Get Updates
Get notified of breaking news, exclusive insights, and must-see stories!

October 2023 Festivals List: 2023 ಅಕ್ಟೋಬರ್ ತಿಂಗಳ ಹಬ್ಬಗಳ ಪಟ್ಟಿ: ದಸರಾ, ಗಾಂಧಿ ಜಯಂತಿ, ವಿನಾಯಕ ಚತುರ್ಥಿ ಯಾವಾಗ?

ಅಕ್ಟೋಬರ್ ತಿಂದಳು ಬಂತು ಅಂದರೆ ಸಾಲು ಸಾಲು ಹಬ್ಬಗಳು ಬಂತು ಅಂತಲೇ ಅರ್ಥ. ಹೀಗಾಗಿ ಎಲ್ಲೆಡೆ ಹಬ್ಬದ ಸಡಗರ ಕಣ್ಣಿಗೆ ರಾಚುತ್ತಿದೆ. ಮಾರುಕಟ್ಟೆಗಳಲ್ಲಿ ಇನ್ನೇನು ವ್ಯಾಪಾರ ವಹಿವಾಟು ರಂಗೇರುವ ಸಮಯ ಬರುತ್ತಿದೆ. ಪಿತೃ ಪಕ್ಷದ ಮೂರನೇ ದಿನದಿಂದ ಆರಂಭವಾಗುವ ಈ ಅಕ್ಟೋಬರ್ ತಿಂಗಳಿನಲ್ಲಿ ನಾಡ ಹಬ್ಬ ದಸರಾ ಹಬ್ಬವೂ ಆಚರಿಸಲಾಗುತ್ತದೆ.

ಪ್ರತೀ ವರ್ಷ ಅಕ್ಟೋಬರ್ ತಿಂಗಳು ಹಬ್ಬಗಳು ಮತ್ತು ಉಪವಾಸಗಳಿಂದ ತುಂಬಿರುತ್ತದೆ. ಈ ತಿಂಗಳಲ್ಲಿ ನೀವು ಸಾಕಷ್ಟು ರಜಾದಿನಗಳನ್ನು ಪಡೆಯಲಿದ್ದೀರಿ. ಇದೇ ತಿಂಗಳಲ್ಲಿಮಹಾತ್ಮ ಗಾಂಧಿ ಜಯಂತಿ, ಸೂರ್ಯಗ್ರಹಣ ಮತ್ತು ವಿನಾಯಕ ಚತುರ್ಥಿ ಕೂಡ ಬರಲಿದೆ. ಹಾಗಾದರೆ ಅಕ್ಟೋಬರ್‌ ತಿಂಗಳಿನಲ್ಲಿ ಯಾವೆಲ್ಲಾ ಹಬ್ಬಗಳು ಬರುತ್ತವೆ. ಇದರ ಸಂಪೂರ್ಣ ಪಟ್ಟಿ ಇಲ್ಲಿದೆ.

October 2023 Festivals List: Dussehra, Gandhi Jayanti, Vinayaka Chaturthi

2023 ಅಕ್ಟೋಬರ್ ತಿಂಗಳ ಹಬ್ಬಗಳ ಪಟ್ಟಿ ಹೀಗಿದೆ:-

1 ಅಕ್ಟೋಬರ್ 2023: ಪಿತೃ ಪಕ್ಷದ ಮೂರನೇ ಶ್ರಾದ್ಧ

2 ಅಕ್ಟೋಬರ್ 2023: ಮಹಾತ್ಮ ಗಾಂಧಿ ಜಯಂತಿ,

2 ಅಕ್ಟೋಬರ್ 2023: ಸಂಕಷ್ಟ ಚತುರ್ಥಿ ಉಪವಾಸ

4 ಅಕ್ಟೋಬರ್ 2023: ರೋಹಿಣಿ ಉಪವಾಸ

6 ಅಕ್ಟೋಬರ್ 2023: ಜಿವಿತ್ಪುತ್ರಿಕ ಉಪವಾಸ (ಜಿತಿಯಾ ಉಪವಾಸವು ನೇಪಾಳದ ಬಯಲು ಸೀಮೆಯಲ್ಲಿ ಬಹಳ ಜನಪ್ರಿಯವಾಗಿದೆ)

9 ಅಕ್ಟೋಬರ್ 2023: ಏಕಾದಶಿ ಶ್ರಾದ್ಧ

10 ಅಕ್ಟೋಬರ್ 2023: ಇಂದಿರಾ ಏಕಾದಶಿ (ಈ ಏಕಾದಶಿಯು ಪಿತೃ ಪಕ್ಷದಲ್ಲಿ ಬರುವುದರಿಂದ ಇದರ ಮಹತ್ವ ಹೆಚ್ಚಾಗಿರುತ್ತದೆ. )

11 ಅಕ್ಟೋಬರ್ 2023: ಪ್ರದೋಷ ವ್ರತ (ಪ್ರದೋಷ ವ್ರತ ಅಥವಾ ಪ್ರದೋಷವು ಶಿವ ಮತ್ತು ಪಾರ್ವತಿ ದೇವಿಗೆ ಸಮರ್ಪಿತವಾದ ಜನಪ್ರಿಯ ಹಿಂದೂ ವ್ರತ)

12 ಅಕ್ಟೋಬರ್ 2023: ಮಾಸಿಕ ಶಿವರಾತ್ರಿ (ಮಾಸಿಕ ಶಿವರಾತ್ರಿಯನ್ನು ಪ್ರತಿ ತಿಂಗಳು ಕೃಷ್ಣ ಪಕ್ಷದ 14 ನೇ ತಿಥಿಯಂದು ಆಚರಿಸಲಾಗುತ್ತದೆ)

14 ಅಕ್ಟೋಬರ್ 2023: ಸರ್ವಪಿತೃ ಅಮಾವಾಸ್ಯೆ (ಮಹಾಲಯ ಅಮಾವಾಸ್ಯೆ)

14 ಅಕ್ಟೋಬರ್ 2023: ಸೂರ್ಯಗ್ರಹಣ

15 ಅಕ್ಟೋಬರ್ 2023: ನವರಾತ್ರಿ ಪ್ರಾರಂಭ

15 ಅಕ್ಟೋಬರ್ 2023: ಮಹಾರಾಜ ಅಗ್ರಸೇನ್ ಜಯಂತಿ(ಮಹಾರಾಜ ಅಗ್ರಸೇನ್ ನಮಗೆ ಏಕತೆ ಮತ್ತು ಸಮಾಜದಲ್ಲಿ ಪರಸ್ಪರ ಸಹಾಯ ಮಾಡುವ ಪಾಠವನ್ನು ಕಲಿಸಿದ್ದಾರೆ)

18 ಅಕ್ಟೋಬರ್ 2023: ತುಲಾ ಸಂಕ್ರಾಂತಿ ( ಗರ್ಭಾನ ಸಂಕ್ರಾಂತಿಯನ್ನು ಕಾರ್ತಿಕ ಮಾಸದಲ್ಲಿ ಆಚರಿಸಲಾಗುತ್ತದೆ. ಇದು ಮಹಾ-ಅಷ್ಟಮಿಯ ದಿನದಂದು ಬರುತ್ತದೆ)

18 ಅಕ್ಟೋಬರ್ 2023: ವಿನಾಯಕ ಚತುರ್ಥಿ

19 ಅಕ್ಟೋಬರ್ 2023: ಉಪಾಂಗ ಲಲಿತಾ ವ್ರತ (ಲಲಿತಾ ಪಂಚಮಿಯಂದು ಉಪವಾಸ ಮಾಡುವುದು ಒಂದು ಪ್ರಮುಖ ಆಚರಣೆಯಾಗಿದೆ)

20 ಅಕ್ಟೋಬರ್ 2023: ಸರಸ್ವತಿ ಆವಾಹನೆ (ನವರಾತ್ರಿ ಹಬ್ಬದ ಸಪ್ತಮಿ ಅಂದರೆ ಏಳನೇ ದಿನದಂದು ಸರಸ್ವತಿ ದೇವಿಯನ್ನು ಆರಾಧನೆ ಮಾಡಲು ಆವಾಹನೆ ಮಾಡಲಾಗುತ್ತದೆ. )

20 ಅಕ್ಟೋಬರ್ 2023: ಸ್ಕಂದ ಷಷ್ಠಿ (ಈ ವ್ರತವನ್ನು ಪ್ರತಿ ತಿಂಗಳ ಶುಕ್ಲ ಪಕ್ಷದ ಮತ್ತು ಕೃಷ್ಣ ಪಕ್ಷದ ಷಷ್ಠಿ ತಿಥಿಯಂದು ಆಚರಿಸಲಾಗುತ್ತದೆ)

21 ಅಕ್ಟೋಬರ್ 2023: ಸರಸ್ವತಿ ಪೂಜೆ

22 ಅಕ್ಟೋಬರ್ 2023: ದುರ್ಗಾಷ್ಟಮಿ

23 ಅಕ್ಟೋಬರ್ 2023: ಮಹಾನವಮಿ, ಶಾರದೀಯ ನವರಾತ್ರಿಯ ಅಂತ್ಯ, ಬಂಗಾಳ ಮಹಾನವಮಿ.

24 ಅಕ್ಟೋಬರ್ 2023: ನವರಾತ್ರಿ ಪರಣ, ವಿಜಯದಶಮಿ ಅಥವಾ ದಸರಾ

24 ಅಕ್ಟೋಬರ್ 2023: ಬುದ್ಧ ಜಯಂತಿ

25 ಅಕ್ಟೋಬರ್ 2023: ಪಾಪಾಂಕುಶ ಏಕಾದಶಿ (ಪಾಪಾಂಕುಶ ಏಕಾದಶಿ ವ್ರತದ ಪ್ರಭಾವದಿಂದ ವ್ಯಕ್ತಿಗೆ ಜನನ ಮರಣದ ಬಂಧನದಿಂದ ಮುಕ್ತಿ ದೊರೆಯುತ್ತದೆ)

26 ಅಕ್ಟೋಬರ್ 2023: ಪ್ರದೋಷ ವ್ರತ (ಪ್ರದೋಷ ವ್ರತ ಅಥವಾ ಪ್ರದೋಷವು ಶಿವ ಮತ್ತು ಪಾರ್ವತಿ ದೇವಿಗೆ ಸಮರ್ಪಿತವಾದ ಜನಪ್ರಿಯ ಹಿಂದೂ ವ್ರತ)

28 ಅಕ್ಟೋಬರ್ 2023: ಶರದ್ ಪೂರ್ಣಿಮಾ ವ್ರತ

28 ಅಕ್ಟೋಬರ್ 2023: ಮಹರ್ಷಿ ವಾಲ್ಮೀಕಿ ಜಯಂತಿ

28 ಅಕ್ಟೋಬರ್ 2023: ಖಂಡಗ್ರಾಸ ಚಂದ್ರಗ್ರಹಣ, ಕಾರ್ತಿಕ ಸ್ನಾನ ಆರಂಭ

29 ಅಕ್ಟೋಬರ್ 2023: ಕಾರ್ತಿಕ ಮಾಸ ಪ್ರಾರಂಭ

29 ಅಕ್ಟೋಬರ್ 2023: ಚಂದ್ರಗ್ರಹಣ

ನವರಾತ್ರಿ ಅಥವಾ ದಸರಾ ಹಬ್ಬ

ದಸರಾ ಹಬ್ಬ ಅಶ್ವಿನ ಮಾಸದ ನವರಾತ್ರಿಯು ಶರತ್ಕಾಲದಲ್ಲಿ ಪ್ರಾರಂಭವಾಗುತ್ತದೆ. ಆದ್ದರಿಂದ ಇದನ್ನು ಶಾರದೀಯ ನವರಾತ್ರಿ ಎಂದು ಕರೆಯುತ್ತಾರೆ. ಈ ಬಾರಿಯ ನವರಾತ್ರಿಯು 9 ದಿನಗಳ ಕಾಲ 2023 ರ ಅಕ್ಟೋಬರ್ 15 ರಿಂದ ಪ್ರಾರಂಭವಾಗಿ ಅಕ್ಟೋಬರ್ 23, 2023 ಸೋಮವಾರದಂದು ಕೊನೆಗೊಳ್ಳುತ್ತದೆ, ಮರುದಿನ ವಿಜಯದಶಮಿ ಹಬ್ಬವನ್ನು ಆಚರಿಸಲಾಗುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+