ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

World premier of 'ಕೃಷ್ಣಂ ವಂದೇ ಜಗದ್ಗುರುಂ...'

By Prasad
|
Google Oneindia Kannada News

Special video for Krishna Janmashtami by Srivathsa Joshi
ಶ್ರಾವಣ ಬಹುಳ ಅಷ್ಟಮಿಯಂದು ಬರುವ ಶ್ರೀಕೃಷ್ಣ ಜನ್ಮಾಷ್ಟಮಿ ಹಿಂದೂ ಹಬ್ಬಗಳಲ್ಲಿಯೇ ಅತ್ಯಂತ ವಿಶಿಷ್ಟವಾದ ಹಬ್ಬ. ಹಿರಿಯರಿಗೆ ಮಾತ್ರವಲ್ಲ ಇದು ಪುಟಾಣಿ ಮಕ್ಕಳ ಹಬ್ಬ. ದೇವಸ್ಥಾನಗಳಲ್ಲಿ ತೊಟ್ಟಿಲಲ್ಲಿ ಮಲಗಿರುವ ಮುದ್ದು ಕೃಷ್ಣನನ್ನು ತೂಗುವ ಸಂಭ್ರಮದ ಜೊತೆಗೆ ತಮ್ಮ ಮನೆಯಲ್ಲಿಯೇ ಅಂಬೆಗಾಲಿಡುವ, ಪುಟ್ಟ ಹೆಜ್ಜೆಗಳನ್ನಿಡುವ ಪುಂಡ ಪೋರರಿಗೆ ಕೃಷ್ಣನ ವೇಷ ಹಾಕಿ, ತಾವೇ ಯಶೋಧೆಯಾಗಿ ಮಕ್ಕಳಲ್ಲೇ ಕೃಷ್ಣನನ್ನು ನೋಡುವ, ಲಾಲಿಸುವ ಸಡಗರ ಅಮ್ಮಂದಿರಿಗೆ.

ತನ್ನ ತುಂಟಾಟಗಳಿಂದ ಜಗತ್ತನ್ನೇ ಆಟವಾಡಿಸುವ ಜಗನ್ನಾಟಕದ ಸೂತ್ರಧಾರಿ ಶ್ರೀಕೃಷ್ಣನನ್ನು ಅಲ್ಲಲ್ಲಿ ಏಕೆ ಹುಡುಕುವುದು, ಬೆಣ್ಣೆ ಕಳ್ಳ ನವನೀತ ಚೋರನನ್ನು ಸೀದಾ ನಂದಗೋಕುಲಕ್ಕೇ ಹೋಗಿ ನೋಡಬಹುದು. ಅಂಥದೊಂದು ವಿಶಿಷ್ಟವಾದ ವಿಡಿಯೋವನ್ನು ಅಮೆರಿಕನ್ನಡಿಗ ಶ್ರೀವತ್ಸ ಜೋಶಿ ಅವರು ರೂಪಿಸಿದ್ದಾರೆ. ಕೃಷ್ಣನ ಬಾಲಲೀಲೆಯನ್ನು ನೋಡಿ ಪುಳಕಿತರಾಗಿ ಪುನೀತರಾಗಿರಿ. - ಸಂಪಾದಕ.

ಆಗಸ್ಟ್ 28ರಂದು ಜನ್ಮಾಷ್ಟಮಿ. ಕೃಷ್ಣನನ್ನು ಕರೆತರಲು ಈಗಲೇ ಒಮ್ಮೆ ನಂದಗೋಕುಲಕ್ಕೆ ಹೋಗಿಬರಬಹುದು. ಅಲ್ಲಿ ನಂದಕುಮಾರ ನವನೀತಚೋರನ ಬಾಲಲೀಲೆಗಳನ್ನು ನೋಡಿ ಸಂಭ್ರಮಿಸಬಹುದು. ಮೋಹನಮುರಲಿಯ ನಾದಮಾಧುರ್ಯದಿಂದ ಮುದಗೊಳ್ಳಬಹುದು. ಅದಕ್ಕೆ ಸುಲಭೋಪಾಯವಾಗಿ ಈ ಯೂಟ್ಯೂಬ್ ವಿಡಿಯೋ ನೋಡಬಹುದು!

Making of "ಕೃಷ್ಣಂ ವಂದೇ ಜಗದ್ಗುರುಂ..."

Nickelodeon ಚಾನೆಲ್‌ನಲ್ಲಿ ಬರುತ್ತಿದ್ದ "Little Krishna" computer-animated ಸರಣಿಯ ಆಯ್ದ ಕೆಲವು ವಿಡಿಯೋ ತುಣುಕುಗಳನ್ನು ಪೋಣಿಸಿ, ಅದರ ಮೇಲೆ "ರಾರವೇಣು ಗೋಪಬಾಲ..." ಕರ್ನಾಟಕ ಶಾಸ್ತ್ರೀಯ ಸಂಗೀತ ಕೃತಿಯ (ಕೊಡಮಲೂರು ಜನಾರ್ದನನ್ ಅವರು ಕೊಳಲಿನಲ್ಲಿ ನುಡಿಸಿದ್ದರ ಧ್ವನಿಮುದ್ರಣ) mp3 audio ಜೋಡಿಸಿ, Windows Movie-maker ತಂತ್ರಾಂಶ ಬಳಸಿ ಈ ವಿಡಿಯೋ ತಯಾರಿಸಿದ್ದೇನೆ.

ಕಾಪಿರೈಟ್‌ಗೆ ಧಕ್ಕೆಯಾಗದಂತೆ ಯೂಟ್ಯೂಬ್ ನಿಯಮಗಳನ್ನು ಪಾಲಿಸಿ ಇದನ್ನು ನನ್ನ ಯೂಟ್ಯೂಬ್ ವಾಹಿನಿಗೆ ಸೇರಿಸಿದ್ದೇನೆ. ಕೃಷ್ಣನನ್ನು ಕಣ್ತುಂಬಿಸಿಕೊಳ್ಳಲೆಂದೇ, ಕೃಷ್ಣನ ಕೊಳಲಗಾನ ಎಲ್ಲರ ಕಿವಿಗಳಲ್ಲೂ ತುಂಬಲೆಂದೇ ಇದನ್ನು ಸಂಯೋಜಿಸಿರುವುದು. ನಿಮ್ಮ ಮೆಚ್ಚುಗೆ, ಪ್ರತಿಕ್ರಿಯೆ, ನಿಮ್ಮ ಇಷ್ಟಮಿತ್ರಬಂಧುಬಾಂಧವರೊಡನೆ ಇದನ್ನು ಹಂಚಿಕೊಂಡು ಅವರಿಗೂ ಕೃಷ್ಣಾನುಗ್ರಹ ಸಿಗುವಂತೆ ಮಾಡುವ ಪ್ರಕ್ರಿಯೆ - ಎಲ್ಲವೂ ಶ್ರೀಕೃಷ್ಣಾರ್ಪಣಮಸ್ತು.

ನೋಡಿ ಆನಂದಿಸಿ, ನವನಿಮಿಷಗಳ ನವನೀತ "ಕೃಷ್ಣಂ ವಂದೇ ಜಗದ್ಗುರುಂ..."


[ಕೃಪೆ : ಶ್ರೀವತ್ಸ ಜೋಶಿ ಫೇಸ್ ಬುಕ್]

English summary
World Premier of Krishnam Vande Jagadgurum. Srivathsa Joshi has created a video on Youtube using compute-animated 'Little Krishna' from Nickeldeon channel with flute music by Kodamaloor Janardanan (from the 'Madhava Murali' album). Kodamaloor Janardanan is a famous artist hailing from Kerala. Listen to it and celebrate Krishna Janmashtami.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X