ಏ.29: ರಿಚ್‌ಮಂಡ್ ಕನ್ನಡ ಸಂಘದ ಯುಗಾದಿ ಸಡಗರ
ರಿಚ್‌ಮಂಡ್ ಕನ್ನಡ ಸಂಘ ಏಪ್ರಿಲ್ 29ರಂದು ಯುಗಾದಿ ಹಬ್ಬ ಆಚರಿಸಲಿದೆ. ಕಾರ್ಯಕ್ರಮಕ್ಕೆ ತಮ್ಮ ಬಂಧುಮಿತ್ರರೊಂದಿಗೆ ಆಗಮಿಸುವಂತೆ ಕನ್ನಡ ಬಂಧುಗಳಿಗೆ ಆದರದ ಸ್ವಾಗತ ಕೋರಿದೆ.
ಹಿರಿಕಿರಿಯರ ಸಮೂಹ ನೃತ್ಯ, ಕನ್ನಡ ನಾಟಕ, ಗಾಯನ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಿಮ್ಮನ್ನು ಮುದಗೊಳಿಸಲಿವೆ. ಕಾರ್ಯಕ್ರಮದಲ್ಲಿ ಪುಷ್ಕಳವಾದ ಹೋಳಿಗೆ(ಒಬ್ಬಟ್ಟು) ಊಟವೂ ದೊರೆಯಲಿದೆ.
ಹಬ್ಬಕ್ಕೆ ಆಗಮಿಸುವವರಲ್ಲಿ ಮನವಿ : ಸಂಘದ ಸದಸ್ಯರು 6 ಡಾಲರುಗಳ ದೇಣಿಗೆ ನೀಡಬೇಕು ಹಾಗೂ ಸಂಘದ ಸದಸ್ಯರಲ್ಲದ ವಯಸ್ಕರು 8 ಡಾಲರುಗಳನ್ನು ನೀಡಬೇಕು. ಅದೇ ರೀತಿ ಸಂಘದ ಸದಸ್ಯರಾಗಿರುವ ಮಕ್ಕಳು 4 ಡಾಲರುಗಳ ದೇಣಿಗೆ ನೀಡಬೇಕು ಹಾಗೂ ಸದಸ್ಯರಲ್ಲದ ಮಕ್ಕಳು 5 ಡಾಲರುಗಳನ್ನು ನೀಡಬೇಕು ಎಂದು ರಿಚ್‌ಮಂಡ್ ಕನ್ನಡ ಸಂಘ ಹೇಳಿದೆ.
ಕಾರ್ಯಕ್ರಮ ನಡೆಯುವ ಸ್ಥಳ :
ಹಿಂದೂ ಕೇಂದ್ರ ವರ್ಜೀನಿಯಾ,
6051, ಸ್ಪ್ರಿಂಗ್‌ಫೀಲ್ಡ್ ರಸ್ತೆ, ವಿಎ 23060
ದಿನಾಂಕ ಮತ್ತು ಸಮಯ :
ಏಪ್ರಿಲ್ 29, 2006. ಸಂಜೆ 5 ಗಂಟೆಯಿಂದ 9 ಗಂಟೆಯವರೆಗೆ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
ಪಾವನಿ ರಾಮ್ : (804) 264 4804
ಗಿರೀಶ್ ರಾಮಮೂರ್ತಿ : (804) 364 5982
ಮುಖಪುಟ / ವ್ಯಯನಾಮ ಸಂವತ್ಸರಕ್ಕೆ ಸ್ವಾಗತ












Click it and Unblock the Notifications