ಯುಗಾದಿ ಬಂದಿದೆ ಮರೆಯದೆ ಮರಳಿ
ಕಾಡಿಗೆ ನಾಡಿಗೆ ಓಡುತ ಬಂತು
ಊರಿಗೆ ಓಣಿಗೆ ಕುಣಿಯುತ ಬಂತು
ಮನೆಮನೆಯಲ್ಲಿ ಹರುಷವ ತಂತು
ಮರೆಯದೆ ಮರಳಿ ಯುಗಾದಿ ಬಂತು
ಕಹಿಕಹಿ ಬೇವಿಗೆ ಸಿಹಿಸಿಹಿ ಬೆಲ್ಲ
ಸೇರಿಸಿ ಸವಿದವ ರುಚಿಯನು ಬಲ್ಲ
ಸಾಗರ ದುಃಖಕೆ ಹನಿಸುಖ ಚೆಲ್ಲಿ
ಜೀವನ ಸಾರವ ಕುಡಿದವ ಬಲ್ಲ
ಸುಳಿಸುಳಿದಾಡುವ ಗಾಳಿಯು ಮೃದುಲ
ಹಸಿರಲಿ ಕುಲುಕುವ ಹೂನಗು ಕೋಮಲ
ಮಾವಿನ ಮಿಡಿಗಳ ತೂಗುವ ಗೊಂಚಲ
ನೋಡಲು ನಿರ್ಮಲ ಮನವೂ ಚಂಚಲ
ಮೂಡಣ ಪಡುವಣ ತೆಂಕಣ ಕಂಕಣ
ಎಲ್ಲೆಡೆ ತುಂಬಿದೆ ಕೋಗಿಲೆ ಗಾನ
ಸುರರಿಗೂ ಇದುವೆ ಸೊಬಗಿನ ತಾಣ
ಇನ್ನೇಕವರಿಗೆ ಅಮೃತ ಪಾನ
ಹಳತನು ಕಳಚಿ ಹೊಸತನು ತರುವ
ಜೀವನದಾಸೆಯ ಚಿಮ್ಮುತಲಿರುವ
ಕಾಡಿಗೆ ನಾಡಿಗೆ ಊರಿಗೆ ಹೊರಳಿ











Click it and Unblock the Notifications