ಅಕ್ಷಯ ತೃತೀಯ: ಚಿನ್ನದಂಗಡಿಗೆ ಹೋಗೋಣ ಚಿನ್ನ!

Anushka Shetty
ಚಿನ್ನ ಅಂದ್ರೆ ಲಕ್ಷ್ಮಿ. ಅದೃಷ್ಟದ ಸಂಕೇತ. ಅದನ್ನು ಅಕ್ಷಯ ತೃತೀಯದಂದು ಖರೀದಿಸಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಎಲ್ಲರದು. ಜಾಸ್ತಿ ಬೇಡಾರಿ ಪುಟ್ಟ ಸರವಾದರೂ ಮಾಡಿಕೊಡಿ ಅಂತಾಳೆ ಅವಳು. ಅವನು ಮುನಿಸಿಕೊಳ್ಳುವುದಿಲ್ಲ. ಯಾಕೆಂದರೆ ಪುಟ್ಟ ಉಂಗುರವೊಂದನ್ನು ನಾಳೆ ಖರೀದಿಸಬೇಕು ಅಂತ ಅವನು ಅಂದುಕೊಂಡಿದ್ದಾನೆ. ಮಹಿಳೆ ಪುರುಷ ತಾರತಮ್ಯವಿಲ್ಲದೇ ಚಿನ್ನದಂಗಡಿಗೆ ಎಲ್ಲರೂ ಧಾವಿಸುವ ದಿನ ಅಂದ್ರೆ ಮೇ ಆರು ವೈಶಾಖ ಶುಕ್ಲ ತೃತೀಯ. ಅಂದ್ರೆ ಅಕ್ಷಯ ತೃತೀಯ.

ಸಾಂಪ್ರದಾಯಿಕ ಹಿಂದೂ ಕ್ಯಾಲೆಂಡರ್ ನಲ್ಲಿ ಅಮಾವಾಸ್ಯೆ ಕಳೆದು ಬರುವ ವೈಶಾಖ ಮಾಸದ ಮೂರನೇ ದಿನ ಅಕ್ಷಯ ತೃತೀಯ. ಧಾರ್ಮಿಕ ನಂಬಿಕೆಯುಳ್ಳವರಿಗೆ ಉತ್ತರೋತ್ತರ ಯಶಸ್ಸು, ಅಭಿವೃದ್ಧಿಗೆ ನಾಂದಿ ಹಾಡುವ ದಿನ. ಸಾಮಾಜಿಕ ನಿರ್ಬಂಧ, ಧಾರ್ಮಿಕ ಬೇಧವಿಲ್ಲದೇ ಎಲ್ಲ ವರ್ಗದವರೂ ಈ ದಿನಕ್ಕೆ ವಿಶೇಷ ಪ್ರಾಧಾನ್ಯ ಕೊಡುತ್ತಾರೆ.

ಮನೆಯಲ್ಲಿ ಸಾಕಷ್ಟು ತಾಪತ್ರಯಗಳಿರಲಿ. ಬಾಡಿಗೆ ಕಟ್ಟದೇ ತಿಂಗಳು ಕಳೆದಿರಲಿ. ಹತ್ತು ಗ್ರಾಂ ಚಿನ್ನದ ದರ 23 ಸಾವಿರ ರೂಪಾಯಿ ದಾಟಿರಲಿ. ಚೂರು ಚಿನ್ನ ಖರೀದಿಸದಿದ್ದರೆ ಹೇಗೆ ಅಂತ ಎಲ್ಲರೂ ಬಯಸುತ್ತಾರೆ. ಅದೇ ಅಕ್ಷಯ ತೃತೀಯದ ಪವರ್. ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾದ ಹೊಸ ಚಿನ್ನ ಖರೀದಿಯ ಟ್ರೆಂಡ್.

ಬೆಂಗಳೂರಿನವರೂ ಚಿನ್ನ ಖರೀದಿಗೆ ಎಲ್ಲಿಗೆ ಹೋಗಬೇಕೆಂದು ಲೆಕ್ಕ ಹಾಕುತ್ತಿದ್ದಾರೆ. ಆಭರಣ ಅಂಗಡಿಗಳಂತೂ ವಿಶೇಷ ಕೊಡುಗೆಗಳನ್ನು ನೀಡುವುದಾಗಿ ಗ್ರಾಹಕರ ಸಂಭ್ರಮವನ್ನು ಹೆಚ್ಚಿಸುತ್ತಿವೆ. ಚಿನ್ನ ತಯಾರಿಕಾ ವೆಚ್ಚದಲ್ಲಿ ರಿಯಾಯ್ತಿ, ವೇಸ್ಟೆಜ್ ಜಾರ್ಜ್ ಇಲ್ಲಂತ ಹೇಳಿಕೊಳ್ಳುತ್ತಿವೆ. ಟಾಟಾ ಸಮೂಹದ ಆಭರಣ ಬ್ರಾಂಡ್ ತಾನಿಷ್ಕ್ ಕೂಡ ಆಕರ್ಷಕ ಉಡುಗೊರೆ ನೀಡುವುದಾಗಿ ಹೇಳುತ್ತಿವೆ. ರಾಜೇಶ್ ಜ್ಯುವೆಲರಿ ಈಗಾಗಲೇ ಪತ್ರಿಕೆಗಳಲ್ಲಿ ಪುಟಗಟ್ಟಲೆ ಜಾಹೀರಾತು ನೀಡಿಯಾಗಿದೆ. ಅಲಿಸೆ ಜ್ಯುವೆಲರಿ, ಸುಮನ್ ಸುಧಾ ಆಭರಣ, ಗಾಜಾ ಜ್ಯುವೆಲ್ಲರಿ, ಮಹೀಂದ್ರ ಡೈಮಂಡ್ಸ್ ಮುಂತಾದ ಚಿನ್ನದಂಗಡಿಗಳು ಆಕರ್ಷಕ ರಿಯಾಯಿತಿಯನ್ನು ಘೋಷಿಸಿವೆ. ರಿಲಯೆನ್ಸ್ ಜ್ಯುವೆಲರಿ ಕೂಡ ಆಕರ್ಷಕ ಕೊಡುಗೆಗಳನ್ನು ನೀಡುತ್ತಿದೆ.

ಜನ ಮರುಳೋ, ಜಾತ್ರೆ ಮರುಳೋ ಎಂಬಂತೆ 'ಅಕ್ಷಯ ತೃತೀಯ"ದಂತಹ ಹಬ್ಬಗಳ ಹೆಸರಿನಲ್ಲಿ ಜನರನ್ನು ಮರುಳು ಮಾಡಲು ಅಂಗಡಿಯ ಮಾಲೀಕರು ಕಾಯುತ್ತಾರೆ. ಉಚಿತ ಕೊಡುಗೆ, ರಿಯಾಯಿತಿ ಬೆಲೆಯಲ್ಲಿ ಆಭರಣಗಳ ಮಾರಾಟ ಬಲೆ ಜೋರು. ಸಂಪ್ರದಾಯದ ಹೆಸರಿನಲ್ಲಿ ಹಬ್ಬಗಳು ವಾಣಿಜ್ಯೀಕರಣ ಆಗುತ್ತಿದೆಯೇ ಅಥವಾ ಈ ಒಂದು ಪುಣ್ಯದಿನ ಚಿನ್ನ ಪಡೆದರೆ ಅದು ವೃದ್ಧಿಯಾಗುತ್ತದೇ ಎಂಬುದು ಅವರವರ ತರ್ಕಕ್ಕೆ ಬಿಟ್ಟ ವಿಚಾರ.

ಬಂಗಾರವೇ ಬೇಕೆಂದೇನಿಲ್ಲ. ಬೆಳ್ಳಿಯನ್ನು ಪ್ಲಾಟಿನಂ ಹಾಗೂ ಚಿನ್ನಕ್ಕೆ ಪೂರಕವಾಗಿ ಬಳಸಬಹುದು. ಬೆಳ್ಳಿ ಲೋಹ, ಬಂಗಾರ ಪ್ಲಾಟಿನಂಗಳನ್ನು ಬೆಲೆ ಬಾಳುವಂತದ್ದೂ ಅಲ್ಲ. ಆದರೆ ಬೆಳ್ಳಿ ಕೂಡ ಆಕರ್ಷಕ ಲೋಹ. ಅದರಿಂದ ತಯಾರಿಸಿದ ನಾನಾ ವಿನ್ಯಾಸದ ಒಡವೆಗಳು ನಿಮ್ಮ ವ್ಯಕ್ತಿತ್ವಕ್ಕೆ ಒಂದಿಷ್ಟು ಮೆರುಗು ನೀಡುತ್ತವೆ. ಚಿನ್ನ ಎಲ್ಲರ ಚರ್ಮಕ್ಕೂ ಹೊಂದಿಕೊಳ್ಳುವುದಿಲ್ಲ. ಅಲರ್ಜಿಯೂ ಉಂಟಾಗಬಹುದು. ಹೀಗಾಗಿ ಎಂಥ ಲೋಹದ ಆಭರಣ ತಮ್ಮ ಚರ್ಮಕ್ಕೆ ಸೂಕ್ತ ಎಂಬುದನ್ನು ತಿಳಿದಿಕೊಂಡು ಆನಂತರ ಖರೀದಿಸಿ.

ಚಿನ್ನ ಖರೀದಿಸುವಾಗ ಒಂದಿಷ್ಟು ಎಚ್ಚರವಿರಲಿ

* ಹಾಲ್ ಮಾರ್ಕ್ ಉಳ್ಳ ಒಡವೆಗಳನ್ನೇ ಖರೀದಿಸಿ.
* ಚಿನ್ನದ ಅಲರ್ಜಿ ಇರುವವರು ಪ್ಲಾಟಿನಂ ಒಡವೆ ಖರೀದಿಸುವುದು ಸೂಕ್ತ.
* ಮುತ್ತು, ಹವಳ ಖರೀದಿಸುವಾಗ ಅಸಲಿಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
* ಗುಣಮಟ್ಟದ ಸೇವೆ ಒದಗಿಸುವ ಆಭರಣ ಮಳಿಗೆಗಳಿಗೆ ಭೇಟಿ ನೀಡುವುದು ಒಳ್ಳೆಯದು.
* ಆನ್‌ಲೈನ್ ಮೂಲಕ ಆಭರಣ ಖರೀದಿಸಬೇಕೆಂದರೆ ಅಲ್ಲಿಯ ನಿಯಮ, ಷರತ್ತುಗಳ್ನು ಸರಿಯಾಗಿ ಓದಿಕೊಳ್ಳಿ.
* ಆಭರಣ ಶುದ್ಧೀಕರಿಸುವಾಗ ಎಚ್ಚರ ವಹಿಸಿ.

ನಗರಗಳಲ್ಲಿ ಜನಪ್ರಿಯ ಬ್ರಾಂಡ್‌ನ ಮಳಿಗೆಗಳಿಗೆ ತೆರಳಿದಾಗ ಅಲ್ಲಿ 'ಬಿಐಎಸ್ ಪ್ರಮಾಣೀಕೃತ" ಮತ್ತು 'ಹಾಲ್‌ಮಾರ್ಕ್" ಆಭರಣಗಳ ಫಲಕಗಳೂ ಗಮನ ಸೆಳೆಯುತ್ತವೆ. ಇವು ಚಿನ್ನದ ಪರಿಶುದ್ಧತೆ ಮತ್ತು ಆಭರಣ ಒಳಗೊಂಡಿರುವ ಚಿನ್ನದ ನಿಗದಿತ ಪ್ರಮಾಣದ ಬಗ್ಗೆ ಇವು ಗ್ರಾಹಕರಿಗೆ ಖಾತರಿ ನೀಡುತ್ತವೆ. ಅಕ್ಷಯ ತೃತೀಯದಂದು ಚಿನ್ನ ಖರೀದಿಸಿರಿ. ಚಿನ್ನ ಅಂದ್ರೆ ಆಪತ್ಬಾಂದವ. ಗುಣಮಟ್ಟದ ಚಿನ್ನ ಖರೀದಿಸಿದರೆ ನಿಮಗೆ ನಷ್ಟವಿಲ್ಲ. ಶುಭವಾಗಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+