Laksha Deepotsava 2024: ಭೋಗನಂದೀಶ್ವರಸ್ವಾಮಿ ದೇವಾಲಯದಲ್ಲಿ ಲಕ್ಷದೀಪೋತ್ಸವ: ಹೊಸ ಬ್ರಹ್ಮರಥದ ಉತ್ಸವ ಕಣ್ತುಂಬಿಕೊಂಡ ಜನ
ಚಿಕ್ಕಬಳ್ಳಾಪುರ ನವೆಂಬರ್ 26: ಕಾರ್ತಿಕ ಮಾಸದ ಕೊನೆ ಸೋಮವಾರದ ಪ್ರಯುಕ್ತ ಚಿಕ್ಕಬಳ್ಳಾಪುರ ಜಿಲ್ಲೆಯ ದೇವಾಲಯಗಳಲ್ಲಿ ಲಕ್ಷ ದೀಪೋತ್ಸವ ಹಾಗೂ ವಿಶೇಷ ಪೂಜೆಗಳು ವಿಜೃಂಭಣೆಯಿಂದ ನಡೆದವು. ನಗರದ ಪ್ರಸಿದ್ಧ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ, ವಿಶೇಷ ಪೂಜೆ ಹಾಗೂ ಲಕ್ಷ ದೀಪೋತ್ಸವದ ಜೊತೆಗೆ ಬ್ರಹ್ಮರಥೋತ್ಸವನ್ನು ಭಕ್ತರು ನೂರಾರು ಸಂಖ್ಯೆಯಲ್ಲಿ ನೆರೆದು ಕಣ್ತುಂಬಿಕೊಂಡರು.
ನಂದಿ ಗ್ರಾಮದ ಶ್ರೀ ಭೋಗನಂದೀಶ್ವರಸ್ವಾಮಿ, ಗೌರಿಬಿದನೂರಿನ ರಾಮಲಿಂಗೇಶ್ವರ ಸ್ವಾಮಿ ಜಾತ್ರೋತ್ಸವ, ಕಲ್ಲಿನಾಥೇಶ್ವರ ಕಲ್ಯಾಣೋತ್ಸವ, ಚಿಂತಾಮಣಿಯ ಕೈವಾರ ತಾತಯ್ಯನವರ ಮೂರ್ತಿಗೆ ವಿವಿಧ ಪುಷ್ಪಾಲಂಕಾರ, ಗುಡುಬಂಡೆ ತಾಲೂಕಿನ ಚಂದ್ರಮೌಳೇಶ್ವರ ಲಕ್ಷ ದೀಪೋತ್ಸವ, ವೀರಾಂಜನೇಯ ಸ್ವಾಮಿ ದೇಗುಲದ ಶಿವಲಿಂಗಕ್ಕೆ ಅರಿಶಿನ ಅಲಂಕಾರ, ಅಂತರಗಂಗೆಯ ಕಾಶಿ ವಿಶ್ವೇಶ್ವರ ಸ್ವಾಮಿ, ಚೇಳೂರು ತಾಲೂಕಿನ ಸೀತಾ ರಾಮಾಂಜನೇಯ ಸ್ವಾಮಿ ಮತ್ತು ಮಲ್ಲಿಕಾರ್ಜುನ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ದೀಪೋತ್ಸವ ಸೇರಿದಂತೆ ಜಿಲ್ಲೆಯ ಹಲವು ದೇವಾಲಯದಲ್ಲಿ ವಿಶೇಷ ಅಲಂಕಾರ, ವಿಶೇಷ ಪೂಜೆ ಹಾಗೂ ಲಕ್ಷ ದೀಪೋತ್ಸವದ ಜತೆಗೆ ಬ್ರಹ್ಮರಥೋತ್ಸ ಭಕ್ತಸಾಗರದ ನಡುವೆ ಅದ್ದೂರಿಯಾಗಿ ನೆರವೇರಿತು.

ಶ್ರೀ ಭೋಗನಂದೀಶ್ವರಸ್ವಾಮಿ ದೇವಸ್ಥಾನದಲ್ಲಿ ಧಾರ್ಮಿಕ ಕೈಂಕರ್ಯಗಳು ಭಾನುವಾರದಿಂದಲೇ ಪ್ರಾರಂಭವಾಗಿದ್ದವು. ಸೋಮವಾರ ಬೆಳಗ್ಗೆಯಿಂದಲೇ ಹೋಮ ಹವನ, ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ದೇವಾಲಯವನ್ನು ವಿವಿಧ ಬಗೆಯ ಹೂಗಳಿಂದ ಶೃಂಗಾರ ಮಾಡಲಾಗಿತ್ತು. ಜಿಲ್ಲೆ ಸೇರಿ ವಿವಿಧಡೆಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶಿವನ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಬ್ರಹ್ಮರಥ ಅರ್ಪಣೆ:
ದೇವಾಲಯಕ್ಕೆ ಸೇವಾ ರೂಪದಲ್ಲಿ ಸುಮಾರು 2 ಕೋಟಿ ರೂ.ವೆಚ್ಚದ ಅತ್ಯಾಧುನಿಕ ಮತ್ತು ಕಲಾ ನೈಪುಣ್ಯವುಳ್ಳ ನೂತನ ರಥ ನೀಡಲಾಗಿದ್ದು, ಕೊನೆ ಕಾರ್ತಿಕ ಸೋಮವಾರ ಹಿನ್ನಲೆ ವಿಶೇಷ ಬ್ರಹ್ಮರಥೋತ್ಸವದ ಮೂಲಕ ದೇವಾಲಯಕ್ಕೆ ಅರ್ಪಿಸಲಾಯಿತು. ಬೆಳಗ್ಗೆಯೇ ಬ್ರಹ್ಮರಥಕ್ಕೆ ವಿಶೇಷ ಹೂವಿನ ಅಲಂಕಾರದೊಂದಿಗೆ ದೇವರ ಮರವಣಿಗೆ ನಡೆಯಿತು. ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಲಕ್ಷ ದೀಪೋತ್ಸವದ ಮೆರುಗು:
ಸಂಜೆ ಭೋಗನಂದೀಶ್ವರ ದೇವಾಲಯದಲ್ಲಿ ಕಾರ್ತಿಕ ಮಾಸದ ಕಡೇ ಸೋಮವಾರ ಪ್ರಯುಕ್ತ ಲಕ್ಷ ದೀಪೋತ್ಸವ ವಿಜೃಂಭಣೆಯಿಂದ ನಡೆಯಿತು. ಭಕ್ತರ ದಂಡು ಬೆಳಗ್ಗೆಯಿಂದಲೇ ದೇಗುಲಕ್ಕೆ ಭೇಟಿ ನೀಡಿ ಸರತಿ ಸಾಲಿನಲ್ಲಿ ನಿಂತು ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದರು. ಸಂಜೆಯಾಗುತ್ತಲೇ ಸಾವಿರಾರು ಭಕ್ತರು ದೀಪಗಳನ್ನು ಬೆಳಗಿ ಪೂಜೆ ಸಲ್ಲಿಸಿದರು.
ನಗರದ ಕೋಟೆಯಲ್ಲಿರುವ ಶ್ರೀ ಚನ್ನಕೇಶವಸ್ವಾಮಿ, ವರಸಿದ್ದಿ ವಿನಾಯಕ, ಕೆಳಗಿನ ತೋಟಗಳಲ್ಲಿನ ಎಸ್ಎಸ್‌ಎಸ್ ದೇವಾಲಯ, ಗಂಗಮ್ಮ ದೇವಾಲಯ, ಮಹಾಕಾಳಿ ದೇವಾಲಯ, ಬಿ.ಬಿ. ರಸ್ತೆಯ ಚಾಮುಂಡೇಶ್ವರಿ ದೇವಾಲಯ ಸೇರಿದಂತೆ ಬಹುತ್ತೇಶ ಎಲ್ಲ ದೇವಾಲಯಗಳಲ್ಲಿ ಕಾರ್ತಿಕ ಮಾಸದ ಕಡೇ ಸೋಮವಾರದ ಪ್ರಯುಕ್ತ ವಿವಿಧ ಧಾರ್ಮಿಕ ಕೈಂಕರ್ಯಗಳೊಂದಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ಹಲವದ ಲಕ್ಷದೀಪೋತ್ಸವ ನಡೆಯಿತು. ಪೂಜೆಗೆ ಭಕ್ತರಿಗೆ ಅನ್ನದಾನ, ಪ್ರಸಾದ ವಿನಿಯೋಗ ಮಾಡಲಾಯಿತು.
ನಗರದ ಎಂ.ಜಿ. ರಸ್ತೆಯ ಮರುಳಸಿದ್ದೇಶ್ವರಸ್ವಾಮಿ ದೇವಾಲಯದಲ್ಲಿ ಮರುಳಸಿದ್ದೇಶ್ವರ ಸ್ವಾಮಿ ಹಾಗೂ ಗಂಗಾಧರೇಶ್ವರ ಸ್ವಾಮಿಗೆ ಸಾವಿರ ಲೀಟರಿನ ಹಾಲಿನ ಅಭಿಷೇಕ ಏರ್ಪಡಿಸಲಾಗಿತ್ತು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ದೇವರಿಗೆ ಹಾಲಿನ ಅಭಿಷೇಕ ಮಾಡಿ, ತೀರ್ಥ ಪ್ರಸಾದ ಸ್ವೀಕರಿಸಿದರು.

ತೇರಿನ ಉತ್ಸವ ಸಹಜವಾಗಿ ಶಿವರಾತ್ರಿ ಆಚರಣೆ ಸಂದರ್ಭದಲ್ಲಿ ನಾವು ಬೃಹತ್ ರಥವು ಸಂಚರಿಸುತ್ತಿತ್ತು ಇದೇ ಮೊದಲ ಬಾರಿಗೆ 2.5 ಕೋಟಿ ರೂಪಾಯಿ ವೆಚ್ಚದಲ್ಲಿ ಆಕರ್ಷಕವಾಗಿ ನಿರ್ಮಿಸಿರುವ 52 ಅಡಿ ಎತ್ತರದ ರಥದ ಸಂಚಾರದಿಂದ ನಂದಿ ಜಾತ್ರೆಯ ಸಂಭ್ರಮ ಇಮ್ಮಡಿಗೊಂಡಿತ್ತು. ರಥದಾನಿ ವೆಂಕಟೇಗೌಡ ಕುಟುಂಬವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಬಹುತವನ್ನು ದೇಗುಲಕ್ಕೆ ಸಮರ್ಪಿಸಿತು ದೇವರನ್ನು ಒತ್ತಾರೋ ಆಲಯವನ್ನು ಪ್ರದಕ್ಷಿಣೆ ಹಾಕಿತು ಭಕ್ತರು ವಿಶೇಷ ಪೂಜೆ ಸಲ್ಲಿಸಿದರು ಪ್ರತಿ ವರ್ಷದಂತೆ ದೇಗುಲಕ್ಕೆ ಜಿಲ್ಲೆ ಮಾತ್ರವಲ್ಲವೇ ಬೆಂಗಳೂರು ನಗರ, ಗ್ರಾಮಾಂತರ, ತುಮಕೂರು, ಆಂಧ್ರ ಸೇರಿ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿದ್ದರು. ಸರದಿ ಸಾಲಿನಲ್ಲಿ ಬಂದು ಭಕ್ತರು ದೇವರ ದರ್ಶನ ಪಡೆದರು ಮುಂಜಾಗ್ರತಾ ಕ್ರಮವಾಗಿ ಬ್ಯಾರಿಕೇಡ್ ಅಳವಡಿಸಲಾಗಿತ್ತು ಇನ್ನು ದೀಪೋತ್ಸವ ವಿದ್ಯುತ್ ದೀಪಲಂಕಾರದಿಂದ ರಾಜ ಮಹಾರಾಜರ ಕಾಲದ ದೇಗುಲವು ಜಗಮಗಿಸುತ್ತಿತ್ತು.
ಭಕ್ತರು ದೇವರ ದರ್ಶನ ಪಡೆದುಕೊಳ್ಳಲು ಸರದಿ ಸಾಲಿನಲ್ಲಿ ತೆರಳಲು ತಾತ್ಕಾಲಿಕವಾಗಿ ಹಗ್ಗಗಳನ್ನು ಕಟ್ಟಿದ್ದು, ಆಗಾಗ ನೂಕು ನುಗ್ಗಲು ಆಗುವ ಜೊತೆಗೆ ಹೊರಗಿನವರು ಬಂದು ಸರದಿ ಸಾಲಿನಲ್ಲಿ ಸೇರಿಕೊಳ್ಳುತ್ತಿದ್ದರಿಂದ ಮಾತಿನ ಚಕಮಕಿಯು ಸಹ ನಡೆಯುತ್ತಿದ್ದ ದೃಶ್ಯ ಕಂಡು ಬಂದಿದ್ದು, ಕೆಲ ಭಕ್ತರು ಸೂಕ್ತ ರೀತಿಯಲ್ಲಿ ವ್ಯವಸ್ಥೆ ಮಾಡಬೇಕಿತ್ತು, ಸ್ವಯಂ ಸೇವಕರು ತಮ್ಮ ಪರಿಚಿತರನ್ನು ಸರತಿ ಸಾಲಿನ ಒಳಗೆ ಸೇರಿಸುತ್ತಿದ್ದರಿಂದ ಆಕ್ರೋಶ ವ್ಯಕ್ತಪಡಿಸುತ್ತಿದ್ದರು.
ಅಪ್ಪು ಇವೆಂಟ್ಸ್ ವತಿಯಿಂದ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಹಲವು ಗಾಯಕರು ಹಾಡುಗಳನ್ನು ಹಾಡುವ ಮೂಲಕ ನೆರೆದಿದ್ದ ಭಕ್ತರನ್ನು ರಂಜಿಸುತ್ತಿದ್ದರು. ತೆಲುಗು ಹಾಡುಗಳು, ಅದರಲ್ಲೂ ಕೆಲ ಅಸಹ್ಯ ಹುಟ್ಟಿಸುವ ಅಶ್ಲೀಲ ಅರ್ಥ ಕೊಡುವ ಹಾಡುಗಳನ್ನು ದೇವಾಲಯದ ಆವರಣದೊಳಗೆ ಹಾಡುತ್ತಿದ್ದರಿಂದ ಕೆಲ ಭಕ್ತಾಧಿಗಳು ಬೇಸರ ವ್ಯಕ್ತಪಡಿಸುತ್ತಿದ್ದರು. ದೇವಾಲಯಕ್ಕೆ ಆಗಮಿಸಿದ ಸಾವಿರಾರು ಭಕ್ತರಿಗೆ ದೇವಾಲಯದ ಸಮಿತಿಯ ವತಿಯಿಂದ ಅನ್ನಸಂತರ್ಪಣಾ ಹಮ್ಮಿಕೊಳ್ಳಲಾಗಿತ್ತು.
ಸೂಕ್ತ ಬಂದೋಬಸ್ತ್ -
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ದೇವಾಲಯದ ಒಳಗೆ ಮತ್ತು ಹೊರಗೆ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು, ಹೆಚ್ಚಿನ ಜನ ಸಂದಣಿ ಇದ್ದಿದ್ದರಿಂದ ಟ್ರಾಫಿಕ್ ಸಮಸ್ಯೆ ತಲೆದೊರಿತ್ತು, ಸೂಕ್ತ ರೀತಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡದ ಹಿನ್ನಲೆಯ್ಲಲಿ ಸ್ವಲ್ಪ ಸಮಸ್ಯೆಯು ಉಂಟಾಗಿತ್ತು.
-
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ ದರ ಇಳಿಕೆ: ಇಲ್ಲಿದೆ ಮಾರ್ಚ್ 6ರ ದರಪಟ್ಟಿ -
Karnataka Budget 2026 PDF: ಕರ್ನಾಟಕ ಬಜೆಟ್ 2026-27 ಪಿಡಿಎಫ್ ಡಾಕ್ಯುಮೆಂಟ್ ಇಲ್ಲಿ ಡೌನ್ಲೋಡ್ ಮಾಡಿ -
ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ -
ಹೊಸ 800 ಕೆಪಿಎಸ್ ಶಾಲೆ, ಇಂಗ್ಲಿಷ್ ಭಾಷಾ ತರಬೇತಿ: ಕರ್ನಾಟಕ ಬಜೆಟ್ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಭರಪೂರ ಘೋಷಣೆ -
Karnataka Budget 2026: 100 ಹೊಸ ಸ್ಕೈವಾಕ್, ಟನಲ್ ರಸ್ತೆ ಸೇರಿ ಕರ್ನಾಟಕ ಬಜೆಟ್ನಲ್ಲಿ ಬೆಂಗಳೂರಿಗೆ ಸಿಕ್ಕಿದ್ದೇನು? -
ರೈತರಿಗೆ ಮಾಲ್, ಮಂಡ್ಯ ಸಾವಯ ಕೃಷಿ: ಅಡಿಕೆ - ತೆಂಗು ಬೆಳಗಾರರಿಗೂ ಬಂಪರ್, ಮೇಕೆದಾಟು ಯೋಜನೆಗೆ ಅಸ್ತು -
Karnataka Property: ಇ-ಆಸ್ತಿ, ಏಕೀಕೃತ ಆಸ್ತಿ ತೆರಿಗೆ ಸಂಯೋಜನೆ: ಕರ್ನಾಟಕದಲ್ಲಿ ಆಸ್ತಿ ನಿರ್ವಹಣೆಗೆ ಹೊಸ ನಿಯಮ -
Karnataka Budget 2026: ಕರ್ನಾಟಕ ಬಜೆಟ್ 2026: ಬಜೆಟ್ ಗ್ರಾತ ಕಳೆದ ಬಾರಿಗಿಂತ 40 ಸಾವಿರ ಕೋಟಿ ರೂ. ಹೆಚ್ಚಳ -
ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಬಸ್ ನಿಲ್ದಾಣಗಳಲ್ಲಿ ಬಜೆಟ್ ನೇರ ಪ್ರಸಾರ, ವಿಶೇಷವೇನು -
ರಷ್ಯಾದಿಂದ ತೈಲ ಖರೀದಿಸಲು ಭಾರತಕ್ಕೆ 30 ದಿನಗಳ ಅನುಮತಿ ಕೊಟ್ಟ ಅಮೆರಿಕ












Click it and Unblock the Notifications