Navratri 2024 Day 3: ನವರಾತ್ರಿ 3ನೇ ದಿನ ಅ.5, ಚಂದ್ರಘಂಟಾ ಪೂಜೆ ಮಹತ್ವ, ಮುಹೂರ್ತ, ಮಂತ್ರ
ನವರಾತ್ರಿಯು ಹಿಂದೂಗಳ ಪ್ರಮುಖ ಹಬ್ಬವಾಗಿದೆ. ನವರಾತ್ರಿಯಲ್ಲಿ ಪ್ರತಿದಿನ ದೇವಿಯ ವಿಭಿನ್ನ ರೂಪವನ್ನು ಪೂಜಿಸಲಾಗುತ್ತದೆ. ಈ ಬಾರಿ ಶಾರದೀಯ ನವರಾತ್ರಿ ಅಕ್ಟೋಬರ್ 3 ರಿಂದ ಆರಂಭವಾಗಿದೆ. ನವರಾತ್ರಿಯ ಮೂರನೇ ದಿನವಾದ ಅಕ್ಟೋಬರ್ 5, ಶನಿವಾರದಂದು ಮಾತೆ ಚಂದ್ರಘಂಟಾ ರೂಪವನ್ನು ಪೂಜಿಸಲಾಗುತ್ತದೆ. ದೇವಿಯ ಈ ರೂಪವನ್ನು ಪೂಜಿಸುವುದರಿಂದ ಎಲ್ಲಾ ತೊಂದರೆಗಳಿಂದ ಪರಿಹಾರವನ್ನು ಪಡೆಯಬಹುದು. ಚಂದ್ರಘಂಟಾ ದೇವಿಯ ಪೂಜಾ ವಿಧಾನ, ಮಂಗಳಕರ ಸಮಯ, ಆರತಿ, ಮಂತ್ರ ಮತ್ತು ಕಥೆಯನ್ನು ಮತ್ತಷ್ಟು ತಿಳಿಯಿರಿ...
5 ಅಕ್ಟೋಬರ್ ಪೂಜಾ ಸಮಯ
- 07:51 ರಿಂದ 09:19 ರವರೆಗೆ
- 11:51 ರಿಂದ 12:38 ರವರೆಗೆ (ಅಭಿಜೀತ್ ಮುಹೂರ್ತ)
ಮಧ್ಯಾಹ್ನ 12:15 ರಿಂದ 01:42 ರವರೆಗೆ
- 03:10 ರಿಂದ 04:38 ಬೆಳಿಗ್ಗೆ

ಚಂದ್ರಘಂಟಾ ದೇವಿಯ ಆರಾಧನಾ ವಿಧಾನ
- ಅಕ್ಟೋಬರ್ 5 ಶನಿವಾರದಂದು ಮುಂಜಾನೆ ಸ್ನಾನ ಇತ್ಯಾದಿಗಳನ್ನು ಮಾಡಿದ ನಂತರ, ಮನೆಯಲ್ಲಿ ಸ್ವಚ್ಛವಾದ ಸ್ಥಳದಲ್ಲಿ ಚಂದ್ರಘಂಟಾ ದೇವಿಯ ಚಿತ್ರವನ್ನು ಪ್ರತಿಷ್ಠಾಪಿಸಿ.
- ಚಂಧ್ರಘಂಟಾ ದೇವಿಯ ವಿಗ್ರಹವನ್ನು ಕೇಸರಿ, ಗಂಗಾಜಲ, ಹೂವಿನ ನೀರಿನಲ್ಲಿ ಸ್ನಾನ ಮಾಡಿಸಿ ಮೇಜಿನ ಮೇಲೆ ಇರಿಸುವ ಮೂಲಕ ಪೂಜೆ ಪ್ರಾರಂಭವಾಗುತ್ತದೆ.
- ಆಕೆಗೆ ಚಿನ್ನದ ಬಣ್ಣದ ಬಟ್ಟೆಗಳನ್ನು ಹೊದಿಸಿ, ಕಮಲದ ಹೂವುಗಳನ್ನು ಇಡಲಾಗುತ್ತದೆ.
- ಮೊದಲನೆಯದಾಗಿ ದೇವಿಗೆ ತಿಲಕವನ್ನು ಹಚ್ಚಿ ಮತ್ತು ಹೂವಿನ ಹಾರವನ್ನು ಹಾಕಿ. ಇದರ ನಂತರ ಕುಂಕುಮ, ಅಕ್ಕಿ, ಬಳೆ, ಮೆಹಂದಿ, ಇತ್ಯಾದಿ ಅಲಂಕಾರಿಕ ವಸ್ತುಗಳನ್ನು ಇಡಿ.
- ಬಳಿಕ ದೇವಿಗೆ ಸಿಹಿತಿಂಡಿಗಳು, ಪಂಚಾಮೃತವನ್ನು ಅರ್ಪಿಸಲಾಗುತ್ತದೆ.
ಮಂತ್ರ (11 ಬಾರಿ ಪಠಿಸಿ)
ಪಿಂಡಜ ಪ್ರವರಾರೂಢಾ ಚಂಡಕೋಪಾಸ್ತ್ರಕಾರ್ಯುತಾ ।
ಪ್ರಸಾದಂ ತನುತೇ ಮಹಾಯಂ ಚಂದ್ರಘಂಟೇತಿ ವಿಶ್ರುತಾ॥
ಚಂದ್ರಘಂಟಾ ಯಾರು?
ಜನಪ್ರಿಯ ಕಥೆಯ ಪ್ರಕಾರ, ಪ್ರಾಚೀನ ಕಾಲದಲ್ಲಿ ಮಹಿಷಾಸುರ ಎಂಬ ರಾಕ್ಷಸನಿದ್ದನು. ಅವನು ದೇವತೆಗಳಿಗೆ ತೊಂದರೆ ಕೊಡುತ್ತಿದ್ದನು. ನಂತರ ಎಲ್ಲಾ ದೇವರುಗಳು ತ್ರಿಮೂರ್ತಿಗಳ ಬಳಿಗೆ ಹೋದರು. ನಂತರ ತ್ರಿಮೂರ್ತಿಗಳು ತಮ್ಮ ಶಕ್ತಿಯಿಂದ ದೇವತೆಯನ್ನು ರೂಪಿಸಿದರು. ಈ ದೇವಿಯನ್ನು ದುರ್ಗಾ ಎಂದು ಕರೆಯಲಾಯಿತು. ದೇವಿಯ ತಲೆಯ ಮೇಲೆ ಚಂದ್ರನು ಕುಳಿತಿದ್ದರಿಂದ ಅವಳ ಹೆಸರು ಚಂದ್ರಘಂಟಾ ಎಂದು ಬಂತು. ಈ ದೇವಿಯು ಮಹಿಷಾಸುರನೊಂದಿಗೆ ಹೋರಾಡಿ ಅವನನ್ನು ಕೊಂದಳು.

ಚಂದ್ರಘಂಟಾ ಹೇಗಿದ್ದಾಳೆ?
ಚಂದ್ರಘಂಟಾ ದೇವಿ ಪಾರ್ವತಿ ದೇವಿಯ ಮೂರನೇ ಅವತಾರ. ಈಕೆಗೆ ಹತ್ತು ಕೈಗಳಿವೆ. ಹತ್ತೂ ಕೈಗಳಲ್ಲಿ ಶಸ್ತ್ರಾಸ್ತ್ರವನ್ನು ಹಿಡಿದುಕೊಂಡು ಸಿಂಹವಾಹಿನಿಯಾಗಿ ರಾರಾಜಿಸುತ್ತಾಳೆ.
ಕಠಿಣ ತಪ್ಪಿಸಿನ ಮೂಲಕ ಶಿವನನ್ನು ಮೆಚ್ಚಿಸಿ ಮದುವೆಯಾಗಲು ತೀರ್ಮಾನಿಸುತ್ತಾಳೆ ಹಿಮವಂತ ಹಾಗೂ ಮೈನಾ ದೇವಿಯ ಮಗಳು. ಮದುವೆ ಮೆರವಣಿಗೆಯಲ್ಲಿ ಶಿವನು ಸ್ಮಶಾನವಾಸಿಯಾಗಿ ಇರುತ್ತಾನೆ. ಬೂದಿಯಿಂದ ಮುಚ್ಚಲ್ಪಟ್ಟ ಶರೀರ, ಕೊರಳಿನಲ್ಲಿ ಸುತ್ತಿದ ಹಾವು, ಗಂಟಿನಂತಿರುವ ಜಟೆ, ಅವನೊಂದಿಗೆ ದೆವ್ವಗಳು, ಪಿಶಾಚ, ಗಣಗಳು, ಋಷಿಮುನಿಗಳು, ಅಘೋರಿಗಳು ಇರುತ್ತಾರೆ. ಇದನ್ನು ನೋಡಿ ಪಾರ್ವತಿಯ ತಾಯಿ ಮೂರ್ಛೆ ಹೋಗುತ್ತಾಳೆ.
ಇದನ್ನು ಕಂಡು ಶಿವನಿಗೆ ಮುಜುಗರವಾಗದಿರಲಿ ಎಂದು ಭಯಾನಕ ರೂಪವಾಗಿ ಚಂಧ್ರಘಂಟೆಯಾಗಿ ಪರಿವರ್ತನೆಯಾಗುತ್ತಾಳೆ. ಚಿನ್ನದ ಮೈಬಣ್ಣವನ್ನು ಹೊಂದಿದ ಚಂದ್ರ ಘಂಟೆಯು ಹತ್ತುಗಳಲ್ಲಿ ಒಂದೊಂದು ಆಯುಧಗಳನ್ನು ಹಿಡಿದಿರುತ್ತಾಳೆ. ಒಂದರಲ್ಲಿ ತ್ರಿಶೂಲ, ಗದೆ, ಬಿಲ್ಲು ಬಾಣ, ಖಡ್ಗ, ಕಮಲ, ಘಂಟೆ, ಕಂಡಲ ಹಾಗೂ ಅಭಯ ಮುದ್ರೆಯಿಂದ ಸಿಂಹವಾಹಿನಿಯಾಗಿ ರೂಪ ತಾಳುತ್ತಾಳೆ. ಆಗ ಶಿವನಿಗೆ ನಿಜ ರೂಪ ತಾಳಲು ಚಂದ್ರಘಂಟೆ ಪ್ರೇರೇಪಿಸುತ್ತಾಳೆ. ಪಾರ್ವತಿಯ ಮಾತಿಗೆ ಒಪ್ಪಿದ ಶಿವನು ತನ್ನ ನಿಜರೂಪ ತಾಳುತ್ತಾನೆ. ಇದರಿಂದ ಮದುವೆಯಲ್ಲಿದ್ದವರು ಅಚ್ಚರಿಗೊಳ್ಳುತ್ತಾರೆ. ಬಳಿಕ ಇವರಿಬ್ಬರ ಮದುವೆ ನಡೆಯುತ್ತದೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications