ಸತ್ತಂತಿಹ ಇಂಥವರನ್ನು ಬಡಿದೆಚ್ಚರಿಸುವುದು ಯಾರು?

Mother Bhuvaneshwari neglected
ಯಾದಗಿರಿ, ಅ. 29 : ಕನ್ನಡ ರಾಜ್ಯೋತ್ಸವ ಬರುತ್ತಿದ್ದಂತೆ ಇಡೀ ವರ್ಷ ನಿದ್ದೆಯಲ್ಲೂ ಕನ್ನಡವನ್ನು ಕನವಸಿರದ ಕನ್ನಡ ಮನಸುಗಳು ಜಾಗೃತವಾಗಿಬಿಡುತ್ತವೆ. ಇನ್ನಿಲ್ಲದ ಪ್ರೀತಿ ಕನ್ನಡ ಭಾಷೆಯ ಮೇಲೆ ಉಕ್ಕಿಹರಿಯಲು ಪ್ರಾರಂಭಿಸುತ್ತದೆ. ಆದರೆ, ರಾಜ್ಯೋತ್ಸವ ಮಗ್ಗುಲಲ್ಲಿ ಇರುವಾಗಲೂ ಕನ್ನಡತನ ಸ್ಫುರಿಸದಿದ್ದರೆ ಹೇಗೆ?

ನಮ್ಮ ರಾಜ್ಯದಲ್ಲಿ ಯಾವುದೇ ಚಿಕ್ಕ ಮಗುವಿನ ಮುಂದೆ ಒಂದಿಷ್ಟು ಪೋಟೊ ಹಿಡಿದು ಇದರಲ್ಲಿ ಕನ್ನಡ ತಾಯಿ ಭುವನೇಶ್ವರಿ ಯಾರು ಎಂದು ಕೇಳಿದ್ದಾಗ ಆ ಮಗು ತೋರಿಸುತ್ತದೆ. ಇದಕ್ಕೆ ಹೇಳುವುದು ಸ್ವಾಮೀ ಕನ್ನಡ ಅಭಿಮಾನ ಅನ್ನುವುದು. ಈ ಅಭಿಮಾನ ಯಾದಗಿರಿ ಜಿಲ್ಲಾಡಳಿತಕ್ಕೆ ಇಲ್ಲವೇ?

ಆದರೆ, ಯಾದಗಿರಿಯ ಜಿಲ್ಲಾಡಳಿತ ಮಾತ್ರ ಗಾಢ ನಿದ್ರೆಯಲ್ಲಿ ಮುಳುಗಿದೆ. ಜಿಲ್ಲಾಡಳಿತ 56ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಹ್ವಾನ ಪತ್ರಿಕೆಗಳನ್ನು ಮುದ್ರಿಸಿದೆ. ಆ ಪತ್ರಿಕೆಯ ಮುಖ ಪುಟದಲ್ಲಿ ಭುವನೇಶ್ವರಿ ತಾಯಿ ಭಾವಚಿತ್ರದ ಬದಲು ಭಾರತಾಂಬೆಯ ಭಾವಚಿತ್ರವನ್ನು ಮುದ್ರಿಸಿದ್ದಾರೆ. ಈ ಆಹ್ವಾನ ಪತ್ರಿಕೆ ಪ್ರಮುಖರ ಕೈಗೆ ಈಗಾಗಲೆ ಸೇರಿದೆ.

ಯಾದಗಿರಿ ಜಿಲ್ಲೆ ಶೈಕ್ಷಣಿಕವಾಗಿ ಮಾತ್ರ ಹಿಂದುಳಿದಿಲ್ಲ ಬೌದ್ಧಿಕವಾಗಿಯೂ ಹಿಂದುಳಿದಿದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಕಚ್ಚಾಡುವವರನ್ನು ಕೂಡಿಸಿ ಒಲಿಸಬಹುದು. ಆದರೆ, ಸತ್ತಂತಿಹ ಇಂಥವರನ್ನು ಬಡಿದೆಚ್ಚರಿಸುವುದು ಯಾರು? ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯಶಿವ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+