ದೀಪಾವಳಿಗೆ ಪಟಾಕಿ ಸುಡುತ್ತೀರಾ.. ಸ್ವಲ್ಪ ಇದನ್ನೋದಿ ಬಿಡಿ !

ನರಕ ಚತುರ್ದಶಿಯ ದಿನ ಬೆಳಿಗ್ಗೆ ಎಲ್ಲರಿಗಿಂತ ಮುಂಚೆ ಎದ್ದು ಢೋಂ ಎಂದು ಪಟಾಕಿ ಒಡೆದು ಮನೆಯವರನ್ನು ಪಕ್ಕದ ಮನೆಯವರನ್ನು ಎಬ್ಬಿಸುವ ಮಜಾ ಗೊತ್ತಲ್ಲ ! ಆ ಸಣ್ಣ ಉಂಡೆ ಬಾಂಬ್‌ ಅಷ್ಟು ದೊಡ್ಡ ಸದ್ದು ಮಾಡುವಾಗ ಏನೋ ಒಂಥರಾ ಖುಷಿ. ಆದರೆ ಅದರೊಳಗಿರುವ ಕಟು ವಿಷದ ವಿಷಯ ನಿಮಗೆ ಗೊತ್ತಾ ...? ಗಂಧಕ, ರಂಜಕ, ಆರ್ಸೆನಿಕ್‌, ಕಾರ್ಬನ್‌, ಸತು, ಟ್ರೆೃ ಸೈಯನೇಟ್‌, ಪಾದರಸ... ಒಂದಾ ಎರಡಾ ... ಸಾಲು ಸಾಲು ವಿಷ ಉಗುಳುವ ಮೂಲ ವಸ್ತುಗಳು.

ಇಂಥ ವಸ್ತುಗಳನ್ನು ಬಳಸುವಾಗ ಆಗಬಹುದಾದ ಅನಾಹುತವನ್ನು ತಪ್ಪಿಸಲು ನೀವು ಗುರಾಣಿ ಸಹಿತ ಸಿದ್ಧ ರಾಗ ಬೇಕಲ್ಲ. ಅದಕ್ಕೆ ಟಿಪ್ಸ್‌ಗಳು ಇಲ್ಲಿವೆ.

ನೀವು ತಂದಿಟ್ಟಿರುವ ಪಟಾಕಿ ಚೀಲವನ್ನು ಡೈನಿಂಗ್‌ ಟೇಬಲ್‌ ಮೇಲೋ, ಸಿಟ್‌ಔಟ್‌ನಲ್ಲಿರುವ ಟೀಪಾಯಿ ಮೇಲೋ ಸ್ಕೂಲ್‌ ಬ್ಯಾಗ್‌ ಬಿಸಾಡಿದ ಹಾಗೆ ಬಿಸಾಡಬೇಡಿ. ಒಂದು ಪೆಟ್ಟಿಗೆಯಾಳಗೆ ಹಾಕಿ, ಮಕ್ಕಳು, ಮನೆಯ ಪುಟ್ಟ ತುಂಟ ಬೆಕ್ಕು, ನಾಯಿ ಮರಿಯ ಕೈಗೆಟುಕದಂತೆ ಸುರಕ್ಷಿತವಾದ ಕಡೆ ಜೋಪಾನವಾಗಿ ಎತ್ತಿಡಿ.

ಪಟಾಕಿ ಸದ್ದಿಗೆ ನಿಮ್ಮ ಮನೆಯ ಮುದ್ದು ಬೆಕ್ಕು, ಪಾಮೋರಿಯನ್‌ ನಾಯಿ ಬೆಚ್ಚಿ ಬಿದ್ದು , ಓಟ ಕೀಳುತ್ತದೆಯಲ್ಲಾ... ಅದಕ್ಕೆ ಪಟಾಕಿ ಸುಡುವಾಗ ಅವುಗಳನ್ನು ರೂಮಿನಲ್ಲಿಯೋ, ಚಾವಡಿಯಲ್ಲಿಯೋ ಕೂಡಿ ಹಾಕಿ, ನಂತರ ಬಾಗಿಲು ತೆಗೆದಾಗ ಕುರುಂ, ಕುರಂ ತಿಂಡಿ ಕೊಟ್ಟು ಸಾಂತ್ವನ ತೋರಿ ಸಿ. ಪಕ್ಕದ ಮನೆಯವರು ಪಾಟಾಕಿ ಒಡೆಯುವಾಗಲೂ ನಿಮ್ಮ ಮನೆಯ ಸಾಕು ಪ್ರಾಣಿಗಳ ಸುರಕ್ಷೆಯ ಮೇಲೆ ಒಂದು ಕಣ್ಣಿರಲಿ.

ನೀವು ಪಟಾಕಿಗೆ ಕಿಡಿ ತಾಗಿ-ಸು-ವ ಮುನ್ನ

ನಿಮ್ಮ ಪಟಾಕಿ ಬಾಕ್ಸ್‌ ನೀವು ಪಟಾಕಿ ಒಡೆಯುವ ಸ್ಥಳದಿಂದ ಸಾಕಷ್ಟು ದೂರದಲ್ಲಿರಲಿ. ಎರ-ಡು ಬಕೆಟ್‌ ನೀರು, ಒಂದು ಗೋಣಿ ಚೀಲವನ್ನು ರೆಡಿ ಮಾಡಿಟ್ಟುಕೊಂಡಿರಿ. ಮನೆಯ ಕಿಟಕಿ ಪರದೆಗಳನ್ನೆಲ್ಲಾ ಮೇಲೆತ್ತಿ ಕಟ್ಟಿ . ರಾಕೆಟ್‌ ಹಾರಿಸಲಿದ್ದೀರಿ ಎಂದಾದರೆ ಇನ್ನಷ್ಟು ಜಾಗ್ರತೆಯಾಗಿರುವುದು ಒಳಿತು. ಯಾಕೆಂದರೆ ರಾಕೆಟ್‌ಗಳು ಖಗೋಳ ಶಾಸ್ತ್ರ ಮರೆತು ಗೃಹ ಶಾಸ್ತ್ರವನ್ನು ಹಾಳು ಮಾಡು-ವ ಅಪಾಯ ಹೆಚ್ಚು, ವಿಶಾಲ ಪ್ರದೇಶದಲ್ಲಿ ಪಟಾಕಿ ಸಿಡಿಸುವ ಕಾರ್ಯಕ್ರಮವಿಟ್ಟುಕೊಳ್ಳಿ. ದೀಪಾವಳಿಯ ಹೊಸ ದಿರಿಸು ಹಾಕಿ ಕೊಂಡು ಯಾವತ್ತೂ ಪಟಾಕಿ ಸಿಡಿಸುವ ಸಂಭ್ರಮಕ್ಕೆ ಕೈ ಹಾಕಬೇಡಿ. ಜರಿ ಸೀರೆಗಳು, ಸಿಂಥೆಟಿಕ್‌ ಬಟ್ಟೆಗಳನ್ನು ಹಾಕಿಕೊಂಡರೆ ಅವುಗಳಿಗೆ ಪಟಾಕಿಯ ಕಿಡಿ ತಾಗಿ-ದರೂ ತೂತಾಗುತ್ತವೆ. ಪಟಾಕಿ ಒಡೆಯುವಾಗ ಅನಾಹುತವಾಗಿಯೇ ಆಗುತ್ತದೆ ಎಂದೇನೂ ಇಲ್ಲ. ಆದರೆ ಅನಾಹುತವಾದಾಗ ಆಗುವ ಅಪಾಯವನ್ನು ಕಡಿಮೆ ಮಾಡಲು ಎಲ್ಲ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ, ರಗಳೆಯಿಲ್ಲ ಅಲ್ಲವೇ ?

ತಣ್ಣಗಾಗಿರುವ ಪಟಾಕಿಗಳನ್ನು, ಹಾಳಾಗಿರುವ ಪಟಾಕಿಗಳನ್ನು ಒಡೆಯಲು ಶತ ಪ್ರಯತ್ನ ಯಾವತ್ತೂ ಮಾಡಬೇಡ. ಅರೆ ಬರೆಯಾಗಿ ಒಡೆದು ಅನಾಹುತ ನಿರ್ಮಿಸುತ್ತವೆ. ಪುಟಾಣಿಗಳ ಕೈಗೆ ಪಟಾಕಿ ಕೊಟ್ಟು ಅವರನ್ನು ರಂಜಿಸಬೇಕು ಎನ್ನುವ ಹುಮ್ಮಸ್ಸು ಬೇಡ. ಬೇರೆಯವರನ್ನು ಪಟಾಕಿ ಎಸೆದು ರೇಗಿಸುವ ತಪ್ಪನ್ನೂ ಮಾಡಬೇಡಿ. ಕಾನೂನಿನ ಪ್ರಕಾರ ಅದು ಅಪರಾಧ. ಪಟಾಕಿ ಪೊಟ್ಟಣದ ಮೇಲಿರುವ ಎಲ್ಲ ಸೂಚನೆಗಳನ್ನು ಒದಿ ಕೊಂಡು ಮುಂದುವರೆಯಬೇಕು. ಯಾರಾದರೂ ಒಬ್ಬರು ಮಾತ್ರ ಪಟಾಕಿ ಸುಡಬೇಕು. ಸ್ಪರ್ಧೆ ಬೇಡ . ಪಟಾಕಿ ಪೂರ್ತಿ ನಂದಿದ ನಂತರವೇ ಮುಂದುವರೆಯಿರಿ.

ಈ ಎಲ್ಲ ಮುಜಾಗ್ರತೆಯ ನಂತರವೂ ಏನಾದರೂ ಏನಾದರೂ ನಿಮ್ಮ ಮೈಗೆ ಬೆಂಕಿ ತಾಗಿದಲ್ಲಿ ತಕ್ಷಣ ನೆಲದ ಮೇಲೆ ಉರುಳಾಡಿ. ಬೆಂಕಿ ತಗುಲಿದಾತನನ್ನು ಗೋಣಿ ಚೀಲದಲ್ಲಿ ಸುತ್ತಿ ,ಉರುಳಾಡಿಸಿ. ಡಾಕ್ಟರ್‌ ಬಳಿ-ಗೆ ಕರೆದೊಯ್ಯಿರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+