Get Updates
Get notified of breaking news, exclusive insights, and must-see stories!

Ganesh Chaturthi 2025 Wishes: ಗಣೇಶ ಚತುರ್ಥಿಯ ಶುಭ ಸಂದರ್ಭದಲ್ಲಿ ನಿಮ್ಮ ಪ್ರೀತಿ ಪಾತ್ರರಿಗೊಂದು ಸಂದೇಶ!

ಗಣೇಶ ಚತುರ್ಥಿಯನ್ನು ಆಗಸ್ಟ್‌ 27ರಂದು ಅಂದರೆ ಬುಧವಾರದಂದು ಆಚರಿಸಲಾಗುತ್ತದೆ. ಗಣೇಶ ಚತುರ್ಥಿ ಹಬ್ಬವು ಶಿವ ಪಾರ್ವತಿ ಸುತನಾದ ಗಣೇಶನನ್ನು ಭೂಮಿಗೆ ಆಹ್ವಾನಿಸುವ ದಿನವಾಗಿದೆ. ಹೀಗಾಗಿ ಎಲ್ಲರ ಮನೆಯಲ್ಲೂ ಸಂಭ್ರಮ ಮನೆ ಮಾಡಿದೆ. ಹೊಸ ಉಡುಗೆಯನ್ನುಟ್ಟು, ಮನೆಯಲ್ಲಿ ಗೌರಿ ಗಣೇಶನ ವಿಗ್ರಹವನಿಟ್ಟು ಶ್ರದ್ಧಾ ಭಕ್ತಿಯಿಂದ ಪೂಜಿಸಿ ಗಣೇಶ ಚತುರ್ಥಿಯನ್ನು ಆಚರಿಸಲು ಈಗಾಗಲೇ ಜನರು ಕಾತುರದಿಂದ ಕಾಯುತ್ತಿದ್ದಾರೆ.

ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಪ್ರಮುಖ ಹಬ್ಬವೆಂದು ಪರಿಗಣಿಸಲಾದ ಗಣೇಶ ಚತುರ್ಥಿ ಭಕ್ತರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯ ಸಂಕೇತವಾಗಿದೆ. ಈ ಗಣೇಶ ಚತುರ್ಥಿ ಹಬ್ಬವನ್ನು ದೇಶ ವಿದೇಶಗಳಲ್ಲೂ ಆಚರಿಸಲಾಗುತ್ತದೆ. ಈ ಹಬ್ಬವನ್ನು ಆಚರಿಸುವುದಕ್ಕಾಗಿ ಜನರು ತಮ್ಮ ಮನೆಗಳಲ್ಲಿ, ಕಛೇರಿಗಳಲ್ಲಿ, ಪೆಂಡಲ್‌ಗಳಲ್ಲಿ ಗಣೇಶನ ವಿವಿಧ ರೀತಿಯ ಅಲಂಕಾರವುಳ್ಳ ಗಣೇಶನ ವಿಗ್ರಹವನ್ನಿಟ್ಟು ಪೂಜೆಯನ್ನು ಮಾಡುತ್ತಾರೆ.

ganesh chaturthi 2025 best wishes motivational quotes and whatsapp status for the festival

ಗಣೇಶನ ಆರಾಧನೆಯೊಂದಿಗೆ ಮನೆಯಲ್ಲಿ ಸಂತೋಷದ ವಾತಾವರಣವನ್ನು ಸೃಷ್ಟಿಸಲು ಹಾಗೂ ನಿಮ್ಮ ಪ್ರೀತಿಪಾತ್ರರಿಗೆ ಹಾರೈಸಲು ಇದೊಂದು ವಿಶೇಷ ಸಂದರ್ಭವಾಗಿದೆ. ಗೌರಿ ಗಣೇಶ ಹಬ್ಬದ ದಿನದಂದು ನಾವು ನಮ್ಮ ಪ್ರೀತಿ ಪಾತ್ರರೊಂದಿಗೆ, ಸ್ನೇಹಿತರೊಂದಿಗೆ ಅಥವಾ ಕುಟುಂಬದ ಸದಸ್ಯರೊಂದಿಗೆ ಶುಭ ಶುಭಾಶಯಗಳನ್ನು ಹಂಚಿಕೊಳ್ಳುವ ಮೂಲಕ ಅವರಿಗೆ ಗಣೇಶನ ಆಶೀರ್ವಾದವನ್ನು ಕೋರುತ್ತೇವೆ. 2025ರ ಗೌರಿ ಗಣೇಶ ಹಬ್ಬದ ಶುಭಾಶಯಗಳು ಯಾವುವು ಗೊತ್ತೇ.? ಈ ವಿಶೇಷ ಸಂದರ್ಭದಲ್ಲಿ ನಿಮ್ಮ ಆಪ್ತರಿಗೆ ಹಾಗೂ ಕುಟುಂಬಸ್ಥರಿಗೆ ತಿಳಿಸಲು ಕೆಲವು ಶುಭಾಶಯ ಸಂದೇಶಗಳು ಇಲ್ಲಿವೆ.

ಗಣೇಶ ಚತುರ್ಥಿ 2025 ರ ಶುಭಾಶಯಗಳು:-

* 2025 ರ ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು! ಗಣೇಶನು ಎಲ್ಲಾ ಅಡೆತಡೆಗಳನ್ನು ತೆಗೆದುಹಾಕಿ ನಿಮ್ಮ ಜೀವನವನ್ನು ಶಾಂತಿ ಮತ್ತು ಸಮೃದ್ಧಿಯಿಂದ ಆಶೀರ್ವದಿಸಲಿ.

* ಈ ಶುಭ ದಿನದಂದು, ಬಪ್ಪಾ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಸಂತೋಷ, ಬುದ್ಧಿವಂತಿಕೆ ಮತ್ತು ಅದೃಷ್ಟವನ್ನು ತರಲಿ.

* ಗಣೇಶ ಚತುರ್ಥಿಯ ಶುಭಾಶಯಗಳು! ಗಣೇಶನ ಆಶೀರ್ವಾದವು ನಿಮ್ಮ ಮನೆಯಲ್ಲಿ ಸಕಾರಾತ್ಮಕತೆ ಮತ್ತು ಸಾಮರಸ್ಯವನ್ನು ತುಂಬಲಿ.

* ಗಣೇಶ ಚತುರ್ಥಿಯನ್ನು ಭಕ್ತಿ ಮತ್ತು ಸಂತೋಷದಿಂದ ಆಚರಿಸಿ - ಈ ಹಬ್ಬದ ಋತುವಿನಲ್ಲಿ ನಿಮಗೆ ಅಂತ್ಯವಿಲ್ಲದ ಆಶೀರ್ವಾದಗಳನ್ನು ಹಾರೈಸುತ್ತೇನೆ.

* ಗಣೇಶನ ಆಗಮನವು ನಿಮ್ಮ ಜೀವನದಲ್ಲಿ ಹೊಸ ಆರಂಭಗಳು ಮತ್ತು ಪ್ರಕಾಶಮಾನವಾದ ದಿನಗಳನ್ನು ತರಲಿ.

* ನಿಮಗೆ ಮತ್ತು ನಿಮ್ಮ ಪ್ರೀತಿಪಾತ್ರರಿಗೆ ಪ್ರೀತಿ, ನಗು ಮತ್ತು ಸಮೃದ್ಧಿಯಿಂದ ತುಂಬಿದ ಗಣೇಶ ಚತುರ್ಥಿಯ ಶುಭಾಶಯಗಳು.

* 2025 ರ ಗಣೇಶ ಚತುರ್ಥಿಯ ಶುಭಾಶಯಗಳು! ಗಣೇಶನು ನಿಮ್ಮ ಪ್ರಾರ್ಥನೆಗಳನ್ನು ಕೇಳಲಿ ಮತ್ತು ನಿಮ್ಮ ಆಸೆಗಳನ್ನು ಈಡೇರಿಸಲಿ.

* ಈ ಪವಿತ್ರ ಸಂದರ್ಭದಲ್ಲಿ, ಗಣೇಶನು ನಿಮಗೆ ಶಕ್ತಿ, ಬುದ್ಧಿವಂತಿಕೆ ಮತ್ತು ಆಂತರಿಕ ಶಾಂತಿಯನ್ನು ಧಾರೆಯೆರೆಯಲಿ.

* ಗಣಪತಿ ಬಪ್ಪನ ಆಶೀರ್ವಾದ ಯಾವಾಗಲೂ ನಿಮ್ಮೊಂದಿಗೆ ಇರಲಿ ಮತ್ತು ಯಶಸ್ಸು ಮತ್ತು ಸಂತೋಷದ ಕಡೆಗೆ ನಿಮ್ಮನ್ನು ಕರೆದೊಯ್ಯಲಿ.

* ನಾಡಿನ ಸಮಸ್ತ ಜನರಿಗೂ 2025ರ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.

* ಸರ್ವರಿಗೂ 2025ರ ಗೌರಿ ಗಣೇಶ ಹಬ್ಬದ ಶುಭಾಶಯಗಳು

* ನಿಮಗೂ ನಿಮ್ಮ ಕುಟುಂಬಕ್ಕೂ ಗೌರಿ ಗಣೇಶ ಹಬ್ಬದ ಶುಭಾಶಯಗಳು.

* ಎಲ್ಲರಿಗೂ ಗಣೇಶ ಐಶ್ವರ್ಯ, ಆರೋಗ್ಯ, ಸಮೃದ್ಧಿಯನ್ನು ಕರುಣಿಸಿ ಕಾಪಾಡಲಿ.. 2025ರ ಗಣೇಶ ಚತುರ್ಥಿ ಶುಭಾಶಯಗಳು.

* ಈ ಗಣೇಶ ಚತುರ್ಥಿಯು ನಿಮ್ಮೆಲ್ಲಾ ಕನಸುಗಳನ್ನು ನನಸಾಗುವಂತೆ ಮಾಡಲಿ.. 2025ರ ಗಣೇಶ ಚತುರ್ಥಿ ಶುಭಾಶಯಗಳು.

* 2025ರ ಗಣೇಶ ಚತುರ್ಥಿಯು ನಿಮಗೆ ಧೌರ್ಯ, ಶಕ್ತಿ, ಸಂತೋಷವನ್ನು ತರಲಿ.. ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+