August Festival List 2025: ಆಗಸ್ಟ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳು ಯಾವುದು? ಇಲ್ಲಿದೆ ನೋಡಿ
ಹಿಂದೂ ಧರ್ಮದಲ್ಲಿ ವರ್ಷವಿಡೀ ಹಬ್ಬ ಹರಿದಿನಗಳು, ಧಾರ್ಮಿಕ ಆಚರಣೆಗಳಿಗೆ ಯಾವುದೇ ಕೊರತೆಯಿಲ್ಲ. ಆಗಸ್ಟ್ ತಿಂಗಳಲ್ಲಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಹಬ್ಬಗಳು ಭಾರತೀಯರು ವಿಜೃಂಭಣೆಯಿಂದ ಆಚರಿಸುತ್ತಾರೆ. ಆಗಸ್ಟ್ ತಿಂಗಳು ಆರಂಭವಾಗಿದ್ದು, ಈ ತಿಂಗಳಲ್ಲಿ ಹಬ್ಬಗಳ ಪಟ್ಟಿ ನಮ್ಮ ಮುಂದಿದೆ. ಹಾಗಾದ್ರೆ ವರ್ಷದ ಎಂಟನೇ ತಿಂಗಳಾದ ಆಗಸ್ಟ್‌ನಲ್ಲಿ ಆಚರಣೆಗೆ ಬರುವ ಪ್ರಮುಖ ಹಬ್ಬಗಳು ಮತ್ತು ವಿಶೇಷ ದಿನಗಳು ಯಾವುದು ಎನ್ನುವ ಬಗ್ಗೆ ಸಂಪೂರ್ಣ ಮಾಹಿರಿ ಇಲ್ಲಿದೆ ನೋಡಿ
2025 ವರ್ಷದಲ್ಲಿ ಎಂಟನೇ ತಿಂಗಳಿಗೆ ಕಾಲಿಟ್ಟಿದ್ದೇವೆ. ದಿನಗಳು, ತಿಂಗಳುಗಳು ಉರುಳಿದ್ದೇ ತಿಳಿಯುತ್ತಿಲ್ಲ. ಆದಾಗಲೇ ಈ ವರ್ಷದ ಎಂಟನೇ ತಿಂಗಳಾದ ಆಗಸ್ಟ್‌ಗೆ ಕಾಲಿಟ್ಟಿದ್ದು, ಈ ತಿಂಗಳಲ್ಲಿ ಪ್ರಮುಖ ಹಬ್ಬಗಳು ಹಾಗೂ ವ್ರತ ಆಚರಣೆಗಳಿವೆ. ಈ ತಿಂಗಳ ಮೊದಲ ವಾರದಲ್ಲೇ ವರಮಹಾಲಕ್ಷ್ಮಿ ವ್ರತವಿದ್ದು, ಇನ್ನು ಶ್ರೀಕೃಷ್ಣಜನ್ಮಾಷ್ಠಮಿ, ಗಣೇಶ ಚತುರ್ಥಿ ಹೀಗೆ ಪ್ರಮುಖ ಹಬ್ಬಗಳು, ಧಾರ್ಮಿಕ ಚಟುವಟಿಕೆಗಳಿಂದ ಈ ತಿಂಗಳಲ್ಲಿ ಕೂಡಿದೆ. ಹಾಗಾದ್ರೆ ವರ್ಷದ ಎಂಟನೇ ತಿಂಗಳಾದ ಆಗಸ್ಟ್‌ನಲ್ಲಿ ಆಚರಿಸಲಾಗುವ ಹಬ್ಬಗಳು ಹಾಗೂ ವ್ರತಗಳ ಬಗೆಗಿನ ಸಂಪೂರ್ಣ ತಿಳಿಯಿರಿ.

ಈ ತಿಂಗಳ ಆರಂಭದಲ್ಲಿ ವರಮಹಾಲಕ್ಷ್ಮೀ ವ್ರತವನ್ನ ಹಿಂದೂಗಳು ತುಂಬಾ ಭಕ್ತಿಭಾವದಿಂದ ಆಚರಿಸುತ್ತಾರೆ. ಗೃಹಲಕ್ಷ್ಮಿಯನ್ನು ಪೂಜಿಸುವ ಈ ಹಬ್ಬ ಮಹಿಳೆಯರ ಅತ್ಯಂತ ಆರಾಧನಾ ದಿನವಾಗಿದ್ದು, ಈ ವರ್ಷ ಆಗಸ್ಟ್ ತಿಂಗಳಲ್ಲಿ ಆಚರಿಸಲಾಗುತ್ತದೆ. ಈ ತಿಂಗಳು ರಕ್ಷಾ ಬಂಧನವನ್ನ ಅಣ್ಣ-ತಂಗಿ, ಅಕ್ಕ-ತಮ್ಮಂದಿರು ಆಚರಿಸುತ್ತಾರೆ. ಸೋದರಿಯರು ತಮ್ಮ ಸಹೋದರರ ರಕ್ಷಣೆಗೆ ರಾಖಿ ಕಟ್ಟುವ ಹಬ್ಬ, ಕುಟುಂಬ ಬಂಧಗಳನ್ನು ಬಲಪಡಿಸುತ್ತದೆ. ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಈ ತಿಂಗಳು ಆಚರಿಸಲಾಗುತ್ತದೆ. ಶ್ರೀ ಕೃಷ್ಣ ಪರಮಾತ್ಮನ ಪೌರಾಣಿಕ ಜನ್ಮದಿನ, ಶ್ರದ್ಧೆ ಮತ್ತು ಭಕ್ತಿಯಿಂದ ಮನೆಮನೆಗಳಲ್ಲಿ ಆಚರಣೆ ಮಾಡಲಾಗುತ್ತದೆ.
ಇನ್ನೂ ಮಹಿಳೆಯರು ಈ ತಿಂಗಳು ಸ್ವರ್ಣ ಗೌರಿ ವ್ರತವನ್ನು ಆಚರಿಸುತ್ತಾರೆ. ಗೌರಿ ದೇವಿಯನ್ನು ಪೂಜಿಸುವ ವಿಶೇಷ ಮಹಿಳಾ ವ್ರತವಾಗಿದೆ. ಹಿಂದೂಗಳು ಗಣೇಶ ಚತುರ್ಥಿಯನ್ನ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ಗಣಪತಿಯ ಆವಾಹನೆ, ಪ್ರತಿಷ್ಠಾಪನೆ ಮತ್ತು ಪೂಜೆ, ಎಲ್ಲೆಡೆ ಸಮೂಹ ಪೂಜೆಗಳು ನಡೆಯುತ್ತವೆ. ಇನ್ನೂ ಸ್ವಾತಂತ್ರ್ಯ ದಿನಾಚರಣೆಯನ್ನ ಹಬ್ಬದಂತೆ 15 ಆಗಸ್ಟ್ ಆಚರಿಸಲಾಗುತ್ತದೆ. ಭಾರತ ದೇಶದ ಸ್ವಾತಂತ್ರ್ಯ ರಾಷ್ಟ್ರ ಮಟ್ಟದ ವಿಶೇಷ ದಿನವಾಗಿದೆ.
ಆಗಸ್ಟ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ
ಆಗಸ್ಟ್ 2 - ಮಹಾನಕ್ಷತ್ರ ಆಶ್ಲೇಷಾ
ಆಗಸ್ಟ್ 2 - ಶ್ರಾವಣ ಶನಿವಾರ
ಆಗಸ್ಟ್ 5 - ಪ್ರದೋಷ
ಆಗಸ್ಟ್ 8 - ವರಮಹಾಲಕ್ಷ್ಮಿ ವ್ರತ
ಆಗಸ್ಟ್ 9 - ಹಯಗ್ರೀವ ಜಯಂತಿ
ಆಗಸ್ಟ್ 9 - ಹುಣ್ಣಿಮೆ
ಆಗಸ್ಟ್ 10- ಶ್ರಾವಣ ಕೃಷ್ಣಪಕ್ಷ
ಆಗಸ್ಟ್ 11 - ಶ್ರೀರಾಘವೇಂದ್ರ ಆರಾಧನೆ
ಆಗಸ್ಟ್ 12 - ಸಂಕಷ್ಟಹರ ಚತುರ್ಥಿ
ಆಗಸ್ಟ್ 14- ಬಲರಾಮ ಜಯಂತಿ
ಆಗಸ್ಟ್ 16 - ಸಿಂಹ ಸಂಕ್ರಮಣ
ಆಗಸ್ಟ್ 16 - ಚಾಂದ್ರ ಶ್ರೀಕೃಷ್ಣ ಜನ್ಮಾಷ್ಠಮಿ
ಆಗಸ್ಟ್ 17 - ಶ್ರೀಕೃಷ್ಣ ಲೀಲೋತ್ಸವ
ಆಗಸ್ಟ್ 20 - ಸರ್ವೈಕಾದಶಿ ಅಜಾ
ಆಗಸ್ಟ್ 20- ಪ್ರದೋಷ
ಆಗಸ್ಟ್ 21 - ಮಾಸಶಿವರಾತ್ರಿ
ಆಗಸ್ಟ್ 23 - ಅಮಾವಾಸ್ಯಾ
ಆಗಸ್ಟ್ 23 - ಶ್ರಾವಣ ಶನಿವಾರ
ಆಗಸ್ಟ್ 24 - ಭಾದ್ರಪದ ಶುಕ್ಲ ಪಕ್ಷ
ಆಗಸ್ಟ್ 26 - ಗೌರಿ ತೃತೀಯಾ
ಆಗಸ್ಟ್ 26 - ಸಾಮೋಪಕರ್ಮ
ಆಗಸ್ಟ್ 27 - ಗಣೇಶ ಚತುರ್ಥ
ಆಗಸ್ಟ್ 28 - ಋಷಿ ಜಯಂತ
ಆಗಸ್ಟ್ 28 - ಭೂವರಾಹ ಜಯಂತಿ
ಆಗಸ್ಟ್ 29 - ಸೂರ್ಯಷಷ್ಠಿ
ಆಗಸ್ಟ್ 30 - ನಿರ್ದೋಷ್ಟ ಸಪ್ತಮಿ ವ್ರತ
ಆಗಸ್ಟ್ 30 - ಮಹಾನಕ್ಷತ್ರ ಹುಬ್ಬಾ
ಆಗಸ್ಟ್ 31 - ದೂರ್ವಾಷ್ಟಮಿ
-
ಇಂಧನ ಪೂರೈಕೆ ಕೊರತೆ ಭೀತಿ: 2026ರಲ್ಲಿ ನೀವು ಖರೀದಿಸಬಹುದಾದ ಟಾಪ್ ಎಲೆಕ್ಟ್ರಿಕ್ ಸ್ಕೂಟರ್ ಗಳು ಇಲ್ಲಿವೆ -
Jobs: ಹೈಕೋರ್ಟ್ನಲ್ಲಿ ಕೆಲಸ ಬೇಕೆ? 70 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು












Click it and Unblock the Notifications