ಬನ್ನಿ ಮಂಟಪದ ಕಡೆಗೆ ಕತ್ತಲಲ್ಲೇ ಹೆಜ್ಜೆ ಹಾಕುತ್ತಿರುವ ಅಂಬಾರಿ ಹೊತ್ತ ಅರ್ಜುನ

ಮೈಸೂರು, ಸೆಪ್ಟೆಂಬರ್ 30: ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ವೈಭವದ ಜಂಬೂ ಸವಾರಿ ಇನ್ನು ಕೆಲವೇ ಕ್ಷಣಗಳಲ್ಲಿ ನಡೆಯಲಿದೆ. ನಂದೀಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಸಿದ್ದರಾಮಯ್ಯ ವಿಧ್ಯುಕ್ತವಾಗಿ ಜಂಬೂ ಸವಾರಿಗೆ ಚಾಲನೆ ನೀಡಿದ್ದಾರೆ.

6:45 - ಬನ್ನಿ ಮಂಟಪದ ಕಡೆಗೆ ಸಾಗುತ್ತಿರುವ ಮೆರವಣಿಗೆ; ರಾತ್ರಿಯಾಗುತ್ತಿರುವುದರಿಂದ ಕತ್ತಲಲ್ಲಿಯೇ ಹೆಜ್ಜೆ ಹಾಕುತ್ತಿರುವ ಆನೆಗಳು

5:10- ಬನ್ನಿ ಮಂಟಪದಲ್ಲಿ ನಡೆಯಲಿರುವ ಪಂಜಿನ ಕವಾಯತಿಗೆ ರಾಜ್ಯಪಾಲರಿಂದ ಚಾಲನೆ

5:05- ಜಂಬೂ ಸವಾರಿಯಲ್ಲಿ ಅಂದಾಜು 7 ಲಕ್ಷಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದಾರೆ.

Countdown starts for Mysuru Dasara Jamboo Savari 2017

5:00- ರಾಜಗಾಂಭೀರ್ಯದಲ್ಲಿ ಅಂಬಾರಿ ಹೊತ್ತ ಅರ್ಜುನ: ಜಂಬೂ ಸವಾರಿಗೆ ಕಳೆ

4:50- ಜಂಬೂ ಸವಾರಿಗೆ ವಿಧ್ಯಕ್ತ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

4:45- ಚಿನ್ನದ ಅಂಬಾರಿ ಹೊತ್ತು ರಾಜಗಾಂಭೀರ್ಯದಲ್ಲಿ ಬಂದ ಅರ್ಜುನ

4:00- ಮಳೆ ಆತಂಕ ವೇಗವಾಗಿ ಸಾಗುತ್ತಿದೆ ಮೆರವಣಿಗೆ

3:55- ಮೈಸೂರಿನಲ್ಲಿ ಮೋಡ ಕವಿದ ವಾತಾವರಣ. ಮಳೆಯ ಆತಂಕದ ನಡುವೆಯೂ ಸಾಂಗವಾಗಿ ಸಾಗುತ್ತಿದೆ ಮೆರವಣಿಗೆ

3: 40- ಸವಾರಿ ತೊಟ್ಟಿ ಬಳಿ ಅಂಬಾರಿ ಕೂರಿಸುವ ಕಾರ್ಯ ಆರಂಭ

Countdown starts for Mysuru Dasara Jamboo Savari 2017

3:35- ಅಂಬಾರಿಯಲ್ಲಿ ಚಾಮುಂಡೇಶ್ವರಿ ಮೂರ್ತಿ ಪ್ರತಿಷ್ಠಾಪನೆ

3:30- ಮೈಸೂರಿನ ಕೆ.ಆರ್.ವೃತ್ತ ದಾಟಿ, ಸಯ್ಯಾಜಿರಾವ್ ರಸ್ತೆಯಲ್ಲಿ ಸಾಗುತ್ತಿರುವ ಜಂಬೂ ಸವಾರಿ ಮೆರವಣಿಗೆ

3:20- ಆರನೇ ಬಾರಿ 750 ಕೆ.ಜಿ.ತೂಕದ ಚಿನ್ನದ ಅಂಬಾರಿ ಹೊತ್ತು ಸಾಗಲಿದ್ದಾನೆ ಅರ್ಜುನ

3:15- ಯುವಕರಿಂದ ಕರಾಟೆ ಪ್ರದರ್ಶನ

3:05: ಮನಸೆಳೆಯುತ್ತಿರುವ ಸ್ತಬ್ದಚಿತ್ರಗಳ ಮೆರವಣಿಗೆ

3:00: ಅರ್ಜುನ ಆನೆಯ ಬಳಿ ಅಂಬಾರಿಯನ್ನು ಕೊಂಡು ತರುತ್ತಿರುವ ಅರಮನೆ ಸಿಬ್ಬಂದಿಗಳು

Countdown starts for Mysuru Dasara Jamboo Savari 2017

3:00- ಹೂವಿನಿಂದ ಅಲಂಕರಿಸಲ್ಪಟ್ಟಿದೆ ಚಿನ್ನದ ಅಂಬಾರಿ.

2:50- ಬಲರಾಮ ಆನೆಯ ಹಿಂದೆ ಗಾಂಭೀರ್ಯವಾಗಿ ಹೆಜ್ಜೆ ಹಾಕುತ್ತಿರುವ ಆನೆಗಳು

2:45- ಮೆರವಣಿಗೆಗೆ ಮೆರಗು ನೀಡುತ್ತಿರುವ ವೀರಭದ್ರ ಕುಣಿತ

2:45- ರಾಜಮಾರ್ಗದಲ್ಲಿ 40 ಕಲಾತಂಡಗಳ ಮೆರವಣಿಗೆ

Countdown starts for Mysuru Dasara Jamboo Savari 2017

2:25- ಮುಂದಿನ ಚುನಾವಣೆಯಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ನನ್ನ ನಾಯಕತ್ವದಲ್ಲೇ ಚುನಾವಣೆ ನಡೆಯಲಿದೆ. ಮುಂದಿನ ವರ್ಷವೂ ನಾನೇ ನಂದಿಧ್ವಜಕ್ಕೆ ಪೂಜೆ ಸಲ್ಲಿಸುತ್ತೇನೆ ಎಂದು ದಸರಾ ವೇದಿಕೆಯಲ್ಲೂ ರಾಜಕೀಯ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

2:20- ರಾಜ್ಯದಲ್ಲಿ ಈ ಬಾರಿ ಮಳೆ ಚೆನ್ನಾಗಿ ಆಗಿದೆ. ರೈತರೆಲ್ಲರೂ ಸಂತಸದಿಂದಿದ್ದಾರೆ. ಅದಕ್ಕೆಂದೇ ಈ ಬಾರಿಯ ದಸರಾಕ್ಕೆ ವಿಶೇಷ ಕಳೆ ಬಂದಿದೆ. ದಸರಾಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರೂ ಆಗಮಿಸಿದ್ದಾರೆ. ಸಮಸ್ತ ಕರ್ನಾಟಕದ ಜನರಿಗೂ ದಸರಾ ಹಬ್ಬದ ಶುಭಾಶಯಗಳು: ಪೂಜೆ ಬಳಿಕ ಸಿದ್ದರಾಮಯ್ಯ ಹೇಳಿಕೆ

2:15- ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ ತಾಯಿ ಚಾಮುಂಡೇಶ್ವರಿಗೆ ಕೃತಜ್ಞತೆ ಸಲ್ಲಿಸಿದ ಸಿದ್ದರಾಮಯ್ಯ

2:10- ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

2:05- ಜಂಬೂ ಸವಾರಿ ವೀಕ್ಷಣೆಗೆ ತೆರೆದ ಜೀಪಿನಲ್ಲಿ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಬಾರಿಯ ದಸರಾ ಉದ್ಘಾಟಕರಾದ ಕವಿ ಕೆ.ಎಸ್.ನಿಸಾರ್ ಅಹ್ಮದ್, ಸಚಿವ ಸಂಪುಟದ ಪ್ರಮುಖ ಸಚಿವರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+