ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಗತಿ ಸಿಂಡಿಕೇಟ್‌ನಿಂದ ಕನ್ನಡ ರಾಜ್ಯೋತ್ಸವ

By * ಸಿ. ಎನ್. ಉಮೇಶ್
|
Google Oneindia Kannada News

ಸಮಾನ ಮನಸ್ಕರ ಸಂಸ್ಥೆಯಾದ ಪ್ರಗತಿ ಸಿಂಡಿಕೇಟ್ ತನ್ನ 7ನೇ ಕನ್ನಡ ರಾಜ್ಯೋತ್ಸವವನ್ನು ನಗರದ ತೆಲುಗು ವಿಜ್ಞಾನ ಭವನದ ಶ್ರೀ ಕೃಷ್ಣದೇವರಾಯ ಸಬಾಂಗಣದಲ್ಲಿ ದಿನಾಂಕ 16.11.2008ರಂದು ಆಚರಿಸಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕೆ.ಇ .ರಾಧಾಕೃಷ್ಣ, ಮಾಜಿ ಪ್ರಾಂಶುಪಾಲರು, ಶೇಷಾದ್ರಿಪುರಂ ಹಾಗು ಸುರಾನ ಕಾಲೇಜ್ ನ ಎಂ.ಬಿ. ರಾಜೇಶ್ ಗೌಡ, ವಿಶೇಷ ಅಪರ ಭೂಸ್ವಾಧಿನಾಧಿಕಾರಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಕರ್ನಲ್ ಈಶ್ವರ್ ಗುರುಲಿಂಗಪ್ಪ ದೊಡ್ಡಮನಿ, ನಿವೃತ್ತ ಭಾರತ ಸೇನಾ ಕರ್ನಲ್ ಮೊದಲಾದವರು ಬಾಗವಹಿಸಿದ್ದರು.

ಪ್ರತಿ ವರ್ಷದಂತೆ ಸಮಾಜದಲ್ಲಿ ಉತ್ತಮ ವ್ಯಕ್ತಿಗಳನ್ನು ಗುರುತಿಸಿ ಅಭಿನಂದಿಸಿವುದು ಹಾಗು ಅವರನ್ನು ಇನ್ನು ಹೆಚ್ಚಿನ ಸಾಧನೆಗೆ ಪ್ರೋತ್ಸಾಹಿಸುವುದು ಪ್ರಗತಿ ಸಿಂಡಿಕೇಟ್ ನ ಧ್ಯೇಯೋದ್ದೇಶಗಳಲ್ಲಿ ಒಂದು. ಈ ಸಾಲಿನಲ್ಲಿ ಎಂ. ಅರ್. ಕಮಲ, ಖ್ಯಾತ ಕವಯತ್ರಿ, ಡಾ: ಕೆ.ಜಗನ್ಮಯ, ಖ್ಯಾತ ವೈದ್ಯರು ಮತ್ತು ಕೆ. ನರಸಿಂಹಮೂರ್ತಿ, ಸಮಾಜ ಸೇವಕರು ಇವರುಗಳಿಗೆ 'ಕರ್ನಾಟಕ ಸಹೃದಯ' ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಕೆ ಪ್ರಹ್ಲಾದ ಶೆಟ್ಟಿ ಇವರಿಗೆ 'ಪ್ರಗತಿ ರತ್ನ' ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಡಾ: ಲಲಿತ ಭಾಸ್ಕರ್, ಖ್ಯಾತ ವೈದ್ಯರು, ಶಾಂತ ಕುಮಾರಿ, ಖ್ಯಾತ ಸಾಹಿತಿಗಳು, ಎಸ್. ರವಿಂದ್ರ, ಭರತ್ ಕಶ್ಯಪ್ ಟ್ರಸ್ಟ್ , ರವಿಶಂಕರ್, ಶಂಕರ್ ಭಟ್, ಶ್ರೀಕಂಠ ಗುಂಡಪ್ಪ ಆಗಮಿಸಿದ್ದರು.

ರಾಜ್ಯೋತ್ಸವ ಕಾರ್ಯಕ್ರಮದ ಜೊತೆಗೆ ರಕ್ತದಾನ ಶಿಬಿರ ಅಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಗತಿ ಸಿಂಡಿಕೇಟ್ ನ ವಿವಿಧ ಶಾಖೆಗಳಾದ ಮತ್ತಿಕೆರೆ, ಮಲ್ಲೇಶ್ವರಂ, ಸಂಜಯನಗರ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಚರಿಸಲಾಯಿತು. ಮಲ್ಲೇಶ್ವರಂ ತಂಡಕ್ಕೆ ಪ್ರಥಮ ಬಹುಮಾನ, ಸಂಜಯನಗರ ತಂಡಕ್ಕೆ ದ್ವಿತೀಯ ಬಹುಮಾನ ದೊರಕಿದವು.

ಇಡೀ ಕಾರ್ಯಕ್ರಮವು ಕೆ.ಜಿ. ಶ್ರೀನಿವಾಸಮೂರ್ತಿ ಹಾಗು ಸಿ.ಎನ್.ರಮೇಶ್ ನೇತೃತ್ವದಲ್ಲಿ ಯಶಸ್ವಿಯಾಗಿ ನೆರವೇರಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X