ಪ್ರೇಮಿಗಳ ದಿನಕ್ಕೆ ಫೆ.13ರಂದು ಕಿಸ್ ದಿನದ ರಿಹರ್ಸಲ್

Posted By:
Subscribe to Oneindia Kannada

ಮುತ್ತು, ಚುಂಬನ, ಮುಕ್ಕಾ, ಪಪ್ಪಿ ಮುಂತಾದ ಶಬ್ದಾವಳಿಗಳಿಂದ ಕರೆಯಿಸಿಕೊಳ್ಳುವ 'ಕಿಸ್' ಇಂದು ಎರಡು ಜೀವಗಳ ನಡುವೆ ನಡೆಯುವ ಒಂದು ಸುಮಧುರ ಕ್ರಿಯೆಯಾಗಿ ಉಳಿದಿಲ್ಲ. ಇತ್ತೀಚಿನ ದಿನಗಳಲ್ಲಿ ಮುತ್ತು ತನ್ನ ಪಾತೀವ್ರತಿಯನ್ನು ಕೂಡ ಕಳೆದುಕೊಂಡಿದೆ. ಅಷ್ಟರ ಮಟ್ಟಿಗೆ ಕಲುಷಿತಗೊಂಡಿದೆ ಕೂಡ.

ಮುತ್ತಿನ ಸಾಧಕಬಾಧಕಗಳು ಅದೇನೇ ಇರಲಿ, ನಿನ್ನೆ ತಾನೆ ಪ್ರಿಯತಮೆಯನ್ನೋ, ಸ್ನೇಹಿತೆಯನ್ನೋ, ಮತ್ಯಾರನ್ನೋ ಸುದೀರ್ಘವಾಗಿ ಅಪ್ಪಿಕೊಂಡು 'ಹಗ್ ಡೇ' ಹ್ಯಾಂಗೋವರಲ್ಲಿದ್ದು, ಫೆಬ್ರವರಿ 14ರಂದು ಪ್ರೇಮಿಗಳ ದಿನ ಆಚರಿಸಲು ಪುಳಕಿತರಾಗಿರುವ ನಿಮಗಿದೋ ತಿಳಿದಿರಲಿ, ಫೆಬ್ರವರಿ 13 'ಕಿಸ್ ಡೇ'!

ಅಪ್ಪಿಕೊಳ್ಳುವ ದಿನ ನಿಮಗೆ ಕೆನ್ನೆ ಕೆಂಪು ಮಾಡಿಕೊಂಡಿದ್ದ ಪ್ರಿಯತಮೆಯಿಂದ ಪ್ರೀತಿಯಿಂದ ಗಲ್ಲಕ್ಕೆ ಮುತ್ತು ಸಿಕ್ಕಿತೋ ಇಲ್ಲವೋ ಗೊತ್ತಿಲ್ಲ, ಫೆಬ್ರವರಿ 14 ಮಂಗಳವಾರವಿರುವುದರಿಂದ ವ್ಯಾಲಂಟೈನ್ಸ್ ಡೇ ಆಚರಿಸಲು ನಿಮಗೆ ಅವಕಾಶ ಸಿಗುತ್ತದೋ ಗೊತ್ತಿಲ್ಲ, ಆದ್ದರಿಂದ ಹೇಗೋ ಮಾಡಿಕೊಂಡು ಮುತ್ತಿನ ಪುಳಕವನ್ನು ಇಂದೇ ಅನುಭವಿಸಿಬಿಡಿ.

Kiss Day, a rehearsal for Valentine's Day

ಅದ್ಯಾವ ಮಹಾನುಭಾವ ಫೆಬ್ರವರಿ 13ರನ್ನು ಕಿಸ್ ಡೇ ಅಂತ ಆಚರಿಸಲು ಆರಂಭಿಸಿದನೋ? ಒಂದೊಂದು ಆಚರಣೆಗೂ ಒಂದೊಂದು ಹಿನ್ನೆಲೆ ಇರುತ್ತದೆ. ವ್ಯಾಲಂಟೈನ್ಸ್ ಡೇಗೂ ಒಂದು ನಿಖರವಾದ ಹಿನ್ನೆಲೆಯಿದೆ. ಆದರೆ, ಈ ಕಿಸ್ ಡೇಗೆ ಅಂತಹ ಯಾವುದೇ ಹಿನ್ನೆಲೆ ಇದ್ದಂತೆ ಕಾಣುವುದಿಲ್ಲ. ಕಿಸ್ ಮಾಡಲು ಹಿನ್ನೆಲೆಯಾದರೂ ಏಕೆ ಬೇಕು?

ಅಳಿವಿನಂಚಿನಲ್ಲಿರುವ ಆಚರಣೆಗೆ ವರ್ಷದಲ್ಲಿ ಒಂದು ದಿನ ಮೀಸಲಿಟ್ಟರೆ ಅದಕ್ಕೊಂದು ಅರ್ಥವಿರುತ್ತದೆ. ಫೆಬ್ರವರಿ 13 ಅನ್ನು ಮುತ್ತಿನ ದಿನವನ್ನಾಗಿ ಯಾಕೆ ಆಚರಿಸಲಾಗುತ್ತಿದೆಯೋ? ಇರಲಿ, ಇನ್ನೊಬ್ಬ ವ್ಯಕ್ತಿಗೆ (ವಿರುದ್ಧ ಲಿಂಗದ) ತಮ್ಮ ಪ್ರೀತಿಯನ್ನು ತೋರ್ಪಡಿಸಿ, ಹಿಂದಿನ ದಿನ ಮಿಸ್ ಮಾಡಿಕೊಂಡಿದ್ದರೆ ಒಂದು ಗಾಢವಾದ ಆಲಿಂಗನ ಕೊಟ್ಟು ಮುತ್ತು ಕೊಟ್ಟರೆ ತಪ್ಪೇನೂ ಇಲ್ಲ.

ಮುತ್ತಿನಲ್ಲಿಯೂ ಸಾಕಷ್ಟು ಬಗೆಗಳಿವೆಯಂತೆ. ನಮಗ್ಯಾಕೆ ಅವುಗಳ ಉಸಾಬರಿ? ಅವುಗಳ ಬಗ್ಗೆ ಅಕಾಡೆಮಿಕ್ ಆಗಿ ಥಿಂಕ್ ಮಾಡುವುದು ಬೇಡ. ಈ ಆಚರಣೆಯ ಬಗ್ಗೆ ತಕರಾರು ತೆಗೆಯುವವರಿಗೆ ಗೊತ್ತಾಗುವ ಮುನ್ನ ಖಾಸಗಿಯಾಗಿ ಆ ಆಚರಣೆಯನ್ನು ಆಚರಿಸಿಕೊಂಡುಬಿಡಿ. ಪ್ರೇಮಿಗಳ ಹಬ್ಬ ಆಚರಿಸಿಕೊಳ್ಳಲು ಈ ದಿನವನ್ನು ರಿಹರ್ಸಲ್ ಆಗಿ ಬಳಸಿಕೊಂಡರೂ ಪರವಾಗಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Here comes yet another day of the Valentine Week 2017, the Kiss Day, celebrated on February 13 every year, on Valentine’s Day Eve.
Please Wait while comments are loading...