ಯುಗಾದಿದ.ರಾ. ಬೇಂದ್ರೆಯುಗ ಯುಗಾದಿ ಕಳೆದರೂಯುಗಾದಿ ಮರಳಿ ಬರುತಿದೆಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆಹೊಂಗೆ ಹೂವ ತೊಂಗಲಲ್ಲಿಭೃಂಗದ ಸಂಗೀತ ಕೇಳಿ ಮತ್ತೆ ಕೇಳಿ ಬರುತಿದೆಬೇವಿನ ಕಹಿ ಬಾಳಿನಲ್ಲಿಹೂವಿನ ನಸುಗಂಪು ಸೂಸಿ ಜೀವಕಳೆಯ ತರುತಿದೆವರುಷಕೊಂದು ಹೊಸತು ಜನ್ಮಹರುಷಕೊಂದು ಹೊಸತು ನೆಲೆಯುಅಖಿಲ ಜೀವ ಜಾಲಕೆಒಂದೆ ಒಂದು ಜನ್ಮದಲ್ಲಿಒಂದೆ ಬಾಲ್ಯ ಒಂದೆ ಹರಯನಮಗದಷ್ಟೆ ಏತಕೊನಿದ್ದೆಗೊಮ್ಮೆ ನಿತ್ಯ ಮರಣಎದ್ದ ಸಲ ನವೀನ ಜನನನಮಗೆ ಏಕೆ ಬಾರದೊಎಲೆ ಸನತ್ಕುಮಾರದೇವ ಎಲೆ ಸಾಹಸಿ ಚಿರಂಜೀವ ನಿನಗೆ ಲೀಲೆ ಸೇರದೊಯುಗ ಯುಗಾದಿ ಕಳೆದರೂಯುಗಾದಿ ಮರಳಿ ಬರುತಿದೆಹೊಸ ವರುಷಕೆ ಹೊಸ ಹರುಷವಹೊಸತು ಹೊಸತು ತರುತಿದೆನಮ್ಮನಷ್ಟೆ ಮರೆತಿದೆPost your views / ಯುಗಾದಿ