ಕೊವಿಡ್ 19: ವಿಶ್ವದೆಲ್ಲೆಡೆ 10 ಲಕ್ಷ ಸಾವು, 1 ಕೋಟಿ ಚೇತರಿಕೆ
ಬೆಂಗಳೂರು, ಸೆ. 9: ಕೊವಿಡ್19 ಸಕ್ರಿಯ ಸೋಂಕು, ಮರಣ, ಗುಣಮುಖ ಹೊಂದಿರುವ ದೇಶಗಳ ಪೈಕಿ ಭಾರತ ಎಷ್ಟನೇ ಸ್ಥಾನದಲ್ಲಿದೆ ಎಂಬ ವಿವರ ಇಲ್ಲಿದೆ. ವಿಶ್ವದೆಲ್ಲೆಡೆ 10 ಲಕ್ಷ ಸಾವು, 1 ಕೋಟಿ ಮಂದಿ ಚೇತರಿಕೆ ಕಂಡಿದ್ದಾರೆ. 2 ಕೋಟಿಗೂ ಅಧಿಕ ಪ್ರಕರಣಗಳು ಮುಕ್ತಾಯವಾಗಿದೆ.
ಸೆಪ್ಟೆಂಬರ್ 09ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 27,770,159 ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 902,543ಕ್ಕೇರಿದೆ. ಒಟ್ಟಾರೆ, 19,852,170 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 7,015,446 ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 60,461 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ. 20,754,713 ಪ್ರಕರಣಗಳು ಮುಕ್ತಾಯಗೊಂಡಿವೆ. ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಚೇತರಿಕೆಗೊಂಡವರು ಕೂಡಾ ಇದ್ದಾರೆ.
ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿ ಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್ 10 ದೇಶಗಳ ಸಚಿತ್ರ ವಿವರ (ಸೆಪ್ಟೆಂಬರ್ 9ರಂತೆ) ಇಲ್ಲಿದೆ...ವಿನ್ಯಾಸ: ಭರತ್ ಎಚ್. ಸಿ

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು:
ಯುಎಸ್ಎ: 6,514,376 ಪ್ರಕರಣಗಳು
ಭಾರತ: 4,374,314
ಬ್ರೆಜಿಲ್: 4,165,124
ರಷ್ಯಾ: 1,041,007
ಪೆರು: 696,190
ಕೊಲಂಬಿಯಾ: 679,513
ಮೆಕ್ಸಿಕೋ: 642,860
ದಕ್ಷಿಣ ಆಫ್ರಿಕಾ: 640,441
ಸ್ಪೇನ್: 534,513
ಅರ್ಜೆಂಟೀನಾ: 500,034

ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
ಯುಎಸ್ಎ: ಮೃತರ ಸಂಖ್ಯೆ 194,037
ಬ್ರೆಜಿಲ್: 127,517
ಭಾರತ: 73,953
ಮೆಕ್ಸಿಕೋ: 68,484
ಯುಕೆ: 41,586
ಇಟಲಿ: 35,563
ಫ್ರಾನ್ಸ್: 30,764
ಪೆರು: 30,123
ಸ್ಪೇನ್: 29,594
ಇರಾನ್: 22,669

ಕೊರೊನಾವೈರಸ್ ನಿಂದ ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ:
ಯುಎಸ್ಎ: ಗುಣಮುಖರಾದವರ ಸಂಖ್ಯೆ 3,797,173
ಭಾರತ: 3,398,844
ಬ್ರೆಜಿಲ್: 3,397,234
ರಷ್ಯಾ: 856,458
ದಕ್ಷಿಣ ಆಫ್ರಿಕಾ: 567,729
ಕೊಲಂಬಿಯಾ: 541,462
ಪೆರು: 529,751
ಮೆಕ್ಸಿಕೋ: 451,159
ಚಿಲಿ: 397,730
ಅರ್ಜೆಂಟೀನಾ: 366,590












Click it and Unblock the Notifications