ನಿಮ್ಮ ಬೆಣ್ಣೆ ಕದಿಯುವ ಕೃಷ್ಣ, ನೋಡಿ ನಗುವ ರಾಧೆ ನಮ್ಮ ಗ್ಯಾಲರಿಯಲ್ಲಿ ಕಾಣಿಸಬೇಕಾ? ಹಾಗಾದರೆ ಫೋಟೋ ಕಳುಹಿಸಿ
ಕೃಷ್ಣ ಜನ್ಮಾಷ್ಟಮಿ ಹಬ್ಬದ ಆಚರಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈ ಸುದಿನದ ಬರುವಿಕೆಗಾಗಿ ಹಲವಾರು ಜನ ಕಾತುರದಿಂದ ಕಾಯುತ್ತಿದ್ದಾರೆ. ಯಾಕೆಂದರೆ ಈ ದಿನ ಎಲ್ಲಾ ಹಬ್ಬದಂತಲ್ಲ. ಬದಲಿಗೆ ಕೃಷ್ಣನಿಗೆ ಪೂಜೆ, ವ್ರತ, ಹೋಮ-ಹವನದೊಂದಿಗೆ ತಮ್ಮ ಮಕ್ಕಳನ್ನು ಕೃಷ್ಣ ಹಾಗೂ ರಾಧೆಯಂತೆ ಅಲಂಕಾರ ಮಾಡಬಹುದು.
ಹಿಂದೂ ಆರಾಧ್ಯ ದೇವರಲ್ಲಿ ಒಬ್ಬರಾದ ಶ್ರೀಕೃಷ್ಣನನ್ನು ಮಕ್ಕಳಲ್ಲಿ ಕಾಣಲು ಪೋಷಕರು ಬಯಸುತ್ತಾರೆ. ದೇವರ ವೇಷದಲ್ಲಿ ಮಕ್ಕಳನ್ನು ಕಾಣುವುದರಲ್ಲಿ ಇರುವ ಖುಷಿ ಪೋಷಕರಿಗೆ ಮತ್ತೊಂದರಲಿಲ್ಲ. ಹಾಗಾಗಿ ಯಾವುದೇ ಹಬ್ಬ ಬಂದರೂ ಅದಕ್ಕೆ ಪೂರಕವಾಗಿ ತಾಯಂದಿರು ಮಕ್ಕಳನ್ನು ರೆಡಿ ಮಾಡುತ್ತಾರೆ. ಹೀಗೆ ನೀವು ನಿಮ್ಮ ಮುದ್ದಾದ ಮಕ್ಕಳನ್ನು ಈ ಬಾರಿಯ ಕೃಷ್ಣ ಜನ್ಮಾಷ್ಟಮಿಗೆ ಕೃಷ್ಣನಂತೆ-ರಾಧೆಯಂತೆ ರೆಡಿ ಮಾಡಬೇಕು ಅಂದುಕೊಂಡಿದ್ದರೆ, ನಿಮ್ಮ ಆಸೆಗೆ ಬ್ರೇಕ್ ಹಾಕಬೇಡಿ.

ಯಾಕೆಂದರೆ ಪ್ರತೀ ವರ್ಷದಂತೆ ಈ ವರ್ಷವೂ ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ಮುದ್ದಾದ ಮಕ್ಕಳ ಕೃಷ್ಣ ಹಾಗೂ ರಾಧೆಯ ಫೋಟೋಗಳನ್ನು ಹಾಕುತ್ತೇವೆ. ಹೀಗಾಗಿ ಕೃಷ್ಣ ಜನ್ಮಾಷ್ಟಮಿಯಂದು ನಿಮ್ಮ ಮಕ್ಕಳ ಕೃಷ್ಣ ಹಾಗೂ ರಾಧೆಯಂತೆ ಅಲಂಕಾರಗೊಂಡ ಫೋಟೋಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ಫೋಟೋಗಳು ಹಳೆಯದಾದರೂ ಪರವಾಗಿಲ್ಲ. ಕೃಷ್ಣಜನ್ಮಾಷ್ಟಿಯಂದು ನೀವು ನಿಮ್ಮ ಮುದ್ದಾದ ಮಕ್ಕಳ ಫೋಟೋವನ್ನು ನಮ್ಮ ವೆಬ್‌ಸೈಟ್ ಮೂಲಕ ಕಣ್ತುಂಬಿಕೊಳ್ಳಬಹುದು.
ನಿಮ್ಮ ಮಕ್ಕಳ ಫೋಟೋಗಳನ್ನು [email protected] ಈಮೇಲ್ ಐಡಿಗೆ ಕಳುಹಿಸಿ.












Click it and Unblock the Notifications