ಯುಗಾದಿ, ಇದು ಕಸಾಂಸದ ವಿಶೇಷ ಯುಗಾದಿ!
- ವಲ್ಲೀಶ ಶಾಸ್ತ್ರಿ ; ಲಾಸ್‌ಏಂಜಲಿಸ್.
[email protected]
![]() ![]() ![]() ![]() ![]() ಹಬ್ಬದ ಮೆರವಣಿಗೆ ಮಾರಮ್ಮನ ಕುಣಿತದಿಂದ ಪ್ರಾರಂಭವಾಗಿ, ಬಣ್ಣಬಣ್ಣದ ಉಡಿಗೆ ತೊಡಿಗೆಗಳನ್ನು ತೊಟ್ಟ ಮಹಿಳೆಯರ ಕೋಲಾಟ ಸೊಗಸಾಗಿತ್ತು. ರಂಗುರಂಗಾಗಿ ಮೆರೆದ ಕನ್ನಡದ ಭಾಂಗ್ರಾ ಕುಣಿತದ ಗಂಡಸರ ಗುಂಪು, ‘ನಾನು ಯಾರು?’ಎಂಬ ತಲೆ ಪಟ್ಟಿಯನ್ನು ಹೊತ್ತು ಭಾರತ ದೇಶದ ಖ್ಯಾತ ನಾಯಕರು, ವಿಜ್ಞಾನಿಗಳು, ಹಾಗೂ ಸಾಹಿತಿಗಳ ರೀತಿ ಉಡುಗೆ ತೊಡಿಗೆ ತೊಟ್ಟು ಮೆರವಣಿಗೆಯಲ್ಲಿ ಸಾಗಿದ ಮಕ್ಕಳನ್ನು ಕಂಡದ್ದೇ ಒಂದು ಖುಷಿ. ಕೋಲು ಕುಣಿತದ ತಂಡ ಕುಣಿತಕ್ಕೆ ರಂಗೇರಿಸಿತ್ತು. ಕಳಶ ಹೊತ್ತ ಮಹಿಳೆಯರ ತಂಡವಂತು ಹಬ್ಬದ ಮೆರಗನ್ನು ಕೊಟ್ಟಿತ್ತು. ದೇವರನ್ನು ಹೊತ್ತ ನಾಲ್ಕು ಜನರ ತಂಡವಂತು ಜಾತ್ರೆಯ ಸೊಬಗನ್ನು ನೀಡಿತ್ತು. ಒಟ್ಟಿನಲ್ಲಿ ಹಬ್ಬದ ಮೆರವಣಿಗೆಯಲ್ಲಿ ಸದಸ್ಯರೆಲ್ಲ ಭಾಗವಹಿಸಿ ಬಹಳ ಯಶಸ್ವಿಗೊಳಿಸಿದ್ದರು.
ಪ್ರತಿ ವರ್ಷದ ಸಂಗೀತ ಕಾರ್ಯಕ್ರಮವನ್ನು ಬಿಟ್ಟು ಈ ಬಾರಿ ವಿವಿಧ ವಿನೋದಾವಳಿ ಕಾರ್ಯಕ್ರಮಕ್ಕೆ ಬಹಳ ಉತ್ಸಾಹಿ ಹಿರಿಯ, ಕಿರಿಯ ಹಾಗೂ ಹೊಸ ಸದಸ್ಯರು ಪಾಲ್ಗೊಂಡಿದ್ದು ವಿಶೇಷವಾಗಿತ್ತು. 15 ವರ್ಷದ ತರುಣ ತರುಣಿಯರಿಂದ ಹಿಡಿದು, 60 ವರ್ಷ ದ ಹಿರಿಯ ಸದಸ್ಯರು, ಕೆಲವು ನೃತ್ಯಗಳಲ್ಲಿ ಭಾಗವಹಿಸಿದ್ದು ಎಲ್ಲರ ಹುಬ್ಬನ್ನು ಮೇಲಕ್ಕೇರಿಸಿತು ಎಲ್ಲ ಸರ್ವ ಸದಸ್ಯರ ಸಭೆಯಂತೆ ಇಲ್ಲಿನ ಸರ್ವ ಸದಸ್ಯರ ಸಭೆಯೂ ಕೆಲವು ಸಿಹಿ ಮತ್ತು ಕಹಿ ಪ್ರಸಂಗಗಳಿಂದ ಕೂಡಿತ್ತು. ಅಂತಹ ಸಭೆಯನ್ನು ಕಸಾಂಸಂ ಯಾಕೆ ಯುಗಾದಿ ಹಬ್ಬದ ದಿನದಂದು ಇಟ್ಟುಕೊಳ್ಳುತ್ತಾರೋ ಏನೋ ಎಂಬ ಮಾತು ಕೆಲವರ ಬಾಯಲ್ಲಿ ಬರುತ್ತಿತ್ತು. ಏನೇ ಆಗಲಿ ಸರ್ವ ಸದಸ್ಯರ ಸಭೆ ನಡೆಯಲೇ ಬೇಕು, ಕಹಿಸಿಹಿ ಅನುಭವಗಳಾಗಲೇ ಬೇಕು. ಸರ್ವಸದಸ್ಯರ ಸಭೆ ನಿಗಧಿ ಪಡಿಸಿದ ವೇಳೆಗಿಂತ ಜಾಸ್ತಿ ತೆಗೆದುಕೊಂಡಿದ್ದರಿಂದ ಮುಂದಿನ ಕಾರ್ಯಕ್ರಮಗಳಿಗೆ ಸಮಯ ಕಡಿತವಾಗಬೇಕಾದ ಪರಿಸ್ಥಿತಿ ಬಂತು. ಆದರ್ಶದಂಪತಿಗಳು ಕಾರ್ಯಕ್ರಮ ಕೇವಲ ಪ್ರೀತಿ, ಪ್ರೇಮ ವಿಭಾಗಕ್ಕಾಗಿ ನಡೆಯಿತು. ದಕ್ಷಿಣ ಕ್ಯಾಲಿಫೋರ್ನಿಯಾ ನಿವಾಸಿ ಕನ್ನಡದ ಯಶಸ್ವೀ ನಿರ್ದೇಶಕ ಅಶೋಕ್ ಪಾಟೀಲ್ ದಂಪತಿಗಳು ಹಾಗೂ ಬೆಂಗಳೂರಿನಿಂದ ರಜೆಗೆ ಬಂದಿದ್ದ ಯಶಸ್ವೀ ವಕೀಲರಾದ ಸಂಪತ್ ಕುಮಾರ್ ದಂಪತಿಗಳು ಈ ಕಾರ್ಯಕ್ರಮದ ತೀರ್ಪುಗಾರರಾಗಿದ್ದರು. ದಕ್ಷಿಣ ಕ್ಯಾಲಿಫೋರ್ನಿಯಾದ ಹಲವು ಮಳಿಗೆಗಳ ವಾರಸುದಾರರು ಕಾರ್ಯಕ್ರಮದ ಪ್ರಾಯೋಜಕತ್ವವಹಿಸಿದ್ದರು. ಸ್ಪರ್ಧೆಯಲ್ಲಿ ಗೆದ್ದ ಆದರ್ಶ ದಂಪತಿಗಳಿಗೆ ಪ್ರಶಸ್ತಿ ನೀಡಲಾಯಿತು. ಕಡೆಯಲ್ಲಿ ಎಲ್ಲರ ಹೊಟ್ಟೆ ತಣಿಸುವ ಊಟದ ಕಾರ್ಯಕ್ರಮ ಸೊಗಸಾಗಿತ್ತು. ಮನೆಯಲ್ಲೆ ತಯಾರಿಸಿದ್ದ ಬೇಸನ್ ಲಾಡುಗಳು ಎಲ್ಲರಿಗೂ ಮುದ ತಂದವು. |





ಹಬ್ಬದ ಮೆರವಣಿಗೆ ಮಾರಮ್ಮನ ಕುಣಿತದಿಂದ ಪ್ರಾರಂಭವಾಗಿ, ಬಣ್ಣಬಣ್ಣದ ಉಡಿಗೆ ತೊಡಿಗೆಗಳನ್ನು ತೊಟ್ಟ ಮಹಿಳೆಯರ ಕೋಲಾಟ ಸೊಗಸಾಗಿತ್ತು. ರಂಗುರಂಗಾಗಿ ಮೆರೆದ ಕನ್ನಡದ ಭಾಂಗ್ರಾ ಕುಣಿತದ ಗಂಡಸರ ಗುಂಪು, ‘ನಾನು ಯಾರು?’ಎಂಬ ತಲೆ ಪಟ್ಟಿಯನ್ನು ಹೊತ್ತು ಭಾರತ ದೇಶದ ಖ್ಯಾತ ನಾಯಕರು, ವಿಜ್ಞಾನಿಗಳು, ಹಾಗೂ ಸಾಹಿತಿಗಳ ರೀತಿ ಉಡುಗೆ ತೊಡಿಗೆ ತೊಟ್ಟು ಮೆರವಣಿಗೆಯಲ್ಲಿ ಸಾಗಿದ ಮಕ್ಕಳನ್ನು ಕಂಡದ್ದೇ ಒಂದು ಖುಷಿ. ಕೋಲು ಕುಣಿತದ ತಂಡ ಕುಣಿತಕ್ಕೆ ರಂಗೇರಿಸಿತ್ತು. ಕಳಶ ಹೊತ್ತ ಮಹಿಳೆಯರ ತಂಡವಂತು ಹಬ್ಬದ ಮೆರಗನ್ನು ಕೊಟ್ಟಿತ್ತು. ದೇವರನ್ನು ಹೊತ್ತ ನಾಲ್ಕು ಜನರ ತಂಡವಂತು ಜಾತ್ರೆಯ ಸೊಬಗನ್ನು ನೀಡಿತ್ತು. ಒಟ್ಟಿನಲ್ಲಿ ಹಬ್ಬದ ಮೆರವಣಿಗೆಯಲ್ಲಿ ಸದಸ್ಯರೆಲ್ಲ ಭಾಗವಹಿಸಿ ಬಹಳ ಯಶಸ್ವಿಗೊಳಿಸಿದ್ದರು.












Click it and Unblock the Notifications