Ugadi 2025 Wishes: ಕಹಿ ಕಡಿಮೆ ಮಾಡಿ ಸಿಹಿ ತರಲಿ: ಯುಗಾದಿ ಹಬ್ಬದ ಶುಭಾಶಯಗಳು
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬಂದೇ ಬಿಡ್ತು. ಈ ಬಾರಿ ಯುಗಾದಿ ಹಬ್ಬವನ್ನು ದೇಶಾದ್ಯಂತ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಬಾರಿ ಯುಗಾದಿ ಹಬ್ಬ ಮಾರ್ಚ್ 30ರಂದು ಭಾನುವಾರ ಬಂದಿರುವುದು ಹಬ್ಬದ ಖುಷಿಯನ್ನು ಮತ್ತಷ್ಟು ಹೆಚ್ಚಿಸಿದೆ. ಹಿಂದೂಗಳ ಪಾಲಿಗೆ ಇದು ಮಹತ್ವದ ಹಬ್ಬ. ಜೊತೆಗೆ ಹಿಂದೂ ಧರ್ಮೀಯರ ನಂಬಿಕೆ ಪ್ರಕಾರ ಯುಗಾದಿಯಿಂದ ಹೊಸ ವರ್ಷ ಆರಂಭವಾಗುತ್ತದೆ. ಈ ಸಲ ಕ್ರೋಧಿನಾಮ ಸಂವತ್ಸರ ಕಳೆದು ವಿಶ್ವಾವಸು ನಾಮ ಸಂವತ್ಸರ ಬಂದಿದೆ.
ಈ ಯುಗಾದಿ ಬರೀ ಹೊಸವರ್ಷವಲ್ಲ. ಸಮೃದ್ಧಿಯ ಸಂಕೇತವಾಗಿದೆ. ವಸಂತ ಋತುವಿನ ಆಗಮನ ಕಾಲದಲ್ಲಿ ಯುಗಾದಿಯನ್ನು ಆಚರಿಸಲಾಗುತ್ತದೆ. ಎಣ್ಣೆ ಸ್ನಾನ, ಪಂಚಾಂಗ ಶ್ರವಣ ಯುಗಾದಿಯ ಮತ್ತೊಂದು ವಿಶೇಷವಾಗಿದೆ. ಇದು ಬರೀ ಹಬ್ಬ ಮಾತ್ರವಲ್ಲ. ಜೀವನದ ಸ್ಫೂರ್ತಿಯೂ ಆಗಿದೆ. ಇದೇ ಕಾರಣಕ್ಕೆ ಯುಗಾದಿಯಂದು ಬೇವು ಬೆಲ್ಲವನ್ನು ಹಂಚಲಾಗುತ್ತದೆ. ಅಂದರೆ ಕಹಿ ಮತ್ತು ಸಿಹಿಯ ಸಮನಾದ ಮಿಶ್ರಣವೇ ಜೀವನ ಎಂಬುದನ್ನು ತುಂಬಾ ಸೂಚ್ಯವಾಗಿ ಈ ಹಬ್ಬದ ಮೂಲಕ ನಮ್ಮ ಹಿರಿಯರು ನಮಗೆ ತಿಳಿಸಿಕೊಟ್ಟಿದ್ದಾರೆ. ಇದೇ ಕಾರಣಕ್ಕೆ ಎಲ್ಲರೂ ಬೇವು ಬೆಲ್ಲ ಸವಿದು ಈ ಹಬ್ಬವನ್ನು ಖುಷಿಯಿಂದ ಆಚರಿಸುತ್ತಾರೆ. ಈ ದಿನ ಮತ್ತಷ್ಟು ವಿಶೇಷವಾಗಿಸಲು ಶುಭಾಶಯಗಳನ್ನು ನಿಮ್ಮ ಪ್ರೀತಿ ಪಾತ್ರರೊಂದಿಗೆ ಹಂಚಿಕೊಳ್ಳುವ ಮೂಲಕ ಆಚರಿಸಿ.

ಯುಗಾದಿ ಹಬ್ಬದ ಶುಭಾಶಯಗಳು:-
* ಹಸಿರಾಗಲಿ ನಿಮ್ಮ ಬಾಳು ಯುಗಾದಿಯ ಸಂಭ್ರಮದಲ್ಲಿ ನೋವೆಲ್ಲಾ ಬತ್ತು ಹೋಗಲಿ ನಿಮ್ಮೆಲ್ಲರ ಬಾಳಲ್ಲಿ ಸಂತೋಷ ಚಿಮ್ಮಿರಲಿ
* ಯುಗಾದಿಯ ಹೊಸ ಬೆಳಕು ನಿಮ್ಮ ಜೀವನದಲ್ಲಿ ಶಾಂತಿ, ಸಮೃದ್ಧಿ ಮತ್ತು ಸಂತೋಷವನ್ನು ತರಲಿ
* ಈ ವರ್ಷದ ಯುಗಾದಿ ನಿಮಗೆ ಹೋಸ ಭರವಷೆ ಮತ್ತು ಹೊಸ ಆರಂಭಗಳನ್ನು ತರಲಿ... ಯುಗಾದಿ ಹಬ್ಬದ ಶುಭಾಶಯಗಳು
* ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ. ಹೊಸ ವರುಷಕ್ಕೆ ಹೊಸ ಹರುಷಕೆ ಹೊಸತು ತರಲಿದೆ.. ಯುಗಾದಿ ಹಬ್ಬದ ಶುಭಾಶಯಗಳು
* ಹೊಸ ಭರವಸೆಯೊಂದಿಗೆ ಹೊಸ ಜೀವನವನ್ನು ಪ್ರಾರಂಭಿಸಿ ಎಂದು ಆಶಿಸುತ್ತೇನೆ.
* ಕಹಿಯಾದ ಬೇವಿನ ಅಂಚಿನಲ್ಲಿ ಬೆಲ್ದ ಸಿಂಚನ ಸಿಗಲಿ ಯುಗಾದಿಯ ಶುಭಾಶಯಗಳು
* ನಿಮ್ಮ ಬಾಳಲ್ಲಿ ಹೊಸ ಚೇತನ, ಉತ್ಸಾಹ, ನೆಮ್ಮದಿ ಇರಲಿ.. ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು
* ಹೊಸ ವರ್ಷವು ನಿಮ್ಮೆಲ್ಲಾ ಕನಸುಗಳನ್ನು ನನಸು ಮಾಡಲಿ ನಿಮಗೆ ಸಕಲ ಶಕ್ತಿ, ಸಾಮಾರ್ಥ್ಯ ಕಲ್ಪಿಸಲಿ
* ಶಾರ್ವರಿ ಸಂವತ್ಸರ ಮಂಗಳಮಯವಾಗಲಿ, ತೃಪ್ತಿಕರವಾಗಲಿ, ಆರೋಗ್ಯಪೂರ್ಣವಾಗಲಿ ಎಂದು ಆಶಿಸುತ್ತಾ ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು
* ಯುಗಾದಿ ಹಬ್ಬ ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಸಂತೋಷ ತರಲಿ. ಬದುಕಿನ ಎಲ್ಲಾ ಕಷ್ಟಗಳು ದೂರವಾಗಲಿ. ಎಲ್ಲರಿಗೂ ಶುಭ ತರಲಿ ಹೊಸ ವಿಶ್ವವಸು ನಾಮ ಸಂವತ್ಸರ
* ಎಲ್ಲಾ ಕಷ್ಟಗಳು ದೂರವಾಗಿ ಖುಷಿಯೊಂದೇ ನಿಮ್ಮ ಬದುಕಿನಲ್ಲಿ ಉಳಿಯಲಿ. ಸರ್ವರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು
* ನಿಮ್ಮ ಬದುಕಿನಲ್ಲಿ ಹೊಸ ಬೆಳಕು ಎಲ್ಲೆಡೆ ಹರಡಲಿ. ಹೊಸ ಜೀವನ ನಡೆಸಿ. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯ
* ವಿಶ್ವಾವಸು ನಾಮ ಸಂವತ್ಸರದಲ್ಲಿ ನಿಮ್ಮ ಎಲ್ಲಾ ಸಮಸ್ಯೆಗಳು ಕೊನೆಯಾಗಲಿ. ಎಲ್ಲೆಲ್ಲೂ ನೆಮ್ಮದಿ ಮನೆ ಮಾಡಲಿ. ನಾಡಿನ ಸಮಸ್ತ ಜನರಿಗೆ ಯುಗಾದಿ ಹಬ್ಬದ 2025 ಶುಭಾಶಯಗಳು












Click it and Unblock the Notifications