ಇಲ್ಲೇ ಇರು ಅಲ್ಲಿ ಹೋಗಿ ಮಲ್ಲಿಗೆಯನು ತರುವೆನು
ವಿನಾಯಕ ಕೃಷ್ಣ ಗೋಕಾಕ
ಇಲ್ಲೆ ಇರು ಅಲ್ಲಿ ಹೋಗಿ
ಮಲ್ಲಿಗೆಯನು ತರುವೆನು
ನೇಹಕೆಂದು ನಲುಮೆಗೊಂದು
ಗುರುತನಿರಿಸಿ ಬರುವೆನು
ಹೋದ ಮೇಲೆ ಸುತ್ತಬೇಕು
ಏಳು ಕೋಟೆ ದ್ವಾರವು
ಹಾದಿಯಲ್ಲಿ ತೀರದಂಥ ದುಃಖವಿಹುದಪಾರವು
ಸಾಧಿಸುತ್ತ ಜಯಿಸುವುದೇ ಬಾಳುವುದರ ಸಾರವು
ಯುಗ ಯುಗಗಳ ನಾಡದಾಟಿ
ಮುಗಿಲ ಗಡಿಯ ಮೀರಿಯೂ
ದಿಕ್ಕು ತಪ್ಪುತಲೆವ ತಾರೆಗಳಿಗೆ
ದಾರಿ ತೋರಿಯೂ
ಕತ್ತಲಿದ್ದ ತಾಣದಲ್ಲಿ
ಒಲವ ಬೆಳಕ ಬೀರಿಯೂ
ಇಲ್ಲೇ ಇರು ಅಲ್ಲಿ ಹೋಗಿ ಮಲ್ಲಿಗೆಯನು ತರುವೆನು...












Click it and Unblock the Notifications