Infographics: ಏಪ್ರಿಲ್ 6ರಂದು ದೇಶದಲ್ಲಿ ಹೇಗಿದೆ ಚಿನ್ನದ ಬೆಲೆ?

ನವದೆಹಲಿ, ಏಪ್ರಿಲ್ 6: ಭಾರತದ ಚಿನ್ನ-ಬೆಳ್ಳಿ ಮಾರುಕಟ್ಟೆಯಲ್ಲಿ ಏರಿಳಿತ ಮುಂದುವರಿದಿದೆ. ದೇಶದಲ್ಲಿ ಮಂಗಳವಾರ ಸ್ಥಿರವಾಗಿದ್ದ ಚಿನ್ನದ ಬೆಲೆಯು ಎರಡನೇ ದಿನವೂ ಸ್ಥಿರತೆ ಕಾಯ್ದುಕೊಂಡಿದೆ. ಬೆಳ್ಳಿ ಬೆಲೆಯಲ್ಲಿ ಬುಧವಾರ 100 ರೂಪಾಯಿ ಇಳಿಕೆಯಾಗಿದೆ.

22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು ಪ್ರಸ್ತುತ 47,800 ರೂ ಆಗಿದೆ. ಈ ಸಂದರ್ಭದಲ್ಲೇ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಸ್ಥಿರವಾಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಪ್ರಸ್ತುತ ಬೆಲೆಯು 52,140 ರೂ ಆಗಿದೆ. ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆ ಇಳಿದಿದೆ. ಬೆಳ್ಳಿ ದರವು ಕೆಜಿಗೆ ಪ್ರಸ್ತುತ 100 ರೂ ಇಳಿದಿದ್ದು 66,200 ರೂಪಾಯಿ ಆಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,800 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 52,140 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,800 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 52,140 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,800 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 52,140 ರೂ. ಇದೆ. ಚೆನ್ನೈನಲ್ಲಿ 48,160 ರೂ. ಹಾಗೂ ಅಪರಂಜಿ 52,530 ರು ಪ್ರತಿ 10 ಗ್ರಾಂಗೆ ಬೆಲೆ ಇದೆ. ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,800 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 52,140 ರು ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ 48 ಸಾವಿರಕ್ಕಿಂತ ಹೆಚ್ಚಾಗಿದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 52 ಸಾವಿರಕ್ಕಿಂತ ಹೆಚ್ಚಾಗಿದೆ. ಕಳೆದ ಒಂದು ವಾರದಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಎಷ್ಟು ವ್ಯತ್ಯಾಸವಾಗಿದೆ ಎಂಬುದರ ಪಟ್ಟಿ ಮುಂದಿದೆ ಓದಿ.

ಚಿನ್ನ ಬೆಳ್ಳಿ ದರ

ಚಿನ್ನ ಬೆಳ್ಳಿ ದರ

ಬೆಳಗ್ಗೆ ವೇಳೆಗೆ ದೇಶದ ಕೆಲವು ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಏರಿಕೆ ಕಂಡು ಬಂದರೆ ಬೆಳ್ಳಿ ಬೆಲೆಯಲ್ಲಿಯೂ ಕೆಲವು ಕಡೆಗಳಲ್ಲಿ ಏರಿಕೆ ಕಂಡು ಬಂದು ಉಳಿದೆಡೆ ಏಕರೂಪವಿದೆ. ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನು ಆಧರಿಸಿ ಆಯಾ ದಿನದ ಚಿನ್ನ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ. ನಿಮ್ಮ ನಗರಗಳಲ್ಲಿ ಇಂದಿನ ದಿನ ಚಿನ್ನ ಮತ್ತು ಬೆಳಿಗೆ ಎಷ್ಟು ದರ ಇವೆ ಅನ್ನೋದನ್ನು ಇಲ್ಲಿ ನೀವು ಪ್ರತಿ ದಿನ ತಿಳಿದುಕೊಳ್ಳಬಹುದು.

ಚಿನ್ನದ ಏರಿಳಿತಕ್ಕೆ ಕಾರಣ

ಚಿನ್ನದ ಏರಿಳಿತಕ್ಕೆ ಕಾರಣ

ರಷ್ಯಾ ಹಾಗೂ ಉಕ್ರೇನ್‌ ಯುದ್ಧದ ನಡುವೆ ಎಂಸಿಕ್ಸ್ ನಲ್ಲಿ ಏಪ್ರಿಲ್‌ 6ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಹಿಗ್ಗಿ 51760 ರು ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.42ರಷ್ಟು ಏರಿಕೆಯಾಗಿದ್ದು, 1,928.57 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.73ರಷ್ಟು ಏರಿಕೆಯಾಗಿ 24.46 ಯುಎಸ್ ಡಾಲರ್ ಆಗಿದೆ.

"ರಷ್ಯಾ ಉಕ್ರೇನ್‌ ಯುದ್ಧ ಸಂದರ್ಭದಲ್ಲಿ ಚಿನ್ನ ಮತ್ತು ಬೆಳ್ಳಿ ಏರಿಕೆ ಕಂಡಿದೆ. ಜಾಗತಿಕ ಷೇರು ಮಾರುಕಟ್ಟೆಗಳಲ್ಲಿನ ಭಾರೀ ಮಾರಾಟ ಮತ್ತು ಅಂತಾರಾಷ್ಟ್ರೀಯ ಕಚ್ಚಾ ತೈಲದ ದಾಖಲೆಯ ಏರಿಕೆಯ ನಡುವೆ ಎರಡೂ ಅಮೂಲ್ಯವಾದ ಲೋಹಗಳು ಏರಿಕೆ ಆಗಿದೆ. ನ್ನ ಮತ್ತು ಬೆಳ್ಳಿಯ ಬೆಲೆಗಳು ಪಾಸಿಟಿವ್‌ ರೂಪದಲ್ಲೇ ಉಳಿಯಲಿದೆ. ಬೆಲೆಗಳಲ್ಲಿನ ಯಾವುದೇ ಕುಸಿತವಾದರೆ ಅದು ಖರೀದಿ ಮಾಡಲು ಅವಕಾಶ," ಎಂದು ಮೆಹ್ತಾ ಇಕ್ವಿಟೀಸ್ ಲಿಮಿಟೆಡ್‌ನ ರಾಹುಲ್ ಕಲಾಂತ್ರಿ ಹೇಳಿದ್ದಾರೆ.

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಏಪ್ರಿಲ್ 6: 47,800 ರೂ, 52,140 ರೂ

ಏಪ್ರಿಲ್ 5: 47,800 ರೂ, 52,140 ರೂ

ಏಪ್ರಿಲ್ 4: 47,800 ರೂ, 52,140 ರೂ

ಏಪ್ರಿಲ್ 3: 47,950 ರೂ, 52,460 ರೂ

ಏಪ್ರಿಲ್ 2: 47,950 ರೂ, 52,480 ರೂ

ಏಪ್ರಿಲ್ 1: 48,100 ರೂ, 52,470 ರೂ

ಮಾರ್ಚ್ 31: 47,650 ರೂ, 51,980 ರೂ

ಬೆಳ್ಳಿ ಬೆಲೆ ಕೆ.ಜಿಗೆ 70,700 ರೂಪಾಯಿ

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಚಿನ್ನದ ಬೆಲೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ಬದಲಾಗುತ್ತದೆ. ಮುಖ್ಯವಾದ ವಿಷಯವೆಂದರೆ ಸಾಮಾನ್ಯ ಚಿನ್ನದ ದರ ಮತ್ತು ಹಾಲ್‌ಮಾರ್ಕ್ ಚಿನ್ನದ ದರಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ನಿಮಗೆ ಹಾಲ್‌ಮಾರ್ಕ್ ಮಾಡಿದ ಚಿನ್ನದ ದರವನ್ನು ನೀಡಲು ಯಾರೂ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ. ಸಾಮಾನ್ಯ ಚಿನ್ನವನ್ನು ಮಾರಾಟ ಮಾಡುವ ದರವೇ ಇದು. ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು. (ಒನ್‌ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+