ಬೇವು ಬೆಲ್ಲದೊಳಿಡಲು ಏನು ಫಲ?
*ಟಿ.ಎಂ. ಸತೀಶ್
ಪಂಚಮ ಸ್ವರದಲ್ಲಿ ಹಾಡುವ ಕೋಗಿಲೆ, ಶಿಶಿರದ ಮಂಜು ಸುರಿದು ನಿಂತ ನಂತರ ನಿಸ್ತೇಜವಾಗಿದ್ದ ಮರ - ಗಿಡಗಳು ಮತ್ತೆ ಚಿಗುರೊಡೆದು ಹೊಸ ಚೈತನ್ಯದೊಂದಿಗೆ ವಸಂತನನ್ನು ಕೂಗಿ ಕರೆಯುತ್ತಿವೆ. ಚೈತ್ರ - ವೈಶಾಖ ವಸಂತಋತು. ವಸಂತ ಋತುಗಳ ರಾಜ. ವಸಂತ ಬಂದ ಋತುಗಳ ರಾಜ ತಾ ಬಂದ ಚಿಗುರನು ತಂದ.. .. ಕಣ್‌ಗಳ ತಣಿಸುತ ನಿಂದ ಎಂಬ ಕವಿಯ ಆ ಕಲ್ಪನೆಗಳು ಬದುಕಿಗೆ ಹೊಸ ಚೇತನವೀಯುವ ಕಾಲಚಕ್ರ ಇನ್ನೊಂದು ಸುತ್ತು ತಿರುಗಿ ಮತ್ತೆ ಇಲ್ಲಿಗೆ ಬಂದು ನಿಂತಿದೆ, ನಮ್ಮ ಮುಂದೆ..
ಎಲ್ಲಿ ನೋಡಿದರೂ ಹಚ್ಚ ಹಸುರಿನ ರಾಶಿ, ಆಹ್ಲಾದವನ್ನು ಅರಸುವ ಮನಕ್ಕೆ ಮುದ ನೀಡುವ ಬಣ್ಣಬಣ್ಣದ ಬಗೆ ಬಗೆಯ ಹೂ ರಾಶಿ. ತಾಂತ್ರಿಕ ಬದುಕಿನಲ್ಲಿ ಸಿಲುಕಿರುವ ನಮಗೆ ಕ್ಷಣ ನೆಮ್ಮದಿಗೆ ಒಂದೇ ದಾರಿ. ಆ ದಾರಿಯನ್ನು ತೆರೆದು ಸ್ವಾಗತಿಸುತ್ತಿರುವ ಚೈತ್ರ ಮಹಾಶಯನನ್ನು ಎದುರುಗೊಳ್ಳಲು ನಾವು ಸಿದ್ಧರಾಗೋಣ. ಇಂಥ ಪರಸ್ಪರ ಎದುರುಗೊಳ್ಳುವ ಕಾಲಕ್ಕೆ ಹೋಳಿ ಒಂದಿಷ್ಟು ರಂಗನ್ನು ಈಗಷ್ಟೇ ಎರಚಿ ನಿರ್ಗಮಿಸಿದೆ. ಅದರ ಹಿಂದೆಯೇ ಬೇವು ಬೆಲ್ಲ ಕೈಹಿಡಿದು ಜತೆಜತೆಯಾಗಿ ಬರುತ್ತಿವೆ, ಅಗೋ ಅಲ್ಲಿ ನೋಡಿ..
ಯುಗಾದಿ ಹೆಸರೇ ಹೇಳುವಂತೆ ಯುಗದ ಆದಿ. ಅಂದರೆ ಹೊಸ ಸಂವತ್ಸರದ ಸಾಂಗತ್ಯ. ಕಲಿಯುಗದ ಮತ್ತೊಂದು ಸಂವತ್ಸರ ಸವೆದು, ಕೃತಯುಗ ಹತ್ತಿರವಾಗುತ್ತಿರುವುದರ ಮುನ್ಸೂಚನೆ. ಈ ನಡುವೆಯೂ ಹಳೆಯದೆಲ್ಲವ ಮರೆತು ಹೊಸತನ್ನು ಹುಡುಕುವ ಮನ , ವರ್ಷದ ಪ್ರಥಮ ದಿನವಾದ ಯುಗಾದಿಯಂದು ಹೊಸ ಉಡುಗೆ ತೊಟ್ಟು, ಸಿಹಿ ಊಟವ ಮಾಡಿ, ಕಹಿಯನ್ನು ಮರೆತು, ಮುಂದಿನ ಬದುಕಿನ ಸಿಹಿಯನ್ನು ಅಪ್ಪಲು ತವಕಿಸುತ್ತದೆ.
ಇವೆಲ್ಲದರ ಸಂಕೇತವೇ ಆಗಿರುವ ಬೇವು ಬೆಲ್ಲವ ಮೆಲ್ಲುವ ಆಚರಣೆ, ಸುಖ - ದುಃಖ ಸಮನಾಗಿ ಹಂಚಿಕೊಂಡು ಬಾಳುವ ನೀತಿ ಪಾಠವನ್ನೂ ಸಾರುತ್ತದೆ. ಆಸೆ - ನಿರಾಸೆ, ಒಳಿತು - ಕೆಡಕು, ಸೋಲು - ಗೆಲವು ಬದುಕಲ್ಲಿ ಸಹಜ ಎಂದು ಸಾರಿ ಸಾರಿ ಹೇಳುತ್ತದೆ. ಇದು ತತ್ವಜ್ಞಾನಿಗಳ ಕಾರಣಿಕವೇ ಆಗಬೇಕಿಲ್ಲ. ನಮ್ಮ ನಿಮ್ಮ ಮಾತು.
ಯುಗಾದಿಯಂದು ಅಭ್ಯಂಜನ ಮಾಡಿ, ಹೊಸ ಬಟ್ಟೆ ಧರಿಸಿ, ಮನೆದೇವರನ್ನು ಪೂಜಿಸಿ
ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯಚ,
ಸರ್ವಾರಿಷ್ಟ ವಿನಾಶಾಯ ನಿಂಬಕಂ ದಳಭಕ್ಷಣಂ
ಎಂಬ ಶ್ಲೋಕ ಹೇಳಿಕೊಂಡು ಬೇವು ಬೆಲ್ಲ ತಿನ್ನುತ್ತಾರೆ. ನೆರೆ ಹೊರೆಯವನ್ನು ಕರೆದು ಅವರಿಗೂ ಬೇವು ಬೆಲ್ಲ ಹಂಚುತ್ತಾರೆ.
ಯುಗಾದಿಯಂದೇ ಬೇವು - ಬೆಲ್ಲ ಏಕೆ ತಿನ್ನಬೇಕು? : ಚಾಂದ್ರಮಾನ ಯುಗಾದಿ ಚೈತ್ರಮಾಸದ ಮೊದಲ ದಿನ. ಸೂರ್ಯನು ಮೀನ ಅಥವಾ ಮೇಷದಲ್ಲಿರುವಾಗ ಸೆಖೆ ಹೆಚ್ಚು. ಈ ಕಾಲದಲ್ಲಿ ಸೂರ್ಯನ ತಾಪ ದಿನೇ ದಿನೇ ಹೆಚ್ಚುತ್ತದೆ. ಭರಣಿ ನಕ್ಷತ್ರದ 3ನೇ ಪಾದಕ್ಕೆ ಸೂರ್ಯ ಬಂದಾಗ ಅಗ್ನಿ ನಕ್ಷತ್ರ ದೋಷ ಪ್ರಾರಂಭ. ಅಂದರೆ, ಸೂರ್ಯ ತಾಪವೂ ಹೆಚ್ಚುತ್ತದೆ. ಈ ಕಾಲದಲ್ಲಿ ಸೂರ್ಯ ಭೂಮಿಗೆ ಅತಿ ಸಮೀಪದಲ್ಲಿರುತ್ತಾನೆ.
ಬಿಸಿಲಿನ ಬೇಗೆ ಹೆಚ್ಚಿದಂತೆಲ್ಲಾ ಹವಾ ಬದಲಾಗುತ್ತದೆ. ಮನುಷ್ಯನ ಶರೀರದ ಮೇಲೂ ಇದರ ಪರಿಣಾಮ ಉಂಟಾಗುತ್ತದೆ. ಉಷ್ಣ ಸಂಬಂಧಿ ಕಾಯಿಲೆಗಳಾದ ಸಿಡುಬು, ಪಿತ್ತಕೋಶ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದನ್ನು ತಡೆಗಟ್ಟುವ ಶಕ್ತಿ ಇರುವುದು ಬೇವಿನ ಎಲೆಗೆ ಮಾತ್ರ. ಹೀಗಾಗಿ ಸಂಜೀವಿನಿಗೆ ಸಮನಾದ ಬೇವಿನ ಹೂವು - ಎಲೆಯನ್ನು ಬೆಲ್ಲದೊಂದಿಗೆ ಸೇರಿಸಿ ತಿಂದರೆ ಅದು ವ್ಯಾಕ್ಸಿನೇಷನ್ ರೀತಿಯಲ್ಲಿ ರೋಗ ನಿರೋಧಕವಾಗಿ ಕಾರ್ಯ ನಿರ್ವಹಿಸುತ್ತದೆ.
ಚೈತ್ರ ಋತು ಪರಿವರ್ತನೆಯ ಪರ್ವ ಕಾಲ. ಕೊರೆವ ಚಳಿ, ಸುರಿದ ಮಂಜಿನಿಂದ ಮುದುಡಿದ ಮನಕ್ಕೆ, ಮೈಗೆ ಜಡತ್ವ ಅಂಟಿರುತ್ತದೆ. ರಥಸಪ್ತಮಿಯ ನಂತರ ಸೂರ್ಯನ ಚಲನೆಯಿಂದ ದೇಹದಲ್ಲಿ ಅನೇಕಾನೇಕ ಬದಲಾವಣೆಗಳೂ ಆಗುತ್ತವೆ. ದೇಹದಲ್ಲಿ ವಿಷಕ್ರಿಮಿಗಳು ಉತ್ಪತ್ತಿಯಾಗಿ ರೋಗವಾಗಿ ಕಾಡುತ್ತವೆ. ಅದಕ್ಕೇ ಹೊಸ ವರ್ಷದ ಆದಿ ಅರ್ಥಾತ್ ಚೈತ್ರಾಗಮನವಾಗುತ್ತಿದ್ದಂತೆಯೇ ಎಳೆ ಬೇವಿನ ಚಿಗುರು ಮೆಲ್ಲುವುದರಿಂದ ಶರೀರದಲ್ಲಿ ಜನಿಸಿದ ರೋಗಾಣುಗಳು, ಕ್ರಿಮಿಗಳು ನಾಮವಶೇಷವಾಗುತ್ತವೆ, ದೇಶ ವಜ್ರದಂತಾಗುತ್ತದೆ. ಬದುಕು ಆರೋಗ್ಯಪೂರ್ಣವಾಗಿ ಹಸನಾಗುತ್ತದೆ ಎನ್ನುತ್ತಾರೆ ಆಯುರ್ವೇದ ಪಂಡಿತರು.
ಈಗ ವಿಕ್ರಮನಾಮ ಸಂವತ್ಸರ ಕಳೆದು ವಿಷುನಾಮ ಸಂವತ್ಸರದ ಆಗಮನವಾಗುತ್ತಿದೆ. ವಿಕ್ರಮ ಭಾರತದ ಪಾಲಿಗಂತೂ ಕ್ರಮತಪ್ಪಿಯೇ ನಡೆದ. ಚಂಡಮಾರುತ, ಭೀಕರ ಭೂಕಂಪ, ನೆರೆಯ ಆರ್ಭಟ ಸಾವಿರಾರು ಜೀವಿಗಳನ್ನು ಬಲಿತೆಗೆದುಕೊಂಡಿತು. ವಿಷುವಾದರೂ ಜನರ ಪಾಲಿಗೆ ವಿಷವಾಗದೇ ಅಮೃತವಾಗಲಿ ಎಂದು ಹಾರೈಸೋಣ.
ಕೆಲ-ವು ಪಂಚಾಂಗ-ಕ-ರ್ತ-ರ ರೀತ್ಯ ವಿಷು ನಾಮ ಸಂವ-ತ್ಸ-ರ-ದ-ಲ್ಲಿ ಸೂರ್ಯ ದೇವ-ನೇ ದೊರೆ-ಯಾ-ಗಿ-ದ್ದು, ಧಾನ್ಯಾ-ಧಿ-ಪ-ತಿ-ಯೂ ಆಗಿ-ದ್ದಾ-ನೆ. ಹೀಗಾ-ಗಿ ದೇಶ ಕಾಯು-ವ ಮಂದಿ-ಯ ನಡು-ವೆ ದ್ವೇಷ ಹು-ಟ್ಟಿ ಜನ-ರಿ-ಗೆ ಸರ್ಕಾ-ರ-ದ ಭೀತಿ ಮೂಡು-ತ್ತ-ದಂ-ತೆ. ಮಳೆ ಬೆಳೆ-ಯೂ ಸಾಧಾರ-ಣವಂತೆ.
ಮುಖಪುಟ / ಯುಗಾದಿ











Click it and Unblock the Notifications