ಬಿದರಕ್ಕಿ ಬಿರಿಯಾನಿ, ಗಸಗಸೆ ಪಾಯಸ, ಇದು ದಸರಾ ವಿಶೇಷ
ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಡೆಯಲಿರುವ ಜನಪ್ರಿಯ ಆಹಾರ ಮೇಳದಲ್ಲಿ ಬುಡಕಟ್ಟು ಜನರ ಆಹಾರ ಪದ್ಧತಿಗಳನ್ನು ಉಣಬಡಿಸುವುದು ಈ ಬಾರಿಯೂ ಮುಂದುವರೆದಿದೆ. ಇತ್ತ ಮನೆಮನೆಗಳಲ್ಲಿ ಸಾಂಪ್ರದಾಯಿಕ ಆಚರಣೆ ವಿಧಿ ವಿಧಾನಗಳು ಪಾಡ್ಯದಿಂದ ಆರಂಭವಾಗಿ ದಶಮಿ ತನಕ ನಡೆಯಲಿದೆ.
ಅತ್ತ ಮೈಸೂರಿನಲ್ಲಿ ಈ ಬಾರಿಯೂ ದಸರಾ ಪ್ರಯುಕ್ತ ಸೆಪ್ಟೆಂಬರ್ 21 ರಿಂದ 28 ರವರೆಗೆ ಆಹಾರ ಮೇಳ ನಡೆಯಲಿದ್ದು, ಸ್ಕೌಟ್ ಅಂಡ್ ಗೈಡ್ಸ್ ಮೈದಾನ ಹಾಗೂ ಲಲಿತ ಮಹಲ್‍ನಲ್ಲಿ ನಡೆಯಲಿದೆ. ಮೇಳದಲ್ಲಿ 10 ಜಿಲ್ಲೆಗಳ ಬುಡಕಟ್ಟು ಸಮುದಾಯದವರು ಭಾಗವಹಿಸಿ ಬುಡಕಟ್ಟು ಆಹಾರವನ್ನು ನಗರ ಪ್ರದೇಶಿಗರಿಗೆ ಉಣಬಡಿಸಲಿದ್ದಾರೆ.
Recommended Video

ಆದಿವಾಸಿ ಬುಡಕಟ್ಟು ಆಹಾರ ಪದ್ಧತಿಯಂತೆ ತಯಾರಿಸಿದ ಬಂಬೂ ಬಿರಿಯಾನಿ ಈ ಬಾರಿಯೂ ಆಕರ್ಷಣೆ ಪಡೆದುಕೊಳ್ಳುವ ನಿರೀಕ್ಷೆಯಿದೆ.ಈ ಉದ್ದೇಶದಿಂದ ಮೂರು ಕಡೆಗಳಲ್ಲಿ ಆಹಾರ ಮೇಳ ನಡೆಯಲಿದೆ. ಆಹಾರ ಮೇಳದ ಇನ್ನಷ್ಟು ವಿವರ ಹಾಗೂ ಯಾವ ಯಾವ ಪಾಯಸ ಈ ಹತ್ತು ದಿನಗಳಲಿ ಮಾಡುತ್ತಾರೆ ಎಂಬ ವಿವರ ಮುಂದಿದೆ..

ಬುಡಕಟ್ಟು ಆಹಾರ ಮೇಳ
ಈ ಬಾರಿಯೂ ಆದಿವಾಸಿಗಳು ಆಗಮಿಸಿ ರುಚಿಕಟ್ಟಾದ, ಆರೋಗ್ಯಕರವಾದ, ಪೌಷ್ಠಿಕವಾದ ದಸರಾ ಪ್ರಯುಕ್ತ ಸೆಪ್ಟೆಂಬರ್ 21 ರಿಂದ 28 ರವರೆಗೆ ಆಹಾರ ಮೇಳ ಈ ಬಾರಿ ಸ್ಕೌಟ್ ಅಂಡ್ ಗೈಡ್ಸ್ ಮೈದಾನ ಹಾಗೂ ಲಲಿತ ಮಹಲ್‍ನಲ್ಲಿ ನಡೆಯಲಿದೆ. ಮೇಳದಲ್ಲಿ 10 ಜಿಲ್ಲೆಗಳ ಬುಡಕಟ್ಟು ಸಮುದಾಯದವರು ಭಾಗವಹಿಸಲಿದೆ. ಬುಡಕಟ್ಟು ಆಹಾರವನ್ನು ಸಿದ್ಧಪಡಿಸಲಿದ್ದಾರೆ.

ಆಹಾರ ಮೆನು
ಬಂಬೂ ಬಿರಿಯಾನಿ, ಮುತ್ತಿಗೆ ಹಾಳೆ, ರಾಗಿ ರೊಟ್ಟಿ, ಕುಂಬಳಕಾಯಿ, ಅವೆ ಕಾಳು ಗೊಜ್ಜು, ಬತ್ತದ ಪಾಯಸ, ಮಾಗಡಿ ಬೇರು-ಟೀ-ಕಾಫಿ, ಬಿದಿರು-ಕಳಲೆ ಸಾರು, ನಳ್ಳಿ ಸಾರು ಸೇರಿದಂತೆ ವಿವಿಧ ಖಾದ್ಯಗಳನ್ನು ತಯಾರಿಸಲಿದ್ದಾರೆ. ಆಹಾರ ಮೇಳದಲ್ಲಿ ಬುಡಕಟ್ಟು ಜನರ ಆಹಾರ ಪದ್ಧತಿಗಳನ್ನು ಉಣಬಡಿಸುವುದು ಈ ಬಾರಿಯೂ ಮುಂದುವರೆದಿದೆ.

ಪಾಡ್ಯಕ್ಕೆ ಏನು ಪಾಯಸ?
ಸಾಂಪ್ರದಾಯಿಕ ಆಚರಣೆ ವಿಧಿ ವಿಧಾನಗಳು ಪಾಡ್ಯದಿಂದ ಆರಂಭವಾಗಿ ದಶಮಿ ತನಕ ಮನೆಮನೆಗಳಲ್ಲೂ ಪಾಯಸ, ಸಿಹಿ ತಿನಿಸುಗಳು ಹಬ್ಬದ ಆಕರ್ಷಣೆಯಾಗಲಿವೆ. ಪಾಡ್ಯದ ದಿನ ಗಸಗಸೆ ಪಾಯಸ ಮಾಡುತ್ತಾರೆ. ಮಿಕ್ಕಂತೆ ದುರ್ಗಾಷ್ಟಮಿಗೆ ಹಯಗ್ರೀವ, ಹೆಸರುಬೇಳೆ ಪಾಯಸ, ಪಾಡ್ಯ, ದಶಮಿ ದಿನದಂದು ಬೇಳೆ ಒಬ್ಬಟ್ಟು ಮಾಡುತ್ತಾರೆ. ಮಧ್ಯೆ ಮಧ್ಯೆ ಆಂಬೊಡೆ, ಚಿತ್ರಾನ್ನ ಇದ್ದೇ ಇರುತ್ತದೆ.

ಗಸಗಸೆ ಪಾಯಸ ಮಾಡುವ ವಿಧಾನ
* ಬಾಣಲೆಯಲ್ಲಿ 1 ಕಪ್ ಗಸಗಸೆಯನ್ನು ಹಾಕಿ ಚೆನ್ನಾಗಿ ಹುರಿಯಿರಿ.
*ಅಕ್ಕಿಯನ್ನು (ಕನಿಷ್ಠ 2 ಗಂಟೆಗಳ ಕಾಲ)ನೀರಿನಲ್ಲಿ ನೆನಸಿ.
*ತೆಂಗಿನಕಾಯಿಯನ್ನು ಪೂರ್ತಿ ತುರಿದು ಮಿಕ್ಸಿಗೆ ಹಾಕಿ ತೆಂಗಿನ ಹಾಲನ್ನು ಶೇಖರಿಸಿ.
*ಹುರಿದ ಗಸಗಸೆ, ಪುಡಿಮಾಡಿದ ಏಲಕ್ಕಿ, ತೆಂಗಿನ ಹಾಲು, ನೆನೆಸಿದ ಅಕ್ಕಿಯನ್ನು ನುಣ್ಣಗೆ ರುಬ್ಬಿ. ಅಗತ್ಯವಿದ್ದಷ್ಟು ನೀರನ್ನು ಹಾಕಿ
*ರುಬ್ಬಿದ ಮಿಶ್ರಣವನ್ನು ಪಾತ್ರೆಗೆ ಹಾಕಿ ಸಣ್ಣ ಉರಿಯಲ್ಲಿ ಕುದಿಸುತ್ತಿರಿ.
*ಬೆಲ್ಲದ ನೀರನ್ನು ಮಿಶ್ರಣಕ್ಕೆ ಬೆರೆಸಿರಿ. ಆಗಾಗ ಕೆದುಕುತ್ತಿರಿ. (ಏಲಕ್ಕಿಪುಡಿಯನ್ನು ಬಳಸದಿದ್ದರೆ ಎಸಳುಗಳನ್ನು ಹಾಗೆ ಬೇಕಾದರೂ ಹಾಕಬಹುದು)
* ಗೋಡಂಬಿ, ದ್ರಾಕ್ಷಿ ಸೇರಿಸಿ ಇನ್ನಷ್ಟು ಸಿಹಿ ಹೆಚ್ಚಿಸಬಹುದು. ಹೆಚ್ಚಿನ ವಿವರ ಇಲ್ಲಿ ಓದಿ

ಯಾವೆಲ್ಲ ಸಿಹಿ ತಿಂಡಿ ಮಾಡಬಹುದು
ದಸರಾ ಸಂದರ್ಭದಲ್ಲಿ ಮನೆಯಲ್ಲಿ ಗಸಗಸೆ ಪಾಯಸ, ಅಕ್ಕಿ ಕಡಲೇಬೆಳೆ, ಅವಲಕ್ಕಿ, ರವೆ, ಗೋಧಿ ನುಚ್ಚಿನ ಪಾಯಸ, ಸೀಮೆ ಅಕ್ಕಿ, ಹೆಸರುಬೇಳೆ, ಗೋಧಿ ಶ್ಯಾವಿಗೆ, ಈಗ ಲೇಟೆಸ್ಟ್ ಸಿರಿ ಧಾನ್ಯಗಳಲ್ಲಿ ಸಾಮೆ ಪಾಯಸ ಒಂದು ದಿನ ಮಾಡಬಹುದು. ಜತೆಗೆ ಹಯಗ್ರೀವ, ಆಂಬೊಡೆ, ಒಬ್ಬಟ್ಟು, ಕೊಸಂಬರಿ, ಚಿತ್ರಾನ್ನ ತಪ್ಪಿಸಬೇಡಿ.. ಇನ್ನಷ್ಟು ಪಾಯಸಗಳ ಬಗ್ಗೆ ಇಲ್ಲಿ ಓದಿ
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications