Dussehra 2023: ದಸರಾ ದಿನದಂದು ಈ ಪಕ್ಷಿಯನ್ನು ನೋಡುವುದು ಮಂಗಳಕರ..
ದಸರಾ ಹಬ್ಬವು ಕೆಟ್ಟದ್ದರ ವಿರುದ್ಧ ಒಳಿತಿನ ವಿಜಯದ ಸಂದೇಶವನ್ನು ನೀಡುತ್ತದೆ. ನಂಬಿಕೆಯ ಪ್ರಕಾರ ಈ ದಿನದಂದು ಶ್ರೀರಾಮನು ಲಂಕಾ ರಾಜ ರಾವಣನನ್ನು ಕೊಂದನು. ಆದ್ದರಿಂದ ಪ್ರತಿ ವರ್ಷ ಈ ದಿನದಂದು ರಾವಣನ ಪ್ರತಿಕೃತಿಯನ್ನು ಸುಡಲಾಗುತ್ತದೆ. ಈ ದಿನದಂದು ದೇಶದ ವಿವಿಧೆಡೆ ರಾವಣನ ಪ್ರತಿಕೃತಿಯನ್ನು ದಹಿಸುವ ಮೂಲಕ ಕೆಟ್ಟದನ್ನು ತೊಡೆದುಹಾಕಲಾಗುತ್ತದೆ.
ದಸರಾಗೆ ಸಂಬಂಧಿಸಿದಂತೆ ಅನೇಕ ಜನಪ್ರಿಯ ನಂಬಿಕೆಗಳಿವೆ. ಮತ್ತೊಂದು ನಂಬಿಕೆ ಪ್ರಕಾರ ದಸರಾ ದಿನದಂದು ನೀಲಕಂಠ ಪಕ್ಷಿಯನ್ನು ನೋಡುವುದು ಮಂಗಳಕರವೆಂದು ನಂಬಲಾಗಿದೆ. ಈ ಪಕ್ಷಿಯನ್ನು ಶಿವನ ರೂಪವೆಂದು ಕರೆಯಲಾಗುತ್ತದೆ. ಹೀಗಾಗಿ ದಸರಾ ಹಬ್ಬದಂದು ನೀಲಕಂಠ ಪಕ್ಷಿಯನ್ನು ನೋಡುವುದು ತುಂಬಾ ಶುಭ ಎನ್ನಲಾಗುತ್ತದೆ. ಹಾಗಾದರೆ ಈ ಪಕ್ಷಿಯನ್ನು ದಸರಾ ಹಬ್ಬದಂದು ನೊಡುವುದರಿಂದ ಏನೆಲ್ಲಾ ಒಳಿತಾಗುತ್ತದೆ.

ದಸರಾ ಆಚರಣೆ ದಿನಾಂಕ ಮತ್ತು ಸಮಯ
ಹಿಂದೂ ಧರ್ಮದಲ್ಲಿ ದಸರಾ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಈ ವರ್ಷ ದಸರಾವನ್ನು ಅಕ್ಟೋಬರ್ 24 ರಂದು ಆಚರಿಸಲಾಗುತ್ತದೆ. ಈ ಬಾರಿಯ ದಸರಾವನ್ನು ವೃದ್ಧಿ ಯೋಗ ಮತ್ತು ರವಿಯೋಗದಲ್ಲಿ ಆಚರಿಸಲಾಗುವುದು. ಈ ವರ್ಷವೂ ದಸರಾ ಹಬ್ಬದಂದು ಎರಡು ಶುಭ ಯೋಗಗಳು ರೂಪುಗೊಳ್ಳುತ್ತಿವೆ.
ಈ ವರ್ಷ, ಅಶ್ವಿನ್ ಮಾಸದ ಶುಕ್ಲ ಪಕ್ಷದ ದಶಮಿ ತಿಥಿ ಅಕ್ಟೋಬರ್ 23 ರಂದು ಸಂಜೆ 5:44 ಕ್ಕೆ ಪ್ರಾರಂಭವಾಗಿ ಅಕ್ಟೋಬರ್ 24 ರಂದು ಮಧ್ಯಾಹ್ನ 3:14 ಕ್ಕೆ ಕೊನೆಗೊಳ್ಳುತ್ತದೆ. ಉದಯ ತಿಥಿಯ ಪ್ರಕಾರ ಈ ವರ್ಷ ಅಕ್ಟೋಬರ್ 24 ರಂದು ದಸರಾ ಹಬ್ಬವನ್ನು ಆಚರಿಸಲಾಗುವುದು. ಪ್ರತಿ ವರ್ಷ ದಸರಾ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ತೊಂದರೆಗಳಿಂದ ಮುಕ್ತಿ
ವಿಜಯದಶಮಿಯ ದಿನ ನೀಲಕಂಠ ಪಕ್ಷಿ ಬಂದು ಕೂರುವ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸುತ್ತದೆ. ಇದಲ್ಲದೆ ಮನುಷ್ಯನ ಎಲ್ಲಾ ಪಾಪಗಳು ಮತ್ತು ದುಃಖಗಳು ಸಹ ದೂರವಾಗುತ್ತವೆ ಎಂದು ನಂಬಲಾಗುತ್ತದೆ.

ಧಾರ್ಮಿಕ ಗ್ರಂಥಗಳ ಪ್ರಕಾರ, ದಸರಾ ದಿನದಂದು ನೀಲಕಂಠ ಪಕ್ಷಿಯನ್ನು ನೋಡುವುದು ಅದೃಷ್ಟವನ್ನು ತರುತ್ತದೆ. ಮನೆಯಲ್ಲಿ ಆಶೀರ್ವಾದಕ್ಕೆ ಕೊರತೆಯಿರುವುದಿಲ್ಲ. ಆದರೆ ನೀಲಕಂಠ ಪಕ್ಷಿಗಳು ಕಾಣಸಿಗುವುದು ತುಂಬಾ ಅಪರೂಪ. ಒಂದು ವೇಳೆ ದಸರಾ ದಿನದಂದು ನೀವು ಈ ಪಕ್ಷಿಯನ್ನು ನೋಡಿದರೆ, ನಿಮ್ಮ ಒಳ್ಳೆಯ ದಿನಗಳು ಪ್ರಾರಂಭವಾಗುತ್ತವೆ ಎಂದರ್ಥ.
ನೀಲಕಂಠ ದರ್ಶನದ ಮಹತ್ವ
ದಸರಾ ದಿನದಂದು ನೀಲಕಂಠ ಪಕ್ಷಿಯನ್ನು ನೋಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಇದಕ್ಕೆ ಒಂದು ಜನಪ್ರಿಯ ದಂತಕಥೆ ಇದೆ. ನೀಲಕಂಠನನ್ನು ಶಿವನ ಸಂಕೇತವೆಂದು ಪರಿಗಣಿಸಲಾಗಿದೆ. ಪುರಾಣಗಳ ಪ್ರಕಾರ, ರಾವಣನನ್ನು ಕೊಂದ ನಂತರ ರಾಮನು ಬ್ರಾಹ್ಮಣನನ್ನು ಕೊಂದ ಪಾಪದ ಆರೋಪವನ್ನು ಹೊಂದಿದ್ದನು. ಈ ಪಾಪದಿಂದ ಮುಕ್ತಿ ಪಡೆಯಲು ರಾಮನು ಶಿವನನ್ನು ಆರಾಧಿಸಿದನು. ಈ ಪಾಪದಿಂದ ಶ್ರೀರಾಮನನ್ನು ಮುಕ್ತಗೊಳಿಸಲು ಶಿವನು ನೀಲಕಂಠ ಪಕ್ಷಿಯ ರೂಪದಲ್ಲಿ ಕಾಣಿಸಿಕೊಂಡನು. ಅಂದಿನಿಂದ ದಸರಾ ದಿನದಂದು ನೀಲಕಂಠ ಪಕ್ಷಿಯನ್ನು ನೋಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ದಸರಾ ದಿನದಂದು ನೀಲಕಂಠ ಪಕ್ಷಿ ಕಂಡರೆ ಮಂತ್ರವನ್ನು ಪಠಿಸಿ. ಶಿವನನ್ನು ಆರಾಧಿಸಿ.












Click it and Unblock the Notifications