• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶ್ರೀಕೃಷ್ಣನ ಈ 50 ಹೆಸರುಗಳು ನಿಮಗೆ ಗೊತ್ತೆ?

By ವಿಶ್ವಾಸ ಸೋಹೋನಿ
|

ಭಾರತ ದೇಶದಲ್ಲಿ ವಿವೆಕಾನಂದ ಜಯಂತಿ, ಮಹಾವೀರ ಜಯಂತಿ, ಬಸವಜಯಂತಿ, ಹೀಗೆ ಅನೇಕ ಧಾರ್ಮಿಕ ಮುಖಂಡರ ಜನ್ಮದಿನವನ್ನು ಆಚರಿಸಲಾಗುತ್ತದೆ.

ಭಾರತೀಯರು ಶ್ರೀಕೃಷ್ಣನ ಜನ್ಮದಿನವನ್ನು ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿ(ಈ ವರ್ಷ ಸೆಪ್ಟೆಂಬರ್ 2)ಯಂದು ಪ್ರತಿವರ್ಷವು ವಿಜೃಂಭಣೆಯಿಂದ ಆಚರಿಸುತ್ತಾರೆ.

ಕೃಷ್ಣನಿಂದ ಕಲಿಯಲೇಬೇಕಾದ 10 ಜೀವನ ಪಾಠಗಳು

ಭಾರತದಲ್ಲಿ ವೃಂದಾವನ, ಮಥುರ, ದ್ವಾರಕ ಮತ್ತಿ ದೇಶ-ವಿದೇಶಗಳಲ್ಲಿ ಇರುವ ಇಸ್ಕಾನ ಮಂದಿರಗಳಲ್ಲಿ ಮುದ್ದು ಕೃಷ್ಣನ ಹುಟ್ಟು ಹಬ್ಬವನ್ನು ಆಚರಿಸುತ್ತಾರೆ. ಅನೇಕ ಸ್ಥಳಗಳಲ್ಲಿ ದಹಿ(ಮೊಸರು) ಹಂಡಿಯನ್ನಯ ಒಡೆಯುವ ಸ್ಪರ್ಧೆ ಇಟ್ಟಿರುತ್ತಾರೆ.

ಕೃಷ್ಣನ ಅನೇಕ ನಾಮಗಳು ಇವೆ. ಅದರಲ್ಲಿಯೂ ಕೃಷ್ಣನ 50 ವಿಶೇಷ ನಾಮಗಳು ಮತ್ತು ಅವುಗಳ ಅರ್ಥಗಳನ್ನು ಕೆಳಗಡೆ ಕೊಡಲಾಗಿದೆ.

ಕೃಷ್ಣ, ಗಿರಿಧರ, ಮುರಳೀಧರ, ಪಿತಾಂಬರ...

ಕೃಷ್ಣ, ಗಿರಿಧರ, ಮುರಳೀಧರ, ಪಿತಾಂಬರ...

1. ಕೃಷ್ಣ : ಎಲ್ಲರನ್ನೂ ತನ್ನ ಕಡೆ ಆರ್ಕಷಿತ ಮಾಡಿಕೊಳ್ಳುವವನು.

2. ಗಿರಿಧರ: ಪರ್ವತವನ್ನು ಎತ್ತಿ ಹಿಡಿದವನು.

3. ಮುರಳಿಧರ : ಮುರಳಿಯನ್ನು ನುಡಿಸುವವನು.

4. ಪಿತಾಂಬರಧಾರಿ : ಹಳದಿ ವಸ್ತ್ರವನ್ನು ಧರಿಸಿದವನು.

5. ಮಧುಸೂದನ : ಮಧು ಎಂಬ ದೈತ್ಯನನ್ನು ಸಂಹಾರ ಮಾಡಿದವನು.

6. ಯಶೋದ ದೇವಕಿ ನಂದನ : ಯಶೋದ ಹಾಗೂ ದೇವಕಿಯರಿಗೆ ಸಂತೋಷವನ್ನು ನೀಡುವ ಪ್ರಿಯ ಪುತ್ರ.

7. ಗೋಪಾಲ : ಗೋವುಗಳು ಅಥವಾ ಪೃಥ್ವಿಯ ಪಾಲನೆ ಮಾಡುವವನು.

8. ಗೋವಿಂದ : ಹಸುಗಳ ರಕ್ಷಕ.

9. ಶ್ರೀನಾಥ : ಲಕ್ಷ್ಮಿಗೆ ಆನಂದ ಕೊಡುವವನು.

10. ಕುಂಜ ವಿಹಾರಿ : ಕುಂಜ ಎಂಬ ಹೂದೋಟದಲ್ಲಿ ವಿಹಾರ ಮಾಡುವವನು.

ಶ್ರೀಕೃಷ್ಣ ಜನ್ಮಾಷ್ಟಮಿ ಮಕ್ಕಳಿಗಾಗಿ ಸ್ಪರ್ಧೆ: ಕಥೆ ಹೇಳಿ ಬಹುಮಾನ ಗೆಲ್ಲಿ!

ಚಕ್ರಧಾರಿ, ಶ್ಯಾಮ, ಮಾಧವ...

ಚಕ್ರಧಾರಿ, ಶ್ಯಾಮ, ಮಾಧವ...

11. ಚಕ್ರಧಾರಿ: ಸುದರ್ಶನ ಚಕ್ರ, ಜ್ಷಾನ ಚಕ್ರ, ಶಕ್ತಿ ಚಕ್ರ ಧರಿಸುವವನು.

12. ಶ್ಯಾಮ : ಕಪ್ಪು ವರ್ಣದವನು.

13. ಮಾಧವ : ಮಾಯಾಪತಿ.

14. ಮುರಾರಿ : ಮುರ ಎಂಬ ದೈತ್ಯನನ್ನು ಸೋಲಿಸಿದವನು.

15. ಅಸುರಾರಿ : ಅಸುರರನ್ನು ಸೋಲಿಸಿದವನು.

16. ಬನವಾರಿ : ಹೂದೋಟಗಳಲ್ಲಿ ವಿಹರಿಸುವವನು.

17. ಮುಕುಂದ : ನಿಧಿಗಳನ್ನು ಇಟ್ಟುಕೊಂಡಿರವವನು.

18. ಯೋಗೀಶ್ವರ : ಯೋಗಿಗಳ ಈಶ್ವರ.

19. ಗೊಪೇಶ : ಗೋಪಿಗಳ ಈಶ.

20. ಹರಿ : ದು:ಖವನ್ನು ದೂರಮಾಡುವವನು.

ಉಡುಪಿ ಅಷ್ಟಮಠಗಳಲ್ಲಿ ಒಗ್ಗಟ್ಟು: ಎರಡೆರಡು ಜನ್ಮಾಷ್ಟಮಿಗೆ ಕೃಷ್ಣಾರ್ಪಣ

ಮದನ, ಮನೋಹರ, ಮೋಹನ...

ಮದನ, ಮನೋಹರ, ಮೋಹನ...

21. ಮದನ : ಸುಂದರ.

22. ಮನೋಹರ : ಮನಸ್ಸನ್ನು ಆಕರ್ಷಿಸುವವನು.

23. ಮೋಹನ : ಸಮ್ಮೋಹನ ಮಾಡುವವನು.

24. ಜಗದೀಶ : ಜಗತ್ತಿನ ಮಾಲೀಕ.

25. ಪಾಲನಹಾರ : ಸರ್ವರ ಲಾಲನೆ ಪಾಲನೆ ಮಾಡುವವನು.

26. ಕಂಸಾರಿ : ಕಂಸನನ್ನು ಸಂಹರಿಸಿದವನು.

27. ರುಕ್ಮಿಣಿ ವಲ್ಲಭ : ರುಕ್ಮಿಣಿಯ ಪತಿ.

28. ಕೇಶವ : ಕೇಶ ಎಂಬ ದೈತ್ಯನ ಸಂಹಾರ ಮಾಡಿದವನು. ನೀರಿನ ಮೇಲೆ ವಾಸ ಮಾಡುವವನು.

29. ವಾಸುದೇವ : ವಸುದೇವನ ಪುತ್ರ.

30. ರಣಛೋರ : ರುದ್ರಭೂಮಿಯಲ್ಲಿ ಇರುವವನು.

ಗುಢಾಕೇಶ, ಋಷಿಕೇಶ, ಸಾರಥಿ...

ಗುಢಾಕೇಶ, ಋಷಿಕೇಶ, ಸಾರಥಿ...

31. ಗುಢಾಕೇಶ : ನಿದ್ರೆಯ ಮೇಲೆ ವಿಜಯಿಯಾದವನು.

32. ಋಷಿಕೇಶ : ಇಂದ್ರಿಯಗಳನ್ನು ಜಯಿಸಿದವನು.

33. ಸಾರಥಿ : ಅರ್ಜುನನ ರಥದ ಸಾರಥಿ.

34. ಪೂರ್ಣಪ್ರರಬ್ರಹ್ಮ : ದೇವತೆಗಳಿಗೂ ಮಾಲೀಕ.

35. ದೇವೇಶ : ದೇವಗಳ ಈಶ.

36. ನಾಗ ನಥಿಯ : ಕಲಿನಾಗವನ್ನು ಕೊಂದವನು.

37. ವೃಷ್ಣಿಪತಿ : ಆ ಕುಲದಲ್ಲಿ ಹುಟ್ಟಿದವನು.

38. ಯದುಪತಿ : ಯಾದವರ ಮಾಲೀಕ.

39. ಯದುವಂಶಿ : ಯದು ವಂಶದ ಅವತಾರ.

40. ದ್ವಾರಕಾಧೀಶ : ದ್ವಾರಕೆಯ ಮಾಲೀಕ.

ನಾಗರ, ಛಲೀಯ, ವಲ್ಲಭ...

ನಾಗರ, ಛಲೀಯ, ವಲ್ಲಭ...

41. ನಾಗರ : ಸುಂದರ.

42. ಛಲೀಯ : ಛಲ (ಹಠ) ಮಾಡುವವನು.

43. ಮಥುರಾ ಗೋಕುಲವಾಸಿ : ಈ ಸ್ಥಳಗಳ ನಿವಾಸಿ.

44. ವಲ್ಲಭ : ಸದಾ ಆನಂದದಲ್ಲಿ ಇರುವವನು.

45. ದಾಮೋದರ : ಹೊಟ್ಟೆಗೆ ಹಗ್ಗ ಕಟ್ಟಿಸಿಕೊಂಡವವನು.

46. ಅಘಹಾರಿ : ಪಾಪಗಳನ್ನು ಹರಿಸುವವನು.

47. ಸಖ : ಅರ್ಜುನ ಮತ್ತು ಸುದಾಮನ ಮಿತ್ರ.

48. ರಾಸರಚಯ್ಯ : ರಾಸ(ಒಂದು ಪ್ರಕಾರದ ನೃತ್ಯ) ರಚಿಸಿದವನು.

49. ಅಚ್ಯುತ : ಅವನ ಧಾಮದಿಂದ ಮರಳಿ ಹೋಗಲು ಸಾಧ್ಯವಿಲ್ಲ.

50. ನಂದಲಾಲ : ನಂದನ ಪುತ್ರ.

English summary
Sri Krishna Janmashthami, birth anniversary of lord Sri Krishna takes place on 8th new moon day of Shrava Month. This year it falls on September 2nd. Here is 50 different names of Srikrishna.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X