ಅಮ್ಮನಿಗೇನು ಗಿಫ್ಟ್ ?
ಮುದ್ದಿನ ಅಮ್ಮನ ನೆನಸಿಕೊಳ್ಳಲೊಂದು ಸುವರ್ಣಾವಕಾಶ . ಮನೆಯಾಚೆ ಇರುವ ನೀವು ಅಮ್ಮನಿಗೆ ಈ ಬಾರಿ ಏನು ಕೊಡುವಿರಿ? ಉಡುಗೊರೆ ಕೊಡುವ ಮನಸ್ಸು ನಿಮ್ಮದಾದರೆ, ಅದನ್ನು ತಲುಪಿಸುವ ಹೊಣೆ ನಮ್ಮದು !
ಕಣ್ಣಿಗೆ ಕಾಣೋ ದೇವರು ಎಂದರೆ ಅಮ್ಮನು ತಾನೇ?!
ಈ ಬಗ್ಗೆ ಯಾರಿಗೂ ಕ್ವಚಿತ್ ಅನುಮಾನವೂ ಇರಲಾರದು. ಆಚರಣೆಗಾಗಿ ಎಷ್ಟೆಲ್ಲಾ ದಿನಗಳು ಹುಟ್ಟಿಕೊಂಡಿವೆ. ವ್ಯಾಲಂಟೈನ್ಸ್ ಡೇ, ಫಾದರ್ಸ್ ಡೇ, ಫ್ರೆಂಡ್‌ಷಿಪ್ ಡೇ, ವುಮನ್ಸ್ ಡೇ ಹೀಗೆ. ಅದೆಲ್ಲಿಂದ ಬೀಜ ಹಾರಿ ಬಂದು, ನಮ್ಮ ಭಾರತದ ನೆಲದಲ್ಲಿ ಮೊಳೆತು ಬಿಟ್ಟಿತೋ ಗೊತ್ತಿಲ್ಲ. ತಿಂಗಳಿಗೊಂದಾದರೂ, ಒಬ್ಬರದ್ದಾದರೂ ದಿನಾಚರಣೆ ! ಈ ಪೈಕಿ ಮದರ್ಸ್ ಡೇ ಕೂಡ ಹತ್ತರಲ್ಲಿ ಒಂದು ಎನ್ನುವಂತಿಲ್ಲ . ಎಲ್ಲರಂಥಲ್ಲದ ಅಮ್ಮನಂತೆಯೇ, ಅಮ್ಮಂದಿರ ದಿನಕ್ಕೂ ಇತರ ಆಚರಣೆಗಳಿಗಿಲ್ಲದ ಹಿರಿಮೆ.
ಈ ದಿನಾಚರಣೆ ನಮ್ಮ ನೆಲದಲ್ಲೇ ಹುಟ್ಟದಿದ್ದರೂ, ಮಾತೃದೇವೋಭವ ಎಂಬ ನುಡಿ ಚಿರ ಸ್ಥಾಯಿ. ಅದಕ್ಕೇ ಅಮ್ಮನಿಗೆ ಮನ್ನಣೆ. ಆಕೆಗೇ ಮೊದಲ ಮಣೆ. ಎಲ್ಲೇ ಯಾರಿಗೇ ನೋವಾದರೂ ಕೂಗುವುದು ಆಕೆಯನ್ನೇ. ಅಮ್ಮನ ನೆನೆಯಲೊಂದು ನೆವವಾಗಿ ಮದರ್ಸ್ ಡೇ ಮೆರುಗು ಪಡಕೊಂಡಿದೆ. ಸುಮ್ಮನೆ ಮನದಲ್ಲಿ ನೆನೆದರಾದೀತೆ? ಸಾಗರದಾಚೆ ಸಾವಿರಾರು ಮೈಲು ದೂರ ಹೋಗಿ, ನಿಮ್ಮ ಒಂದು ಫೋನಿನ ಕರೆಗೆ ತುಡಿಯುತ್ತಿರುವ ಅಮ್ಮನಿಗೆ ಪುಟ್ಟ ಉಡುಗೊರೆ ಕೊಟ್ಟರೂ ಸಾಕು, ಹಾಯ್ ಎನಿಸುತ್ತದೆ. ಕಣ್ಣು ತುಂಬಿ ಬರುತ್ತದೆ.
ಕಳ್ಳು ಬಳ್ಳಿಯ ಈ ಸಂಬಂಧದಿಂದ ಇಂಡಿಯಾಇನ್ಫೋಗೂ ವ್ಯಾಪಾರ ಕುದುರಿದೆ. ಪ್ರತಿದಿನದ ಶಾಪಿಂಗ್ ಆರ್ಡರ್‌ಗಳಲ್ಲಿ ಪ್ರತಿಶತ 32ರಷ್ಟು ಏರಿಕೆಯಾಗಿದೆ. ಇದಕ್ಕೆ ಕಾರಣ ಅಮ್ಮನ ದಿನ. ದೂರದೂರಿನ ಮ್ಮನಿಗೆ ಉಡುಗೊರೆ ಕಳಿಸಲು ಅನಿವಾಸಿ ಭಾರತೀಯರಿಗೆ ಇಂಟರ್ನೆಟ್ಟೇ ರಾಜಮಾರ್ಗ. ಎಲ್ಲೇ ಇರಿ, ಹೇಗೇ ಇರಿ, ಅಮ್ಮನಿಗೊಂದು ಗುಲಾಬಿಯನ್ನೋ ಚಾಕೊಲೇಟನ್ನೋ ಕಳಿಸಿದರೂ ಸಾಕು; ಆಕೆಯ ಹೃದಯ ಮಾರ್ದ್ರವವಾಗುತ್ತದೆ ಎನ್ನುತ್ತಾರೆ ಇಂಡಿಯಾಇನ್ಫೋ ಡಾಟ್ ಕಾಂನ ಇ- ಕಾಮರ್ಸ್ ಮೇನೇಜರ್.
ಗ್ರಾಹಕರು ಏನು ಹೇಳುತ್ತಾರೆ ಗೊತ್ತೆ?
ಮೇರಿಲ್ಯಾಂಡಿನ ಸಂಧ್ಯಾ- ಅಮ್ಮನಿಗೆ ಉಡುಗೊರೆ ಕೊಡುವುದೇ ಒಂದು ಹಿತಕರ ಅನುಭವ. ಕೆಲವು ವರ್ಷಗಳ ಹಿಂದೆ ಇದು ಸಾಧ್ಯವಾಗುತ್ತಿರಲಿಲ್ಲ. ಈಗ ಬೆರಳ ತುದಿಯಲ್ಲೇ ಅಮ್ಮನಿಗೆ ಗಿಫ್ಟ್ ಕೊಡಬಲ್ಲೆನೆಂಬ ಸಾರ್ಥಕ್ಯ ನನ್ನದು. ಅಮ್ಮ ಕೂಡ ನನ್ನ ಗಿಫ್ಟ್‌ಗೆ ಇದಿರು ನೋಡುತ್ತಿರುತ್ತಾರೆ. ಈ ಸಲ ಅಮ್ಮನಿಗೆ ನನ್ನ ಉಡುಗೊರೆ ಸೀರೆ.
ಮಿಷಿಗನ್‌ನ ಪ್ರೊ.ಕೃಷ್ಣ- ಅಮ್ಮನ ದಿನಾಚರಣೆ ಭಾರತೀಯ ಸಂಪ್ರದಾಯದ ಹಬ್ಬವೇನಲ್ಲ. ಆದರೂ ಅಮ್ಮನಿಗೆ ಏನಾದರೂ ಉಡುಗೊರೆ ಕೊಡಲು ಇದೊಂದು ನೆವ, ಅವಕಾಶ ಅಂತಲೂ ಅನ್ನಬಹುದು. ದೂರದೂರಿನ ಅಮ್ಮನಿಗೆ ನಾನು ಈ ಬಾರಿ ಉಡುಗೊರೆಯಾಗಿ ಮೈಕ್ರೋವೇವ್ ಕೊಟ್ಟಿದ್ದೇನೆ. ಆಕೆಯ ಜೀವನಕ್ಕೆ ಇದು ಉಪಯೋಗವಾಗುತ್ತದೆಂಬ ಆಶಯ ನನ್ನದು. ಸೀರೆಗಳು, ಮೈಕ್ರೋವೇವ್ ಓವೆನ್‌ಗಳು ಮತ್ತು ಮುತ್ತಿನ ಕಂಠೀಹಾರ ಈ ಸಲ ಬಿರುಬಿರುಸಾಗಿ ಬಿಕರಿಯಾಗುತ್ತಿರುವ ಅಮ್ಮನ ದಿನದ ಉಡುಗೊರೆಗಳು. ಎಲ್ಲವನ್ನೂ ಮೀರಿಸಿರುವುದು ಹೂವುಗಳೇ.
ಅಂದಹಾಗೆ, ನೀವು ನಿಮ್ಮ ಅಮ್ಮನಿಗೆ ಏನು ಉಡುಗೊರೆ ಕೊಡುವಿರಿ? ಮನಸ್ಸು ನಿಮ್ಮದು, ಅದರ ಹೊಣೆ ನಮ್ಮದು.












Click it and Unblock the Notifications