• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬದುಕಿನ ದೀವಟಿಗೆ ಹಚ್ಚುವ ದೀಪಾವಳಿಯ ಎರಡು ಮುಖಗಳು

By ವಿಶ್ವಾಸ ಸೋಹೋನಿ
|

ಊರಿಗೆ ಬಂತು ದೀಪಾವಳಿ, ಅಪ್ಪನ ಜೇಬಿಗೆ ದಿವಾಳಿ! ಇದುವೇ ಇತ್ತೀಚಿನ ದೀಪಾವಳಿ. ಇಂದು ನೂತನ ಮಾದರಿಯ ಪಟಾಕಿಗಳಿಂದ ಸಿಡಿದ ಬಡಿದ ಶಬ್ದಗಳು, ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ, ದಾರಿಹೋಕರಿಗೆ, ಪ್ರಾಣಿಗಳಿಗೆ ಒಂದು ಗಂಡಾಂತರವೇ ಸರಿ. ಈ ದೀಪಾವಳಿ ಹಬ್ಬ ಯಾಕ್ಬಂತೋ' ಎಂದು ಉದ್ಗಾರ ತೆಗೆಯುವ ಅನೇಕರ ಅಭಿಪ್ರಾಯಕ್ಕೆ ಅಭಿಮತವೇ ಇಲ್ಲದಂತಾಗಿದೆ.

ದೀಪಾವಳಿ ವಿಶೇಷ ಪುರವಣಿ

ಹಿರಿವಯಸ್ಸಿನವರಿಂದ ಹಿಡಿದು ಕಿರಿಯ ವಯಸ್ಸಿನವರಿಗೂ ಇಂದು ಪಟಾಕಿ, ಬಾಣ-ಬಿರಿಸು, ಭೂಚಕ್ರ, ಅಟಂ ಬಾಂಬ್,ರಾಕೇಟ್, ಬೆಳ್ಳೊಳಿ ಪಟಾಕಿ, ಸುರಸುರಬತ್ತಿ, ಫ್ಲಾವರ-ಕಾರಂಜಿ, ಚಟಪಟ್, ಮುಂತಾದವು ಹಚ್ಚದಿದ್ದರೆ, ದೀಪಾವಳಿ ಹಬ್ಬ ಆಗುವುದೇ ಇಲ್ಲ. ಹೀಗೆ ಇತ್ತೀಚಿನ ದೀಪಾವಳಿ ಹಬ್ಬ ಮೇರೆಯುತ್ತಿದೆ. ಇದರಿಂದ ವಾಯು ಮಾಲಿನ್ಯ, ಶಬ್ದ ಮಾಲಿನ್ಯವಾಗುತ್ತದೆ. ಅನೇಕರು ಪ್ರಾಣ ಕಳೆದುಕೋಳ್ಳುತ್ತಾರೆ. ಹಲವರು ಕಣ್ಣು, ಕೈಕಾಲಗಳಿಗೆ ಗಾಯ ಮಾಡಿಕೊಳ್ಳುತ್ತಾರೆ.

ದೀಪಾವಳಿಗೆ ಇರುವ ಪಟಾಕಿ ದಾಸ್ತಾನು ಬಳಕೆ; ದೆಹಲಿ, ಎನ್ ಸಿಆರ್ ಗೆ ನಿರ್ಬಂಧ

ಶತಮಾನ ಮುಟ್ಟಬೇಕೆಂದಿರುವ ಕೆಲವು ಹಿರಿಯ ವ್ಯಕ್ತಿಗಳ ಬಳಿ ಹೋಗಿ 'ಏನ್ರೀ ನಿಮ್ಕಾಲದಲ್ಲಿ ಇಂಥ ಪಟಾಕಿ ಇತ್ತೇನ್ರಿ' ಎಂದು ಇಂದಿನ ಯುವಕರು ಪ್ರಶ್ನಿಸಿದರೆ-'ಮಕ್ಳು ತಿನ್ನೋ ಕಾಲಕ್ಕೆ ಬರಾಬಂತು ಎನ್ನುವ ಹಾಗೆ ಹೊಟ್ಟೆಗೆ ತಿನ್ಲಿಲ್ಲ, ಬಟ್ಟೆ ತೊಡ್ಲಿಲ್ಲ, ಬರೆ ಕಿವಿ ಕಿವುಡಾಗೋ ಶಬ್ದ ಕೇಳೋಕೆ ಹಣಸುರಿದು ಕುಣಿದು ಕುಪ್ಳುಸೋ ಜನಾನೋಡಿ ನಗಬೇಕೋ, ಅಳಬೇಕೋ ನೀವೇ ಹೇಳಿ?' ಎನ್ನುವ ಅವರ ಮಾತಿನ ಹಿನ್ನೆಲೆಯಲ್ಲಿ ಅಡಗಿರುವ ನೋವು ಅರಿಯದೆ ಮೂಕಪಶುವಿನಂತಾಗಿದ್ದಾರೆ. ಇದು ದೀಪಾವಳಿಯ ಒಂದು ಮುಖ!

ಹಬ್ಬವೆಂದರೆ ಹರ್ಷವಿರಬೇಕು

ಹಬ್ಬವೆಂದರೆ ಹರ್ಷವಿರಬೇಕು

‘ಹಬ್ಬ ಎಂದರೆ ಹರ್ಷವಾಗಿರಬೇಕು,' ಎಂದು ಎಲ್ಲರೂ ತಿಳಿದೇ, ತಮ್ಮ ತಮ್ಮ ಶಕ್ತ್ಯಾನುಸಾರ ವಿವಿಧ ಭಕ್ಷ ಭೋಜ್ಯಗಳನ್ನು ಮಾಡಿ ಧೂಪ-ದೀಪ-ನೈವೇದ್ಯಗಳಿಂದ ಪೂಜಿಸಿ, ತಿಂದು, ಹರಿಕಥೆ, ಕೀರ್ತನೆ, ದೇವಾಲಯಗಳಿಗೋ ಹೋಗಿ, ದಿನ ಕಳೆಯುವರೂ ಇದ್ದಾರೆ. ದೀಪಾವಳಿ ಕೆಲ ವರ್ತಕರಿಗೆ ಅದರಲ್ಲೂ ಉತ್ತರ ಭಾರತದ ಸಿಂಧಿ, ಮಾರ್ವಾಡಿ ಜನಾಂಗಗಂತೂ ಹಳೆಯ ಲೆಕ್ಕಾಚಾರವನ್ನು ಮುಗಿಸಿ ಹೋಸ ಲೆಕ್ಕಾಚಾರವನ್ನು ಪ್ರಾರಂಭಿಸುವ ಸುದಿನವಾಗಿದೆ. ಗೊಡೆಗಳ ಮೇಲೆ ಪುಸ್ತಕಗಳ ಮೇಲೆ ‘ಶುಭ-ಲಾಭ' ಹಾಗೂ ಸ್ವಸ್ತಿಕ್ ಚಿನ್ಹೆ ಹಾಕುವ ಪದ್ಧತಿ ಇದ್ದರೂ, ಉದ್ದೇಶ ತಿಳಿಯದವರಾಗಿದ್ದಾರೆ.

ಹೀಗೆ ನಮ್ಮ ಭಾರತೀಯ ಹಬ್ಬಗಳನ್ನು, ವಿವಿಧ ದೇಶಗಳಲ್ಲಿ ವಿವಿಧ ರೀತಿಯಲ್ಲಿ ಆಚರಿಸುತ್ತಾರೆ. ಪ್ರತಿ ಹಬ್ಬಕ್ಕೂ ಅದಕ್ಕೆ ಸರಿ ಹೊಂದುವಂತೆ, ಒಂದು ಪುರಾಣಕತೆಯನ್ನು ಬೆಸೆದು ಹಬ್ಬಕ್ಕೆ ಮೆರುಗು ಹಾಕಿದ್ದಾರೆ. ಆದರೆ ಆ ಮೆರುಗು ಮಿಂಚುವ ಬದಲು ದಿನೇ ದಿನೇ ಅಧ್ಯಾತ್ಮ-ನೈತಿಕ ಜೀವನವನ್ನು ಕಳೆದುಕೊಂಡು ತನ್ನ ಸೊಬಗನ್ನು ಕ್ಷೀಣಿಸಿಕೊಳ್ಳುತ್ತಿದೆಯೆಂದು ಬಲ್ಲವರು ವಿಚಾರಮಾಡಿದಾಗಲೇ ಮಂಗಲವಾದೀತು.

ಈ ಪಟಾಕಿಗಳಿಂದ ಮಾಲಿನ್ಯ ಆಗುವುದಿಲ್ಲ: 'ಹಸಿರು ಪಟಾಕಿ' ಹೊಸ ಫಾರ್ಮುಲಾ ಸಿದ್ಧ

ದೈವೀಗುಣದ ಸ್ಥಾಪನೆಗಾಗಿ!

ದೈವೀಗುಣದ ಸ್ಥಾಪನೆಗಾಗಿ!

ಪರಮಪಿತ, ಪರಮಾತ್ಮ ನಿರಾಕಾರಿ ಜ್ಞಾನ ಜ್ಯೋತಿರ್ಬಿಂದು ಶಿವಪರಮಾತ್ಮ (ನಂದಾದೀಪ)ನು ಆತ್ಮಿಕ ಮಕ್ಕಳಿಗಾಗಿ ಹೇಳಿದ ಆತ್ಮ ಜ್ಞಾನವನ್ನು ಯಾರು ತಿಳಿದು, ಮತ್ತೊಬ್ಬರಿಗೆ ತಿಳಿಸುವರೋ ಅದರ ನೆನಪಿನ ಕುರುಹಿಗಾಗಿ ಒಂದು ಜ್ಯೋತಿ ಬೆಳಗಿಸವುದರ ರೂಢಿ ಪುರಾತನ ಕಾಲದಿಂದಲೂ ಬಂದಿದೆ.

ಅದಕ್ಕಾಗಿ ವರ್ತಮಾನ ಸಮಯವಾದ ಪುರುಷೋತ್ತಮ ಕಲ್ಯಾಣಕಾರಿ ಸಂಗಮಯುಗದಲ್ಲಿ ತಮ್ಮ ಮನ, ವಚನ, ಕರ್ಮಗಳನ್ನು ಪರಿವರ್ತಿಸಿಕೊಳ್ಳುವುದಕ್ಕಾಗಿ, ಅಸುರೀಗುಣಗಳ ನಿರ್ಮೂಲನ ಹಾಗೂ ದೈವೀಗುಣಗಳ ಸ್ಥಾಪನೆಯ ಸಂಕೇತವಾಗಿ ಹಿಂದಿನ ಲೆಕ್ಕವನ್ನು ಚುಕ್ತಗೊಳಿಸಿ, ಹೊಸ ಲೆಕ್ಕವನ್ನು ತೆರಿಯುವುದಾಗಿದೆ.

ಸುಜ್ಞಾನದ ಪ್ರತೀಕ ಬೆಳಕಿನ ಹಬ್ಬ ದೀಪಾವಳಿ ಆಚರಣೆಯ ಮಹತ್ವ

ಜ್ಞಾನವೇ ದೀಪ್ತಿ

ಜ್ಞಾನವೇ ದೀಪ್ತಿ

ಸ್ವ-ದರ್ಶನ ಚಕ್ರವನ್ನು ಹೊಸ ಪುಸ್ತಕದ ಮೇಲೆ ಬರೆದು ಶುಭಲಾಭವನ್ನು ಬರೆಯುವುದರ ಕುರುಹೆಂದರೆ, ಸತ್ಯಯುಗ ತ್ರೆತಾಯುಗದಲ್ಲಿ ಶುಭಲಾಭ ಪಡೆಯುವುದು.

ಕತ್ತಲನ್ನು ದೂರಮಾಡಿ ಬೆಳಕನ್ನು ಬೀರುವುದೇ ದೀಪಾವಳಿಯ ಸತ್ಯಾರ್ಥ. ‘ದೀಪ' ಎಂದರೆ, ಪ್ರಕಾಶ ಅರ್ಥಾತ್ ‘ಜ್ಞಾನ'ಎಂದರ್ಥ. ಜ್ಞಾನಿಗೆ ‘ಜ್ಞಾನವೇ ದೀಪ್ತಿ' ಎಲ್ಲಿ ಕತ್ತಲು ಇರುವುದೋ ಅಲ್ಲಿ ಒಂದು ಸಣ್ಣ ಕಿಡಿ ಕಂಡರೂ, ಅದು ತನ್ನ ಪ್ರಕಾಶದ ಪ್ರಭಾವ ತೋರುವುದು. ಅಂತೆಯೇ ಅಜ್ಞಾನವೇಂಬ ಕತ್ತಲು ದೂರೀಕರಿಸಲು ಜ್ಞಾನವೆಂಬ ದೀವಟಿಗೆ ಅವಶ್ಯಕ.

ಆಧ್ಯಾತ್ಮದ ಅಡಿಪಾಯ

ಆಧ್ಯಾತ್ಮದ ಅಡಿಪಾಯ

ಅಂತೆಯೇ ಇಂದು ಪ್ರತಿ ಮನೆಮನೆಯಲ್ಲೂ, ಪ್ರತಿಯೊಬ್ಬರ ಮನಮನದಲ್ಲೂ ಜ್ಞಾನವೆಂಬ ದೀಪವು ಅವಳಿಯಗಿ ಅರ್ಥಾತ್ ಸಾಲುಸಾಲಾಗಿ ಬೆಳೆಯಲೆಂಬುದೇ, ದೀಪಾವಳಿಯ ಹಬ್ಬದ ಮೂಲ ಸಂದೇಶವಾಗಿದೆ.

ಜ್ಞಾನವೆಂದರೆ, ಇಂದು ನಾವು ಏನನ್ನು ತಿಳಿಯಬಯಸುತ್ತೇವೆಯೋ, ಅವುಗಳ ಪೂರ್ಣ ಪರಿಚಯವು ಜ್ಞಾನವೇ ಆಗಿದೆ. ಆದರೂ, ಮಾನವನಾಗಿ ಈ ಸೃಷ್ಟಿ ನಾಟಕ ರಂಗಮಂಚದಲ್ಲಿ ಮಾಡುತ್ತಿರುವ ಪಾತ್ರ ಪರಿಚಯವನ್ನು ಮಾಡಿ ಕೋಳ್ಳುವುದೇ ಆಧ್ಯಾತ್ಮದ ಅಡಿಪಾಯವಾದ ಆತ್ಮ ಜ್ಞಾನ, ನಾನು ಯಾರು? ಎಲ್ಲಿಂದ ಬಂದೆ? ಯಾವಾಗ ಬಂದೆ? ಏಕೆ ಬಂದೆ? ಮುಂದೇನು? ಇದೇ ಇದರ ವಿಚಾರ, ಆಶಾದೀಪ, ಕುಲದೀಪ, ದಾರೀದೀಪ, ಅದೃಷ್ಟದೀಪ, ವಿಜಯದೀಪ, ನಂದಾದೀಪ ಇತ್ಯಾದಿ. ಈ ಜಡ ದೀಪಗಲೇಲ್ಲವೂ ಜೈತನ್ಯ ಆತ್ಮ, ಪರಮಾತ್ಮನ ಪ್ರತೀಕವಾಗಿದೆ.

ಆತ್ಮದ ದೃಷ್ಟಿ

ಆತ್ಮದ ದೃಷ್ಟಿ

ಆತ್ಮ ಜ್ಯೋತಿಸ್ವರೂಪ ವಾಗಿರುವುದರಿಂದಲೇ ಆತ್ಮದ ದೃಷ್ಟಿ ಎಲ್ಲರಲ್ಲು ಬೆಳೆಯಬೇಕು ಎಂಬುದಾಗಿ ದೀಪದ ಸಂಕೇತ, ಪ್ರತಿ ಮನೇಯ ಬಾಗಿಲಲ್ಲಿ ದೀಪವನ್ನು ಇಡುತ್ತಾರೆ. ಕೆಲವರು ತಮ್ಮ ಮನೆಯನ್ನು ಅನೇಕ ದೀಪಗಳಿಂದ ಅಲಂಕರಿಸುತ್ತಾರೆ. ಹಾಗೂ ಅನೇಕ ದೇವಾಲಯಗಳಲ್ಲಿ ‘ಲಕ್ಷ ದೀಪೋತ್ಸವ' ಎಂದು ಆಚರಿಸುತ್ತಾರೆ. ಹೀಗೆ ದೆವಾಲಯಗಳಲ್ಲಿ ಹಚ್ಚುವ ಲಕ್ಞ ದೀಪೋತ್ಸವದಲ್ಲೂ ಸರ್ವರೂ ಭಾಗವಹಿಸುತ್ತಾರೆ. ಇಂತಹ ಲಕ್ಷ ದೀಪಗಳನ್ನು ಬೇಳಗಿಸಲು ಮೂಲ ‘ನಂದಾ' ದೀಪ. ಇದು ಪರಮಾತ್ಮನ ಪ್ರತಿಕ. ಜ್ಞಾನಜ್ಯೋತಿ ಪರಮಾತ್ಮನಿಂದ ಪಡೆದ ಜ್ಞಾನ ಒಂದು ಆತ್ಮನಿಂದ ಮತ್ತೋಬ್ಬನಿಗೆ ಬೆಳಗಿಸುವುದೆ ಒಂದು ಜ್ಯೋತಿ ಬೇರೊಂದು ಜ್ಯೋತಿಯನ್ನು ಹೊತ್ತಿಸಿ ಬೆಳೆಗಿಸುವ ಸಂಕೇತ.

English summary
Deepavali, festival of lights will be celebrated across India from Oct 6th to 8th this year. There are two ways to celebrating festival of lights,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X