• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮನೆಯಲ್ಲೇ ರಾಘವೇಂದ್ರ ಸ್ವಾಮಿ ಆರಾಧನೆ ಮಾಡೋದು ಹೇಗೆ?

By ವಿಷ್ಣುದಾಸ ನಾಗೇಂದ್ರಾಚಾರ್ಯ
|

ಮಠಗಳಲ್ಲಿ ನಡೆಯುತ್ತಿರುವ ರಾಜಕೀಯ, ಅನಾಚಾರಗಳನ್ನು ನೋಡಿರುವ ಬಹುತೇಕ ಜನರು ಮಠಗಳಿಗೆ ಹೋಗಲು ಮನಸ್ಸು ಮಾಡುವುದಿಲ್ಲ. ಇದರಿಂದ ರಾಯರ ಸನ್ನಿದಾನಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲವಲ್ಲ ಎಂದು ಬೇಸರಿಸಿಕೊಳ್ಳಬೇಡಿ. ಮನೆಯಲ್ಲಿಯೇ ರಾಯರ ಆರಾಧನೆ ಮಾಡೋದು ಹೇಗೆ ಇಲ್ಲಿದೆ ಓದಿ.

ಸುಮಾರು 300 ವರ್ಷ ವೃಂದಾವನದಲ್ಲಿಯೂ, 700 ವರ್ಷಗಳ ಕಾಲ ತಮ್ಮ ಗ್ರಂಥಗಳಲ್ಲಿಯೂ ಸನ್ನಿಹಿತರಾಗಿರುತ್ತೇವೆ ಎಂದು ಅಭಯವನ್ನು ನೀಡಿದ ರಾಘವೇಂದ್ರ ಸ್ವಾಮಿಗಳ ಗಂಥ ಸಂಪತ್ತು ತುಂಬಾ ದೊಡ್ಡದು. ಬಹಳ ಸರಳ ಹಾಗೂ ಸುಲಭ. ಇವರ ಧ್ಯಾನದಲ್ಲಿ ತೊಡಗಿದರೆ ನೆಮ್ಮದಿ, ಶಾಂತಿಯುತ ಬದುಕು ನಡೆಸಬಹುದು ಎಂಬ ನಂಬಿಕೆ ಇಂದಿಗೂ ಸಾವಿರಾರು ಜನರಲ್ಲಿದೆ.[ದೇವಾಂಶ ಸಂಭೂತ ರಾಘವೇಂದ್ರ ಸ್ವಾಮೀಜಿ]

How to do Raghavendra Swami worship at home

ರಾಘವೇಂದ್ರ ಸ್ವಾಮಿಗಳ ಗ್ರಂಥಗಳು:

ವೇದವ್ಯಾಸರ ಬ್ರಹ್ಮ ಸೂತ್ರಗಳಿಗೆ ತಂತ್ರ ದೀಪಿಕಾ, ಶ್ರೀ ಮಧ್ವಾಚಾರ್ಯರ ಅಣು ಭಾಷ್ಯಕ್ಕೆ ತತ್ವಮಂಜರೀ ವ್ಯಾಖ್ಯಾನವನ್ನು, ಉಪನಿಷತ್ತುಗಳಿಗೆ ಖಂಡಾರ್ಥವನ್ನು ಬರೆದಿದ್ದಾರೆ. ಟೀಕಾಕೃತ್ಪಾದರ ನ್ಯಾಯಸುಧಾಕ್ಕೆ ಪರಿಮಳವನ್ನೂ, ತತ್ವಪ್ರಕಾಶಿಕಕ್ಕೆ ಭಾವದೀಪವನ್ನು, ಉಳಿದ ಟೀಕಾಗ್ರಂಥಗಳಿಗೆ ಭಾವದೀಪ ಎಂಬ ವ್ಯಾಖ್ಯಾನ ರಚಿಸಿದ್ದಾರೆ.[ರಾಯರ ಆರಾಧನಾ ಮಹೋತ್ಸವ]

ಚಂದ್ರಿಕಾಚಾರ್ಯರ ಚಂದ್ರಿಕಾ ಗ್ರಂಥ, ತರ್ಕತಾಂಡವ ಗ್ರಂಥಗಳಿಗೂ ಇವರ ವ್ಯಾಖ್ಯಾನಗಳಿವೆ. ಇವಲ್ಲದೇ ತಾತ್ಪರ್ಯ ನಿರ್ಣಯದ ಸಂಗ್ರಹವನ್ನು, ಪ್ರಮೇಯ ನವಮಾಲಿಕೆಯ ವ್ಯಾಖ್ಯಾನ, ಪ್ರಾತಃಸಂಕಲ್ಪ ಗದ್ಯ ಮುಂತಾದ ಸ್ವತಂತ್ರ ಗ್ರಂಥಗಳನ್ನು ರಚನೆ ಮಾಡಿ ಭಕ್ತರಿಗೆ ಪ್ರೀತಿ ಪಾತ್ರರಾಗಿದ್ದಾರೆ.

ಪೂಜೆ ಮಾಡುವುದು ಹೇಗೆ?

ಈ ಮೇಲೆ ಹೇಳಿದ ಯಾವುದಾದರೂ ಗ್ರಂಥವನ್ನು, ಮುಖ್ಯವಾಗಿ ಚಂದ್ರಿಕಾ ಗಂಥಕ್ಕೆ, ವ್ಯಾಖ್ಯಾನವಾದ ಪ್ರಕಾಶಿಕಾ ಗ್ರಂಥವನ್ನು ತಂದಿಟ್ಟುಕೊಳ್ಳಬೇಕು. ಕಾರಣ ಆ ಗ್ರಂಥದಲ್ಲಿ ಬ್ರಹ್ಮ ಸೂತ್ರಗಳ ರೂಪದಲ್ಲಿ ಶ್ರೀ ವೇದವ್ಯಾಸರು, ಭಾಷ್ಯದ ರೂಪದಲ್ಲಿ ಶ್ರೀ ಮದ್ವಾಚಾರ್ಯರು, ತತ್ವ ಪ್ರಕಾಶಿಕೆ ರೂಪದಲ್ಲಿ ಶ್ರೀ ಮಟ್ಟಿಕಾಕೃತ್ಪಾದರು, ಚಂದ್ರಕೆ ರೂಪದಲ್ಲಿ ಶ್ರೀ ಮಚ್ಚಂದ್ರಿಕಾ ಚಾರ್ಯರು, ಪ್ರಕಾಶಿಕೆ ರುಪದಲ್ಲಿ ಶ್ರೀ ಪರಿಮಳಾ ಚಾರ್ಯರು ಸನ್ನಿಹಿತರಾಗಿರುತ್ತಾರೆ ಎಂಬ ನಂಬಿಕೆ ಇದೆ.

ನಂತರ ದೇವದಾರಿನ ಮಣೆಯನ್ನು ಶುದ್ಧವಾಗಿ ತೊಳೆದಿಟ್ಟುಕೊಳ್ಳಬೇಕು. ಸಾಧ್ಯವಾದರೆ ಮನೆಯ ವಿಶಾಲವಾದ ಕೊಠಡಿಯಲ್ಲಿ, ಪ್ರದಕ್ಷಿಣೆ ಬರಲಿಕ್ಕೆ ಅನುಕೂಲವಾಗುವಂತೆ ಸ್ಥಳವನ್ನು ಶುದ್ಧ ಮಾಡಿ ರಂಗೋಲಿ ಹಾಕಿ ಅದರ ಮೇಲೆ ಮಣೆ ಇಡಬೇಕು. ದೇವರ ಮನೆಯಲ್ಲಿಯೇ ಮಣೆ ಇಟ್ಟರೆ ಇನ್ನು ಒಳ್ಳೆಯದು.

ದೇವರ ಮನೆಯಲ್ಲಿ ಪ್ರದಕ್ಷಿಣೆ ಹಾಕಲು ಅನುಕೂಲವಿಲ್ಲದಿದ್ದರೆ ಆ ಮಣೆಯ ಮೇಲೆ ಸೂತ್ರ-ಭಾಷ್ಯ-ತತ್ವಪ್ರಕಾಶಿಕಾ-ಚಂದ್ರಿಕಾ ಸಮೇತವಾದ ರಾಘವೇಂದ್ರ ಸ್ವಾಮಿಗಳ ಪ್ರಕಾಶಿಕ ಗ್ರಂಥ, ಪರಿಮಳ ಅಥವಾ ರಾಘವೇಂದ್ರಸ್ವಾಮಿಗಳ ಗ್ರಂಥ ಇಡಬೇಕು. ಅದರ ಹಿಂಭಾಗದಲ್ಲಿ ಪರಮ ಮಂಗಳವಾದ ಮೂಲವೃಂದಾವನದ ಚಿತ್ರವನ್ನಿಡಬೇಕು. ಮಣೆ ಮುಂದೆ ದೀಪವನ್ನು ಹಚ್ಚಿಡಬೇಕು.[ಲಂಡನ್ನಿನಲ್ಲಿ ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವ]

ಹೂಗಳು-ಮಂತ್ರಗಳು :

ಮನೆಯಲ್ಲೇ ಬೆಳೆದ ಹೂಗಳನ್ನು (ಕೊಂಡು ತಂದ ಹೂಗಳು ಪೂಜೆಗೆ ನಿಷಿದ್ಧಾ) ಒಂದು ಪಾತ್ರೆಯಲ್ಲಿಟ್ಟುಕೊಂಡು ವಾದೀಂದರತೀರ್ಥರು ರಚಿಸಿದ ಗುರುಗುಣಸ್ತವನ ಕೃತಿ ಅಥವಾ ಅಪ್ಪಣಾ ಚಾರ್ಯರ ಪರಮಾದ್ಭುತ ರಾಘವೇಂದ್ರಸ್ತೋತ್ರ, ಅಥವಾ ಬಾರದಿದ್ದರೆ ರಾಘವೇಂದ್ರ ಸ್ವಾಮಿ ನಮಃ ಎಂದು ಹೇಳುತ್ತಾ ಹೂಗಳನ್ನು ಏರಿಸಬೇಕು.

ಬಳಿಕ ಎದ್ದು ನಿಂತು ವೇದವ್ಯಾಸ, ಮದ್ವಾಚಾರ್ಯರು, ಮಟ್ಟೀಕಾಕೃತ್ಪಾದರು, ಮಚ್ಚಂದ್ರಕಾಚಾರ್ಯ, ರಾಘವೇಂದ್ರ ಸ್ವಾಮಿಗಳನ್ನು ನೆನೆದು ಮನದಣಿಯೆ, ಮೈದಣಿಯೆ ಶ್ರೀ ಗುರುಭ್ಯೋ ನಮಃ ಎನ್ನುತ್ತಾ ಶ್ರೀ ರಾಘವೇಂದ್ರಾಯ ನಮಃ ಎನ್ನುತ್ತಾ ಮಾಂ ಪಾಹಿ ಮಾಂ ಪಾಹಿ ಎನ್ನುತ್ತಾ ಪ್ರದಕ್ಷಿಣೆ ಬಂದು ನಮಸ್ಕಾರಗಳನ್ನು ಹಾಕಬೇಕು.

ನಂತರ ನಮಗೆ ಈಡೇರಬೇಕಾದ ಕೆಲವು ಬೇಡಿಕೆಗಳನ್ನು ದೇವರ ಮುಂದಿರಿಸಿ ಭಕ್ತಿ ಪೂರ್ವಕವಾಗಿ ನಮಸ್ಕಾರ ಮಾಡಬೇಕು. ಗುರುರಾಯರನ್ನು ಭಕ್ತಿಯಿಂದ ನೆನೆಯಬೇಕು. ಸಾಧ್ಯವಾದರೆ ಕೆಲವರಿಗೆ ಅನ್ನಸಂತಾರ್ಪಣೆ ಏರ್ಪಡಿಸಬೇಕು.

ದಾನ ಧರ್ಮ ಯಾರಿಗೆ?

ರಾಘವೇಂದ್ರ ಸ್ವಾಮಿಗಳು ಜ್ಞಾನ ಪ್ರಿಯರು. ಅವರು ಇಡಿ ಜೀವನದಲ್ಲಿ ವಿದ್ಯಾರ್ಥಿಯಾದಂದಿನಿಂದ ವೃಂದಾವನ ಪ್ರವೇಶ ಮಾಡುವವರೆಗೂ ಅವರು ಪಾಲಿಸಿದ್ದು ಶಾಸ್ತ್ರಗಂಥಗಳ ಅಧ್ಯಯನವನ್ನು.

ಹಾಗಾಗಿ ಎಲ್ಲಿ ಅಧ್ಯಯನ ಅಧ್ಯಾಪನಗಳು, ಪಾಠಪ್ರವಚನಗಳು ನಡೆಯುತ್ತವೋ, ಎಲ್ಲಿ ನಿಸ್ಪೃಹತೆಯಿಂದ ಸಜ್ಜನರಿಗೆ ತತ್ವಗಳು ತಲುಪುತ್ತವೋ ಒಟ್ಟಿನಲ್ಲಿ ಜ್ಞಾನ ಕಾರ್ಯ ನಡೆಯುವಂತಹ ಸ್ಥಳಗಳಿಗೆ ದಾನ ಮಾಡಬೇಕು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು religion ಸುದ್ದಿಗಳುView All

English summary
This story is full enlighten that How to do Raghavendra Swami worship at home.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more