲ್ಲಿ ಆಗಸ್ಟ್ 14ರಂದು 22 ಹಾಗೂ 24 ಕ್ಯಾರೆಟ್ ಚಿನ್ನದ ದರ ಹೀಗಿದೆ.. ಚಿತ್ರ ವಿನ್ಯಾಸ: ಭರತ್ ಎಚ್.ಸಿ.












Click it and Unblock the Notifications