• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಘ್ನನಾಶಕ ಗಣೇಶನ ಆರಾಧನೆಗೂ ಮುನ್ನ ತಿಳಿದಿರಲಿ ಈ ಸಂಗತಿ

By ವಿಶ್ವಾಸ ಸೋಹೋನಿ
|
   Ganesha Chaturthi 2018 : ಗಣೇಶನ 32 ಅವತಾರಗಳ ಬಗ್ಗೆ ನೀವು ತಿಳಿಯಲೇಬೇಕು

   ಮಂಗಳಮೂರ್ತಿ ಗಣೇಶನನ್ನು ವಿಶೇಷವಾಗಿ ತಂದು ಪ್ರತಿಷ್ಠಾಪನೆ ಮಾಡಿ, ಪೂಜಿಸಿ, ಆರಾಧಿಸಿ, ಕೊನೆಗೆ ವಿರ್ಸಜನೆ ಮಾಡುತ್ತಾರೆ. ಗಣಪತಿ ಎಂದರೆ, ಗಣಗಳ-ಸಮೂಹಗಳ ಅಧಿಪತಿ, ವಿಶ್ವದ ಎಲ್ಲ ಮಾನವ ಸಮಾಜಕ್ಕೆ ಒಡೆಯ. ಸರ್ವಗುಣಗಳಧಾರಿ, ಸರ್ವವಿದ್ಯೆಗಳಲ್ಲಿ ಪಾರಂಗತನು.

   ಅವನಿಗೆ ಏಕದಂತ, ಮಂಗಳಮೂರ್ತಿ, ವಿಘ್ನೇಶ್ವರ, ದುಃಖಹರ್ತ, ಸುಖಕರ್ತ, ಲಂಭೋದರ, ವಿನಾಯಕ, ಗಜಮುಖ, ಮೂಷಕವಾಹನ, ಮೋದಕಪ್ರೀಯ, ಮುಂತಾದ ಅನೇಕ ಹೆಸರುಗಳಿವೆ. ಸರ್ವರ ಮಂಗಳಕಾರಿ ಆಗಿರುವದರಿಂದ ಅವನಿಗೆ ಮಂಗಳಮೂರ್ತಿ ಎಂದು, ವಿಘ್ನಗಳನ್ನು ವಿನಾಶ ಮಾಡುವದರಿಂದ ವಿಘ್ನೇಶ್ವರ ಎಂದು, ದುಃಖವನ್ನು ಹರಿಸಿ ಸುಖವನ್ನು ಕೊಡುವದರಿಂದ, ದುಃಖಹರ್ತ-ಸುಖಕರ್ತವೆಂದು, ಅವನ ಮಹಿಮೆ ಇದೆ. ಲಂಭೋದರವೆಂದರೆ ವಿಶಾಲ ಹೊಟ್ಟೆ ಅರ್ಥಾತ್ ಎಲ್ಲರ ಅಪರಾಧಗಳನ್ನು ತನ್ನ ಹೊಟ್ಟೆಗೆ ಹಾಕಿ ಕ್ಷಮೆ ಮಾಡುವವನು ಎಂದು.

   ಗಣಪನನ್ನು ಕೂರಿಸಲು ಪಾಲಿಕೆಯಿಂದ ಏಕಗವಾಕ್ಷಿ ಅನುಮತಿ

   ಹೀಗೆ ಅವನ ಅನೇಕ ನಾಮಗಳು ಗುಣಗಳವಾಚಕ ವಾಗಿವೆ. ಇಲಿ ಚಂಚಲ ಮನಸ್ಸಿನ ಸಂಕೇತವಾಗಿದೆ. ಕಂಪ್ಯೂಟರನಲ್ಲಿ ಹೇಗೆ ಮೌಸ್ನಿಂದ ಯಾವುದೆ ಕೆಲಸ ಮಾಡಬಹುದೋ, ಹಾಗೆಯೇ ಇಲಿಯ ಮೇಲೆ ಸವಾರಿಯು, ಮನಸ್ಸು ಬುದ್ಧಿಯ ಮೇಲೆ ನಿಯಂತ್ರಣ ಮಾಡುವ ಸಂಕೇತವಾಗಿದೆ. ಗಜಮುಖ ಬಲಶಾಲಿ ಅಥವಾ ಶಕ್ತಿಯ ಪ್ರತೀಕವಾಗಿದೆ. ಮೋದಕಪ್ರಿಯವೆಂದರೆ ಸ್ನೇಹ ಮತ್ತು ಮಧುರತೆಯ ಸಂಕೇತವಾಗಿದೆ.

   ಗಣಪತಿಯ ಬಗೆಬಗೆಯ ಅವತಾರಗಳು ಇವೆ. ಒಟ್ಟಾರೆಯಾಗಿ ಹೇಳಬೇಕೆಂದರೆ 32 ಬಗೆಯ ಅವತಾರಗಳಲ್ಲಿ ಗಣಪತಿ ಕಾಣಿಸಿಕೊಂಡಿದ್ದಾನೆ. ಇವುಗಳಲ್ಲಿ ಕೆಲವು ಗಣಪತಿಯ ಜೀವನದ ವಿವಿಧಕಾಲ ಘಟ್ಟಗಳನ್ನು ಪ್ರತಿನಿಧಿಸಿದರೆ, ಇನ್ನು ಕೆಲವು ಲೋಕ ಕಲ್ಯಾಣಾರ್ಥವಾಗಿ ತಳೆದ ಅವತಾರಗಳಾಗಿದೆ. ಗಣೇಶನ ವಿವಿಧ ಹೆಸರುಗಳು ಮತ್ತು ಅವುಗಳ ಅರ್ಥ ಇಲ್ಲಿದೆ.

   ಬಾಲ ಗಣಪತಿ, ತರುಣ ಗಣಪತಿ

   ಬಾಲ ಗಣಪತಿ, ತರುಣ ಗಣಪತಿ

   1. ಬಾಲ ಗಣಪತಿ ಹೆಸರೇ ಸೂಚಿಸುವಂತೆ, ಗಣಪತಿಯ ಎಳೆಯ ಮಗುವಿನ ರೂಪ. ಇದರಲ್ಲಿ ಸ್ವಾಮಿಯ ತನ್ನ ಬಾಲ್ಯದ ಸುಂದರವಾದ ಮತ್ತು ಮುದ್ದಾದ ರೂಪವಾಗಿದೆ.

   2. ತರುಣ ಗಣಪತಿ ಗಣಪತಿಯ ತಾರುಣ್ಯವನ್ನು ಪ್ರತಿನಿಧಿಸುವ ರೂಪವಾಗಿದೆ. ಇದು 8 ಕೈಗಳನ್ನು ಮತ್ತು ಮುರಿದ ದಂತವನ್ನು ಹೊಂದಿರುತ್ತದೆ.

   3. ಭಕ್ತಿ ಗಣಪತಿ ಎಂಬುದು ಸುಗ್ಗಿಯ ಅವಧಿಯಲ್ಲಿ ರೈತರಿಂದ ಪೂಜಿಸಲ್ಪಡುವ ಗಣಪತಿ ಅವತಾರವಾಗಿದೆ. ಈ ಗಣೇಶನ ಕೈಯಲ್ಲಿ ಬಾಳೆಹಣ್ಣು ಮತ್ತು ತೆಂಗಿನಕಾಯಿ ಇರುತ್ತದೆ.

   4. ವೀರ ಗಣಪತಿಯ ಅವತಾರದಲ್ಲಿ ಗಣಪತಿಯ ಆಯುಧಗಳನ್ನು 16 ಕೈಗಳಲ್ಲಿ ಇರುತ್ತದೆ. ಗಣಪತಿಯ ಈ ‘ವೀರ' ಅವತಾರವು ಯುದ್ಧಕ್ಕೆ ಸನ್ನದ್ದವಾಗಿರುವ ರೀತಿಯಲ್ಲಿ ಕಾಣಿಸುತ್ತದೆ.

   ಬಿಬಿಎಂಪಿ ಬ್ಯಾನ್ ಗೆ ಬೆಲೆ ಇಲ್ಲ: ಪಿಒಪಿ ಗಣಪನ ಹಾವಳಿ ನಿಂತಿಲ್ಲ!

   ಶಕ್ತಿ ಗಣಪತಿ, ದ್ವಿಜ ಗಣಪತಿ

   ಶಕ್ತಿ ಗಣಪತಿ, ದ್ವಿಜ ಗಣಪತಿ

   5. ಶಕ್ತಿ ಗಣಪತಿಯ ಅವತಾರದಲ್ಲಿ ಗಣಪತಿಯ ತೊಡೆಯ ಮೇಲೆ ಸ್ವಾಮಿಯ ಒಬ್ಬ ಪತ್ನಿಯು ಹೂಮಾಲೆಯನ್ನು ಹೀಡಿದು ಕುಳಿತಿರುತ್ತಾಳೆ. ಈತನ ಕುಟುಂಬವನ್ನು ಕಾಪಾಡುವ ದೇವರು ಎಂದು ಪೂಜಿಸಲಾಗುತ್ತದೆ.

   6. ದ್ವಿಜ ಗಣಪತಿ ದ್ವಿಜ ಎಂದರೆ ಎರಡು ಬಾರಿ ಜನಿಸಿದವನು ಎಂದರ್ದ. ಗಣೇಶನು ನಿಜವಾಗಿಯು ಎರಡು ಬಾರಿ ಜನಿಸಿದವನು. ಮೊದಲು ಜನಿಸಿದ ನುಂತರ ಕೊಲ್ಲಲ್ಪಟ್ಟು ಆ ಮೇಲೆ ಪುನ: ಜೀವವನ್ನು ಪಡೆದವನು. ಈ ಅವತಾರದಲ್ಲಿ ಗಣಪತಿಗೆ 4 ತಲೆಗಳು ಇವೆ.

   7. ಸಿದ್ಧಿ ಗಣಪತಿಯನ್ನು ಯಶಸ್ಸು ಮತ್ತು ಸಂಪತ್ತಿನ ಸಲವಾಗಿ ಪೂಜಿಸಲಾಗುತ್ತದೆ. ಈ ಗಣಪತಿಯ ಮೂರ್ತಿಯು ಹಳದಿ ಬಣ್ಣದಲ್ಲಿರುತ್ತದೆ.

   8. ಉಚ್ಚಿಷ್ಟ ಗಣಪತಿ ಈ ಗಣಪತಿಯು ಸಹ ಹಲವು ಕೈಗಳಿಂದ ಸುಂದರವಾಗಿ ಕಾಣುತ್ತಾನೆ. ತಿಳಿ ನೀಲಿ ಬಣ್ನದ ಈ ಗಣಪತಿಯು 6 ಕೈಗಳು ಹೊಂದಿದ್ದು ಕೈಯಲ್ಲಿ ವೀಣೆಯಂತಹ ಸಂಗಿತ ವಾದ್ಯಗಳನ್ನು ಹಿಡಿದಿರುತ್ತಾನೆ.

   ಗಣಪನ ಎತ್ತರದ ಮೇಲಿನ ನಿರ್ಬಂಧ ಹಿಂತೆಗೆದ ಮಾಲಿನ್ಯ ಮಂಡಳಿ

   ವಿಘ್ನ ಗಣಪತಿ, ಕ್ಷಿಪ್ರ ಗಣಪತಿ

   ವಿಘ್ನ ಗಣಪತಿ, ಕ್ಷಿಪ್ರ ಗಣಪತಿ

   9. ವಿಘ್ನ ಗಣಪತಿ: ಗಣಪತಿಯನ್ನು ವಿಘ್ನೇಶ್ವರ ವಿಘ್ನನಾಶಕ ಎಂದು ಸಹ ಕರೆಯುತ್ತಾರೆ. ಚಿನ್ನದ ಬಣ್ಣದ ಈ ಗಣಪತಿಯ ವಿಗ್ರಹವು ನಿಮಗೆ ಎದರಾಗುವ ಎಲ್ಲಾ ಕಂಟಕಗಳನ್ನು ನಿವಾರಿಸುತ್ತದೆ.

   10. ಕ್ಷಿಪ್ರ ಗಣಪತಿ ಕೆಂಪು ವರ್ಣದ ಈ ಗಣಪತಿಯ ಹೆಸರೇ ಸುಚಿಸುವಂತೆ ಕಾರ್ಯಗಳನ್ನು ಕ್ಷಿಪ್ರವಾಗಿ ಸಿದ್ಧಿಸಿಕೊಳ್ಳಲು ನೆರವಾಗುತ್ತಾನೆ.

   11. ಹೇರಂಭ ಗಣಪತಿಯು ದೀನರನ್ನು ಉದ್ಧಾರ ಮಾಡಲು ಅವತರಿಸಿದ್ದಾನೆ. ಈತನಿಗೆ 5 ತಲೆಗಳು ಇದ್ದು ನೆಗೆಯಲು ಸಿದ್ಧವಾಗಿರುವ ಸಿಂಹದ ವಾಹನವನ್ನು ಎರಿರುವ ಅವತಾರ ಇದಾಗಿದೆ.

   12. ಲಕ್ಷ್ಮೀ ಗಣಪತಿ ಯನ್ನು ಸಹೋದರಿಯರಂತೆ ಕಾಣಲಾಗುತ್ತದೆ. ಚಿನ್ನದ ಬಣ್ಣದ ಈ ಗಣಪತಿಯು ಹಣ ಮತ್ತು ಐಶ್ವರ್ಯಗಳ ಸಂಕೇತವಾಗಿ ಪೂಜಿಸಲಾಗುತ್ತದೆ.

   ಮಹಾಗಣಪತಿ, ವಿಜಯ ಗಣಪತಿ

   ಮಹಾಗಣಪತಿ, ವಿಜಯ ಗಣಪತಿ

   13. ಮಹಾಗಣಪತಿ ಮಹಾ ಎಂಬ ಮಾತೇ ಶ್ರೇಷ್ಟ ಎಂಬುದನ್ನು ಸೂಚಿಸುತ್ತದೆ. ಕೆಂಪು ಬಣ್ಣದಲ್ಲಿರುವ ಈ ಗಣಪತಿಯು ಶಕ್ತಿಯ ಜೊತೆಯಲ್ಲಿ ಕುಳಿತಿರುತ್ತಾನೆ.

   14. ವಿಜಯ ಗಣಪತಿ ಹೇಸರೇ ಸೂಚಿಸುವಂತೆ ವಿಜಯದ ಸಂಕೇತ. ಈತನಿಗೆ ನಾಲ್ಕು ಕೈಗಳು ಇದ್ದು ಮೂಷಕ ವಾಹನನಾಗಿ ಕಾಣಿಸುತ್ತಾನೆ.

   15. ನೃತ್ಯ ಗಣಪತಿಯು ತನ್ನ ಅಗಾಧ ದೇಹದ ಹೊರತಾಗಿಯು ನೃತ್ಯವನ್ನು ಮಾಡುವ ಭಂಗಿಯಲ್ಲಿ ಇಲ್ಲಿ ಕಾಣಿಸಿಕೊಳ್ಳುತ್ತಾನೆ.

   16. ಊಧ್ರ್ವ ಗಣಪತಿ ಎಂದರೆ ಉದ್ದವಾಗಿ ಇರುವ ಗಣಪತಿ ಎಂದರ್ಧ. ಈ ಗಣಪತಿಯು ಪ್ರಮುಖವಾಗಿ ಹಿಡುವಳಿಯನ್ನು ಹರಿಸುವ ಗಣಪತಿಯಂತೆ ಕಾಣುತ್ತಾನೆ. ಈತನ ಕೈಯಲ್ಲ್ತಿ, ಭತ್ತ, ನೈದಿಲೆ, ಕಬ್ಬನ ಜಲ್ಲ್ಲೆಗಳನ್ನು ನಾವು ಕಾಣಬಹುದು.

   ಏಕಾಕ್ಷರ ಗಣಪತಿ, ವರದ ಗಣಪತಿ

   ಏಕಾಕ್ಷರ ಗಣಪತಿ, ವರದ ಗಣಪತಿ

   17. ಏಕಾಕ್ಷರ ಗಣಪತಿಯು ಹೆಸರೆ ಸೂಚಿಸುವಂತೆ ‘ಒಂದೆ ಅಕ್ಷರದ ಗಣಪತಿಯಾಗಿರುತ್ತಾನೆ ಈತನು ಕೆಂಪು ಬಣ್ಣದಲ್ಲಿದ್ದು ಮೂಷಕ ವಾಹನನಾಗಿ ನಮಗೆ ಕಾಣಿಸುತ್ತಾನೆ.

   18. ವರದ ಗಣಪತಿ ನಿಮಗೆ ಯಾವುದಾದರು ಒಂದು ವರ ಬೇಕೆ? ಹಾಗಾದರೆ ನೀವು ವರದ ಗಣಪತಿಯನ್ನು ಪೂಜಿಸಿ. ಈತನಿಗೆ ಮೂರನೆ ಕಣ್ಣು ಇದೆ, ಇದು ಜ್ಞಾನವನ್ನು ಪ್ರತಿನಿಧಿಸುತ್ತದೆ.

   19. ತ್ರಯಾಕ್ಷರ ಗಣಪತಿಯು ಮೂರು ಅಕ್ಷರದ ಗಣಪತಿಯಾಗಿದ್ದು ಕೈಯಲ್ಲಿ ತನ್ನು ಪ್ರೀತಿಯ ಮೋದಕವನ್ನು ಹಿಡಿದು ತಿನ್ನುತ್ತಿರುವುದನ್ನು ಕಾಣಬಹುದು.

   20. ಕ್ಷಿಪ್ರಪ್ರಸಾದ ಗಣಪತಿಯು ನಿಮ್ಮ ಕೋರಿಕೆಯನ್ನು ಅತಿ ಶೀಘ್ರದಲ್ಲಿಯೇ ಪೂರೈಸಿವನೆಂದು ಭಾವಿಸಲಾಗಿದೆ.

   ಹರಿದ್ರ ಗಣಪತಿ, ಏಕದಂತ ಗಣಪತಿ

   ಹರಿದ್ರ ಗಣಪತಿ, ಏಕದಂತ ಗಣಪತಿ

   21. ಹರಿದ್ರ ಗಣಪತಿಯು ಸಂದರವಾದ ಚಿನ್ನದ ಬಣ್ಣವನ್ನು ಹೊಂದಿದ್ದು ಹಳದಿ ಬಣ್ಣದ ರಾಜ ಠಿವಿಯಿಂದ ಕೂಡಿದ ವಸ್ತ್ರವನ್ನು ಧರಿಸಿರುತ್ತಾನೆ.

   22. ಏಕದಂತ ಗಣಪತಿಯು ಒಂದೆ ಒಂದು ದಂತವನ್ನು ಹೋಂದಿದ್ದು ನೀಲಿಬಣ್ಣದಿಂದ ಕೂಡಿರುತ್ತಾನೆ.

   23. ಸೃಷ್ಟಿ ಗಣಪತಿಯ ಈ ಸಣ್ಣರೂಪವು ಮೂಷಕ ವಾಹನವಾಗಿದ್ದು ಒಳ್ಳೆಯ ಮೂಡ್ ನಲ್ಲಿ ಕಾಣಿಸಿಕೊಳ್ಳುತ್ತಾನೆ.

   24. ಉದ್ದಂಡ ಗಣಪತಿಯು ವಿಶ್ವದಲ್ಲಿ ಧರ್ಮವನ್ನು ಪರಿಪಾಲಿಸುತ್ತಾನೆ. ಈ ಗಣಪತಿಯ 10 ಕೈಗಳನ್ನು ಹೊಂದಿದ್ದು ವಿಶ್ವದಲ್ಲಿರುವ ಎಲ್ಲಾ 10 ಒಳ್ಳೆಯ ಅಂಶಗಳನ್ನು ಪ್ರತಿನಿಧಿಸುತ್ತಾನೆ.

   ಋಣಮೋಚನ ಗಣಪತಿ, ದುಂಡಿ ಗಣಪತಿ

   ಋಣಮೋಚನ ಗಣಪತಿ, ದುಂಡಿ ಗಣಪತಿ

   25. ಋಣಮೋಚನ ಗಣಪತಿಯು ಮಾನವ ಕುಲವನ್ನು ಕೀಳರಿಮೆ ಮತ್ತು ಸಾಲಗಳಿಂದ ಮುಕ್ತಗೊಳಿಸುತ್ತಾನೆ. ಗಣಪತಿಯ ಈ ಅವತಾರವು ಬೂದು ಬಣ್ಣದಿಂದ ಕೂಡಿರುತ್ತದೆ.

   26. ದುಂಡಿ ಗಣಪತಿಯು ಕೆಂಪು ವರ್ಣದಲ್ಲಿದ್ದು ಕೈಗಳಲ್ಲಿ ರುದ್ರಾಕ್ಷದ ಮಾಲೆಯನ್ನು ಹೊಂದಿರುತ್ತಾನೆ.

   27. ದ್ವಿಮುಖ ಗಣಪತಿಯ ಹೆಸರೇ ಸೂಚಿಸುವಂತೆ ಎರಡು ತಲೆಗಳನ್ನು ಹೊಂದಿದ್ದು, ಎರಡು ಕಡಗೆ ಮುಖ ಮಾಡಿರುತ್ತಾನೆ. ಈತನ ಬಣ್ಣ ನೀಲಿ.

   28. ತ್ರಿಮಖ ಗಣಪತಿಯು ಮೂರು ಮುಖಗಳನ್ನು ಹೊಂದಿದ್ದು ಚಿನ್ನದ ಕಮಲದ ಹೂವಿನ ಮೇಲೆ ಆಸಿನನಾಗಿರುತ್ತಾನೆ.

   ಸಿಂಹ ಗಣಪತಿ, ಯೋಗ ಗಣಪತಿ

   ಸಿಂಹ ಗಣಪತಿ, ಯೋಗ ಗಣಪತಿ

   29. ಸಿಂಹ ಗಣಪತಿಯು ತಾನು ಕುಳಿತ ಸಿಂಹದಿಂದಾಗಿ ಈ ಹೆಸರು ಪಡೆದಿರುತ್ತಾನೆ.

   30. ಯೋಗ ಗಣಪತಿಯು ಪದ್ಮಾಸನದಲ್ಲಿ ಕುಳಿತಿರುತ್ತಾನೆ ಮತ್ತು ಧ್ಯಾನ ಯೋಗ ನಿರತನಂತೆ ಕಾಣುತ್ತಾನೆ.

   31. ದುರ್ಗಾ ಗಣಪತಿಯು ಗಣಪತಿಯ ಒಂದು ಅವತಾರವಾಗಿದ್ದು ಈ ಅವತಾರದಲ್ಲಿ ಈತ ತನ್ನು ಮಾತೆಯಾದ ದುರ್ಗಾ ದೇವಿಯಿಂದ ಶಕ್ತಿಗಳನ್ನು ಸಂಪಾದಿಸಿರುತ್ತಾನೆ.

   32. ಸಂಕಷ್ಟ ಹರ ಗಣಪತಿಯ ಈ ಅವತಾರವು ಮಾನವ ಕುಲದ ಸಂಕಷ್ಟಗಳನ್ನು ನಿವಾರಿಸುತ್ತಾನೆ.

   lok-sabha-home

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Ganesha festival is celebrated by Hindus all over the world a a big festival. Every year this festival falls on 4th day of Badhrupada month(This year Sep 13). Here are 32 names of lord Ganesha and their meaning, everyone should know before celebrating the festival.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more