Navratri 2024: ನವರಾತ್ರಿ ದಿನಾಂಕ, ಸಮಯ ಮತ್ತು ಮಹತ್ವದ ಬಗ್ಗೆ ಪ್ರಮುಖ ಮಾಹಿತಿ ಇಲ್ಲಿದೆ...
ನವರಾತ್ರಿ ಹಿಂದೂ ಧರ್ಮದ ದೊಡ್ಡ ಹಬ್ಬ. ಈ ಹಬ್ಬವನ್ನು ಒಂಬತ್ತು ದಿನಗಳು ಆಚರಿಸಲಾಗುತ್ತದೆ. ಈ ಒಂಬತ್ತು ದಿನಗಳಲ್ಲಿ ಭಕ್ತರು ದುರ್ಗಾ ದೇವಿಯನ್ನು ಪೂಜಿಸುತ್ತಾರೆ. ನವರಾತ್ರಿ ಹಬ್ಬ ಭಾರತದಲ್ಲಿ ಬಹಳ ಪ್ರಸಿದ್ಧವಾಗಿದೆ. ಒಂದು ವರ್ಷದಲ್ಲಿ ನಾಲ್ಕು ನವರಾತ್ರಿಗಳು ಬರುತ್ತವೆ. ಇವುಗಳಲ್ಲಿ ಒಂದು ಚೈತ್ರ ನವರಾತ್ರಿ, ಇನ್ನೊಂದು ಶಾರದ್ ನವರಾತ್ರಿ, ಗುಪ್ತ ನವರಾತ್ರಿ, ಮುಂಬರುವ ನವರಾತ್ರಿ ಶಾರದೀಯ ನವರಾತ್ರಿ ಆಗಿದೆ.
ಇದು ಕೆಡಕಿನ ವಿರುದ್ಧ ಒಳಿತಿನ ವಿಜಯವನ್ನು ಸ್ಮರಿಸುವ ಹಬ್ಬವಾಗಿದೆ. ಈ ವರ್ಷ ಶಾರದೀಯ ನವರಾತ್ರಿಯು ಅಕ್ಟೋಬರ್ 3 ರಿಂದ ಪ್ರಾರಂಭವಾಗಿ ಅಕ್ಟೋಬರ್ 11 ರವರೆಗೆ ಇರುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಶಾರದೀಯ ನವರಾತ್ರಿಯಲ್ಲಿ ದುರ್ಗದ ಒಂಬತ್ತು ರೂಪಗಳನ್ನು ಪೂಜಿಸುವುದು ಮಂಗಳಕರವಾಗಿದೆ. ಈ ಒಂಬತ್ತು ದಿನಗಳ ಕಾಲ ದುರ್ಗಾ ದೇವಿಯನ್ನು ಪೂಜಿಸುವುದರಿಂದ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಸಂಪತ್ತು ಸಿಗುತ್ತದೆ ಎಂಬ ನಂಬಿಕೆ ದಶಕಗಳಿಂದಲೂ ಇದೆ.

ದಂತಕಥೆ
ಹಿಂದೂ ಪುರಾಣಗಳ ಪ್ರಕಾರ, ರಾಕ್ಷಸ ರಾಜ ಮಹಿಷಾಸುರನು ಆಕ್ರಮಣ ಮಾಡಿ ಭೂಮಿ, ಸ್ವರ್ಗ ಮತ್ತು ನರಕದ 3 ಲೋಕಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾನೆ. ಆಗ ಅವನನ್ನು ಕೊಲ್ಲಲು ಹೆಚ್ಚಿನ ಶಕ್ತಿ ಬೇಕಾಯಿತು. ಅಲ್ಲದೆ ಸೃಷ್ಟಿಕರ್ತನಾದ ಬ್ರಹ್ಮನು ಮಹಿಷಾಶರನ್ನು ಸೋಲಿಸಲು ಶಕ್ತಿಯುತ ಮಹಿಳೆಗೆ ಮಾತ್ರ ಸಾಧ್ಯ ಎಂದು ವರವನ್ನು ನೀಡಿದ್ದನು.
ಆದ್ದರಿಂದ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಶಿವರು ತಮ್ಮ ಶಕ್ತಿಯನ್ನು ಒಟ್ಟುಗೂಡಿಸಿ ದುರ್ಗಾ ದೇವಿಯನ್ನು ಅಂದರೆ ಪರಾಶಕ್ತಿಯನ್ನು ರಾಕ್ಷಸ ರಾಜ ಮಹಿಷಾಸುರನನ್ನು ಸಂಹರಿಸಲು ಸೃಷ್ಟಿಸಿದರು ಎಂದು ಹಿಂದೂ ಪುರಾಣ ಹೇಳುತ್ತದೆ. 15 ದಿನಗಳ ಸುದೀರ್ಘ ಯುದ್ಧದ ನಂತರ, ಪರಾಶಕ್ತಿಯು ಮಹಾಲಯ ಅಮವಾಸ್ಯೆಯಂದು ತ್ರಿಶೂಲದಿಂದ ಅವನನ್ನು ಕೊಂದಳು. ಹೀಗಾಗಿ 9 ದಿನಗಳ ಕಾಲ ಭಕ್ತರು ಪರಾಶಕ್ತಿಯ 9 ವಿವಿಧ ರೂಪಗಳು ಮತ್ತು ಅವತಾರಗಳಲ್ಲಿ ಪೂಜಿಸುತ್ತಾರೆ.

ಶಾರದೀಯ ನವರಾತ್ರಿಯ ಮಹತ್ವ
ಶಾರದೀಯ ನವರಾತ್ರಿಯು ಯಾವಾಗಲೂ ಅಶ್ವಿನ್ ಮಾಸದ ಶುಕ್ಲ ಪಕ್ಷದ ಪ್ರತಿಪದದಂದು ಪ್ರಾರಂಭವಾಗುತ್ತದೆ ಎಂದು ಧಾರ್ಮಿಕ ಗ್ರಂಥಗಳು ಹೇಳುತ್ತವೆ. ದುರ್ಗಾ ಮಾತೆಯ ಭಕ್ತರು ಒಂಬತ್ತು ದಿನಗಳ ಕಾಲ ಉಪವಾಸ ಮಾಡಿ ಪೂಜಿಸುತ್ತಾರೆ. ದುರ್ಗಾ ಸ್ತೋತ್ರ ಮತ್ತು ದುರ್ಗಾ ಚಾಲೀಸಾವನ್ನು ಪಠಿಸುತ್ತಾರೆ. ನವರಾತ್ರಿಯಲ್ಲಿ ದುರ್ಗಾ ದೇವಿಯನ್ನು ಭಕ್ತಿಯಿಂದ ಪೂಜಿಸಿದರೆ, ಅವಳು ಆಶೀರ್ವದಿಸಿ ತಮ್ಮ ಎಲ್ಲಾ ಇಷ್ಟಾರ್ಥಗಳನ್ನು ಪೂರೈಸುತ್ತಾಳೆ ಎಂದು ಹಿಂದೂಗಳು ನಂಬುತ್ತಾರೆ. ಹೀಗಾಗಿ ಈ ಸಂದರ್ಭದಲ್ಲಿ ಶ್ರದ್ಧಾ ಭಕ್ತಿಯಿಂದ ದೇವಿಯನ್ನು ಪೂಜಿಸಲಾಗುತ್ತದೆ.
ಉಪವಾಸದ ವಿಧಾನ
ಹಿಂದೂ ಪದ್ಧತಿಯ ಪ್ರಕಾರ, ಜನರು ಈ ಒಂಬತ್ತು ದಿನಗಳ ಕಾಲ ನಿರಂತರವಾಗಿ ಉಪವಾಸ ಮಾಡುತ್ತಾರೆ. ಬೆಳಿಗ್ಗೆಯಿಂದ ಉಪವಾಸ ಮಾಡುವುದರಿಂದ ದೇಹದಲ್ಲಿರುವ ಹೆಚ್ಚುವರಿ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಇಂದಿನ ಯುಗದಲ್ಲಿ ದೇಹದಲ್ಲಿರುವ ಅಧಿಕ ಕೊಬ್ಬಿನಿಂದಾಗಿ ಅನೇಕ ರೋಗಗಳು ಬರುತ್ತಿವೆ. ಈ ಚಳಿಗಾಲದಲ್ಲಿ ಉಪವಾಸದಿಂದಾಗಿ ಅವು ಬಹಳಷ್ಟು ಕರಗುವ ಸಾಧ್ಯತೆಯಿದೆ. ಅದೂ ಅಲ್ಲದೆ ಇದು ಶರತ್ಕಾಲದಿಂದ ಚಳಿಗಾಲಕ್ಕೆ ಸಾಗುವ ಸಂಕ್ರಮಣ ಕಾಲ.. ಈ ಚಳಿ ಮನುಷ್ಯನ ದೇಹದಲ್ಲಿ ಬದಲಾವಣೆಗಳನ್ನು ಉಂಟು ಮಾಡಿ ರೋಗಗಳಿಗೆ ದಾರಿ ಮಾಡಿಕೊಡುತ್ತದೆ. ಅದರಿಂದ ನಮ್ಮನ್ನು ರಕ್ಷಿಸಿಕೊಳ್ಳುವ ವ್ಯಾಯಾಮವಾಗಿ ಈ ನವರಾತ್ರಿ ಉಪವಾಸಗಳನ್ನು ಮಾಡಲಾಗುತ್ತದೆ.
ಈ ದಿನಗಳಲ್ಲಿ ಕೆಲವರು ನೀರು ಮಾತ್ರ ಕುಡಿದು ದಿನವಿಡೀ ಉಪವಾಸವಿದ್ದು ಸಂಜೆ ಮಾತ್ರ ಅಲ್ಪಾಹಾರ ಸೇವಿಸುತ್ತಾರೆ. ಇನ್ನೂ ಕೆಲವರು ಸಾತ್ವಿಕ ಆಹಾರವನ್ನು ಮಾತ್ರ ಸೇವಿಸುತ್ತಾರೆ. ಇನ್ನೂ ಕೆಲವರು ಒಂದು ಹೊತ್ತಿನ ಆಹಾರವನ್ನು ಮಾತ್ರ ತ್ಯಜಿಸುತ್ತಾರೆ. ಹೀಗೆ ಬೆಳಿಗ್ಗೆ ಸೂರ್ಯೂದಯಕ್ಕೂ ಮುಂಚೆ ಎದ್ದು ಸ್ನಾನ ಮಾಡಿ ಪೂಜೆ ಮಾಡಿ ಉಪವಾಸವನ್ನು ಮಾಡುವ ಭಕ್ತರಿಗೆ ಬಹುಬೇಗ ದೇವಿಯ ಆಶೀರ್ವಾದವನ್ನು ಪಡೆಯಬಹುದು ಎಂಬ ನಂಬಿಕೆ ಇದೆ. ಹೀಗಾಗಿ ಈ ದಿನಗಳಲ್ಲಿ ಅಚ್ಚುಕಟ್ಟಾಗಿ ನವರಾತ್ರಿಯನ್ನು ಆಚರಿಸಲಾಗುತ್ತದೆ.
ಶಾರದೀಯ ನವರಾತ್ರಿ 2024 ಯಾವಾಗ? ದಿನಾಂಕ ಮತ್ತು ಸಮಯ
ಪ್ರತಿ ವರ್ಷ ನವರಾತ್ರಿ ಉತ್ಸವ ಮಹಾಲಯ ಅಮಾವಾಸ್ಯೆ ನಂತರ ಬರುವ ದಿನದಿಂದ ಪ್ರಾರಂಭವಾಗಿ ದಶಮಿ ತಿಥಿಯವರೆಗೆ 10 ದಿನಗಳ ಕಾಲ ಆಚರಿಸಲಾಗುತ್ತದೆ. ಈ ವರ್ಷ ಅಕ್ಟೋಬರ್ 2 ರಂದು ಮಹಾಲಯ ಅಮಾವಾಸ್ಯೆ ಆಚರಿಸಲಾಗುವುದು. ಇದರ ನಂತರ ಅಕ್ಟೋಬರ್ 3 ರ ಗುರುವಾರದಿಂದ ಅಕ್ಟೋಬರ್ 12 ರ ಶನಿವಾರದವರೆಗೆ ನವರಾತ್ರಿ ಉತ್ಸವವನ್ನು ಆಚರಿಸಲಾಗುತ್ತದೆ. ಅಕ್ಟೋಬರ್ 11ರಂದು ದುರ್ಗಾಷ್ಟಮಿ ಅಥವಾ ಸರಸ್ವತಿ ಪೂಜೆಯನ್ನು ಆಚರಿಸಲಾಗುತ್ತದೆ. ಅಕ್ಟೋಬರ್ 12 ರಂದು ವಿಜಯದಶಮಿ ಹಬ್ಬವನ್ನು ಆಚರಿಸಲಾಗುವುದು.
ಸಮಯ
ಅಕ್ಟೋಬರ್ 3ರಂದು ಮಧ್ಯಾಹ್ನ 12.18ಕ್ಕೆ ನವರಾತ್ರಿ ಆರಂಭವಾಗಲಿದೆ. ಈ ದಿನಾಂಕ ಅಕ್ಟೋಬರ್ 4 ರಂದು 02.58 ಕ್ಕೆ ಕೊನೆಗೊಳ್ಳುತ್ತದೆ. ಸನಾತನ ಧರ್ಮದ ಪ್ರಕಾರ ದಿನವು ಸೂರ್ಯೋದಯದೊಂದಿಗೆ (12 AM ಅಲ್ಲ) ಪ್ರಾರಂಭವಾಗುತ್ತದೆ ಎಂಬುದನ್ನು ಗಮನಿಸುವುದು ಮುಖ್ಯ. ಆದ್ದರಿಂದ ಶಾರದೀಯ ನವರಾತ್ರಿಯು ಅಕ್ಟೋಬರ್ 3 ರಂದು ಪ್ರಾರಂಭವಾಗುತ್ತದೆ.
ಈ ಶಾರದೀಯ ನವರಾತ್ರಿಯ ಒಂಬತ್ತು ದಿನಗಳಲ್ಲಿ ಭಕ್ತರು ದುರ್ಗೆಯ 9 ಅವತಾರಗಳನ್ನು ಪೂಜಿಸಲಾಗುತ್ತದೆ. ಹಾಗಾದರೆ ಯಾವ ದಿನ ಯಾವ ದೇವಿಯನ್ನು ಪೂಜಿಸಲಾಗುತ್ತದೆ ಎಂದು ತಿಳಿಯೋಣ.
ಅಕ್ಟೋಬರ್ 3ರಂದು ಶೈಲಪುತ್ರಿ
ಅಕ್ಟೋಬರ್ 4ರಂದು ಬ್ರಹ್ಮಚಾರಿಣಿ
ಅಕ್ಟೋಬರ್ 5ರಂದು ಚಂದ್ರಘಂಟಾ
ಅಕ್ಟೋಬರ್ 6ರಂದು ಕೂಷ್ಮಾಂಡಾ
ಅಕ್ಟೋಬರ್ 7ರಂದು ಸ್ಕಂದ ಮಾತೆ
ಅಕ್ಟೋಬರ್ 8ರಂದು ಕಾತ್ಯಾಯನಿ
ಅಕ್ಟೋಬರ್ 9ರಂದು ಕಾಳರಾತ್ರಿ
ಅಕ್ಟೋಬರ್ 10ರಂದು ಸಿದ್ದಿದಾತ್ರಿ
ಅಕ್ಟೋಬರ್ 11ರಂದು ಮಹಾಗೌರಿ
ಅಕ್ಟೋಬರ್ 12ರಂದು ವಿಜಯದಶಮಿ ಆಚರಿಸಲಾಗುತ್ತದೆ.
-
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ












Click it and Unblock the Notifications