ಪಶ್ಚಿಮವಾಹಿನಿ ಸಂಕೇತಿ ಸಂಘದಿಂದ ಯುಗಾದಿ ವೈಭೋಗ
| ಸಂಕೇತಿಗಳು ಕನ್ನಡಿಗರ ಒಂದು ಉಪಪಂಗಡವಾಗಿದ್ದು, ಹೆಚ್ಚಾಗಿ ಹಾಸನ ಜಿಲ್ಲೆಯ ಸುತ್ತಮುತ್ತ ಬೇರೂರಿದ್ದಾರೆ. ಈಗ ಪ್ರಪಂಚದ ಎಲ್ಲೆಡೆ ಸೇರಿಕೊಂಡಿದ್ದಾರೆ. ಸ್ಯಾನ್‌ಫ್ರಾನ್ಸಿಸ್ಕೋ ಕೊಲ್ಲಿ ಪ್ರದೇಶದಲ್ಲಿ ಸಾಕಷ್ಟು ಜನರಿದ್ದು ‘ಪಶ್ಚಿಮವಾಹಿನಿ’ ಎಂಬ ಹೆಸರಿನಲ್ಲಿ ಒಂದು ಸಂಘವನ್ನು ಕಟ್ಟಿಕೊಂಡಿದ್ದಾರೆ. ಪಶ್ಚಿಮವಾಹಿನಿ ಸಂಕೇತಿ ಸಂಘವು ಏಪ್ರಿಲ್ 29ರಂದು ಸನ್ನಿವೇಲಿನ ಸನಾತನ ಧರ್ಮ ಕೇಂದ್ರದ ಸಭಾಂಗಣದಲ್ಲಿ, ಯುಗಾದಿ ಹಬ್ಬವನ್ನು ಸಡಗರದಿಂದ ಆಚರಿಸಿತು. ಅದರ ಒಂದು ಕಿರುವರದಿ ಪದ್ಯರೂಪದಲ್ಲಿ... | |
![]() ![]() ![]() ![]() |
ಆಟ, ನೋಟ, ಊಟ, ಹರಟೆ ಎಲ್ಲ ಇತ್ತು ಇಲ್ಲಿ ಸಂಭ್ರಮದ ಯುಗಾದಿಗಾಗಿ ಸೇರಿತ್ತು ಕೂಟ ಅಚ್ಚುಕಟ್ಟಾಗಿತ್ತು, ಸಂಕೇತಿಗಳ ಈ ಪರಿಪಾಠ ಬಾಳೆಕಂಬ, ಬೆಳ್ಳಿದೀಪ ಸಭಾಂಗಣದಲ್ಲಿ ನಿಮಿಷದಲ್ಲಿ ಎಷ್ಟು ಗಂಟು ಕಟ್ಟುವೆ ತೋರಿಸು ಸಂಕೇತಿಯಲ್ಲಿ ರಸಪ್ರಶ್ನೆ ರಂಜಿಸಿತೆಲ್ಲರನು ನಕ್ಕು ನಲಿದು, ಸುಸ್ತಾಗಿತ್ತು, ಹಸಿದಿತ್ತು ಹೊಟ್ಟೆ ಇಷ್ಟು ಚೆನ್ನಾಗಿ ಎಲ್ಲವನ್ನು ನಡೆಸಿದವರಾರು ಗೊತ್ತಾ? ಎನ್ನುತ ಹೊರಟರು ನೆರೆದವರೆಲ್ಲರು ತಂತಮ್ಮ ಮನೆ ಕಡೆಗೆ |















Click it and Unblock the Notifications