• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಓದಲ್ಲಿ ಮುಂದಿರುವ ಮಹಿಳೆಗೆ ಕಚೇರಿಯಲ್ಲಿ ತಾರತಮ್ಯ

By Prasad
|
ಬಾಲ್ಯದಲ್ಲಿ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳೇ ಚುರುಕಾಗಿರುತ್ತವೆ. ಬೇಗನೆ ಮಾತಾಡುವುದನ್ನು, ನಡೆಯುವುದನ್ನು ಕಲಿಯುತ್ತವೆ. ಸಮವಸ್ತ್ರ ತೊಟ್ಟು ಶಾಲೆಯೊಳಗೆ ಕಾಲಿಟ್ಟ ಘಳಿಗೆಯಿಂದ, ಚೂಡಿದಾರ ಧರಿಸಿ ಕಾಲೇಜಿಗೆ ಭಡ್ತಿ ಪಡೆದು, ಕೈಯಲ್ಲಿ ಡಿಗ್ರಿ ಸರ್ಟಿಫಿಕೇಟ್ ಹಿಡಿಯುವವರೆಗೆ 'ಈ ವರ್ಷವೂ ಬಾಲಕಿಯರ ಮೇಲುಗೈ' ಶೀರ್ಷಿಕೆ ಪೇಪರುಗಳಲ್ಲಿ ರಾರಾಜಿಸುತ್ತಿರುತ್ತದೆ.

ಶಾಲಾ-ಕಾಲೇಜುಗಳಲ್ಲಿ ಹಾಡು, ನರ್ತನ, ವಿಜ್ಞಾನ, ತಂತ್ರಜ್ಞಾನ ಯಾವುದೇ ಪ್ರತಿಭಾ ಪ್ರದರ್ಶನವಿರಲಿ ಅಲ್ಲಿಯೂ ಬಾಲಕಿಯ ಮೇಲುಗೈ. ಅಂಕ ಪಡೆಯುವಲ್ಲಿರಲಿ, ಟ್ಯಾಲೆಂಟ್ ಶೋ ಇರಲಿ ಹತ್ತರಲ್ಲಿ ಒಂಬತ್ತು ಲಂಗದ ಹುಡುಗಿಯರ ಕಲರವ ಕೇಳಿಬರುತ್ತಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೂಡ ಬಾಲಕಿಯರಿಗೆ ಸರಿಸಾಟಿ ಹುಡುಗರು ಅಲ್ಲವೇ ಅಲ್ಲ.

ಹೀಗಿದ್ದೂ ಕಚೇರಿಗಳಲ್ಲಿ, ಅದರಲ್ಲೂ ಸಾಫ್ಟ್‌ವೇರ್ ಕಂಪನಿಗಳಲ್ಲಿ ಪ್ರತಿಭೆಯಿದ್ದರೂ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗುತ್ತಿಲ್ಲ? ಕೆಲಸಕ್ಕೆ ಸೇರುವ ಹೆಚ್ಚಿನ ಹೆಣ್ಣುಮಕ್ಕಳು ಮಧ್ಯದಲ್ಲಿಯೇ ಯಾಕೆ ಗುಡ್ ಬೈ ಹೇಳಿಬಿಡುತ್ತಾರೆ? ಅತ್ಯುನ್ನತ ಪದವಿಗಳು ಮಹಿಳೆಯರಿಗಿಂತ ಪುರುಷರಿಗೇ ಯಾಕೆ ಹೆಚ್ಚು ಒಲಿದುಬರುತ್ತವೆ? ತಮ್ಮ ಕಂಪನಿಗಳಲ್ಲಿ ಶೇ.50ರಷ್ಟು ಹುದ್ದೆಗಳನ್ನು ಮಹಿಳೆಯರಿಗೆ ಮೀಸಲಾಗಿಡಲಾಗಿದೆ ಎಂದು ಎಷ್ಟು ಕಂಪನಿಗಳು ಎದೆತಟ್ಟಿ ಹೇಳುತ್ತವೆ?

ಇಂದ್ರಾ ನೂಯಿ, ಚಂದಾ ಕೊಚ್ರಾರ್, ಕಿರಣ್ ಮಜುಂದಾರ್, ಸುಧಾ ಮೂರ್ತಿ, ಸೋನಿಯಾ ಗಾಂಧಿ ಅಂಥ ಕೆಲವರನ್ನು ಹೊರತುಪಡಿಸಿದರೆ, ಉನ್ನತ ಹುದ್ದೆಗಳನ್ನು ಅಲಂಕರಿಸಿದವರು ಪುರುಷರೇ ಹೆಚ್ಚು. ಈ ತಾರತಮ್ಯ ಕಚೇರಿಗಳಲ್ಲಿ ಮಾತ್ರವಲ್ಲ ಮಲಗುವ ಕೋಣೆ, ಅಡುಗೆಮನೆಯಲ್ಲಿಯೂ ಮುಂದುವರಿದಿದೆ ನಮ್ಮ ಭಾರತದಲ್ಲಿ. ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ, ಜಾಗತಿಕವಾಗಿ ನಾವು ಎದುರಿಸುತ್ತಿರುವ ಇಂತಹ ಸನ್ನಿವೇಶವನ್ನು ನಮ್ರತಾ ಜೈಸಿಂಹ ಅವರು ವಿಸ್ತೃತವಾಗಿ ವಿಶ್ಲೇಷಿಸಿದ್ದಾರೆ. ಮುಂದೆ ಓದಿರಿ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Why is then we don’t hire equal number of women at work? Why is that of the fewer women who do join work, quit mid-way? Why are there hardly any women in senior positions? How do companies claim they have the best work force when they have neglected to hire and retain from 51% of the world’s population? Can we really afford to ignore this disparity in the workforce?

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more