ದಸರಾ: ಹುಬ್ಬಳ್ಳಿಯಲ್ಲಿ ಕಣ್ಣಿಗೆ, ಮನಸ್ಸಿಗೆ ಹಬ್ಬವೋ ಹಬ್ಬ
ಹುಬ್ಬಳ್ಳಿ, ಅಕ್ಟೋಬರ್, 13: ನವರಾತ್ರಿ- ದಸರಾ ಎಂದರೆ ಕರ್ನಾಟಕದಲ್ಲಿ ಕೇವಲ ಮೈಸೂರು ಎಂದುಕೊಂಡಿದ್ದಾರೆ ಎಷ್ಟೋ ಜನರು ಇಂದಿಗೂ. ಆದರೆ ಹುಬ್ಬಳ್ಳಿಯಲ್ಲಿನ ದಸರಾ ಮೈಸೂರಿಗಿಂತ ಕಮ್ಮಿಯೇನಿಲ್ಲ. ಆದರೆ ಇಲ್ಲಿ ರಾಜಮನೆತನದ ಅರಮನೆ ಮಾತ್ರ ಇಲ್ಲವೆಂಬುದು ಒಂದು ಕೊರತೆ ಅಷ್ಟೇ.
ಹುಬ್ಬಳ್ಳಿಗರು ನವರಾತ್ರಿ ಹಬ್ಬಕ್ಕೆ ಈಗಾಗಲೇ ತಯಾರಿ ಮಾಡಿಕೊಂಡಿದ್ದಾರೆ. ವಿವಿಧ ದೇವಸ್ಥಾನಗಳಲ್ಲಿ ನವರಾತ್ರಿಯಂಗವಾಗಿ ದೇವಿಯ ವಿಶೇಷ ಮೂರ್ತಿಗಳು ಪ್ರತಿಷ್ಠಾಪನೆಯಾಗಲಿವೆ. ವಿಶೇಷವೆಂದರೆ ದೇವಿ ಪ್ರತಿಷ್ಠಾಪನೆಗೊಂಡ ದೇವಾಲಯಗಳಲ್ಲಿ ನಿತ್ಯ ಸುಮಂಗಲೆಯರು ಆಗಮಿಸಿ ಅರಿಷಿಣ ಕುಂಕುಮ ತಂದು ದೇವಿಯನ್ನು ಪೂಜಿಸುತ್ತಾರೆ.
ಹೆಚ್ಚಾಗಿ ಸೋಮವಂಶದ ಸಹಸ್ರಾ ಕ್ಷತ್ರೀಯ ಸಮಾಜದವರು ದಸರಾ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಇದ್ದವರು ಸಾವಿರಾರು ರೂ. ಖರ್ಚು ಮಾಡಿ ಟಗರನ್ನು ತಂದು ಬಲಿಪಾಡ್ಯಮಿಯಂದು ಟಗರನ್ನು ದೇವಿಗೆ ಅರ್ಪಿಸುತ್ತಾರೆ. ಒಂದು ರೀತಿಯ ಹಬ್ಬದ ವಾತಾವರಣವೇ ಸೃಷ್ಟಿಯಾಗಿವೆ.[ಮೈಸೂರಿನಲ್ಲಿ ಗಜಪಡೆಯ ತಾಲೀಮು ಹೇಗಿರುತ್ತೆ ಗೊತ್ತಾ?]

ನಿತ್ಯ ದೇವಿಯನ್ನು ವಿವಿಧ ರೂಪಗಳಲ್ಲಿ, ಬಣ್ಣಗಳಲ್ಲಿ, ಸೀರೆಯಲ್ಲಿ ಅಲಂಕರಿಸುವುದರಿಂದ ದೇವಿಯ ದರ್ಶನ ಮಾಡುವುದೇ ಒಂದು ಸೌಭಾಗ್ಯ. ಹಲವಾರು ಜನರು ಮನೆಯಲ್ಲಿ ಘಟಸ್ಥಾಪನೆ ಮಾಡಿ ದೇವಿಯನ್ನು ಒಂಬತ್ತು ದಿನಗಳವರೆಗೆ ಆರಾಧಿಸುತ್ತಾರೆ.
ಇದೇ ರೀತಿ ಸಾಕಷ್ಟು ಬಡಾವಣೆಗಳಲ್ಲಿ ದೇವಿಯ ಪುರಾಣ, ಪ್ರವಚನ ನಡೆಯುತ್ತಿರುತ್ತದೆ. ಕೆಲವೆಡೆ ನಿತ್ಯ ಬೆಳಗ್ಗೆಯಿದ್ದರೆ ಇನ್ನಷ್ಟು ಕಡೆ ಸಂಜೆ ಈ ಕಾರ್ಯಕ್ರಮಗಳು ಜರುಗುತ್ತಿರುತ್ತವೆ. ಈ ಸಮಯದಲ್ಲಿ ಮಹಿಳೆಯರಿಗಾಗಿ ಅನೇಕ ರೀತಿಯ ಸ್ಪರ್ಧೆಗಳು ಹಾಗೂ ತರಬೇತಿಗಳನ್ನೂ ಕೂಡ ಹಮ್ಮಿಕೊಂಡಿರಲಾಗುತ್ತದೆ.
ವಿದೇಶಿಗರು ಇಂದಿಗೂ ನಮ್ಮ ಹಿಂದೂಸ್ಥಾನವನ್ನು ಅತೀ ಶ್ರೀಮಂತ ರಾಷ್ಟ್ರವೆಂದು ಹೊಗಳುತ್ತಾರೆ. ಅದೂ ದುಡ್ಡಿನ ವಿಷಯದಲ್ಲಿ. ಏಕೆಂದರೆ, ಹಬ್ಬದ ದಿನಗಳಲ್ಲಿ ನಮ್ಮ ಜನ 50 ಪೈಸೆಯ ನಿಂಬೆಕಾಯಿಯನ್ನು 5 ರೂಪಾಯಿಕ್ಕೊಂದರೆಂದರೂ ಕೂಡ ಸುಮ್ಮನೇ ತೆಗೆದುಕೊಳ್ಳುತ್ತಾರೆ. ಹೂಗಳು, ಮಾಲೆಗಳು ಮತ್ತು ಟೆಂಗಿನಕಾಯಿಗಳು ಕೂಡ ದುಪ್ಪಟ್ಟು ಬೆಲೆಯಿದ್ದರೂ ಕೊಟ್ಟು ತೆಗೆದುಕೊಂಡು ಎಷ್ಟೆಂದರೂ ದೇವಿಗೆ ತಾನೇ ? ಅದೇನು ಎಷ್ಟು ಖರ್ಚು ಮಾಡಿದರೂ ಕಡಿಮೆಯೇ. ನಾವು ಖರ್ಚು ಮಾಡಿದ್ದು ಬೇರೆ ರೂಪದಲ್ಲಿ ನಮಗೆ ಬರುತ್ತದೆ ಎಂಬುದು ನಂಬಿಕೆ ವಿಶ್ವಾಸ ನಮ್ಮ ದೇವಿಯ ಭಕ್ತರದು.
ಇನ್ನು ಹರೆಯದ ಹೆಣ್ಣು ಮಕ್ಕಳಂತೂ ನವರಾತ್ರಿಯ ಸಮಯದಲ್ಲಿ ಬಣ್ಣ ಬಣ್ಣದ ಸೀರೆಯುಟ್ಟ ಇಡೀ ಒಂಬತ್ತು ದಿನ ಹುರುಪಿನಿಂದಿದ್ದು ದೇವಿಯು ಹರಸುವುದನ್ನು ಕಾಯುತ್ತಿರುತ್ತಾರೆ. ಇದೇ ವಾತಾವರಣ ದಸರಾ ಹಬ್ಬದವರೆಗೂ ನಗರದೆಲ್ಲೆಡೆ ಕಂಡು ಬರುತ್ತದೆ. ಇನ್ನು, ಮಾರುಕಟ್ಟೆಯಲ್ಲಿ ವಿಶೇಷ ಆಫರ್ಗಳು, ರಿಯಾಯಿತಿಗಳನ್ನು ಘೋಷಿಸುವ ಅಂಗಡಿಕಾರರು ಹಬ್ಬದ ಖರೀದಿಗೆ ಜನರ ಬರಲು ಎಂದು ವಿಶೇಷ ಮಾರುಕಟ್ಟೆಯ ತಂತ್ರಗಳನ್ನು
ಅಳವಡಿಸಿಕೊಳ್ಳುತ್ತಾರೆ.[ದೇವರ ಪ್ರೀತಿಗೆ ಪಾತ್ರರಾಗಬೇಕೆ? ಹಾಗಾದ್ರೆ ದಸರಾ ಪೂಜೆ ಹೀಗಿರಲಿ]

ಪೊಲೀಸ್ ಇಲಾಖೆ ಪ್ರತಿನಿತ್ಯ ಸಂಚಾರಿ ನಿಯಮಗಳನ್ನುಂಘಿಸಿದವರ ದೂರುಗಳನ್ನು ದಾಖಲಿಸಿಕೊಂಡು ಒಟ್ಟು ದೂರುಗಳ ಸಂಖ್ಯೆ ಮತ್ತು ಪಡೆದುಕೊಂಡ ದಂಡಗಳ ವಿವರ ನಿತ್ಯ ಮಾಧ್ಯಮಗಳಿಗೆ ಮಾಡುತ್ತದೆ. ಆಧರೆ ವಾಣಿಜ್ಯ ತೆರಿಗೆ ಇಲಾಖೆ ಮಾತ್ರ ನಿತ್ಯ ಹಲವಾರು ದೂರುಗಳನ್ನು ದಾಖಲಿಸಿಕೊಂಡು ದಂಡಗಳನ್ನು ಸಂಗ್ರಹಿಸುತ್ತಿದ್ದರೂ ಒಂದಿನವೂ ಮಾಧ್ಯಮಗಳಿಗೆ ವಿವರಗಳನ್ನು ನೀಡದಿರುವುದು ವಿಶೇಷ.
ಈ ವಿಷಯ ಏಕೆಂದರೆ ನವರಾತ್ರಿಯ ದಿನಗಳಲ್ಲಿ ಹಬ್ಬದ ಖರೀದಿ ಒಂದೆಡೆ ಜೋರಿದ್ದರೆ, ಇತ್ತ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ತೆರಿಗೆ ವಂಚಿಸುವ ಅಂಗಡಿಕಾರರಿಗೆ ದಂಡ ಹಾಕುತ್ತಿರುತ್ತಾರೆ. ಆದರೆ ಅವುಗಳಲ್ಲಿ ಯಾವುದೂ ಕೂಡ ಮಾಧ್ಯಮಗಳಿಗೆ ಬಿಡುಗಡೆಯಾಗುವುದಿಲ್ಲ.
ಈ ಸಲವಾದರೂ ತೆರಿಗೆ ಇಲಾಖೆ ದಸರಾ ಹಬ್ಬದಲ್ಲಿ ನಡೆದ ದಾಳಿಗಳ ವಿವರ ನೀಡುತ್ತದೆಯೋ ಅಥವಾ ನವರಾತ್ರಿಯ ಸಡಗರದಲ್ಲಿ ಮುಳುಗಿರುವ ನಮ್ಮ ಜನ ಹಂಗೆನೇ ಹಬ್ಬದ ಖುಷಿಯಲ್ಲಿರುತ್ತಾರೋ ಆ ದೇವಿಯೇ ನೋಡಿಕೊಳ್ಳಬೇಕು.[ಚಿತ್ರ : ಕಿರಣ್ ಸ್ಟುಡಿಯೋ]












Click it and Unblock the Notifications