ಆಡಿಸಿದಳೆಶೋದೆ
ಪುರಂದರದಾಸ
ಜಗದೋದ್ಧಾರನ ಆಡಿಸಿದಳೆಶೋದೆ । ಪಲ್ಲವಿ ।
ಜಗದೋದ್ಧಾರನ ಮಗನೆಂದು ತಿಳಿಯುತ
ಸುಗುಣಾಂತರಂಗನ ಆಡಿಸಿದಳೆಶೋದೆ । ಅನುಪಲ್ಲವಿ ।
ನಿಗಮಕೆ ಸಿಲುಕದ ಅಗಣಿತ ಮಹಿಮನ
ಮಗುಗಳ ಮಾಣಿಕ್ಯನಾ ಆಡಿಸಿದಳೆಶೋದೆ
ಅಣೋರಣೀಯನ ಮಹತೋಮಹೀಯನ
ಅಪ್ರಮೇಯನ ಆಡಿಸಿದಳೆಶೋದೆ
ಪರಮ ಪುರುಷನ ಪರ ವಾಸುದೇವನ
ಪುರಂದರ ವಿಠಲನ ಆಡಿಸಿದಳೆಶೋದೆ












Click it and Unblock the Notifications