For Daily Alerts
ಬಂದಷ್ಟು ಬೇವು ಇರುವಷ್ಟು ಬೆಲ್ಲ ಮೆಲ್ಲಿರೆನುತ...
ಛಾಯಾತೆರೆ
ವ್ಯಯದ ಶಿಶಿರ
ಎಲ್ಲವನೂ ಗೆಲುವ ವಸಂತ;
ಹೋಗುವವನಿಗೆ ಉತ್ತರಿಸುವ ಛಾತಿಯಿಲ್ಲ
ಬರುವವನಿಗೆ ರೀತಿಯಿಲ್ಲ.
ಕಳೆದುಹೋದುದರಲ್ಲಿ
ಗಳೆಸಿದ್ದೆಷ್ಟು? ಉಳಿದದ್ದೆಷ್ಟು?
ಧನ, ಕೀರ್ತಿ, ಮನೆ-ಮಠ
ಮಟಮಟ ಅಲೆದಾಟ;
ಒಂದಿಷ್ಟು ಗಳಿಸುವುದಕ್ಕೆ
ಮುಂದೆಯೂ ಕಳೆಯುವುದು.
ಕಳೆದದ್ದೇನು?
ಹೊಸತು ಬರುವುದೇನು?
ತಿಳಿಯುವ ಮೊದಲೇ
ಕೈಲಾಗುವ ಕಾರ್ಯ ಮುಗಿಸಿಬಿಡೋಣ:
ಮತ್ತೊಂದು ಆದಿಗೆ
ಬೇಡದ ಬೇವಿಗೆ
ಯಾರೂ ಮುಟ್ಟಾದ
ಎಲ್ಲೋ ಕಟ್ಟಿದ
ಬೆಲ್ಲದ ಕಟ್ಟೆಗೆ
ಮುತ್ತಲು ಹೊರಟ ಮತ್ತೆಲ್ಲರಿಗೆ
ಬಂದಷ್ಟು ಬೇವು
ಇರುವಷ್ಟು ಬೆಲ್ಲ ಮೆಲ್ಲಿರೆನುತ
ಶುಭಾಶಯ!!