ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ವಜಿತ್‌ ಯುಗಾದಿಗೆ ಸಣ್ಣ ಕತೆ 'ವಾಸಂತಿಯ ಚಿತ್ರ'

By Super
|
Google Oneindia Kannada News

ಹುಡುಗಿಯಾಬ್ಬಳನ್ನು ಗುಂಪಿನಿಂದ ಪ್ರತ್ಯೇಕಿಸಿ, ಅವಳ ಖಾಸಗಿ ನೋವುಗಳಿಗೆ ಕಿವಿಗೊಡುವುದು ಹೇಗೆ ಸುಲಭವಾದೀತು? ಅಂಥ ಪ್ರಯತ್ನದ ಬಾಗಿಲ ಬಳಿಗಾದರೂ ಹೋಗಿ ನಿಲ್ಲಬೇಕು ಎಂದುಕೊಳ್ಳುತ್ತೇನೆ...

ಹುಡುಗಿಯರ ಚಿತ್ರವೆಂದರೆ ನನ್ನ ಮನಸ್ಸಿಗೆ ಬರುವುದು, ಉತ್ತರ ಕನ್ನಡದಲ್ಲಿಯ ಸುಗ್ಗಿ ಹಬ್ಬದಂಥ ಹೊತ್ತಿನಲ್ಲಿ ಜಾತ್ರೆನೆರೆವ ಕಿರಗಣೆಯುಟ್ಟ ಹೆಣ್ಣುಮಕ್ಕಳು. ಇದು ನಾನು ನಿಜವಾಗಿಯೂ ಗ್ರಹಿಸಲು ಸಾಧ್ಯವಾದ ಹುಡುಗಿಯರ ಬಗೆಗಿನ ಮೊದಲ ಚಿತ್ರ. ಖುಷಿ ಸಂಸ್ಕೃತಿಯ ರಂಗು ಹೊದ್ದ ಅವರು, ಊರೆಲ್ಲಾ ತಮ್ಮನ್ನೇ ಗಮನಿಸುತ್ತಿದೆ ಎಂಬಂತೆ ಕಾನ್ಷಸ್‌ ಆಗುತ್ತಾ ಒಬ್ಬರಿಗೊಬ್ಬರು ಒತ್ತಿಕೊಂಡು ಗುಂಪಾಗುತ್ತಾರೆ. ಗುಂಪಿನಿಂದ ಚೂರೇ ಚೂರೇ ಸರಿದರೂ ನೀರಿಂದ ತೆಗೆದ ಮೀನಿನಂತೆ ಚಡಪಡಿಸುತ್ತಾರೆ. ಇಷ್ಟರಲ್ಲೇ ಏನೆಲ್ಲ ಇದೆ!

ಮೈನೆರೆದ ಹೆಣ್ಣುಮಗಳ್ಬೊಳ ಪುಟಿವ ಗುಣ, ಚೆಲ್ಲುತನ, ಕಾತರ, ನಿರೀಕ್ಷೆ, ತಲ್ಲಣ, ಏನೆಲ್ಲ. ಆದರೆ, ಈ ಚಿತ್ರವನ್ನು ಕಟ್ಟುವ ಭಾಷೆಯನ್ನು ದಕ್ಕಿಸಿಕೊಳ್ಳುವುದು ಕಷ್ಟವೆನ್ನಿಸುತ್ತದೆ. ಹುಡುಗಿಯಾಬ್ಬಳನ್ನು ಗುಂಪಿನಿಂದ ಪ್ರತ್ಯೇಕಿಸಿ, ಅವಳ ಖಾಸಗಿ ನೋವುಗಳಿಗೆ ಕಿವಿಗೊಡುವುದು ಹೇಗೆ ಸುಲಭವಾದೀತು? ಅಂಥ ಪ್ರಯತ್ನದ ಬಾಗಿಲ ಬಳಿಗಾದರೂ ಹೋಗಿ ನಿಲ್ಲಬೇಕು ಎಂದುಕೊಳ್ಳುತ್ತೇನೆ.

ಬೆರಗಿನ ಸಂಗತಿಯೆಂದರೆ, ಹುಡುಗಿಯಾಬ್ಬಳ ತವಕ ತಲ್ಲಣಗಳಲ್ಲಿ ಊರೆಲ್ಲ, ಬದುಕೆಲ್ಲ ಹೊಳೆಯುವುದು. ಹುಡುಗಿಯಾಬ್ಬಳು ಭಾಷೆಯಲ್ಲಿ ಇಡಿಯಾಗಿ ಆಕಾರಗೊಳ್ಳುವ ಸುಳಹುಗಳು ತೋರುವುದು ಹೀಗೆ.. ಇಡೀ ಬದುಕಿನ ಹಿನ್ನೆಲೆಯಲ್ಲಿ ಮೂಡುವಾಗ. 'ಹೊತ್ತಿನಲ್ಲಿದ್ದಾಳೆ’ ಎಂದು ಬಸುರಿಯ ಬಗ್ಗೆ ಹೇಳುತ್ತಾರೆ. ಸಮಯ ಮತ್ತು ಬದುಕನ್ನು ಅನ್ವಯಗೊಳಿಸುವ ಸಮನ್ವಯಗೊಳಿಸುವ ಪರಿಯಾಂದನ್ನು ಕಾಣಿಸುವ ಸಂಗತಿ ಇದು. ಹೊತ್ತಿನಲ್ಲಿದ್ದಾಳೆ ಎಂಬುದರಲ್ಲಿ ಎಂಥ ಅನನ್ಯತೆಯಿದೆ! ಹಾಗೆ ನೋಡಿದರೆ ಹುಡುಗಿ ಯಾವಾಗಲೂ ಹೊತ್ತಿನಲ್ಲೇ ಇರುತ್ತಾಳೆ. ಅವಳ ಖುಷಿ, ಅವಳ ಬೇಗುದಿ, ಅವಳ ಮೌನ ಎಲ್ಲವೂ ಒಂದೊಂದು ಸಮಯವೇ. ಅಂಥ ಒಂದು ಸಮಯವನ್ನು ನಾನು ಕಂಡದ್ದು ಹೀಗೆ :

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X