ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Navratri 2022 Day 4: ನವರಾತ್ರಿ 4ನೇ ದಿನ ಸೆ. 29, ಕೂಷ್ಮಾಂಡ ಪೂಜೆ ಮಹತ್ವ, ಮುಹೂರ್ತ, ಮಂತ್ರ

|
Google Oneindia Kannada News

ನವರಾತ್ರಿ ಹಬ್ಬದ ನಾಲ್ಕನೇ ದಿನ ಕೂಷ್ಮಾಂಡಾ ದೇವಿಯನ್ನು ಪೂಜೆ ಮಾಡಲಾಗುತ್ತದೆ. ದುರ್ಗಾ ದೇವಿಯ ಒಂಬತ್ತು ಅವತಾರಗಳ ನಾಲ್ಕನೇ ರೂಪವಾದ ಕೂಷ್ಮಾಂಡಾ ದೇವಿ ಕೂಡ ಒಬ್ಬಳು. ಹಿಂದೂ ಧರ್ಮಗ್ರಂಥಗಳ ಪ್ರಕಾರ ಕೂಷ್ಮಾಂಡಾ ದೇವಿಯು ಬ್ರಹ್ಮಾಂಡ ಸೃಷ್ಟಿಯ ಶಕ್ತಿಯ ಮೂಲವಾಗಿದ್ದಾಳೆ. ಶಕ್ತಿ ಮತ್ತು ಬೆಳಕನ್ನು ಸಮತೋಲನಗೊಳಿಸಲು ಪಾರ್ವತಿ ದೇವಿಯು ಸೂರ್ಯನ ಮಧ್ಯದಲ್ಲಿ ನೆಲೆಸಿದಳು ಎಂದು ಹೇಳಲಾಗುತ್ತದೆ. ಕೂಷ್ಮಾಂಡಾ ದೇವಿಯು ಎಂಟು ಕೈಗಳನ್ನು ಹೊಂದಿರುವುದರಿಂದ ಆಕೆಯನ್ನು ಅಷ್ಟಭುಜ ಎಂದು ಕರೆಯಲಾಗುತ್ತದೆ. ಜೊತೆಗೆ ತನ್ನ ಭಕ್ತರಿಗೆ ಸಂಪತ್ತು, ಸಮೃದ್ಧಿ ಮತ್ತು ಆರೋಗ್ಯವನ್ನು ಅನುಗ್ರಹಿಸುವ ದೇವತೆ ಎಂದು ಕರೆಯಲಾಗುತ್ತದೆ.

ಯಾವುದೇ ಸೃಷ್ಟಿ ಇಲ್ಲದಿದ್ದಾಗ ಮತ್ತು ಸುತ್ತಲೂ ಕತ್ತಲೆ ಆವರಿಸಿದಾಗ, ಅವಳು ವಿಶ್ವವನ್ನು ದೈವಿಕ ಶಕ್ತಿಯಿಂದ ಸೃಷ್ಟಿಸಿದಳು ಎನ್ನುವ ನಂಬಿಕೆಯಿದೆ. ಮಾತಾ ಕೂಷ್ಮಾಂಡ ವೇಗದ ದೇವತೆ. ಅವುಗಳ ಕಾಂತಿ ಮತ್ತು ಪ್ರಭಾವದಿಂದಾಗಿ, ಹತ್ತು ದಿಕ್ಕುಗಳು ಬೆಳಕನ್ನು ಪಡೆಯುತ್ತವೆ. ಇಡೀ ಬ್ರಹ್ಮಾಂಡದ ಎಲ್ಲಾ ವಸ್ತುಗಳು ಮತ್ತು ಜೀವಿಗಳ ಹೊಳಪು ಕುಶ್ಮಾಂಡ ದೇವಿಯ ಉಡುಗೊರೆ ಎಂದು ಹೇಳಲಾಗುತ್ತದೆ.

ದಿನಾಂಕ ಮತ್ತು ಸಮಯ

ದಿನಾಂಕ ಮತ್ತು ಸಮಯ

ನವರಾತ್ರಿಯ ಚತುರ್ಥಿ ತಿಥಿಯು ಸೆಪ್ಟೆಂಬರ್ 29 ರಂದು 1:27 AM ಕ್ಕೆ ಪ್ರಾರಂಭವಾಗುತ್ತದೆ ಮತ್ತು ಸೆಪ್ಟೆಂಬರ್ 30 ರಂದು 12:08 AM ರಂದು ಕೊನೆಗೊಳ್ಳುತ್ತದೆ. ಪೃಥ್ವಿಗೆ ಅಧಿಪತಿಯಾಗಿರುವ ತಾಯಿ ಕೂಷ್ಮಾಂಡಳು ಸೂರ್ಯನ ಕೇಂದ್ರ ಸ್ಥಾನದಲ್ಲಿ ವಾಸಿಸುತ್ತಾಳೆ ಎಂದು ನಂಬಿಕೆ. ಸೂರ್ಯನಿಗಿಂತ ತಾಯಿ ಕೂಷ್ಮಾಂಡಳು ಹೆಚ್ಚು ಪ್ರಕಾಶಮಾನವಾಗಿದ್ದು, ಈಕೆಯ ವರದಿಂದಲೇ ಸೂರ್ಯನು ಕಾಯಿಲೆಗಳನ್ನು ವಾಸಿಮಾಡುವ ಗುಣವನ್ನು ಹೊಂದಿದ್ದಾನೆ.

ತಾಯಿ ಕೂಷ್ಮಾಂಡಳು ಸಿಂಹದ ಮೇಲೆ ಕುಳಿತಿದ್ದು, ಎಂಟು ಕೈಗಳನ್ನು ಹೊಂದಿದ್ದಾಳೆ. ಕಮಂಡಲ, ಧನಸ್ಸು, ಜಪಮಾಲೆ, ಕಮಲ (Lotus), ಗದೆ, ಅಮೃತ ಕಳಶ, ಚಕ್ರ ಹಾಗೂ ಬಾಣವನ್ನು ಹಿಡಿದಿದ್ದಾಳೆ. ದುರ್ಗಾಸಪ್ತಶತಿಯ ಪ್ರಕಾರ ಕೂಷ್ಮಾಂಡ ದೇವಿಯೇ ಜಗದ ಸೃಷ್ಟಿಗೆ ಕಾರಣೀಭೂತಳಾಗಿದ್ದಾಳೆ. ಸೌರವ್ಯೂಹದ ಗ್ರಹಳ ಚಲನೆಯನ್ನು ನಿಯಂತ್ರಿಸುತ್ತಾಳೆ. ಆಕೆ ಇರುವಲ್ಲಿ ಬೆಳಕು ಹಾಗೂ ಜ್ಞಾನವಿದೆ. ಕೂಷ್ಮಾಂಡ ದೇವಿಯು ತನ್ನ ಏಳೂ ಕೈಗಳಲ್ಲಿ ಕಮಂಡಲ, ಧನಸ್ಸು, ಬಾಣ, ತಾವರೆ ಹೂವು, ಚಕ್ರ, ಗದೆ ಹಾಗೂ ಜಪಮಾಲೆಯನ್ನು ಹಿಡಿದಿದ್ದಾಳೆ. ಇನ್ನೊಂದು ಹಸ್ತವು ಅಭಯ ಮುದ್ರೆಯಲ್ಲಿದ್ದು ಸದಾ ತನ್ನ ಭಕ್ತರನ್ನು ಆಶೀರ್ವದಿಸುತ್ತಾಳೆ. ವ್ಯಾಘ್ರವಾಹಿನಿಯಾಗಿರುವ ಈಕೆ ಧರ್ಮದ ಪ್ರತೀಕವಾಗಿದ್ದಾಳೆ.

ಕೂಷ್ಮಾಂಡ ಪೂಜಾ ವಿಧಿ

ಕೂಷ್ಮಾಂಡ ಪೂಜಾ ವಿಧಿ

ದಿನದ ಹಳದಿ ಬಣ್ಣವು ಸಂತೋಷವನ್ನು ಸೂಚಿಸುತ್ತದೆ. ದೇವಿ ಕೂಷ್ಮಾಂಡದ ಭಕ್ತರು ಸ್ನಾನದ ನಂತರ ಶುಭ್ರವಾದ ಬಟ್ಟೆಯನ್ನು ಧರಿಸುತ್ತಾರೆ. ನಂತರ ದೇವಿಗೆ ಸಿಂಧೂರ, ಕಾಡಿಗೆ, ಬಳೆಗಳು, ಬಿಂದಿ, ಕಾಲುಂಗುರ, ಬಾಚಣಿಗೆ, ಕನ್ನಡಿ, ಸುಗಂಧ ದ್ರವ್ಯ, ಕಿವಿಯೋಲೆಗಳು, ಮೂಗುತಿ, ನೆಕ್ಲೇಸ್ ಮುಂತಾದ ಶೃಂಗಾರ ಸಾಮಾಗ್ರಿಗಳನ್ನು ಇಡುತ್ತಾರೆ. ಅವಳನ್ನು ಕೆಂಪು ಹೂವುಗಳಿಂದ ಪೂಜಿಸಲಾಗುತ್ತದೆ ಮತ್ತು ಅನೇಕ ಭಕ್ತರು ಮೇಣದ ಪೇಠವನ್ನು ಸಾಂಕೇತಿಕವಾಗಿ ಅರ್ಪಿಸುತ್ತಾರೆ.

ಸಾಧ್ಯವಾದರೆ ಆ ದಿನದಂದು ಒಳ್ಳೆಯ ಮನಸ್ಸಿನ ಸ್ತ್ರೀಯರನ್ನು ಕರೆದು ಊಟ ಬಡಿಸಬೇಕು. ಮೊಸರು, ಹಲ್ವಾ, ಹಣ್ಣು ಸೇರಿದಂತೆ ಸಿಹಿ ಊಟ ಬಡಿಸಿ. ಒಣ ಹಣ್ಣುಗಳನ್ನು ತಿನ್ನಲು ನೀಡಿ. ಆ ಮಹಿಳೆಯರು ಊಟದಿಂದ ಎಷ್ಟು ಖುಷಿ ಪಡುತ್ತಾಳೋ ಅಷ್ಟೇ ಒಳ್ಳೆಯದಾಗುತ್ತದೆ. ಭಕ್ತರಿಗೆ ಇದು ಒಳ್ಳೆಯ ಲಾಭವನ್ನೂ ತರಲಿದೆ.

ಕೂಷ್ಮಾಂಡ ಮಂತ್ರ

ಕೂಷ್ಮಾಂಡ ಮಂತ್ರ

"ಓಂ ಐಂ ಹ್ರೀಂ ಕ್ಲೀಂ ಕೂಷ್ಮಾಂಡಯೈ ನಮಃ".

ಓಂ ದೇವಿ ಕೂಷ್ಮಾಂಡದಾಯ್ಯೈ ನಮಃ ಸುರಸಂಪೂರ್ಣ ಕಲಶಂ ರುಧಿರಾಪ್ಲುತಮೇವ ಚ

ದಾಧನ ಹಸ್ತಪದ್ಮಾಭಯಂ ಕೂಷ್ಮಾಂಡ ಶುಭದಾಸ್ತು ಮೇ


ಯಾ ದೇವಿ ಸರ್ವಭೂತೇಷು ಮಾ ಕೂಷ್ಮಾಂಡಾ ರೂಪೇಣ ಸಂಸ್ಥಿತಾ

ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ


ದುರ್ಗತಿನಾಶಿನಿ ತ್ವಂಹೀ ದರಿದ್ರಾದಿ ವಿನಾಶನಿಂ

ಜಯಂದಾ ಧನದಾ ಕೂಷ್ಮಾಂಡಾ ಪ್ರಣಮಾಮ್ಯಹಂ

ಜಗತಮಾತಾ ಜಗತಕಾತ್ರಿ ಜಗದಾಧರ ರೂಪಾನಿಂ

ಚರಚರೇಶ್ವರಿ ಕೂಷ್ಮಾಂಡೇ ಪ್ರಣಮಾಮ್ಯಹಂ

ತ್ರೈಲೋಕ್ಯಸುಂದರೀ ತ್ವಂಹಿ ದುಖಃ ಶೋಕ ನಿವಾರಿಣಿಂ

ಪರಮಾನಂದಮಯಿ ಕೂಷ್ಮಾಂಡೇ ಪ್ರಣಮಾಮ್ಯಹಂ

ಕೂಷ್ಮಾಂಡ ಪೂಜಾ ಫಲವೇನು?

ಕೂಷ್ಮಾಂಡ ಪೂಜಾ ಫಲವೇನು?

ಒಮ್ಮೆ ಎಲ್ಲೆಡೆ ಅಂಧಕಾರ ಪಸರಿಸಿತ್ತು. ಆಗ ದೇವಿ ತನ್ನ ಶಕ್ತಿಯಿಂದ ಬ್ರಹ್ಮಾಂಡವನ್ನು ಸೃಷ್ಟಿಸುತ್ತಾಳೆ. ಬಳಿಕ ಸೂರ್ಯನ ಸ್ಥಾನದಲ್ಲಿ ನಿಂತು ಭೂಮಿಯ ಮೇಲಿರುವ ಅಂಧಕಾರವನ್ನೆಲ್ಲಾ ನಿವಾರಣೆ ಮಾಡುತ್ತಾಳೆ. ಕೂಷ್ಮಾಂಡ ದೇವಿಯು ಸೂರ್ಯನಿಗೆ ಅಧಿಪತಿಯಾಗಿರುವ ಕಾರಣ ಕೂಷ್ಮಾಂಡ ದೇವಿಯನ್ನು ಪೂಜಿಸುವುದರಿಂದ ಜಾತಕದಲ್ಲಿ ಸೂರ್ಯನಿಂದಾಗುವ ಕೆಡುಕನ್ನು ನಿವಾರಿಸಬಹುದು. ಜೊತೆಗೆ ಎಲ್ಲಾ ರೀತಿಯ ಸಂಕಷ್ಟಗಳೂ ನಿವಾರಣೆಯಾಗುವವು.

ಈ ದೇವಿಯನ್ನು ನೆನೆದು ಮನಸ್ಸಿನಲ್ಲಿ ಪೂಜಿಸುವುದರಿಂದ ಹೆಚ್ಚು ಫಲ ಪ್ರಾಪ್ತಿಯಾಗುತ್ತದೆ. ಹಾಗೆ ಮಾಡಿದರೆ ನಿಮ್ಮ ಬದುಕಿನಲ್ಲಿ ಕಂಡಿರುವ ಕೆಟ್ಟ ದಿನಗಳು ದೂರವಾಗಿ ಒಳ್ಳೆಯ ದಿನಗಳು ಬರುತ್ತದೆ. ದುಃಖಗಳು ಕಡಿಮೆಯಾಗುತ್ತದೆ. ತಾಯಿಯನ್ನು ಖುಷಿಪಡಿಸುವುದು ಭಕ್ತರಿಗೆ ಸುಲಭವಾದ ವಿಷಯವಾಗಿದೆ.

ನವರಾತ್ರಿಯ ನಾಲ್ಕನೇ ದಿನದ ಪೂಜೆಯಲ್ಲಿ ಕೂಷ್ಮಾಂಡಳನ್ನು ಪೂಜಿಸುವುದರಿಂದ ಒಳ್ಳೆಯ ಆರೋಗ್ಯ, ಸಂಪತ್ತು ಪ್ರಾಪ್ತಿಯಾಗುತ್ತದೆ. ಸಿದ್ಧಿ ಮತ್ತು ನಿಧಿಯು ತಾಯಿಯ ಜಪಮಾಲೆಯಲ್ಲಿದೆ ಎಂದು ಗ್ರಂಥಗಳು ಹೇಳುತ್ತವೆ.

English summary
Dasara Festival- Navaratri 4st day on September 29th. Goddess Kushmanda is worshipped on this day. Know about the puranas describing Kushmanda and the significance of worshipping her.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X